Just In
- 1 min ago ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- 27 min ago ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- 28 min ago ಪ್ರೇರಣಾತ್ಮಕ ಕಥೆ: ಮನೆ ಕೆಲಸದಾಕೆಗೆ 'ಸೈಕಲ್' ಖರೀದಿಸಲು ಸಹಾಯ ಮಾಡಿದ ಮಾಲೀಕ.. ವಿಡಿಯೋ ವೈರಲ್
- 2 hrs ago ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
Don't Miss!
- News ಬೆಂಗಳೂರಿನಲ್ಲಿ ಖಾಲಿ ಚೊಂಬು ಹಿಡಿದು ಕಾಂಗ್ರೆಸ್ ಪ್ರತಿಭಟನೆ
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ನ್ಯೂ ಜನರೇಷನ್ ಸ್ಕಾನಿಯಾ ಟಿಪ್ಪರ್ ಬಿಡುಗಡೆ
ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸ್ವಿಡಿಷ್ ಮೂಲದ ಸ್ಕಾನಿಯಾ ಸಂಸ್ಥೆಯು ಹೊಸ ನಮೂನೆಯ ಟಿಪ್ಪರ್ ಅನ್ನು ಬಿಡುಗಡೆ ಮಾಡಿದ್ದು, ವಾಣಿಜ್ಯ ವಾಹನಗಳ ವಿಭಾಗದಲ್ಲಿ ಹೊಸ ಸಂಚಲನ ಉಂಟು ಮಾಡಿದೆ.
ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸ್ವಿಡಿಷ್ ಮೂಲದ ಸ್ಕಾನಿಯಾ ಸಂಸ್ಥೆಯು ಹೊಸ ನಮೂನೆಯ ಟಿಪ್ಪರ್ ಅನ್ನು ಬಿಡುಗಡೆ ಮಾಡಿದ್ದು, ವಾಣಿಜ್ಯ ವಾಹನಗಳ ವಿಭಾಗದಲ್ಲಿ ಹೊಸ ಸಂಚಲನ ಉಂಟು ಮಾಡಿದೆ.
ಗಣಿಗಾರಿಕೆಗಳಿಗೆ ಸಹಾಯಕವಾಗ ನಿಟ್ಟಿನಲ್ಲಿ ಹೊಸ ರೀತಿಯ ಪಿ440 8x4 ಸಿಯು.ಎಂ ಎಂಜಿನ್ ಮಾದರಿ ಬಿಡುಗಡೆಯಾಗಿದ್ದು, ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಹಾಗೂ ಅತಿ ಹೆಚ್ಚು ಲೋಡಿಂಗ್ ಸಾಮರ್ಥ್ಯದ ವಿನ್ಯಾಸವನ್ನು ಹೊಂದಿದೆ.
ಇದರ ಜೊತೆಗೆ ಬಿಎಸ್-4 ವೈಶಿಷ್ಟ್ಯತೆಗಳನ್ನು ಹೊಂದಿರುವ ಸ್ಕಾನಿಯಾ ಟಿಪ್ಪರ್, 13-ಲೀಟರ್ ಎಂಜಿನ್ನೊಂದಿಗೆ 440ಬಿಎಚ್ಪಿ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ.
ಹೀಗಾಗಿ ಕಡಿದಾದ ಪ್ರದೇಶಗಳಲ್ಲಿನ ಗಣಿ ಚಟುವಟಿಕೆಗೆ ಸ್ಕಾನಿಯಾ ಟಿಪ್ಪರ್ಗಳು ಸಹಕಾರಿಯಾಗಲಿದ್ದು, ಎಸ್ಸಆರ್ ತಂತ್ರಜ್ಞಾನ ಪ್ರೇರಣೆಯೊಂದಿಗಾಗಿ ಮುಂಜಾಗ್ರತ ಮಾಹಿತಿಗಳನ್ನು ನೀಡಬಲ್ಲ ಫ್ಲೀಟ್ ಮ್ಯಾನೇಜ್ಮೆಂಟ್ ಸಿಸ್ಟಂ ಒದಗಿಸಲಾಗಿದೆ.
ಈ ಕುರಿತು ಮಾತನಾಡಿರುವ ಸ್ಕಾನಿಯಾ ಇಂಡಿಯಾ ಕಾರ್ಯನಿರ್ವಾಹಕ ಅಧಿಕಾರಿ ರಾಘವನ್ ಶ್ರೀನಿವಾಸ್, "ಸ್ಕಾನಿಯಾ ಹೊಸ ಮಾದರಿಯ ಟಿಪ್ಪರ್ ಭಾರತೀಯ ಆಯ್ದ ಗ್ರಾಹಕರಿಗಾಗಿಯೇ ಅಭಿವೃದ್ಧಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಟಿಪ್ಪರ್ ಆವೃತ್ತಿಯಲ್ಲೇ ಅತಿಹೆಚ್ಚು ಬೇಡಿಕೆ ಹೊಂದುವ ವಿಶ್ವಾಸವಿದೆ" ಎಂದಿದ್ದಾರೆ.
ಇನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಹೊಂದಿರುವ ಸ್ಕಾನಿಯಾ ಸಂಸ್ಥೆಯು ಈಗಾಗಲೇ ಹಲವು ಮಾದರಿಯ ಬಸ್ಗಳನ್ನು ಹೊರತಂದಿದ್ದು, ಇದೀಗ ವಿನೂತನ ರೀತಿಯ ಟಿಪ್ಪರ್ಗಳನ್ನು ಪರಿಚಯಿಸುವ ಮೂಲಕ ಗಣಿ ಪ್ರದೇಶಗಳ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಸುಲಭಗೊಳಿಸಲಿದೆ.