ರೂ. 10 ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಹ್ಯಾಚ್‌ಬ್ಯಾಕ್ ಕಾರುಗಳು ಯಾವವು?

ಸೂಕ್ತ ಸಮಯಕ್ಕೆ ಬಜೆಟ್ ಹೊಂದಾಣಿಕೆ ಆಗದಿದ್ದರೆ ಕಾರು ಖರೀದಿ ಕಷ್ಟ ಸಾಧ್ಯವಾಗಬಹುದು. ಹೀಗಿರುವಾಗ ಸೂಕ್ತ ಹಣಕಾಸು ಹೊಂದಾಣಿಕೆ ಮಾಡಿಕೊಂಡಲ್ಲಿ ನಿಮ್ಮ ಯೋಜನೆಗಳು ಸಹಕಾರಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

By Praveen

ಪ್ರತಿಯೊಬ್ಬರಿಗೂ ಕಾರು ಖರೀದಿಸುವ ಯೋಜನೆ ಇದ್ದೆ ಇರುತ್ತೆ. ಆದ್ರೆ ಸೂಕ್ತ ಸಮಯಕ್ಕೆ ಬಜೆಟ್ ಹೊಂದಾಣಿಕೆ ಆಗದಿದ್ದರೆ ಅದು ಕಷ್ಟ ಸಾಧ್ಯವಾಗಬಹುದು. ಹೀಗಿರುವಾಗ ಸೂಕ್ತ ಹಣಕಾಸು ಹೊಂದಾಣಿಕೆ ಮಾಡಿಕೊಂಡಲ್ಲಿ ನಿಮ್ಮ ಯೋಜನೆಗಳು ಸಹಕಾರಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ರೂ.10 ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಹ್ಯಾಚ್‌ಬ್ಯಾಕ್ ಕಾರುಗಳು.!

ಹೀಗಾಗಿ ಡ್ರೈವ್ ಸ್ಪಾರ್ಕ್ ಓದುಗರಿಗಾಗಿ ರೂ.10 ಲಕ್ಷ ಒಳಗೆ ಖರೀದಿಸಬಹುದಾದ ಅತ್ಯತ್ತಮ ಕಾರುಗಳನ್ನು ಖರೀದಿಸಲು ಸಹಾಯಕವಾಗುವಂತ ಪ್ರಮುಖ 5 ಹ್ಯಾಚ್‌ಬ್ಯಾಕ್ ಕಾರು ಮಾದರಿಗಳನ್ನು ಇಲ್ಲಿ ನೀಡಲಾಗಿದ್ದು, ಇದು ನಿಮ್ಮ ಕಾರು ಖರೀದಿ ಯೋಜನೆಗೆ ಸಹಕಾರಿಯಾಗಬಹುದು ಎಂದುಕೊಂಡಿದ್ದೆವೆ.

ಕಾರು ಮಾಹಿತಿ ಮತ್ತು ಬೆಲೆ, ವೈಶಿಷ್ಟ್ಯತೆಗಳು, ಎಂಜಿನ್ ಸಾಮರ್ಥ್ಯದ ಮಾಹಿತಿಗಳು ಇಲ್ಲಿದೆ ಓದಿ.

ರೂ.10 ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಹ್ಯಾಚ್‌ಬ್ಯಾಕ್ ಕಾರುಗಳು.!

ಟಾಟಾ ಟಿಯಾಗೋ

ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಟಾಟಾ ಮೋಟಾರ್ಸ್ ಸಂಸ್ಥೆಯ ಟಿಯಾಗೋ ಆವೃತ್ತಿಯು ಈಗಾಗಲೇ ಭಾರೀ ಬೇಡಿಕೆ ಪಡೆದಿರುವ ಕಾರು ಮಾದರಿಯಾಗಿದ್ದು, ದೆಹಲಿ ಎಕ್ಸ್‌ಶೋರಂ ಬೆಲೆಗಳ ಪ್ರಕಾರ ರೂ. 3.21 ಲಕ್ಷದಿಂದ ರೂ. 5.64 ಲಕ್ಷಕ್ಕೆ ಖರೀದಿಸಬಹುದಾಗಿದೆ.

Recommended Video

[Kannada] Mahindra KUV 100 NXT Launched In India - DriveSpark
ರೂ.10 ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಹ್ಯಾಚ್‌ಬ್ಯಾಕ್ ಕಾರುಗಳು.!

