ಅಬಕಾರಿ ಸುಂಕ ಇಳಿಕೆ- ಅಗ್ಗವಾದ ಪೆಟ್ರೋಲ್, ಡೀಸೆಲ್ ಬೆಲೆ

ಬಹಳ ದಿನಗಳ ಬಳಿಕ ಇಂಧನಗಳ ಬೆಲೆ ಮೊದಲ ಬಾರಿಗೆ ಭಾರೀ ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 2 ರೂ. ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆಯಲ್ಲೂ ಕೂಡಾ 2 ರೂ. ಗೆ ಅಗ್ಗವಾಗಿದ್ದು, ಪರಿಷ್ಕೃತ ದರವೂ ಇಂದಿನಿಂದಲೇ ಜಾರಿಯಾಗಿದೆ.

By Praveen

ಸತತ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಬಹಳ ದಿನಗಳ ಬಳಿಕ ಮೊದಲ ಬಾರಿಗೆ ಭಾರೀ ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 2 ರೂ. ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆಯಲ್ಲೂ ಕೂಡಾ 2 ರೂ. ಗೆ ಅಗ್ಗವಾಗಿದ್ದು, ಪರಿಷ್ಕೃತ ದರವೂ ಇಂದಿನಿಂದಲೇ ಜಾರಿಯಾಗಿದೆ.

ಅಬಕಾರಿ ಸುಂಕ ಇಳಿಕೆ- ಅಗ್ಗವಾದ ಪೆಟ್ರೋಲ್, ಡಿಸೇಲ್ ಬೆಲೆ

ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರಿಗೆ ಆಗುತ್ತಿರುವ ಹೊರೆಯನ್ನು ತಪ್ಪಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿ(ಸಿಬಿಇಸಿ)ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದು, ಪೆಟ್ರೋಲ್, ಡಿಸೇಲ್ ಬೆಲೆಗಳನ್ನು ಕಡಿತ ಮಾಡಿದೆ.

ಅಬಕಾರಿ ಸುಂಕ ಇಳಿಕೆ- ಅಗ್ಗವಾದ ಪೆಟ್ರೋಲ್, ಡಿಸೇಲ್ ಬೆಲೆ

ಅಬಕಾರಿ ಸುಂಕ ಕಡಿತಗೊಳಿಸಿದ್ದರಿಂದ ಈ ವರ್ಷ 26 ಸಾವಿರ ಕೋಟಿ ರೂ. ಹೊರೆ ಕೇಂದ್ರ ಸರ್ಕಾರಕ್ಕೆ ಬೀಳಲಿದ್ದು, ಈ ಹಣಕಾಸು ವರ್ಷದಲ್ಲಿ 13 ಸಾವಿರ ಕೋಟಿ ರೂ. ಹೊರೆ ಬೀಳಲಿದೆ ಎಂದು ಹೇಳಿದೆ.

Recommended Video

Tata Nexon Price And Features Variant-wise - DriveSpark
ಅಬಕಾರಿ ಸುಂಕ ಇಳಿಕೆ- ಅಗ್ಗವಾದ ಪೆಟ್ರೋಲ್, ಡಿಸೇಲ್ ಬೆಲೆ

ಹೀಗಾಗಿ ಪೆಟ್ರೋಲ್ ಬೆಲೆಯು ಸದ್ಯದ ಮಾರುಕಟ್ಟೆಯ ಪ್ರಕಾರ ರೂ.70.88 (ದೆಹಲಿ)ಕ್ಕೆ ಇಳಿಕೆಯಾಗಿದ್ದು, ಡೀಸೆಲ್ ಬೆಲೆಯೂ ರೂ.59.14 (ದೆಹಲಿ)ಕ್ಕೆ ಅಗ್ಗವಾಗಿದ್ದು, ಬೆಲೆ ಕಡಿತದಿಂದ ವಾಹನ ಸವಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ ಎನ್ನಬಹುದು.

