ಆಡಿ ಸಂಸ್ಥೆಯ ಬಹುನಿರೀಕ್ಷಿತ ಆಡಿ ಕ್ಯೂ5 ಕಾರಿನ ಬಿಡುಗಡೆಗೆ ಮಹೂರ್ತ ಫಿಕ್ಸ್

ಜರ್ಮನಿಯ ವಾಹನ ತಯಾರಕ ಆಡಿ ಸಂಸ್ಥೆಯ ಭಾರತೀಯ ವಿಭಾಗವಾದ ಆಡಿ ಇಂಡಿಯಾ ಕಂಪನಿಯು ದೇಶದಲ್ಲಿ ನೂತನ ಪೀಳಿಗೆಯ ಕ್ಯೂ5 ಎಸ್‌ಯುವಿಯನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಈ ಕಾರಿನ ಬಿಡುಗಡೆ ದಿನಾಂಕ ಅನಾವರಣಗೊಳಿಸಿದೆ.

By Girish

ನವೀಕರಿಸಿದ ಕ್ಯೂ5 ಎಸ್‌ಯುವಿಯನ್ನು ಈಗಾಗಲೇ ಭಾರತದಲ್ಲಿ ಪರೀಕ್ಷೆಯ ವೇಳೆ ಗುರುತಿಸಲಾಗಿರುವುದನ್ನು ನಾವು ಸ್ಮರಿಸಬಹುದಾಗಿದೆ. ಮುಂದಿನ ವರ್ಷದ ಜನವರಿ 18ರಂದು ಭಾರತದಲ್ಲಿ ಹೊಸ ಕ್ಯೂ5 ಕಾರನ್ನು ಆಡಿ ಕಂಪನಿಯು ಪ್ರಾರಂಭಿಸಲಿದೆ ಎಂದು ವರದಿಯಾಗಿದೆ.

ಆಡಿ ಸಂಸ್ಥೆಯ ಬಹುನಿರೀಕ್ಷಿತ ಆಡಿ ಕ್ಯೂ5 ಕಾರಿನ ಬಿಡುಗಡೆಗೆ ಮಹೂರ್ತ ಫಿಕ್ಸ್

ಈ ಕಾರಿನ ಹೊರಭಾಗದಲ್ಲಿ ಮತ್ತು ಒಳಾಂಗಣದಲ್ಲಿ ಸಾಕಷ್ಟು ವಿನ್ಯಾಸ ಬದಲಾವಣೆ ಮಾಡಲಾಗಿದೆ. ಮುಂಭಾಗದ ತಂತುಕೋಶವು ಆಡಿ ಸಿಗ್ನೇಚರ್ ಮೆಟ್ರಿಕ್ಸ್ ಎಲ್ಇಡಿ ಹೆಡ್ ಲ್ಯಾಂಪ್‌ಗಳು ಮತ್ತು ಕ್ರಿಯಾತ್ಮಕ ತಿರುವು ಸೂಚಕಗಳು ಮತ್ತು ದೊಡ್ಡ ಸಿಂಗಲ್ ಫ್ರೇಮ್ ಕ್ರೋಮ್ ಗ್ರಿಲ್ ಹೊಂದಿದೆ.

ಆಡಿ ಸಂಸ್ಥೆಯ ಬಹುನಿರೀಕ್ಷಿತ ಆಡಿ ಕ್ಯೂ5 ಕಾರಿನ ಬಿಡುಗಡೆಗೆ ಮಹೂರ್ತ ಫಿಕ್ಸ್

ಎಂಎಲ್‌ಬಿ ಇವೋ ಪ್ಲ್ಯಾಟ್‌ಫಾರಂ ಅಡಿಯಲ್ಲಿ ಈ ಕಾರನ್ನು ನಿರ್ಮಾಣ ಮಾಡಲಾಗಿದೆ. ಈ ಹೊಸ ಕಾರು ದೊಡ್ಡದಾಗಿರುವ ಏರ್ ಇನ್‌ಟೇಕ್‌ಗಳನ್ನು ಪಡೆದಿದೆ ಹಾಗು ಬಂಪರ್‌ನಲ್ಲಿ ಯಾವುದೇ ರೀತಿಯ ಫಾಗ್ ದೀಪಗಳನ್ನು ಅಳವಡಿಸಲಾಗಿಲ್ಲ.

ಆಡಿ ಸಂಸ್ಥೆಯ ಬಹುನಿರೀಕ್ಷಿತ ಆಡಿ ಕ್ಯೂ5 ಕಾರಿನ ಬಿಡುಗಡೆಗೆ ಮಹೂರ್ತ ಫಿಕ್ಸ್

ಹೊಸ ಕ್ಯೂ5 ಪ್ರಸ್ತುತ ಮಾದರಿಗೆ ಹೋಲಿಸಿದರೆ 100 ಕೆ.ಜಿಯಷ್ಟು ಹಗುರವಾಗಿದೆ ಮತ್ತು ಮುಂದೆ ಸಾಕಷ್ಟು ಉದ್ದವಾಗಿರುವ ವೀಲ್‌ಬೇಸ್ ಮತ್ತು ಎತ್ತರವನ್ನು ಹೊಂದಿರುತ್ತದೆ. ಹೊಸ ಜನರೇಷನ್ ಕ್ಯೂ5 ಕಾರಿನ ಹಿಂಭಾಗದಲ್ಲಿ ಅಳವಡಿಸಲಾಗಿರುವ ಟೈಲ್ ದೀಪಗಳ ವಿಚಾರದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಕಂಪನಿ ಮಾಡಿಲ್ಲ.

