ಮೊಟ್ಟ ಮೊದಲ 'ಉಬರ್ ಸೆಂಟ್ರಲ್' ಸೇವೆ ಆರಂಭಿಸಿದ ಉಬರ್ ಸಂಸ್ಥೆ

ಉಬರ್ ಕಂಪನಿ ತನ್ನ 'ಉಬರ್ ಫಾರ್ ಬಿಸಿನೆಸ್' ವೇದಿಕೆಯಡಿಯಲ್ಲಿ ಹೊಸ ಸೇವೆಯೊಂದನ್ನು ಬಿಡುಗಡೆಗೊಳಿಸಿದೆ.

By Girish

'ಉಬರ್ ಫಾರ್ ಬಿಸಿನೆಸ್' ವೇದಿಕೆಯ ಭಾಗವಾಗಿ ಹೊಚ್ಚ ಹೊಸ ಸೇವೆಯನ್ನು ಪ್ರಪಂಚದ ಕ್ಯಾಬ್ ಸೇವೆ ದೈತ್ಯ ಉಬರ್ ಕಂಪನಿ ಬಿಡುಗಡೆಗೊಳಿಸಿದ್ದು, ಇದರಿಂದಾಗಿ ಕಂಪನಿಗಳಿಗೆ ಕ್ಯಾಬ್‌ಗಳನ್ನು ತನ್ನ ಗ್ರಾಹಕರಿಗೆ, ಅತಿಥಿಗಳಿಗೆ ಮತ್ತು ಬಾಡಿಗೆಗೆ ನೀಡಬಹುದಾಗಿದೆ.

ಮೊಟ್ಟ ಮೊದಲ 'ಉಬೆರ್ ಸೆಂಟ್ರಲ್' ಸೇವೆ ಆರಂಭಿಸಿದ ಉಬೆರ್ ಸಂಸ್ಥೆ

ಉಬರ್ ತನ್ನ ಉಬರ್ ಫಾರ್ ಬಿಸಿನೆಸ್ (U4B) ಪ್ಲ್ಯಾಟ್‌ಫಾರಂ ಅಡಿಯಲ್ಲಿ 'ಉಬರ್ ಸೆಂಟ್ರಲ್' ಎಂಬ ಹೊಸ ಸೇವೆಯನ್ನು ಭಾರತದಲ್ಲಿ ಆರಂಭಿಸಿದ್ದು, ಇದರಿಂದಾಗಿ ಪಟ್ಟಿ ಮಾಡಲಾದ ಸೇವೆಗಳನ್ನು ತಮ್ಮ ಗ್ರಾಹಕರಿಗೆ ಮತ್ತು ಅತಿಥಿಗಳಿಗೆ ನೀಡಲಿದೆ.

ಮೊಟ್ಟ ಮೊದಲ 'ಉಬೆರ್ ಸೆಂಟ್ರಲ್' ಸೇವೆ ಆರಂಭಿಸಿದ ಉಬೆರ್ ಸಂಸ್ಥೆ

ಉದಾಹರಣೆಗೆ, ಸಾಮಾನ್ಯವಾಗಿ ಐಷಾರಾಮಿ ಹೋಟೆಲ್‌ಗಳು ಹತ್ತಿರದ ವಿಮಾನ ನಿಲ್ದಾಣಕ್ಕೆ ತಮ್ಮ ಗ್ರಾಹಕರಿಗೆ ಉಚಿತ ಡ್ರಾಪ್ ಅಥವಾ ಪಿಕ್ಅಪ್ ಮಾಡುತ್ತವೆ.

ಮೊಟ್ಟ ಮೊದಲ 'ಉಬೆರ್ ಸೆಂಟ್ರಲ್' ಸೇವೆ ಆರಂಭಿಸಿದ ಉಬೆರ್ ಸಂಸ್ಥೆ

ಈ ಡ್ರಾಪ್ ಅಥವಾ ಪಿಕ್ಅಪ್ ಸೇವೆಗೆ ಸಂಬಂಧಿಸಿದಂತೆ, ಹೋಟೆಲ್ ತನ್ನದೇ ತಂಡ ಒಂದನ್ನು ನೇಮಿಸಬೇಕಾದ ಅವಶ್ಯಕತೆ ಇರುತ್ತದೆ.

ಮೊಟ್ಟ ಮೊದಲ 'ಉಬೆರ್ ಸೆಂಟ್ರಲ್' ಸೇವೆ ಆರಂಭಿಸಿದ ಉಬೆರ್ ಸಂಸ್ಥೆ

ಆದರೆ ಈ ಕಾರ್ಯನ್ನು ಹೋಟೆಲ್‌ಗಳು ಇನ್ನು ಮುಂದೆ ಮಾಡಬೇಕಾದ ಅನಿವಾರ್ಯತೆ ಇರುವುದಿಲ್ಲ, ಏಕೆ ಗೊತ್ತೇ ? ಉಬೆರ್ ಇಂತಹ ಸೇವೆ ಒದಗಿಸಲು ವಿಶೇಷ 'ಉಬರ್ ಸೆಂಟ್ರಲ್' ಸೇವೆಯನ್ನು ಬಿಡುಗಡಗೊಳಿಸಿದ್ದು, ಉಬರ್ ಸಂಸ್ಥೆ ಹೋಟೆಲ್ ಮತ್ತಿತರ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ.