ಅಬಕಾರಿ ಸುಂಕ ಇಳಿಕೆ- ಅಗ್ಗವಾದ ಪೆಟ್ರೋಲ್, ಡಿಸೇಲ್ ಬೆಲೆ

ಪೆಟ್ರೋಲ್ ಬೆಲೆಯಲ್ಲಿ ಯಾರಿಗೆ ಎಷ್ಟು ಪಾಲು?

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ಸೆಪ್ಟೆಂಬರ್ 13 ರಂದು 70.38 ರೂ. ಇತ್ತು. ಇದರಲ್ಲಿ 30.70 ರೂ. ಡೀಲರ್ ಶುಲ್ಕ, 21.48 ರೂ. ಅಬಕಾರಿ ಸುಂಕ 3.24 ರೂ. ಡೀಲರ್ ಕಮಿಷನ್, 14.96 ರೂ. ವ್ಯಾಟ್ ತೆರಿಗೆ ಇದೆ.

ಅಬಕಾರಿ ಸುಂಕ ಇಳಿಕೆ- ಅಗ್ಗವಾದ ಪೆಟ್ರೋಲ್, ಡಿಸೇಲ್ ಬೆಲೆ

ಡೀಸೆಲ್ ಬೆಲೆಯಲ್ಲಿ ಯಾರಿಗೆ ಎಷ್ಟು ಪಾಲು?

ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಗೆ ಸೆಪ್ಟೆಂಬರ್ 13 ರಂದು 58.72 ರೂ.ಇತ್ತು. ಇದರಲ್ಲಿ 30.54 ರೂ. ಡೀಲರ್ ಶುಲ್ಕ, 17.33 ರೂ. ಅಬಕಾರಿ ಸುಂಕ 2.18 ರೂ. ಡೀಲರ್ ಕಮಿಷನ್, 8.67 ರೂ. ವ್ಯಾಟ್ ತೆರಿಗೆ ಇದೆ.

ಅಬಕಾರಿ ಸುಂಕ ಇಳಿಕೆ- ಅಗ್ಗವಾದ ಪೆಟ್ರೋಲ್, ಡಿಸೇಲ್ ಬೆಲೆ

ಬೇರೆ ದೇಶಗಳಲ್ಲಿ ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ದರ ಎಷ್ಟಿದೆ?

ಪೆಟ್ರೋಲ್: ಭಾರತ(ದೆಹಲಿ) 70.38 ರೂ., ಪಾಕಿಸ್ತಾನ 40.82 ರೂ., ಬಾಂಗ್ಲಾದೇಶ 69.16 ರೂ., ಶ್ರೀಲಂಕಾ 49.80 ರೂ., ನೇಪಾಳ 61.88 ರೂ. ಇದೆ.

ಅಬಕಾರಿ ಸುಂಕ ಇಳಿಕೆ- ಅಗ್ಗವಾದ ಪೆಟ್ರೋಲ್, ಡಿಸೇಲ್ ಬೆಲೆ

ಡೀಸೆಲ್: ಭಾರತ(ದೆಹಲಿ)58.72 ರೂ., ಪಾಕಿಸ್ತಾನ 47.15 ರೂ., ಬಾಂಗ್ಲಾದೇಶ 52.27 ರೂ., ಶ್ರೀಲಂಕಾ 40.43 ರೂ., ನೇಪಾಳ 46.72 ರೂ. ಇದೆ.

ಅಬಕಾರಿ ಸುಂಕ ಇಳಿಕೆ- ಅಗ್ಗವಾದ ಪೆಟ್ರೋಲ್, ಡಿಸೇಲ್ ಬೆಲೆ

14.2 ಕೆಜಿ ತೂಕದ ಎಲ್‍ಪಿಜಿ ಸಿಲಿಂಡರ್

ಭಾರತ 487 ರೂ., ಪಾಕಿಸ್ತಾನ 1081.32 ರೂ., ಬಾಂಗ್ಲಾದೇಶ 639.50 ರೂ., ಶ್ರೀಲಂಕಾ 638.68 ರೂ., ನೇಪಾಳ 836.62 ರೂ. ಇದೆ.

Most Read Articles

Kannada
English summary
Read in Kannada about Petrol, Diesel Prices Slashed By Rs 2 Per Litre As Excise Duty Cut.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X