ಆಡಿ ಸಂಸ್ಥೆಯ ಬಹುನಿರೀಕ್ಷಿತ ಆಡಿ ಕ್ಯೂ5 ಕಾರಿನ ಬಿಡುಗಡೆಗೆ ಮಹೂರ್ತ ಫಿಕ್ಸ್

ಕೇವಲ ರಿಫ್ರೆಶ್ ನೋಟವನ್ನು ನೀಡುವ ಉದ್ದೇಶದಿಂದ ಎಲ್‌ಇಡಿ ದೀಪಗಳನ್ನು ಟ್ವೀಕ್ ಮಾಡಲಾಗಿದೆ. ಹಿಂಭಾಗದ ಬಂಪರ್ ಕೂಡ ಮರುವಿನ್ಯಾಸಗೊಂಡಿದೆ ಮತ್ತು ನಾಲ್ಕು ಎಕ್ಸ್‌ಸಾಸ್ಟ್‌ಗಳನ್ನು ಅಳವಡಿಸಲಾಗಿದೆ.

ಆಡಿ ಸಂಸ್ಥೆಯ ಬಹುನಿರೀಕ್ಷಿತ ಆಡಿ ಕ್ಯೂ5 ಕಾರಿನ ಬಿಡುಗಡೆಗೆ ಮಹೂರ್ತ ಫಿಕ್ಸ್

ಇನ್ನು, ಈ ಬಲಿಷ್ಠ ಕಾರಿನ ಎಂಜಿನ್ ಬಗ್ಗೆ ಹೇಳುದುದಾದರೆ, ಈ ಕಾರು ಸದ್ಯ ಇರುವಂತಹ 2-ಲೀಟರ್, ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಗೊಳ್ಳಲಿದ್ದು, ಈ ಎಂಜಿನ್ 400 ಎನ್ಎಂ ತಿರುಗುಬಲದಲ್ಲಿ 190 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ.

ಆಡಿ ಸಂಸ್ಥೆಯ ಬಹುನಿರೀಕ್ಷಿತ ಆಡಿ ಕ್ಯೂ5 ಕಾರಿನ ಬಿಡುಗಡೆಗೆ ಮಹೂರ್ತ ಫಿಕ್ಸ್

ಆಡಿ ಕಂಪನಿಯು 252 ಬಿಎಚ್‌ಪಿ ಉತ್ಪಾದಿಸುವ 2-ಲೀಟರ್ ಪೆಟ್ರೋಲ್ ಘಟಕವನ್ನು ಸಹ ಪರಿಚಯಿಸುವ ಉದ್ದೇಶವನ್ನು ಹೊಂದಿದೆ ಎನ್ನಲಾಗಿದ್ದು, ಈ ಎರಡೂ ಎಂಜಿನ್‌ಗಳೂ ಸಹ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಆಲ್ ವೀಲ್ ಡ್ರೈವ್ ಸಿಸ್ಟಮ್ ಆಯ್ಕೆ ಪಡೆದುಕೊಳ್ಳಲಿವೆ.

ಆಡಿ ಸಂಸ್ಥೆಯ ಬಹುನಿರೀಕ್ಷಿತ ಆಡಿ ಕ್ಯೂ5 ಕಾರಿನ ಬಿಡುಗಡೆಗೆ ಮಹೂರ್ತ ಫಿಕ್ಸ್

8.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಹೆಡ್ ಅಪ್ ಡಿಸ್‌ಪ್ಲೇ(HUD)ಗಳೊಂದಿಗೆ ಆಡಿ ಕಂಪನಿಯ ವರ್ಚುಯಲ್ ಕಾಕ್‌ಪಿಟ್ ಅಳವಡಿಸಲಾಗಿದ್ದು, ವೈರ್ಲೆಸ್ ಚಾರ್ಜಿಂಗ್, ಮೂರು ವಲಯ ಹವಾಮಾನ ನಿಯಂತ್ರಣ ಮತ್ತು ಸುತ್ತುವರಿದ ಬೆಳಕಿನಂತಹ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಈ ಎಸ್‌ಯುವಿ ಬಿಡುಗಡೆಗೊಳ್ಳಲಿದೆ.

ಆಡಿ ಸಂಸ್ಥೆಯ ಬಹುನಿರೀಕ್ಷಿತ ಆಡಿ ಕ್ಯೂ5 ಕಾರಿನ ಬಿಡುಗಡೆಗೆ ಮಹೂರ್ತ ಫಿಕ್ಸ್

ಬಿಡುಗಡೆಯ ನಂತರ, ಹೊಸ ಕ್ಯೂ5 ಮರ್ಸಿಡಿಸ್ ಬೆಂಜ್ ಜಿಎಲ್‌ಸಿ, ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್, ಬಿಎಂಡಬ್ಲ್ಯೂ ಎಕ್ಸ್3 ಮತ್ತು ಹೊಸ ವೊಲ್ವೊ ಎಕ್ಸ್‌ಸಿ 60 ಕಾರುಗಳೊಂದಿಗೆ ಸ್ಪರ್ಧೆ ನೆಡೆಸಲಿದ್ದು, ಬೆಲೆ ಸುಮಾರು ರೂ.50 ಲಕ್ಷ ಎಕ್ಸ್ ಶೋರೂಂ ಇರಲಿದೆ ಎಂದು ನಿರೀಕ್ಷಿಸಬಹುದು.

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
Read more on audi ಆಡಿ
English summary
Read in Kannada about New Audi Q5 India Launch Date Confirmed.
Story first published: Monday, December 18, 2017, 18:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X