ಸಂಚಾರಿ ನಿಯಮ ಉಲ್ಲಂಘಿಸುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವರು ಯಾರು?

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ತಮ್ಮ ಕಾರಿನ ಮೇಲೆ ಡಿಫೆಕ್ವೀವ್ ನೇಮ್ ಪ್ಲೇಟ್ ಹಾಕಿಸಿಕೊಂಡು ರಾಜ್ಯದೆಲ್ಲಡೆ ಸುತ್ತಾಡಿದ್ರೂ ಯಾವುದೇ ಆರ್‌ಟಿಒ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅಚ್ಚರಿ ಎಂದ್ರೆ ತಪ್ಪಾಗಲ್ಲ.

By Praveen

ಕಾನೂನು ಅಂದ್ರೆ ಎಲ್ಲರಿಗೂ ಒಂದೇ. ಹೀಗಾಗಿ ತಪ್ಪು ಯಾರೇ ಮಾಡಿದ್ರು ಅದು ತಪ್ಪೇ. ಆದ್ರೆ ಕೆಲವೊಮ್ಮೆ ಅದು ನಮ್ಮ ಜನಪ್ರತಿಗಳಿಗೆ ಅನ್ವಯವಾಗುದಿಲ್ಲ ಅಂತಾ ಕಾಣಿಸುತ್ತೆ. ಇದಕ್ಕೆ ಕಾರಣ ನಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ತನ್ವೀರ್ ಸೇಠ್ ಅವರ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ಫ್ಯಾನ್ಸಿ ನಂಬರ್.

ಸಂಚಾರಿ ನಿಯಮ ಉಲ್ಲಂಘಿಸುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವರು ಯಾರು?

ಹೌದು.. ಸರ್ಕಾರಿ ನಿಯಮಗಳನ್ನ ಜಾರಿಯಲ್ಲಿಡಬೇಕಾದ ಸರ್ಕಾರಿ ಅಧಿಕಾರಿಗಳು, ಮಂತ್ರಿಗಳೇ ನಿಯಮಗಳನ್ನ ಉಲ್ಲಂಘನೆ ಮಾಡಿದ್ರೆ ಸಾರ್ವಜನಿಕರು ಹೇಗೆ ತಾನೆ ಪಾಲನೆ ಮಾಡುತ್ತಾರೆ? ಇಂತದ್ರಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ತನ್ವೀರ್ ಸೇಠ್ ಆರ್ ಟಿ ಒ ನಿಯಮಗಳನ್ನು ಉಲ್ಲಂಘಿಸಿ ಸುದ್ಧಿಯಲ್ಲಿದ್ದಾರೆ.

ಸಂಚಾರಿ ನಿಯಮ ಉಲ್ಲಂಘಿಸುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವರು ಯಾರು?

ಇದಕ್ಕೆ ಕಾರಣ ಸಚಿವ ತನ್ವೀರ್ ಸೇಠ್ ತಮ್ಮ ಇನೋವಾ ಕಾರಿನ ನಂಬರ್ ಪ್ಲೇಟ್ ಮೇಲೆ ಫ್ಯಾನ್ಸಿ ಸಂಖ್ಯೆಯನ್ನು ಬರೆಸಿದ್ದು, ಅದು ಸಂಚಾರಿ ನಿಯಮಗಳಿಗೆ ವಿರುದ್ಧ ಎಂಬುವುದು ಸಚಿವರಿಗೆ ಗೊತ್ತಿಲ್ಲ ಎಂದು ಕಾಣುತ್ತೆ.

Recommended Video

Full Moon Causes Motorcycle Accidents, States New Study
ಸಂಚಾರಿ ನಿಯಮ ಉಲ್ಲಂಘಿಸುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವರು ಯಾರು?

