ಕ್ಯಾಬ್ ಚಾಲಕರಿಗೆ ಉಚಿತ ಇನ್ಶುರೆನ್ಸ್ ಘೋಷಣೆ ಮಾಡಿದ ಉಬರ್

ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಉಬರ್‌ ಸಂಸ್ಥೆಯು ಕ್ಯಾಬ್ ಚಾಲಕರಿಗೆ ಹೊಸ ಯೋಜನೆಯೊಂದನ್ನು ಘೋಷಣೆ ಮಾಡಿದ್ದು, ಉಚಿತ ಇನ್ಶುರೆನ್ಸ್ ಮೂಲಕ ಚಾಲಕರನ್ನು ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದೆ.

By Praveen

ಟ್ಯಾಕ್ಸಿ ನೀಡುವ ಸಂಸ್ಥೆಗಳ ಮಧ್ಯೆ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚುತ್ತಿದ್ದು, ಚಾಲಕರ ಪರ ಯೋಜನೆಗಳನ್ನು ನೀಡಲು ವಿವಿಧ ಸಂಸ್ಥೆಗಳ ನಡುವೆ ಸ್ಪರ್ಧೆ ಹೆಚ್ಚುತ್ತಿದೆ. ಈ ನಡುವೆ ಉಬರ್ ಸಂಸ್ಥೆ ಕೂಡಾ 4 ಲಕ್ಷ 50 ಸಾವಿರ ಕ್ಯಾಬ್ ಚಾಲಕರಿಗೆ ಭರ್ಜರಿ ಆಫರ್ ಘೋಷಣೆ ಮಾಡಿದೆ.

ಕ್ಯಾಬ್ ಚಾಲಕರಿಗೆ ಉಚಿತ ಇನ್ಶುರೆನ್ಸ್ ಘೋಷಣೆ ಮಾಡಿದ ಉಬರ್

ಉಚಿತವಾಗಿ ರೂ.5 ಲಕ್ಷ ಮೌಲ್ಯದ ಆರೋಗ್ಯ ವಿಮೆ ಭರಿಸಲು ಮುಂದಾಗಿರುವ ಉಬರ್, ಕ್ಯಾಬ್ ಸೇವೆಗಳ ಸಂದರ್ಭದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಈಡಾಗಿದ್ದಲ್ಲಿ ರೂ.5 ಲಕ್ಷ ಪರಿಹಾರ ಮತ್ತು ಅಪಘಾತಗಳಲ್ಲಿ ಸಾವನ್ನಪ್ಪಿದರೆ ರೂ.5 ಲಕ್ಷ ಪರಿಹಾರ, ಗಾಯಗೊಂಡರೆ ಆಸ್ಪತ್ರೆಯ ವೆಚ್ಛಕ್ಕಾಗಿ ರೂ.2 ಲಕ್ಷ ಮತ್ತು ಹೊರರೋಗಿ ಚಿಕಿತ್ಸೆಗಾಗಿ ರೂ.50 ಸಾವಿರ ಪರಿಹಾರ ಒದಗಿಸಲಿದೆ.

ಕ್ಯಾಬ್ ಚಾಲಕರಿಗೆ ಉಚಿತ ಇನ್ಶುರೆನ್ಸ್ ಘೋಷಣೆ ಮಾಡಿದ ಉಬರ್

ಈ ಬಗ್ಗೆ ಮಾತನಾಡಿರುವ ಭಾರತೀಯ ಉಬರ್ ಕಾರ್ಯಾಚರಣೆ ಮುಖ್ಯಸ್ಥ ಪ್ರದೀಪ್ ಪರಮೇಶ್ವರನ್, 'ಗ್ರಾಹಕ ಬೇಡಿಕೆಗೆ ಅನುಗುಣವಾಗಿ ಟ್ಯಾಕ್ಸಿ ಸೇವೆಗಳನ್ನು ನೀಡುವಲ್ಲಿ ಉಬರ್ ಹೊಸ ಹೆಜ್ಜೆ ಇಟ್ಟಿದ್ದು, ಇದಕ್ಕೆ ಕಾರಣಿಕರ್ತರಾದ ಕ್ಯಾಬ್ ಚಾಲಕರ ಆರೋಗ್ಯ ಭದ್ರತೆ ದೃಷ್ಠಿಯಿಂದ ಈ ಹೊಸ ಯೋಜನೆಯನ್ನು ಪರಿಚಯಿಸಲಾಗಿದೆ' ಎಂದಿದ್ದಾರೆ.

Recommended Video

2017 Mercedes New GLA India Launch Kannada - DriveSpark ಕನ್ನಡ
ಕ್ಯಾಬ್ ಚಾಲಕರಿಗೆ ಉಚಿತ ಇನ್ಶುರೆನ್ಸ್ ಘೋಷಣೆ ಮಾಡಿದ ಉಬರ್

ಇನ್ನು ಹೊಸ ಯೋಜನೆಯು ಬರಲಿರುವ ಸೆಪ್ಟೆಂಬರ್ 1ರಿಂದಲೇ ಜಾರಿಯಾಗಲಿದ್ದು, ಕ್ಯಾಬ್ ಚಾಲಕರ ಆರೋಗ್ಯಕರ ದುಡಿಮೆಗಾಗಿ ಉಬರ್ ಸಂಸ್ಥೆಯು ಈ ಹೊಸ ಯೋಜನೆಯನ್ನು ಜಾರಿಯಾಗಿದೆ ತಂದಿದೆ.

ಕ್ಯಾಬ್ ಚಾಲಕರಿಗೆ ಉಚಿತ ಇನ್ಶುರೆನ್ಸ್ ಘೋಷಣೆ ಮಾಡಿದ ಉಬರ್

ಇದಲ್ಲದೇ ಇತ್ತೀಚೆಗೆ ಹತ್ತಾರು ಬಗೆಯ ಕ್ಯಾಬ್ ಸೇವಾ ಸಂಸ್ಥೆಗಳು ಆರಂಭಗೊಳ್ಳುತ್ತಿದ್ದು, ಅಗ್ಗದ ದರದಲ್ಲಿ ಪ್ರಯಾಣ ಸೇವೆಗಳು ಮತ್ತು ಕ್ಯಾಬ್ ಚಾಲಕರಿಗೆ ಉತ್ತಮ ಸೌಲಭ್ಯಗಳನ್ನು ನೀಡುವ ಮೂಲಕ ದೊಡ್ಡ ಸಂಸ್ಥೆಗಳಿಗೆ ತೀವ್ರ ಸ್ಪರ್ಧೆ ಒಡ್ಡುತ್ತಿವೆ.

ಕ್ಯಾಬ್ ಚಾಲಕರಿಗೆ ಉಚಿತ ಇನ್ಶುರೆನ್ಸ್ ಘೋಷಣೆ ಮಾಡಿದ ಉಬರ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೊಸ ಹೊಸ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಚಾಲಕರ ಹಿತರಕ್ಷಣೆ ಮುಂದಾಗಿರುವ ಉಬರ್ ಸಂಸ್ಥೆಯು, ಹೆಚ್‌ಡಿಕೆ ಕ್ಯಾಬ್ ಸೇರಿದಂತೆ ಓಲಾ ಚಾಲಕರನ್ನು ತನ್ನತ್ತ ಸೆಳೆಯಲು ತಂತ್ರ ರೂಪಿಸುತ್ತಿದೆ.

Most Read Articles

Kannada
English summary
Read in Kannada about Uber Offers Free Insurance For Its Drivers.
Story first published: Wednesday, August 30, 2017, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X