ಮೊಟ್ಟ ಮೊದಲ 'ಉಬೆರ್ ಸೆಂಟ್ರಲ್' ಸೇವೆ ಆರಂಭಿಸಿದ ಉಬೆರ್ ಸಂಸ್ಥೆ

ಈ ಸೇವೆಯಿಂದಾಗಿ ಹೋಟೆಲ್ ಉದ್ದಿಮೆಗೆ, ದೊಡ್ಡ ಸಂಘ ಸಂಸ್ಥೆಗಳಿಗೆ ಮತ್ತಿತರ ಕಂಪನಿಗಳಿಗೆ ಹೆಚ್ಚಿನ ಮಟ್ಟದ ಸಹಾಯವಾಗಲಿದ್ದು, ಇದರಿಂದಾಗಿ ಬಹಳಷ್ಟು ಹಣ ಉಳಿತಾಯವಾಗಲಿದೆ.

ಮೊಟ್ಟ ಮೊದಲ 'ಉಬೆರ್ ಸೆಂಟ್ರಲ್' ಸೇವೆ ಆರಂಭಿಸಿದ ಉಬೆರ್ ಸಂಸ್ಥೆ

ಒಂದೇ ಬಾರಿಗೆ ಹಲವು ಪ್ರಯಾಣಗಳನ್ನು ಬುಕ್ಕಿಂಗ್ ಮಾಡಬಹುದಾಗಿದ್ದು, ಈ ರೀತಿಯ ಸೇವೆ ಕ್ಯಾಬ್ ಉದ್ದಿಮೆಯಲ್ಲಿಯೇ ಮೊದಲ ಬಾರಿಗೆ ಎನ್ನಲಾಗಿದೆ.

ಮೊಟ್ಟ ಮೊದಲ 'ಉಬೆರ್ ಸೆಂಟ್ರಲ್' ಸೇವೆ ಆರಂಭಿಸಿದ ಉಬೆರ್ ಸಂಸ್ಥೆ

ಈ ಸೇವೆ, ಒಂದೇ ಸಮಯದಲ್ಲಿ ಹಲವಾರು ಪ್ರವಾಸಗಳನ್ನು ನಿರ್ವಹಿಸಲು ಅನುಮತಿಸುತ್ತಿದ್ದು, ಈ ಎಲ್ಲಾ ಅನುಮತಿಗಳನ್ನೂ ಒಂದೇ ಡ್ಯಾಶ್‍‌ಬೋರ್ಡ್ ಮೂಲಕ ಕಾರ್ಯಗತಗೊಳಿಸಲಾಗುವುದು.

ಮೊಟ್ಟ ಮೊದಲ 'ಉಬೆರ್ ಸೆಂಟ್ರಲ್' ಸೇವೆ ಆರಂಭಿಸಿದ ಉಬೆರ್ ಸಂಸ್ಥೆ

ಒಬ್ಬ ನಿಯಂತ್ರಕ ತನ್ನ ಎಲ್ಲಾ ಗ್ರಾಹಕರು ಅಥವಾ ಅತಿಥಿಗಳ ಸಂಪೂರ್ಣ ವಿವರಗಳನ್ನು ಒಂದೇ ಬಾರಿ ನಮೂದಿಸಿ, ಪಿಕ್ಅಪ್ ಮತ್ತು ಡ್ರಾಪ್ ತಿಳಿಸಿದರೆ ಕೆಲಸ ಮುಗಿದಂತೆ. ಉಬೆರ್ ಸೆಂಟ್ರಲ್ ಡ್ಯಾಶ್‌ಬೋರ್ಡ್ ಪ್ರತಿಯೊಂದನ್ನೂ ಕೂಲಂಕುಷವಾಗಿ ಗಮನಿಸಿ ಪ್ರಯಾಣ ನಿಗದಿಪಡಿಸಿದೆ.

ಮೊಟ್ಟ ಮೊದಲ 'ಉಬೆರ್ ಸೆಂಟ್ರಲ್' ಸೇವೆ ಆರಂಭಿಸಿದ ಉಬೆರ್ ಸಂಸ್ಥೆ

ಒಮ್ಮೆ ಕ್ಯಾಬ್ ಬುಕ್ ಆದ ನಂತರ ಆಪರೇಟರ್ ಕೂಡ ವಾಹನವನ್ನು ಟ್ರ್ಯಾಕ್ ಮಾಡಬಹುದಾಗಿದ್ದು, ಇದರಿಂದಾಗಿ ಕ್ಯಾಬ್ ಎಷ್ಟು ಗಂಟೆಗೆ ಬಂದು ತಲುಪಲಿದೆ ಎಂಬ ನಿಖರ ಮಾಹಿತಿ ತಿಳಿಯಲಿದೆ.

Most Read Articles

Kannada
Read more on ಉಬರ್ uber
English summary
Read in Kannada about Uber has launched the 'Uber Central', a new service in India under its 'Uber for Business' (U4B) platform. Get more details about 'Uber Central', 'Uber for Business' and more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X