2030 ಒಳಗಾಗಿ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ ಇಟ್ಟ ಪುಣೆ ಸರ್ಕಾರ

ಪುಣೆ ಸರ್ಕಾರವು ತನ್ನ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳ ಬದಲಾಗಿ ಎಲೆಕ್ಟ್ರಿಕ್ ವಾಹನಗಳ ಕಡೆ ಹೆಚ್ಚು ಒಲವು ಹೊಂದಿದ್ದು, ರಾಜ್ಯದಲ್ಲಿ ತನ್ನ ಸ್ವಂತ ವಿದ್ಯುತ್ ಚಲನಶೀಲ ಪರಿಹಾರ ಕೇಂದ್ರವನ್ನು ನಿರ್ಮಿಸಲು ಯೋಜಿಸುತ್ತಿದೆ.

By Girish

ಹೌದು, ಈ ಬಗ್ಗೆ ತನ್ನ ನಿರ್ಧಾರವನ್ನು ಈಗಾಗಲೇ ಸ್ಪಷ್ಟಪಡಿಸಿರುವ ಸರ್ಕಾರ, ರಾಜ್ಯದಲ್ಲಿ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವಂತೆ ಭಾರತದ ವಾಹನ ತಯಾರಕ ಸಂಸ್ಥೆಗಳನ್ನು ಕೇಳಿಕೊಂಡಿದೆ. ಆದರೆ, ಈ ವಿಚಾರವಾಗಿ ಸರ್ಕಾರದಿಂದ ಲಿಖಿತ ಬದ್ಧತೆ ಪಡೆದ ನಂತರವೇ ನಾವು ನಮ್ಮ ಕೆಲಸವನ್ನು ಮುಂದುವರೆಸುವುದಾಗಿ ಕಂಪನಿಗಳು ತಿಳಿಸಿವೆ.

2030 ಒಳಗಾಗಿ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ ಇಟ್ಟ ಪುಣೆ ಸರ್ಕಾರ

ನಾವು ಉತ್ಪಾದನೆಯನ್ನು ಪ್ರಾರಂಭಿಸಿದ ನಂತರ ಉತ್ಪಾದನೆಯ ಮೇಲೆ ಪರಿಣಾಮ ಬೀರುವಂತಹ ಹಠಾತ್ ಬದಲಾವಣೆಗಳನ್ನು ಸರ್ಕಾರ ಮಾಡಬಹುದು ಎಂಬ ಸಂಶಯವನ್ನು ಕಂಪನಿಗಳು ಹೊಂದಿವೆ.

2030 ಒಳಗಾಗಿ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ ಇಟ್ಟ ಪುಣೆ ಸರ್ಕಾರ

ಬಸ್ಸುಗಳು, ಟ್ರಕ್‌ಗಳು ಮತ್ತು ರಿಕ್ಷಾಗಳನ್ನು ಮಾತ್ರ ಎಲೆಕ್ಟ್ರಿಕ್ ವಾಹನಗಳನ್ನಾಗಿ ಮಾರ್ಪಾಡು ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಖಾಸಗಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ತರದೇ ತರಲು ನಿರ್ಧರಿಸಿದೆ.

2030 ಒಳಗಾಗಿ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ ಇಟ್ಟ ಪುಣೆ ಸರ್ಕಾರ

ಪುಣೆಯಲ್ಲಿನ ಓಇಎಂ(ಮೂಲ ಸಲಕರಣೆ ತಯಾರಕ)ಕಂಪನಿಯೊಂದು ಈಗಾಗಲೇ ಕಟ್ರಾಜ್ ಮೃಗಾಲಯದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಿದ್ದು, ಇದನ್ನು ವಿಸ್ತರಿಸುವ ಬಗ್ಗೆ ಮಾತುಕತೆ ನೆಡೆಸಲಾಗಿದೆ.

2030 ಒಳಗಾಗಿ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ ಇಟ್ಟ ಪುಣೆ ಸರ್ಕಾರ

ಪುಣೆ ಮೂಲದ ಓಇಎಂ ಸಂಸ್ಥೆಗಳು ದ್ವಿಚಕ್ರ ವಾಹನಗಳನ್ನು ಮತ್ತು ವಿದ್ಯುತ್ ಬಲದ ಮೇಲೆ ಚಲಿಸುವ ಬಸ್ಸುಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇತರ ತಯಾರಕರಿಗೆ(ಪುಣೆ ಹೊರಗೆ, ಆದರೆ ಭಾರತೀಯ ಕಂಪನಿ) ನೀಡುವಂತೆ ಸರ್ಕಾರ ಓಇಎಂ ಸಂಸ್ಥೆಗಳಿಗೂ ಸಹ ಆರ್ & ಡಿ ಸೌಕರ್ಯವನ್ನು ಪೂರೈಸುತ್ತಿದೆ.

2030 ಒಳಗಾಗಿ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ ಇಟ್ಟ ಪುಣೆ ಸರ್ಕಾರ

ಎಆರ್‌ಎಐ(ಆಟೊಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ)ಸಹ ಸರ್ಕಾರದ ಈ ಕ್ರಮವನ್ನು ಬೆಂಬಲಿಸಿದೆ ಮತ್ತು ಅವರು ಈ ವಲಯವನ್ನು ಉನ್ನತೀಕರಿಸುವ ಉದ್ಯಮಗಳಿಗೆ 'ಇ-ಮೊಬಿಲಿಟಿ ಸೆಂಟರ್' ಸೌಲಭ್ಯವನ್ನು ಕೊಡುಗೆ ನೀಡಲು ನಿರ್ಧರಿಸಿದೆ.

2030 ಒಳಗಾಗಿ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ ಇಟ್ಟ ಪುಣೆ ಸರ್ಕಾರ

ತ್ವರಿತವಾಗಿ ವಿದ್ಯುತ್ ವಾಹನಗಳ ಅಭಿವೃದ್ಧಿಯನ್ನು ಬೆಂಬಲಿಸಲು ಸರಿಯಾದ ಮೂಲಸೌಕರ್ಯದ ಅಗತ್ಯವಿದೆ. ಹಾಗಾಗಿ, ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಖಾಸಗಿ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಪುಣೆ ಸರ್ಕಾರವು ವ್ಯಾಪಾರ ಅವಕಾಶಗಳನ್ನು ಒದಗಿಸಲು ಪ್ರಯತ್ನಿಸುತ್ತಿದೆ.

Most Read Articles

Kannada
English summary
The Pune Government has asked the Indian automotive manufacturers to make new electric vehicles.
Story first published: Tuesday, December 12, 2017, 14:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X