2018ರ ದೆಹಲಿ ಆಟೋ ಮೇಳಕ್ಕೆ ದಿನಗಣನೆ- ಪ್ರವೇಶಕ್ಕಾಗಿ ಆನ್‌ಲೈನ್‌ ಬುಕ್ಕಿಂಗ್ ಶುರು

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ದೆಹಲಿ ಆಟೋ ಮೇಳವು 2018ರ ಫೆಬ್ರುವರಿ 9 ರಿಂದ 14ರ ತನಕ ನಡೆಯಲಿದ್ದು, ಈ ಹಿನ್ನೆಲೆ ಬಹುನೀರಿಕ್ಷಿತ ಆಟೋ ಪ್ರದರ್ಶನ ವೀಕ್ಷಣೆಗಾಗಿ ಆನ್ಲೈನ್ ಟಿಕೇಟ್ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

By Praveen

ವಿಶ್ವದ ಪ್ರತಿಷ್ಠಿತ ಆಟೋ ಬ್ರ್ಯಾಂಡ್ ಗಳ ಅತ್ಯಾಕರ್ಷಕ ನೂತನ ಕಾರುಗಳು ಹಾಗೂ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗುವ ವಾಹನಗಳ ಪ್ರದರ್ಶನಕ್ಕೆ ಸಾಕ್ಷಿಯಾಗುವ ದೆಹಲಿ ಆಟೋ ಮೇಳವು ಈ ಬಾರಿ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಫೆಬ್ರುವರಿ 9 ರಿಂದ 14ರ ತನಕ ಆಟೋ ಜಗತ್ತಿನ ಹಲವು ಹೊಸ ಹೊಸ ಆವಿಷ್ಕಾರ ಅನಾವರಣಗೊಳ್ಳಲಿವೆ.

2018ರ ದೆಹಲಿ ಆಟೋ ಮೇಳಕ್ಕೆ ದಿನಗಣನೆ- ಪ್ರವೇಶಕ್ಕಾಗಿ ಆನ್‌ಲೈನ್‌ ಬುಕ್ಕಿಂಗ್ ಶುರು

ಇದಕ್ಕಾಗಿಯೇ ಆಟೋ ಮೇಳವನ್ನು ಅದ್ದೂರಿಯಾಗಿ ಕೈಗೊಳ್ಳ ಉದ್ದೇಶದಿಂದ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಚ್ಚರ್(ಎಸ್ಐಎಎಂ), ಎಸಿಎಂಎ ಮತ್ತು ಸಿಐಐ ಸಂಸ್ಥೆಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಆಸಕ್ತರಿಗಾಗಿ ಬುಕ್ ಮೈ ಶೋ ನಲ್ಲಿ ಆನ್‌ಲೈನ್ ಟೀಕೆಟ್ ಲಭ್ಯವಿರಲಿವೆ.

Recommended Video

Driverless Auto Rickshaw On Indian Highway
2018ರ ದೆಹಲಿ ಆಟೋ ಮೇಳಕ್ಕೆ ದಿನಗಣನೆ- ಪ್ರವೇಶಕ್ಕಾಗಿ ಆನ್‌ಲೈನ್‌ ಬುಕ್ಕಿಂಗ್ ಶುರು

ಆಟೋ ಪ್ರದರ್ಶನಕ್ಕೆ ಬರುವ ಆಸಕ್ತರಿಗೆ ರೂ. 350 ನಿಗದಿ ಮಾಡಲಾಗಿದ್ದು, ಬಿಜಿನೆಸ್ ಕ್ಲಾಸ್ ಟೀಕೆಟ್ ಪಡೆಯಲು ರೂ.750 ನಿಗದಿ ಮಾಡಲಾಗಿದೆ.

2018ರ ದೆಹಲಿ ಆಟೋ ಮೇಳಕ್ಕೆ ದಿನಗಣನೆ- ಪ್ರವೇಶಕ್ಕಾಗಿ ಆನ್‌ಲೈನ್‌ ಬುಕ್ಕಿಂಗ್ ಶುರು

ಹೀಗಾಗಿ ಬಿಜಿನೆಸ್ ಟೀಕೆಟ್ ಹೊಂದಿದವರಿಗೆ ಮುಂಜಾನೆ 10 ರಿಂದ ಮಧ್ಯಾಹ್ನ 1 ಗಂಟೆಯ ತನಕ ಸಮಯ ನಿಗದಿ ಮಾಡಿದ್ದು, ಸಾಮಾನ್ಯ ಟೀಕೆಟ್ ಹೊಂದಿದವರಿಗೆ ಮಧ್ಯಾಹ್ನ 1ರಿಂದ ಸಂಜೆ 7 ಗಂಟೆಯ ತನಕ ಆಟೋ ಪ್ರದರ್ಶನ ನೋಡಬಹುದಾಗಿದೆ.

