ಸ್ಪಾಟ್ ಟೆಸ್ಟಿಂಗ್ ನಡೆಸಿದ ಎಲೈಟ್ ಐ20 ಮತ್ತು ಬಲೆನೊ ಪ್ರತಿಸ್ಪರ್ಧಿ ನಿಸ್ಸಾನ್ ನೋಟ್ ಇ-ಪವರ್

ದೇಶಿಯ ಆಟೋ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ನಿಸ್ಸಾನ್ ಸಂಸ್ಥೆಯು ಸದ್ಯದಲ್ಲೇ ಹೊಸ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದು, ಹ್ಯುಂಡೈ ಐ20 ಮತ್ತು ಮಾರುತಿ ಸುಜುಕಿ ಬಲೆನೊ ಹಿಂದಿಕ್ಕುವ ತವಕದಲ್ಲಿದೆ.

By Praveen

ದೇಶಿಯ ಆಟೋ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ನಿಸ್ಸಾನ್ ಸಂಸ್ಥೆಯು ಸದ್ಯದಲ್ಲೇ ಹೊಸ ಎಲೆಕ್ಟ್ರಿಕ್ ಕಾರು ಮಾದರಿಯೊಂದನ್ನು ಬಿಡುಗಡೆಗೊಳಿಸುತ್ತಿದ್ದು, ಹ್ಯುಂಡೈ ಐ20 ಮತ್ತು ಮಾರುತಿ ಸುಜುಕಿ ಬಲೆನೊ ಹಿಂದಿಕ್ಕುವ ತವಕದಲ್ಲಿದೆ.

ಸ್ಪಾಟ್ ಟೆಸ್ಟಿಂಗ್ ನಡೆಸಿದ ಎಲೈಟ್ ಐ20 ಮತ್ತು ಬಲೆನೊ ಪ್ರತಿಸ್ಪರ್ಧಿ ನಿಸ್ಸಾನ್ ನೋಟ್ ಇ-ಪವರ್

ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟ ವಿಶೇಷ ಬೇಡಿಕೆ ಸೃಷ್ಠಿಯಾಗಿದ್ದು, ಈ ಹಿನ್ನೆಲೆ ನಿಸ್ಸಾನ್ ಇಂಡಿಯಾ ಸಂಸ್ಥೆಯು ಹೊಸ ಬಗೆಯ ನೋಟ್ ಇ-ಪವರ್ ಎನ್ನುವ ಎಲೆಕ್ಟ್ರಿಕ್ ಹ್ಯಾಚ್‌‌ಬ್ಯಾಕ್ ಕಾರನ್ನು ಭಾರತೀಯ ಮಾರುಕಟ್ಟೆಗಾಗಿ ಅಭಿವೃದ್ಧಿಗೊಳಿಸಿದೆ.

ಸ್ಪಾಟ್ ಟೆಸ್ಟಿಂಗ್ ನಡೆಸಿದ ಎಲೈಟ್ ಐ20 ಮತ್ತು ಬಲೆನೊ ಪ್ರತಿಸ್ಪರ್ಧಿ ನಿಸ್ಸಾನ್ ನೋಟ್ ಇ-ಪವರ್

ಇದರಿಂದ ಹೊಸ ಕಾರು ಬಿಡುಗಡೆಗೆ ಎದುರು ನೋಡುತ್ತಿರುವ ನಿಸ್ಸಾನ್ ಸಂಸ್ಥೆಯು ನೋಟ್ ಇ-ಪವರ್ ಕಾರ್ಯಕ್ಷಮತೆ ಕುರಿತು ಸ್ಟಾಟ್ ಟೆಸ್ಟಿಂಗ್ ನಡೆಸಿದ್ದು, ತಮಿಳುನಾಡಿನ ಚೆಂಗಲ್‌ಪಟ್ಟು ಎನ್ನುವಲ್ಲಿ ಹೊಸ ಕಾರಿನ ರಹಸ್ಯ ಚಿತ್ರಗಳನ್ನು ತೆಗೆಯಲಾಗಿದೆ.

Recommended Video

The Emflux Motors Model 1 – India’s First Electric Motorcycle
ಸ್ಪಾಟ್ ಟೆಸ್ಟಿಂಗ್ ನಡೆಸಿದ ಎಲೈಟ್ ಐ20 ಮತ್ತು ಬಲೆನೊ ಪ್ರತಿಸ್ಪರ್ಧಿ ನಿಸ್ಸಾನ್ ನೋಟ್ ಇ-ಪವರ್

ಸಿಕ್ಕಿರುವ ಚಿತ್ರಗಳ ಪ್ರಕಾರ ಎಲೆಕ್ಟ್ರಿಕ್ ಕಾರು ಆವೃತ್ತಿಯಲ್ಲೇ ವಿಭಿನ್ನ ಎಂಜಿನ್ ಮಾರ್ಪಾಡು ಹೊಂದಿರುವ ನೋಟ್ ಇ-ಪವರ್ ಕಾರು ಮಾದರಿಯು 1.2-ಲೀಟರ್, ತ್ರಿ ಸಿಲಿಂಡರ್, ಪೆಟ್ರೋಲ್ ಎಂಜಿನ್ ಹೊಂದಿರುವುದಲ್ಲದೇ ಸುಧಾರಿತ ಮಾದರಿಯ ಬ್ಯಾಟರಿ ಅನ್ನು ಕೂಡಾ ಹೊಂದಿದೆ.