ಅವರ ಸರ್ಕಾರಿ ಕಾರಿನ ಸಂಖ್ಯೆ ಕೆ.ಎ52 ಜಿಎ0009 ಇದ್ದು ಇದರಲ್ಲಿ ಸೊನ್ನೆಗಳನ್ನ ಚಿಕ್ಕದಾಗಿ ಬರೆದು 9 ಸಂಖ್ಯೆಯನ್ನ ದೊಡ್ಡದಾಗಿ ಬರೆಸಿರುವುದು ಆರ್‌ಟಿಒ ನಿಯಮಗಳಿಗೆ ವಿರುದ್ಧವಾಗಿದ್ದು, ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಮಾತ್ರ ಸುಮ್ಮನಿದ್ದಾರೆ.

ಸಂಚಾರಿ ನಿಯಮ ಉಲ್ಲಂಘಿಸುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವರು ಯಾರು?

ಇನ್ನು ಆರ್ ಟಿ ಒ ನಿಯಮದ ಪ್ರಕಾರ ನಂಬರ್ ಪ್ಲೇಟ್‌ನಲ್ಲಿರುವ ಎಲ್ಲಾ ಅಂಕಿಗಳು ಸಮಾನ ಗಾತ್ರದ ಜೊತೆ ಒಂದೇ ಆಕಾರದಲ್ಲಿ ಇರಬೇಕು. ಆದ್ರೆ ಸಚಿವರ ಕಾರಿನಲ್ಲಿ ಕನ್ನಡದಲ್ಲಿ ಬರೆದ ಸಂಖ್ಯೆಗಳು ಸರಿಯಾಗಿದ್ದು, ಇಂಗ್ಲೀಷ್ ನಲ್ಲಿ ಬರೆದ ಸಂಖ್ಯೆಗಳಲ್ಲಿ ವ್ಯತ್ಯಾಸ ಮಾಡಿದ್ದಾರೆ.

ತಪ್ಪದೇ ಓದಿ-ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

ಸಂಚಾರಿ ನಿಯಮ ಉಲ್ಲಂಘಿಸುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವರು ಯಾರು?

ಇದಲ್ಲದೇ ಸಾರ್ವಜನಿಕರು ಈ ರೀತಿ ನಂಬರ್ ಪ್ಲೇಟ್‌ಗಳನ್ನು ಬರೆಸಿದರೆ ಆರ್ ಟಿ ಒ ಹಾಗೂ ಸಂಚಾರಿ ಪೊಲೀಸರು ಡಿಫೆಕ್ಟೀವ್ ನೇಮ್ ಪ್ಲೇಟ್ ಅಂತಾ ಇರೋಬರೋ ಕೇಸ್‌ಗಳನ್ನು ಹಾಕಿ ಭರ್ಜರಿ ದಂಡ ವಸೂಲಿ ಮಾಡ್ತಾರೆ.

ಸಂಚಾರಿ ನಿಯಮ ಉಲ್ಲಂಘಿಸುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವರು ಯಾರು?

ಆದ್ರೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ತಮ್ಮ ಕಾರಿನ ಮೇಲೆ ಡಿಫೆಕ್ವೀವ್ ನೇಮ್ ಪ್ಲೇಟ್ ಹಾಕಿಸಿಕೊಂಡು ರಾಜ್ಯದೆಲ್ಲಡೆ ಸುತ್ತಾಡಿದ್ರೂ ಯಾವುದೇ ಆರ್‌ಟಿಒ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅಚ್ಚರಿ ಎಂದ್ರೆ ತಪ್ಪಾಗಲ್ಲ.

ಚಿತ್ರ ಕೃಪೆ- ಪಬ್ಲಿಕ್ ಟಿವಿ

ತಪ್ಪದೇ ಓದಿ-ಕಾಸು ಖರ್ಚು ಮಾಡಿ ಕೇಸ್ ಹಾಕಿಸಿಕೊಂಡ ಭೂಪ ಇವನು...!!

Most Read Articles

Kannada
English summary
Read in Kannada about minister tanveer sait violate the rto rules
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X