ಭಾರತದಲ್ಲಿ ಟೆಸ್ಲಾ ಕಾರಿನ ಮೊದಲ ಮಾಲೀಕ ಯಾರು ಗೊತ್ತೆ ?

ಸಂಘಟಿತ ವ್ಯಾಪಾರಗಳ ಸಂಸ್ಥೆಯಾದ ಎಸ್ಸಾರ್‌ನ ಸಿಇಒ ಆಗಿರುವಂತಹ ಪ್ರಶಾಂತ್ ರೂಯಾ ಅವರು ಟೆಸ್ಲಾ ಎಲೆಕ್ಟ್ರಿಕ್ ಕಾರನ್ನು ಕೊಳ್ಳುವ ಮೂಲಕ ಟೆಸ್ಲಾ ಕಂಪನಿಯ ಭಾರತದ ಮೊದಲ ಗ್ರಾಹಕ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

By Girish

ಕಳೆದ ವಾರ ಭಾರತಕ್ಕೆ ಟೆಸ್ಲಾ ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಕಾರನ್ನು ಆಮದು ಮಾಡಿಕೊಂಡಿರುವ ಪ್ರಶಾಂತ್ ರೂಯಾ, ರಸ್ತೆಯ ಮೇಲೆ ಕಾರನ್ನು ಚಲಾಯಿಸುವ ಮೂಲಕ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಭಾರತದಲ್ಲಿ ಸದ್ಯ ಈ ಕಾರು ಅಧಿಕೃತವಾಗಿ ಮಾರಾಟವಾಗುತ್ತಿಲ್ಲ.

ಭಾರತದಲ್ಲಿ ಟೆಸ್ಲಾ ಕಾರಿನ ಮೊದಲ ಮಾಲೀಕ ಯಾರು ಗೊತ್ತೆ ?

ಖಾಸಗಿ ಮಾರ್ಗದ ಮೂಲಕ ಈ ಎಕ್ಸ್ ಮಾದರಿಯನ್ನು ಶ್ರೀ ರೂಯಾ ಆಮದು ಮಾಡಿಕೊಂಡಿದ್ದಾರೆ. ಅಮೇರಿಕಾದಲ್ಲಿ ಸುಮಾರು 120,000 ಯುಎಸ್ ಡಾಲರ್ ಅಥವಾ ಸುಮಾರು ರೂ.75 ಲಕ್ಷ ದರವನ್ನು ಈ ಕಾರು ಹೊಂದಿದೆ.

ಭಾರತದಲ್ಲಿ ಟೆಸ್ಲಾ ಕಾರಿನ ಮೊದಲ ಮಾಲೀಕ ಯಾರು ಗೊತ್ತೆ ?

ಆದರೆ, ಭಾರತಕ್ಕೆ ಆಮದು ಮಾಡಿಕೊಳ್ಳಲು ಪ್ರಶಾಂತ್ ರೂಯಾ ಅವರು ನೀಡಿದ ಸುಂಕದ ಮೊತ್ತ ಕೇಳಿದರೆ ಖಂಡಿತವಾಗಿ ತಲೆಸುತ್ತುವುದಂತೂ ಗ್ಯಾರಂಟಿ. ಹೌದು, ಬೃಹತ್ ಮೊತ್ತ ಪಾವತಿಸಿ ಕಾರನ್ನು ಭಾರತಕ್ಕೆ ತರಲಾಗಿದೆ.

ಭಾರತದಲ್ಲಿ ಟೆಸ್ಲಾ ಕಾರಿನ ಮೊದಲ ಮಾಲೀಕ ಯಾರು ಗೊತ್ತೆ ?