2018ರ ದೆಹಲಿ ಆಟೋ ಮೇಳಕ್ಕೆ ದಿನಗಣನೆ- ಪ್ರವೇಶಕ್ಕಾಗಿ ಆನ್‌ಲೈನ್‌ ಬುಕ್ಕಿಂಗ್ ಶುರು

ಇನ್ನೊಂದು ಪ್ರಮುಖ ವಿಚಾರವೆಂದರೇ ವಾರಾಂತ್ಯದಲ್ಲಿ ಬಿಜಿನೆಸ್ ಟೀಕೆಟ್ ಹೊಂದಿದವರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಒಂದು ವೇಳೆ ಸಾಮಾನ್ಯ ದರದಲ್ಲೇ ವೀಕ್ಷಣೆ ಮಾಡಬಯಸಿದ್ದಲ್ಲಿ ರೂ. 450 ಪಾವತಿ ಆಟೋ ಪ್ರದರ್ಶನಕ್ಕೆ ಪ್ರವೇಶ ಪಡೆಯಬಹುದು.

2018ರ ದೆಹಲಿ ಆಟೋ ಮೇಳಕ್ಕೆ ದಿನಗಣನೆ- ಪ್ರವೇಶಕ್ಕಾಗಿ ಆನ್‌ಲೈನ್‌ ಬುಕ್ಕಿಂಗ್ ಶುರು

ಒಟ್ಟಿನಲ್ಲಿ ಈ ಬಾರಿಯ ದೆಹಲಿ ಆಟೋ ಮೇಳವು ಭಾರೀ ಕುತೂಹಲಕ್ಕೆ ಕಾರಣವಾಗಿದ್ದು, ಮಾರುತಿ ಸುಜುಕಿ, ಟಾಟಾ, ಹೋಂಡಾ, ಮಹೀಂದ್ರಾ, ಹ್ಯುಂಡೈ, ಫೋಕ್ಸ್‌ವ್ಯಾಗನ್, ಬಜಾಜ್, ಟಿವಿಎಸ್, ರಾಯಲ್ ಎನ್‌ಫೀಲ್ಡ್, ಟೊಯೊಟಾ, ಫೋರ್ಡ್, ಯಮಹಾ, ಹಾರ್ಲೇ ಡೇವಿಡ್‌ಸನ್, ಕವಾಸಕಿ, ಕೆಟಿಎಂ, ಹಿರೋ, ರೆನಾಲ್ಟ್, ಆಡಿ, ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು, ಸ್ಕೋಡಾ, ರೋಲ್ಸ್ ರಾಯ್ಸ್ ನಿರ್ಮಾಣದ ಹಲವು ಹೊಸ ಹೊಸ ಕಾರುಗಳು ಮತ್ತು ಬೈಕ್ ಮಾದರಿಗಳು ಪ್ರದರ್ಶನಗೊಳ್ಳಲಿವೆ.

2018ರ ದೆಹಲಿ ಆಟೋ ಮೇಳಕ್ಕೆ ದಿನಗಣನೆ- ಪ್ರವೇಶಕ್ಕಾಗಿ ಆನ್‌ಲೈನ್‌ ಬುಕ್ಕಿಂಗ್ ಶುರು

ಇದರಿಂದಾಗಿ ಓದುಗರ ಮಾಹಿತಿಗಾಗಿ ನಿಮ್ಮ ಡ್ರೈವ್ ಸ್ಪಾಕ್ ಕೂಡಾ ದೆಹಲಿ ಆಟೋ ಮೇಳ ಭಾಗಿಯಾಗುತ್ತಿದ್ದು, ವಿನೂತನ ಬೈಕ್, ಕಾರುಗಳು ಮತ್ತು ಮುಂಬರುವ ವಾಹನಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ.

Most Read Articles

Kannada
English summary
The Motor Show 2018 – Online Ticket Booking Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X