ಫ್ರಾಂಕ್‌ಫರ್ಟ್ ಆಟೋ ಮೇಳ- ಇಕ್ಯೂಎ ಎಲೆಕ್ಟ್ರಿಕ್ ಪರಿಕಲ್ಪನೆಯನ್ನು ಪ್ರದರ್ಶನಗೊಳಿಸಿದ ಮರ್ಸಿಡಿಸ್

ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಸುಧಾರಿತ ಮಾದರಿಯ ಎಲೆಕ್ಟ್ರಿಕ್ ಕಾರು ಮಾದರಿಯೊಂದು ಅಭಿವೃದ್ಧಿಗೊಳಿಸಿದ್ದು, 2017ರ ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಿದೆ.

By Praveen

ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಸುಧಾರಿತ ಮಾದರಿಯ ಎಲೆಕ್ಟ್ರಿಕ್ ಕಾರು ಮಾದರಿಯೊಂದು ಅಭಿವೃದ್ಧಿಗೊಳಿಸಿದ್ದು, 2017ರ ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಿದೆ.

ಇಕ್ಯೂಎ ಎಲೆಕ್ಟ್ರಿಕ್ ಪರಿಕಲ್ಪನೆಯನ್ನು ಪ್ರದರ್ಶನಗೊಳಿಸಿದ ಮರ್ಸಿಡಿಸ್

ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನ ಉತ್ಪಾದನೆಗೆ ವಿಶೇಷ ಗಮನಹರಿಸಿರುವ ಆಟೋ ಉತ್ಪಾದಕರು ದಿನಕ್ಕೊಂದು ಹೊಸ ಬಗೆಯ ಕಾರು ಮಾದರಿಗಳನ್ನು ಪರಿಚಯಿಸುತ್ತಿದ್ದು, ಇದೀಗ ಮರ್ಸಿಡಿಸ್ ಬೆಂಝ್ ಸಂಸ್ಥೆ ಕೂಡಾ ಇಕ್ಯೂಎ ಎಂಬ ಹೊಸ ಮಾದರಿಯನ್ನು ಅಭಿವೃದ್ಧಿಗೊಳಿಸಿದೆ.

ಇಕ್ಯೂಎ ಎಲೆಕ್ಟ್ರಿಕ್ ಪರಿಕಲ್ಪನೆಯನ್ನು ಪ್ರದರ್ಶನಗೊಳಿಸಿದ ಮರ್ಸಿಡಿಸ್

ಈ ಹಿಂದೆ ಇಕ್ಯೂ ಎಲೆಕ್ಟ್ರಿಕ್ ಮಾದರಿಯನ್ನು ಪ್ರದರ್ಶನಗೊಳಿಸಿದ್ದ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಇದೀಗ ಇಕ್ಯೂ ಮುಂದುವರಿದ ಕಾರು ಮಾದರಿ ಇಕ್ಯೂಎ ಪ್ರದರ್ಶನಗೊಳಿಸಿದ್ದು, ಹಿಂದಿನ ಮಾದರಿಗಿಂತಲೂ ಉತ್ತಮ ಕಾರ್ಯಕ್ಷಮತೆಯುಳ್ಳ ಎಂಜಿನ್ ಒದಗಿಸಿದೆ.

ಇಕ್ಯೂಎ ಎಲೆಕ್ಟ್ರಿಕ್ ಪರಿಕಲ್ಪನೆಯನ್ನು ಪ್ರದರ್ಶನಗೊಳಿಸಿದ ಮರ್ಸಿಡಿಸ್

ಹೀಗಾಗಿ ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಪ್ರದರ್ಶನಗೊಂಡಿರುವ ಇಕ್ಯೂಎ ಮಾದರಿಯನ್ನು 2020ರ ನಂತರವಷ್ಟೇ ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಸುಳಿವು ನೀಡಿರುವ ಮರ್ಸಿಡಿಸ್ ಬೆಂಝ್ ಸಂಸ್ಥೆಯು, ಹೊಸ ಮಾದರಿಯಲ್ಲಿ ಮತ್ತಷ್ಟು ಬದಲಾವಣೆ ತರಲಿದೆ.

ಇಕ್ಯೂಎ ಎಲೆಕ್ಟ್ರಿಕ್ ಪರಿಕಲ್ಪನೆಯನ್ನು ಪ್ರದರ್ಶನಗೊಳಿಸಿದ ಮರ್ಸಿಡಿಸ್

ಇನ್ನು ಎ ಕ್ಲಾಸ್ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಇಕ್ಯೂಎ ಮಾದರಿಯನ್ನು ವಿನ್ಯಾಸಗೊಳಿಸಲಾಗಿದ್ದು, 4,285ಎಂಎಂ ಉದ್ದ, 1,810ಎಂಎಂ ಅಗಲ ಮತ್ತು 2,729ಎಂಎಂ ವೀಲ್ಹ್ ಬೆಸ್ ಅಳತೆಯನ್ನು ಹೊಂದಿದೆ.

ಇಕ್ಯೂಎ ಎಲೆಕ್ಟ್ರಿಕ್ ಪರಿಕಲ್ಪನೆಯನ್ನು ಪ್ರದರ್ಶನಗೊಳಿಸಿದ ಮರ್ಸಿಡಿಸ್

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಪ್ರದರ್ಶನಗೊಂಡಿರುವ ಇಕ್ಯೂಎ ಮಾದರಿಗಳು ಮೂರು ಬಾಗಿಲು ವ್ಯವಸ್ಥೆಯನ್ನು ಮಾತ್ರ ಹೊಂದಿದ್ದು, ಮುಂಬರುವ ದಿನಗಳಲ್ಲಿ ಇದೇ ಮಾದರಿಗಳು ಐದು ಬಾಗಿಲು ವ್ಯವಸ್ಥೆಯನ್ನು ಹೊಂದುವ ಸಾಧ್ಯತೆಗಳಿವೆ.

ಇಕ್ಯೂಎ ಎಲೆಕ್ಟ್ರಿಕ್ ಪರಿಕಲ್ಪನೆಯನ್ನು ಪ್ರದರ್ಶನಗೊಳಿಸಿದ ಮರ್ಸಿಡಿಸ್

ಹೊಸ ಕಾರು ಮಾದರಿಗಳಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಅಳವಡಿಕೆ ಹಿನ್ನೆಲೆ ಒಂದು ಬಾರಿ ಚಾರ್ಜ್ ಮಾಡಿದಲ್ಲಿ 400ಕಿಮಿ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, 2020ರ ನಂತರವಷ್ಟೇ ಖರೀದಿಗೆ ಲಭ್ಯವಾಗಲಿವೆ.

Most Read Articles

Kannada
English summary
Read in Kannada about Mercedes EQA Concept Unveiled in 2017 Frankfurt Motor Show.
Story first published: Thursday, September 14, 2017, 15:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X