ಎಂಜಿನ್ ಸಾಮರ್ಥ್ಯ

ಇದು 1.2-ಲೀಟರ್ ರಿವೊಟ್ರೋನ್ ಪೆಟ್ರೋಲ್ ಹಾಗೂ 1.5-ಲೀಟರ್ ರಿವೊಟ್ರೋನ್ ಡೀಸೆಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಆಯ್ಕೆ ಮಾಡಬಹುದಾಗಿದೆ.

ರೂ.10 ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಹ್ಯಾಚ್‌ಬ್ಯಾಕ್ ಕಾರುಗಳು.!

ಹ್ಯುಂಡೈ ಗ್ರ್ಯಾಂಡ್ ಐ10

ದೇಶದ 2ನೇ ಅತಿದೊಡ್ಡ ಕಾರು ಉತ್ಪಾದನೆ ಸಂಸ್ಥೆಯಾಗಿರುವ ಹ್ಯುಂಡೈ ಸಂಸ್ಥೆಯು ಗ್ರ್ಯಾಂಡ್ ಐ10 ಮೂಲಕ ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲಿ ಹೊಸ ಅಲೆ ಸೃಷ್ಟಿಸಿದ್ದು, ದೆಹಲಿ ಎಕ್ಸ್‌ಶೋರಂ ಬೆಲೆಗಳ ಪ್ರಕಾರ ರೂ.4.59 ಲಕ್ಷದಿಂದ ರೂ. 7.30 ಲಕ್ಷದವರೆ ಖರೀದಿ ಮಾಡಬಹುದಾಗಿದೆ.

ರೂ.10 ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಹ್ಯಾಚ್‌ಬ್ಯಾಕ್ ಕಾರುಗಳು.!

ಎಂಜಿನ್ ಸಾಮರ್ಥ್ಯ

ಹ್ಯುಂಡೈ ಗ್ರ್ಯಾಂಡ್ ಐ10 ಆವೃತ್ತಿಯು 1.2-ಲೀಟರ್ ಡೀಸೆಲ್ ಎಂಜಿನ್ ಹಾಗೂ 1.1-ಲೀಟರ್ ಸಿಆರ್‌ಡಿಐ ಎಂಜಿನ್ ಹೊಂದಿದ್ದು, ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಹಾಗೂ ಪವರ್ ಫುಲ್ ಎಂಜಿನ್ ಬಳಕೆಗಾಗಿ ಪ್ರತಿಷ್ಠಿತ ಐಸಿಒಟಿವೈ ಪ್ರಶಸ್ತಿ ಗಿಟ್ಟಿಸಿಕೊಂಡಿದೆ.

ರೂ.10 ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಹ್ಯಾಚ್‌ಬ್ಯಾಕ್ ಕಾರುಗಳು.!

ಮಾರುತಿ ಸುಜುಕಿ ಬಲೆನೊ

ದೇಶದ ನಂ.1 ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿ ಪ್ರಯಾಣಿಕ ಕಾರುಗಳ ಉತ್ಪಾದನೆ ಹೊಸ ಮೈಲಿಗಲ್ಲು ಸಾಧಿಸಿದ್ದು, ಬಲೆನೊ ಆವೃತ್ತಿಗೆ ಭಾರೀ ಬೇಡಿಕೆಯಿದೆ. ಇದಕ್ಕೆ ಕಾರಣ ಅತ್ಯುತ್ತಮ ಬೆಲೆಗಳು ಎಂದ್ರೆ ತಪ್ಪಾಗಲಾರದು. ಬಲೆನೊ ಬೆಲೆಯು ಸದ್ಯ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 5.26 ಲಕ್ಷದಿಂದ ರೂ.8.42 ಲಕ್ಷದವರೆಗೆ ಖರೀದಿಸಬಹದು.

ಓದಿರಿ-

ರೂ.10 ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಹ್ಯಾಚ್‌ಬ್ಯಾಕ್ ಕಾರುಗಳು.!

ಎಂಜಿನ್ ಸಾಮರ್ಥ್ಯ

1.2-ಲೀಟರ್ ಕೆ ಸಿರಿಸ್ ಪೆಟ್ರೋಲ್ ಎಂಜಿನ್ ಹಾಗೂ 1.3-ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ಹೊಂದಿರುವ ಬಲೆನೊ ಆವೃತ್ತಿಯು ಹಲವು ಸುಧಾರಿತ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, 101-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು.