ಪ್ರಶಾಂತ್ ರೂಯಾ ಅವರು ಸುಮಾರು 2 ಕೋಟಿ ಬೆಲೆ ನೀಡಿ ಈ ಕಾರನ್ನು ಭಾರತಕ್ಕೆ ಆಮದು ಮಾಡಿಕೊಂಡಿದ್ದಾರೆ ಎಂದರೆ ನೀವು ನಂಬಲೇ ಬೇಕು. ಟೆಸ್ಲಾ ಸಂಸ್ಥೆಯ ಲೈನ್ ಅಪ್‌ನ ಏಕೈಕ ಎಸ್‌ಯುವಿ ಕಾರು ಮಾದರಿ ಎಕ್ಸ್ ಆಗಿದೆ. ಇದು ಎಸ್‌ಯುವಿಗಿಂತಲೂ ಹೆಚ್ಚು ಕ್ರಾಸ್ಒವರ್ ಆಗಿದ್ದು, ಮೂಲತಃ 7 ಆಸನಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ ಟೆಸ್ಲಾ ಕಾರಿನ ಮೊದಲ ಮಾಲೀಕ ಯಾರು ಗೊತ್ತೆ ?

ಇದು ವಿಶ್ವದ ಅತ್ಯಂತ ವೇಗದ ಎಸ್‌ಯುವಿಯಾಗಿದೆ. ಇದು 2 ಎಲೆಕ್ಟ್ರಿಕ್ ಮೋಟರ್‌ಗಳನ್ನು ಬಳಸುತ್ತದೆ. ಒಂದು ಎಂಜಿನ್ ಮುಂಭಾಗದ ಚಕ್ರಗಳನ್ನು ಚಾಲನೆ ಮಾಡುತ್ತಿದೆ ಮತ್ತು ಇನ್ನೊಂದು ಎಲೆಕ್ಟ್ರಿಕ್ ಮೋಟಾರ್ ಹಿಂಬದಿ ಚಕ್ರಗಳನ್ನು ಚಾಲನೆ ಮಾಡುತ್ತದೆ.

ಭಾರತದಲ್ಲಿ ಟೆಸ್ಲಾ ಕಾರಿನ ಮೊದಲ ಮಾಲೀಕ ಯಾರು ಗೊತ್ತೆ ?

ಈ ಎರಡು ಮೋಟಾರ್‌ಗಳೂ ಸೇರಿ ಒಟ್ಟು 750 ಬಿಎಚ್‌ಪಿ ಮತ್ತು 967 ಎನ್ಎಂ ಟಾರ್ಕ್ ಶಕ್ತಿಯನ್ನು ಉತ್ಪಾದಿಸುತ್ತದೆ. ಇದು ಮಾಡೆಲ್ ಎಕ್ಸ್ ಕಾರಿಗೆ ಹೆಚ್ಚು ವೇಗವರ್ಧಕವಾಗಿದೆ ಮತ್ತು ಕೇವಲ 4.8 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗ ಪಡೆದುಕೊಳ್ಳುವಷ್ಟು ಶಕ್ತವಾಗಿದೆ.

ಭಾರತದಲ್ಲಿ ಟೆಸ್ಲಾ ಕಾರಿನ ಮೊದಲ ಮಾಲೀಕ ಯಾರು ಗೊತ್ತೆ ?

ಮಾದರಿ 3 ಕಾರನ್ನು ಅಧಿಕೃತವಾಗಿ ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರನ್ನು ಅಧಿಕೃತವಾಗಿ ಪ್ರಾರಂಭಿಸುವ ಯೋಜನೆಗಳನ್ನು ಟೆಸ್ಲಾ ಹೊಂದಿದೆ. ಆದಾಗ್ಯೂ, ಯಾವಾಗ ಭಾರತದಲ್ಲಿ ಅನಾವರಣಗೊಳ್ಳಲಿದೆ ಎಂಬುದರ ಬಗ್ಗೆ ನಿಖರ ಸಮಯ ಇನ್ನೂ ಬಹಿರಂಗಗೊಂಡಿಲ್ಲ.

Most Read Articles

Kannada
English summary
Prashant Ruia, CEO of Essar, is India’s first Tesla owner
Story first published: Thursday, December 14, 2017, 17:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X