ಸ್ಪಾಟ್ ಟೆಸ್ಟಿಂಗ್ ನಡೆಸಿದ ಎಲೈಟ್ ಐ20 ಮತ್ತು ಬಲೆನೊ ಪ್ರತಿಸ್ಪರ್ಧಿ ನಿಸ್ಸಾನ್ ನೋಟ್ ಇ-ಪವರ್

ಹೀಗಾಗಿ ಕಾರು ಚಾಲನೆ ವೇಳೆ ಎಲೆಕ್ಟ್ರಿಕ್ ಎಂಜಿನ್ ಸಾಮರ್ಥ್ಯ ಮುಗಿದು ಹೋದಲ್ಲಿ ತುರ್ತಾಗಿ ಪೆಟ್ರೋಲ್ ಎಂಜಿನ್ ಅನ್ನು ಕೂಡಾ ಬಳಕೆ ಮಾಡುವ ಅವಕಾಶವಿದ್ದು, ಈ ಮೂಲಕ 108-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು.

ಸ್ಪಾಟ್ ಟೆಸ್ಟಿಂಗ್ ನಡೆಸಿದ ಎಲೈಟ್ ಐ20 ಮತ್ತು ಬಲೆನೊ ಪ್ರತಿಸ್ಪರ್ಧಿ ನಿಸ್ಸಾನ್ ನೋಟ್ ಇ-ಪವರ್

ಜೊತೆಗೆ ಎಲೆಕ್ಟ್ರಿಕ್ ನೋಟ್ ಇ-ಪವರ್ ಕಾರು ಮಾದರಿಯಲ್ಲಿ ನೀಡಲಾಗಿರುವ ಪೆಟ್ರೋಲ್ ಎಂಜಿನ್ ಪ್ರತಿಲೀಟರ್‌ಗೆ 37ಕಿಮಿ ಮೈಲೇಜ್ ಸಾಮರ್ಥ್ಯ ಹೊಂದಿದ್ದು, ಮೈಲೇಜ್ ಆಧಾರ ಮೇಲೆ ಕಾರು ಆಯ್ಕೆ ಮಾಡುವ ಭಾರತೀಯ ಗ್ರಾಹಕರಿಗೆ ಇದು ಅತ್ಯುತ್ತಮ ಆಯ್ಕೆಯಾಗಬಹುದು.

ಸ್ಪಾಟ್ ಟೆಸ್ಟಿಂಗ್ ನಡೆಸಿದ ಎಲೈಟ್ ಐ20 ಮತ್ತು ಬಲೆನೊ ಪ್ರತಿಸ್ಪರ್ಧಿ ನಿಸ್ಸಾನ್ ನೋಟ್ ಇ-ಪವರ್

ಇನ್ನು ನಿಸ್ಸಾನ್ ಉತ್ಪಾದನೆಯ ಮತ್ತೊಂದು ಬಹುನೀರಿಕ್ಷಿತ ಎಲೆಕ್ಟ್ರಿಕ್ ಲೀಫ್ ಕಾರು ಕೂಡಾ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಪ್ರತಿ ಚಾರ್ಚಿಂಗ್‌ಗೆ 350 ಕಿಮಿ ಮೈಲೇಜ್ ನೀಡುವ ಗುರಿಹೊಂದಿರುವುದು ಮತ್ತಷ್ಟು ಕುತೂಲಹಕ್ಕೆ ಕಾರಣವಾಗಿದೆ.

ಸ್ಪಾಟ್ ಟೆಸ್ಟಿಂಗ್ ನಡೆಸಿದ ಎಲೈಟ್ ಐ20 ಮತ್ತು ಬಲೆನೊ ಪ್ರತಿಸ್ಪರ್ಧಿ ನಿಸ್ಸಾನ್ ನೋಟ್ ಇ-ಪವರ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

2030ರ ವೇಳೆಗೆ ಎಲೆಕ್ಟ್ರಿಕ್ ಕಾರುಗಳ ಯುಗ ಆರಂಭವಾಗಲಿದ್ದು ಇದಕ್ಕಾಗಿಯೇ ಎಲ್ಲ ಆಟೋ ಉತ್ಪಾದಕರು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮೇಲೆ ಗಮನಹರಿಸಿದ್ದು, ನಿಸ್ಸಾನ್ ಉತ್ಪಾದನೆ ಮಾಡಿರುವ ನೋಟ್ ಇ-ಪವರ್ ಮತ್ತು ಎಲೆಕ್ಟ್ರಿಕ್ ಲೀಫ್ ಭಾರೀ ಬೇಡಿಕೆ ಪಡೆಯುವ ನೀರಿಕ್ಷೆಯಲ್ಲಿವೆ.

ಡ್ರೈವ್ ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟ್ರೆಂಡಿಂಗ್ ವಿಡಿಯೋ ಇಲ್ಲಿದೆ ನೋಡಿ.

Most Read Articles

Kannada
English summary
Nissan’s Baleno And Elite i20 Rival Spotted Testing In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X