ರೂ.10 ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಹ್ಯಾಚ್‌ಬ್ಯಾಕ್ ಕಾರುಗಳು.!

ಫೋಕ್ಸ್‌ವ್ಯಾಗನ್ ಪೊಲೊ

ಸುರಕ್ಷಾ ವೈಶಿಷ್ಟ್ಯತೆಗಳಲ್ಲಿ ಅತಿಹೆಚ್ಚು ಅಂಕ ಗಳಿಸಿರುವ ಫೋಕ್ಸ್‌ವ್ಯಾಗನ್ ಪೊಲೊ ಆವೃತ್ತಿಯು ಸ್ಪೋರ್ಟಿ ಲುಕ್ ಹೊಂದಿದ್ದು, ದೆಹಲಿ ಎಕ್ಸ್‌‌ಶೋರಂ ಬೆಲೆಗಳ ಪ್ರಕಾರ ರೂ. 5.51 ಲಕ್ಷದಿಂದ ರೂ. 8.85 ಲಕ್ಷಕ್ಕೆ ಲಭ್ಯವಿದೆ.

ರೂ.10 ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಹ್ಯಾಚ್‌ಬ್ಯಾಕ್ ಕಾರುಗಳು.!

ಎಂಜಿನ್ ಸಾಮರ್ಥ್ಯ

1.2-ಲೀಟರ್ ಎಂಪಿಐ ತ್ರಿ ಸಿಲಿಂಡರ್ ಎಂಜಿನ್ ಹಾಗೂ 1.5-ಲೀಟರ್ ಟಿಡಿಐ ನಾಲ್ಕು ಸಿಲಿಂಡರ್‌ನ ಇನ್ ಲೈನ್ ಎಂಜಿನ್ ಹೊಂದಿರುವ ಫೋಕ್ಸ್‌ವ್ಯಾಗನ್ ಪೊಲೊ ಮಾದರಿಯು ಬಲಿಷ್ಠ ಕಾರು ಮಾದರಿಯಾಗಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 88-ಬಿಎಚ್‌ಪಿ ಉತ್ಪಾದಿಸುತ್ತದೆ.

ರೂ.10 ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಹ್ಯಾಚ್‌ಬ್ಯಾಕ್ ಕಾರುಗಳು.!

ಹೋಂಡಾ ಝಾ

ಹೊಸ ಬದಲಾವಣೆಗಳ ಮೂಲಕ ಮಾರುಕಟ್ಟೆ ಪ್ರವೇಶ ಮಾಡಿರುವ ಹೋಂಡಾ ಝಾ ಆವೃತ್ತಿಯು ಖರೀದಿಗೆ ಅತ್ಯುತ್ತಮ ಮಾದರಿಯಾಗಿದ್ದು, ದೆಹಲಿ ಎಕ್ಸ್‌ಶೋರಂ ಬೆಲೆಗಳ ಪ್ರಕಾರ ರೂ. 5.89 ಲಕ್ಷದಿಂದ ರೂ. 9.19 ಲಕ್ಷದವರೆಗೆ ವಿವಿಧ ಶ್ರೇಣಿಗಳನ್ನು ಆಯ್ಕೆ ಮಾಡಬಹುದಾಗಿದೆ.

ರೂ.10 ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಹ್ಯಾಚ್‌ಬ್ಯಾಕ್ ಕಾರುಗಳು.!

ಎಂಜಿನ್ ಸಾಮರ್ಥ್ಯ

1.5-ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ ಹಾಗೂ 1.2-ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ ಹೊಂದಿರುವ ಹೋಂಡಾ ಝಾ ಆವೃತ್ತಿಯು, ಪ್ರತಿ ಲೀಟರ್ ಡಿಸೇಲ್‌ಗೆ 27.3 ಕಿಮಿ ಮೈಲೇಜ್ ನೀಡಬಲ್ಲ ಆವೃತ್ತಿಯಾಗಿದೆ.

Trending on DriveSpark Kannada

Most Read Articles

Kannada
English summary
Read in Kannada about Top 5 Hatchbacks Under ₹ 10 Lakh You Can Buy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X