ರಣಜಿ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಾರು ನುಗ್ಗಿಸಿ ಅವಾಂತರ ಸೃಷ್ಠಿಸಿದ ಭೂಪ..!!

ರಣಜಿ ಪಂದ್ಯದ ವೇಳೆ ವ್ಯಕ್ತಿಯೊಬ್ಬ ತನ್ನ ವ್ಯಾಗನ್ ಆರ್ ಕಾರಿನೊಂದಿಗೆ ದಿಢೀರ್ ಎಂಟ್ರಿ ಕೊಟ್ಟಿದ್ದರ ಪರಿಣಾಮ ಕ್ರೀಡಾಂಗಣದಲ್ಲಿ ಕೆಲ ಕಾಲ ಆತಂಕ ಸೃಷ್ಠಿಸಿದ ಘಟನೆ ನಡೆದಿದೆ.

By Praveen

ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ರಣಜಿ ಪಂದ್ಯ ನಡೆಯುವ ವೇಳೆ ಮೈದಾನದಲ್ಲಿ ಕಾರು ಚಾಲನೆ ಮಾಡಿರುವ ಘಟನೆ ದೆಹಲಿಯ ಏರ್ ಫೋರ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದು, ಭದ್ರತಾ ಸಿಬ್ಬಂದಿಯ ಕರ್ತವ್ಯ ಲೋಪವು ಆಕ್ರೋಶಕ್ಕೆ ಕಾರಣವಾಗಿದೆ.

ರಣಜಿ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಾರು ನುಗ್ಗಿಸಿ ಅವಾಂತರ ಸೃಷ್ಠಿಸಿದ ಭೂಪ..!!

ದೆಹಲಿ ಹಾಗೂ ಉತ್ತರ ಪ್ರದೇಶದ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದ ಮೂರನೇ ದಿನದಾಟದ ವೇಳೆ ಘಟನೆ ಸಂಭವಿಸಿದ್ದು, ಸಂಜೆ ಸುಮಾರು 4.40 ಸಮಯದಲ್ಲಿ ವ್ಯಾಗನ್ ಆರ್ ಕಾರು ಇದಕ್ಕಿದ್ದಂತೆ ಮೈದಾನವನ್ನು ಪ್ರವೇಶಿಸಿ ಆಟಗಾರರಲ್ಲಿ ಅತಂಕವನ್ನು ಸೃಷ್ಟಿಸಿತ್ತು.

Recommended Video

[Kannada] 2017 Datsun redi-GO 1.0 Litre Launched In India - DriveSpark
ರಣಜಿ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಾರು ನುಗ್ಗಿಸಿ ಅವಾಂತರ ಸೃಷ್ಠಿಸಿದ ಭೂಪ..!!

ಈ ವೇಳೆ ಟೀಂ ಇಂಡಿಯಾದ ಅಂತರಾಷ್ಟ್ರೀಯ ಆಟಗಾರರಾದ ಗೌತಮ್ ಗಂಭೀರ್, ಇಶಾಂತ್ ಶರ್ಮಾ, ರಿಷಬ್ ಪಂತ್ ಮೈದಾನದಲ್ಲಿದ್ದರು. ಪಂದ್ಯದ ವೇಳೆಯೇ ಕಾರು ಮೈದಾನಕ್ಕೆ ಬರುತ್ತಿರುವುದನ್ನು ಕಂಡು ಕೆಲ ಕಾಲ ಗೊಂದಲಕ್ಕೆ ಸಿಲುಕಿದ್ದರು.

ರಣಜಿ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಾರು ನುಗ್ಗಿಸಿ ಅವಾಂತರ ಸೃಷ್ಠಿಸಿದ ಭೂಪ..!!

ಇನ್ನು ಕುಡಿದು ಮೈದಾನಕ್ಕೆ ಕಾರು ನುಗ್ಗಿಸಿದ ವ್ಯಕ್ತಿ ಗಿರೀಶ್ ಶರ್ಮಾ ಎಂದು ತಿಳಿದು ಬಂದಿದ್ದು, ಸದ್ಯ ಏರ್ ಫೋರ್ಸ್ ಕ್ರೀಡಾಂಗಣದ ಭದ್ರತಾ ಸಿಬ್ಬಂದಿ ಈತನನ್ನು ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ರಣಜಿ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಾರು ನುಗ್ಗಿಸಿ ಅವಾಂತರ ಸೃಷ್ಠಿಸಿದ ಭೂಪ..!!

ಕ್ರೀಡಾಂಗಣದ ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದ್ದು, ಕ್ರೀಡಾಂಗಣಕ್ಕೆ ಕಾರು ಪ್ರವೇಶಿಸಬೇಕಾದರೆ ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಲಾಗುತ್ತದೆ. ಆದ್ರೆ ಕುಡಿದು ಚಾಲನೆ ಮಾಡುತ್ತಿದ್ದ ಗಿರೀಶ್ ಶರ್ಮಾ ಕಾರನ್ನು ಪರಿಶೀಲನೆ ಮಾಡಿಲ್ಲ.

ತಪ್ಪದೇ ಓದಿ-ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

ರಣಜಿ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಾರು ನುಗ್ಗಿಸಿ ಅವಾಂತರ ಸೃಷ್ಠಿಸಿದ ಭೂಪ..!!

ಇದರಿಂದ ಪಾರ್ಕಿಂಗ್‍ಗೆ ತೆರಳಬೇಕಿದ್ದ ಕಾರು ನೇರವಾಗಿ ಮೈದಾನ ಪ್ರವೇಶಿಸಿದ್ದು, ಇದರಿಂದ ಎಲ್ಲರೂ ಅಘಾತಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆ ನಿಗದಿತ ಪಂದ್ಯವನ್ನು 20 ನಿಮಿಷಕ್ಕೂ ಮುಂಚೆಯೇ ಮೊಟಕಗೊಳಿಸಲಾಗಿದೆ.

ಇನ್ನು ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಸುರೇಶ್ ರೈನಾ, ಕಾರು ನುಗ್ಗಿ ಬಂದ ಸಂದರ್ಭದಲ್ಲಿ ಆಟಗಾರರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾರೆ.

Trending On DriveSpark Kannada:

ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

Most Read Articles

Kannada
Read more on crime ಅಪರಾಧ
English summary
Read in Kannada about Security breach during Delhi-UP Ranji Trophy game at Air Force ground in Palam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X