ಮರ್ಸಿಡಿಸ್ ಜಿಎಲ್ಎಸ್ ಗ್ರ್ಯಾಂಡ್ ಆವೃತಿ ಅನಾವರಣ

ಮರ್ಸಿಡಿಸ್ ಬೆಂಝ್ ಸಂಸ್ಥೆಯು ತನ್ನ ಜಿಎಲ್ಎಸ್ ಗ್ರ್ಯಾಂಡ್ ಆವೃತಿಯನ್ನು ಬಹಿರಂಗಪಡಿಸಿದೆ. ಈ ಕಾರು ಬಾಹ್ಯ ಮತ್ತು ಆಂತರಿಕ ಎರಡೂ ಕಡೆಗೆ ಕೆಲವು ಬದಲಾವಣೆಗಳ ಜೊತೆಗೆ ಐಷಾರಾಮಿ ಲುಕ್ ಪಡೆದುಕೊಂಡಿದು.

By Girish

ಜಿಎಲ್ಎಸ್ ಗ್ರ್ಯಾಂಡ್ ಆವೃತ್ತಿಯು ಯುರೋಪ್‌ನಲ್ಲಿ 2018ರ ಫೆಬ್ರವರಿ ತಿಂಗಳಿನಲ್ಲಿ ಪ್ರದರ್ಶನಗೊಳ್ಳಲಿದ್ದು, 350ಡಿ, 400 ಮತ್ತು 500 ಕಾರುಗಳು ಐಷಾರಾಮಿ ರಿಫ್ರೆಶ್ ಲಾಭ ಪಡೆಯಲಿವೆ. ಆದಾಗ್ಯೂ, ಜಿಎಲ್ಎಸ್ ರೂಪಾಂತರದ ಎಲ್ಲಾ ಮೂರು ಕಾರುಗಳೂ ಸಹ ಯಾಂತ್ರಿಕವಾಗಿ ಬದಲಾಗದೆ ಹಾಗೆಯೇ ಉಳಿಯುತ್ತವೆ.

ಮರ್ಸಿಡಿಸ್ ಜಿಎಲ್ಎಸ್ ಗ್ರ್ಯಾಂಡ್ ಆವೃತಿ ಅನಾವರಣ

ಗ್ರ್ಯಾಂಡ್ ಕಾರು ಹೊರಭಾಗದಲ್ಲಿ, 20-ಇಂಚಿನ, 10-ಸ್ಪೀಕರ್ ಲೈಟ್-ಅಲಾಯ್ ಗುಣಮಟ್ಟದ ಚಕ್ರಗಳ ಪಡೆದುಕೊಂಡಿದ್ದು, ಹೈ-ಶೀನ್ ಲೇಪನದೊಂದಿಗೆ ಕಪ್ಪು ಬಣ್ಣವನ್ನು ಹೊಂದಿದ್ದು, ಕಾರಿಗೆ ಹೆಚ್ಚು ಮೆರುಗು ತಂದು ಕೊಡಲಿದೆ.

ಮರ್ಸಿಡಿಸ್ ಜಿಎಲ್ಎಸ್ ಗ್ರ್ಯಾಂಡ್ ಆವೃತಿ ಅನಾವರಣ

ಗ್ರ್ಯಾಂಡ್ ಎಡಿಷನ್ ಕಾರಿನ ಮುಂಭಾಗದ ಚಕ್ರ ಕಮಾನುಗಳು ಜಿಎಲ್ಎಸ್ ಹೆಸರಿನ ಬ್ಯಾಡ್ಜ್ ಹೊಂದಿದ್ದು, ಈ ವಿಶೇಷ ಆವೃತ್ತಿಯು ತನ್ನ ವಿನ್ಯಾಸದಿಂದಾಗಿ ತನ್ನ ಸಹೋದರ ಕಾರುಗಳಿಂದ ಹೆಚ್ಚು ಪ್ರತ್ಯೇಕವಾಗಿರಲು ಸಹಾಯ ಮಾಡುತ್ತವೆ.

ಮರ್ಸಿಡಿಸ್ ಜಿಎಲ್ಎಸ್ ಗ್ರ್ಯಾಂಡ್ ಆವೃತಿ ಅನಾವರಣ

ಆಂತರಿಕವಾಗಿ ಈ ಕಾರು ಹೆಚ್ಚು ಶ್ರೀಮಂತವಾಗಿದ್ದು, ಡುಯಲ್-ಟೋನ್ ಪೊರ್ಚೆಲೈನ್/ಎಸ್ಪ್ರೆಸೊ ಕಂದು ಬಣ್ಣದ ಸಂಯೋಜನೆಯನ್ನು ಹೊಂದಿದೆ, ಇದು ಗ್ರ್ಯಾಂಡ್ ಎಡಿಷನ್ ಮಾದರಿಗಳಲ್ಲಿ ಮಾತ್ರ ಕಂಡು ಬರುತ್ತದೆ. ಡ್ಯಾಶ್‌ಬೋರ್ಡ್ ಕಂದು ಬಣ್ಣದ ಚರ್ಮ ಲೇಪನ ಮತ್ತು ಎಸ್ಪ್ರೆಸೊ ಕಂದು ವೇಲೋರ್ ನೆಲದ ಮ್ಯಾಟ್ಸ್ ಒಳಗೊಂಡಿದೆ.

ಮರ್ಸಿಡಿಸ್ ಜಿಎಲ್ಎಸ್ ಗ್ರ್ಯಾಂಡ್ ಆವೃತಿ ಅನಾವರಣ

ಜಿಎಲ್ಎಸ್ ಗ್ರ್ಯಾಂಡ್ ಎಡಿಶನ್ ಐಷಾರಾಮಿ ಎಸ್‌ಯುವಿ ಪ್ರದರ್ಶನವನ್ನು ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಲಿದ್ದು, 2019ರಲ್ಲಿ ಬಿಡುಗಡೆಯಾಗಲಿರುವ ಈ ಕಾರು ಹೆಚ್ಚು ನಿರೀಕ್ಷೆಗಳನ್ನು ಹುಟ್ಟಿಹಾಕಿರುವುದಂತೂ ಖಂಡಿತ.

Most Read Articles

Kannada
English summary
Mercedes has revealed the GLS Grand Edition, a brand new trim level for its flagship SUV. The Grand Edition trim level adds to the luxury quotient of the GLS thanks to a few changes to both the exterior and interior.
Story first published: Saturday, October 7, 2017, 14:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X