ಮುಂದಿನ ಪೀಳಿಗೆಯ ಮಾರುತಿ ಎರ್ಟಿಗಾ ಕಾರಿನ ಸ್ಪೈ ಚಿತ್ರಗಳು

ಪ್ರತಿಯೊಂದು ಕೋನದಿಂದ ನೋಡಿದರೂ ಸಹ ಹೊಸ ಪೀಳಿಗೆಯ ಮಾರುತಿ ಎರ್ಟಿಗಾ ಕಾರನ್ನು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಗೊಳಿಸುವ ಲಕ್ಷಣಗಳು ಕಾಣಿಸುತ್ತಿದ್ದು, ಈ ವಿಚಾರ ಸದ್ಯ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.

By Girish

ಭಾರತದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯ ಹೊಸ ಎರ್ಟಿಗಾ ಎಂಪಿವಿ ಕಾರನ್ನು ಸದ್ಯ ಭಾರತದ ರಸ್ತೆಗಳ ಮೇಲೆ ಪರೀಕ್ಷೆ ನೆಡೆಸುತ್ತಿದೆ. ಈ ಎಂಪಿವಿ ವಾಹನವನ್ನು ಸಂಪೂರ್ಣವಾಗಿ ಮರೆಮಾಡಲಾಗಿದ್ದರೂ ಸಹ ಚಿತ್ರಗಳನ್ನು ಗಮನಿಸಿದರೆ ನಿಮಗೊಂದು ಕಲ್ಪನೆ ನೀಡುವುದು ಖಂಡಿತ.

ಮುಂದಿನ ಪೀಳಿಗೆಯ ಮಾರುತಿ ಎರ್ಟಿಗಾ ಕಾರಿನ ಸ್ಪೈ ಚಿತ್ರಗಳು

ಸದ್ಯ ಪರೀಕ್ಷೆಗೊಳಪಟ್ಟಿರುವ ಈ ಹೊಸ ಮಾರುತಿ ಎರ್ಟಿಗಾ ಕಾರು ಹೊಸ ಆಯಾಮ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ನಿರೀಕ್ಷೆ ಇದೆ ಎಂಬ ಮಾತುಗಳು ವಾಹನೋದ್ಯಮದಲ್ಲಿ ಕೇಳಿ ಬರುತ್ತಿವೆ.

ಮುಂದಿನ ಪೀಳಿಗೆಯ ಮಾರುತಿ ಎರ್ಟಿಗಾ ಕಾರಿನ ಸ್ಪೈ ಚಿತ್ರಗಳು

ಮುಂದಿನ-ಪೀಳಿಗೆಯ ಮಾರುತಿ ಎರ್ಟಿಗಾದ ಸ್ಪೈ ಚಿತ್ರಗಳನ್ನು ಗಮನಿಸಿದರೆ, ಹೊಸದಾಗಿ ವಿನ್ಯಾಸಗೊಳಿಸಿದ ಅಲಾಯ್ ಚಕ್ರಗಳನ್ನು ಕಾಣಬಹುದಾಗಿದೆ. ಆದರೆ ಹೊಸ ಮಾದರಿಯಲ್ಲಿರುವ ಚಕ್ರಗಳು ಪ್ರಸ್ತುತ ಮಾದರಿಯಕ್ಕಿಂತ ಸಾಕಷ್ಟು ದೊಡ್ಡದಾಗಿ ಕಾಣುತ್ತವೆ.

ಮುಂದಿನ ಪೀಳಿಗೆಯ ಮಾರುತಿ ಎರ್ಟಿಗಾ ಕಾರಿನ ಸ್ಪೈ ಚಿತ್ರಗಳು

ಬಾಹ್ಯ ವಿನ್ಯಾಸದ ಹೊರತಾಗಿ, ಹೊಸ-ಪೀಳಿಗೆಯ ಮಾರುತಿ ಎರ್ಟಿಗಾ ಕಾರನ್ನು ಸುಜುಕಿ ಸಂಸ್ಥೆಯು ಹೊಸ ಹಾರ್ಟ್‌ಎಕ್ಟ್ ಪ್ಲಾಟ್‌ಫಾರಂ ಆಧಾರದ ಮೇಲೆ ಪುನರ್ನಿರ್ಮಾಣ ಮಾಡಾಡಲಿದೆ. ಇದನ್ನು ಹೊಸ ಪೀಳಿಗೆಯ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಮತ್ತು ಹೊಸ ಡಿಜೈರ್ ಸಬ್‌ಕಾಂಪ್ಯಾಕ್ಟ್ ಸೆಡಾನ್ ಕಾರಿನಲ್ಲಿ ಸಹ ಇರಿಸಲಾಗಿದೆ.

ಮುಂದಿನ ಪೀಳಿಗೆಯ ಮಾರುತಿ ಎರ್ಟಿಗಾ ಕಾರಿನ ಸ್ಪೈ ಚಿತ್ರಗಳು

ಹೊಸ ಡಿಜೈರ್ ಕಾರಿನಲ್ಲಿ ಕಂಡುಬರುತ್ತವೆ ಹೊಸ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಲಕ್ಷಣಗಳನ್ನು ಮುಂದಿನ ಪೀಳಿಗೆಯ ಎರ್ಟಿಗಾ ಕಾರಿನಲ್ಲಿ ನೋಡಬಹುದಾಗಿದೆ. ಈ ಸೌಲಭ್ಯವು ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೊ ಮತ್ತು ಬ್ಲೂಟೂತ್ ಸಂಪರ್ಕವನ್ನು ಬೆಂಬಲಿಸುತ್ತದೆ.

ಮುಂದಿನ ಪೀಳಿಗೆಯ ಮಾರುತಿ ಎರ್ಟಿಗಾ ಕಾರಿನ ಸ್ಪೈ ಚಿತ್ರಗಳು

ಹೊಚ್ಚ ಹೊಸ ಎರ್ಟಿಗಾ ಕಾರು ಸ್ವಯಂಚಾಲಿತ ಹವಾಮಾನ ನಿಯಂತ್ರಣದೊಂದಿಗೆ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ ಮತ್ತು ಡುಯಲ್ ಏರ್ ಬ್ಯಾಗ್ ಪಡೆಯಲಿದೆ. ಡಿಆರ್‌ಎಲ್ ಜೊತೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು, ಎಲ್ಇಡಿ ಟೈಲ್ ಲೈಟ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಿದೆ.

ಮುಂದಿನ ಪೀಳಿಗೆಯ ಮಾರುತಿ ಎರ್ಟಿಗಾ ಕಾರಿನ ಸ್ಪೈ ಚಿತ್ರಗಳು

ಮುಂದಿನ ಪೀಳಿಗೆಯ ಮಾರುತಿ ಎರ್ಟಿಗಾ ಕಾರು, 1.4-ಲೀಟರ್ ಪೆಟ್ರೋಲ್ ಇಂಜಿನ್ ಮೂಲಕ ಚಾಲಿತವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಪ್ರಸ್ತುತ ಇರುವಂತಹ 1.3-ಲೀಟರ್ ಡೀಸೆಲ್ ಎಂಜಿನ್ ಬದಲಾಗಿ 1.5-ಲೀಟರ್ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುವ ಯೋಜನೆ ಮಾರುತಿ ಸಂಸ್ಥೆಯ ಮುಂದೆ ಇದೆ ಎನ್ನಲಾಗಿದೆ.

Most Read Articles

Kannada
English summary
India's largest carmaker Maruti is testing the new Ertiga MPV extensively and was recently spotted testing in the country.
Story first published: Thursday, November 16, 2017, 21:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X