ಜನಮನ್ನಣೆ ಗಳಿಸಿದ್ದ ಸಫಾರಿ ಡಿಕೋರ್ ಉತ್ಪಾದನೆಯನ್ನು ನಿಲ್ಲಿಸಿದ ಟಾಟಾ..!

Written By:

ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ವಾಹನಗಳನ್ನು ಬಿಡುಗಡೆ ಮಾಡಲು ಮುಂದಾಗಿರುವ ಟಾಟಾ ಸಂಸ್ಥೆಯು ಭಾರೀ ಜನಮನ್ನಣೆ ಗಳಿಸಿದ್ದ ಸಫಾರಿ ಡಿಕೋರ್ ಮಾದರಿ ಉತ್ಪಾದನೆಯನ್ನು ಕೈಬಿಡುವ ಮಹತ್ಪದ ನಿರ್ಧಾರ ಕೈಗೊಂಡಿದೆ.

ಕಳೆದ 2 ದಶಕಗಳ ಕಾಲ ಎಸ್‌ಯುವಿ ಕಾರು ಮಾದರಿಗಳಲ್ಲಿ ತನ್ನದೇ ಜನಪ್ರಿಯತೆಯನ್ನು ಕಾಯ್ದುಕೊಂಡಿದ್ದ ಟಾಟಾ ಸಫಾರಿ ಡಿಕೋರ್ ಮಾದರಿ ಇನ್ಮುಂದೆ ಉತ್ಪಾದನೆ ಮತ್ತು ಮಾರಾಟ ಲಭ್ಯವಿರುವುದಿಲ್ಲ. ಇದಕ್ಕೆ ಕಾರಣ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ಹೊಸ ಹೊಸ ಉತ್ಪನ್ನಗಳ ಅಭಿವೃದ್ಧಿಗೆ ಟಾಟಾ ಮುಂದಾಗಿದ್ದು, ಅಧಿಕೃತ ವೆಬ್‌ಸೈಟ್‌ನಿಂದಲೂ ಸಫಾರಿ ಡಿಕೋರ್ ಸ್ಥಾನ ಕಳೆದುಕೊಂಡಿದೆ.

ಮೊದಲ ಬಾರಿಗೆ 1998ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಟಾಟಾ ಸಫಾರಿ ಡಿಕೋರ್ ಮಾದಿರಯೂ 2.0-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಅತ್ಯುತ್ತಮ ಕಾರ್ಯನಿರ್ವಹಣೆ ಸಾಮರ್ಥ್ಯದೊಂದಿಗೆ ಕೆಲವೇ ದಿನಗಳಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ತದನಂತರ 2003ರಲ್ಲಿ ಪವರ್ ಸ್ಟಿರಿಂಗ್ ಹಾಗೂ ಫ್ಯೂಲ್ ಪಂಪ್ ವಿಭಾಗದಲ್ಲಿ ಉನ್ನತಿಕರಣಗೊಂಡಿದ್ದ ಟಾಟಾ ಸಫಾರಿ ಡಿಕೋರ್, 2005ರಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ 2-ಲೀಟರ್ ಎಂಜಿನ್‌ನಿಂದ 3-ಲೀಟರ್ ಎಂಜಿನ್‌ಗೆ ಉನ್ನತಿಕರಣಗೊಳಿಸಲಾಗಿತ್ತು.

ಇದರ ಜೊತೆಗೆ 2005ರಲ್ಲಿ ಸಫಾರಿ ಡಿಕೋರ್ ಮಾದರಿಗೆ ಹೆಚ್ಚುವರಿಯಾಗಿ ಸಪಿಕ್ಸ್ ಎಂದು ನಾಮಕರಣ ಮಾಡಿದ್ದ ಟಾಟಾ, ಸಫಾರಿ ಆವೃತ್ತಿಯಲ್ಲಿಯೇ ಹೊಸದಾಗಿ ಬಿಡುಗಡೆಯಾಗಿರುವ ಎಲ್‌ಎಕ್ಸ್ 4x2, ಇಎಕ್ಸ್ 4x2 ಎಸ್‌ಯುವಿ ಮಾದರಿಗಳ ಮಾರಾಟವನ್ನು ಮುಂದುವರಿಸಲಿದೆ.

ಇದೇ ಕಾರಣಕ್ಕಾಗಿಯೇ ಟಾಟಾ ಸಂಸ್ಥೆಯು ಬೃಹತ್ ಯೋಜನೆಯೊಂದನ್ನು ರೂಪಿಸಿದ್ದು, ಸಫಾರಿ ಡಿಕೋರ್ ಮಾದರಿಗಿಂತ ಉತ್ತಮ ಮಾದರಿಯೊಂದನ್ನು ಸದ್ಯದಲ್ಲೇ ಪರಿಚಯಿಸಲಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಕಳೆದ 2 ದಶಕಗಳಿಂದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಸಫಾರಿ ಡಿಕೋರ್ ಮಾದರಿಯ ಉತ್ಪಾದನೆಯನ್ನು ಕೈಬಿಟ್ಟಿರುವುದು ಟಾಟಾ ಪ್ರಿಯರಿಗೆ ಬೇಸರ ಸಂಗತಿಯಾದರೂ, ಮುಂಬರುವ ದಿನಗಳಲ್ಲಿ ಮತ್ತಷ್ಟು ಉತ್ತಮ ಕಾರು ಮಾದರಿಗಳು ಬಿಡುಗಡೆಯಾಗುವುದಲ್ಲಿ ಯಾವುದೇ ಸಂದೇಹವಿಲ್ಲ.

Read more on ಟಾಟಾ tata
English summary
Read in Kannada about Tata Motors has been discontinued from the carmaker's product line-up.
Story first published: Wednesday, July 12, 2017, 11:46 [IST]
Please Wait while comments are loading...

Latest Photos