"ಅಡಿಕೆಗೆ ಹೋದ ಮಾನ..." ಎನ್ನುವಂತಹ ಪರಿಸ್ಥಿತಿ ಉಬರ್ ಕಂಪೆನಿಯದ್ದು !!

ಗೂಗಲ್ ಸಂಸ್ಥೆಯಿಂದ ಕದ್ದ ದತ್ತಾಂಶಗಳನ್ನು ಮತ್ತೆ ಮರಳಿಸುವಂತೆ ಉಬರ್ ಸಂಸ್ಥೆಗೆ ನ್ಯಾಯಾಲಯ ಆದೇಶ ನೀಡಿದೆ.

By Girish

ದೈತ್ಯ ಗೂಗಲ್ ಸಂಸ್ಥೆಯ ಸ್ವಯಂ ಚಾಲನೆಯ ಕಾರು ವಿಭಾಗಕ್ಕೆ ಸೇರಿದ ರಹಸ್ಯ ಧಾಖಲೆಗಳನ್ನು ತಕ್ಷಣವೇ ಹಿಂದಿರುಗಿಸುವಂತೆ ಉಬರ್ ಸಂಸ್ಥೆಗೆ ಅಮೆರಿಕಾದ ಫೆಡರಲ್ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ಈಗಾಗಲೇ ಹಲವಾರು ಸಂಸ್ಥೆಗಳು ಸ್ವಯಂ ಚಾಲಿತ ಕಾರುಗಳ ಬಗ್ಗೆ ಹಲವಾರು ಬಗೆಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದು, ಇತ್ತೀಚೆಗೆ ಈ ವಿಚಾರವಾಗಿ ಉಬರ್ ಮತ್ತು ಗೂಗಲ್ ಸಂಸ್ಥೆಗಳು ದತ್ತಾಂಶದ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಿದ್ದವು.

ಈ ಬಗ್ಗೆ ವಿಲಿಯಂ ಅವರ ನೇತೃತ್ವದಲ್ಲಿ ವಿಚಾರಣೆ ನೆಡೆಸಿದ ನ್ಯಾಯಾಲಯ, ಈ ಬಗ್ಗೆ ತೀರ್ಪನ್ನು ನೀಡಿದ್ದು, ಉಬರ್ ಕಂಪನಿಗೆ ಮುಖಭಂಗವಾಗಿರುವುದಂತೂ ಖಂಡಿತ.

ಸ್ವಯಂ-ಚಾಲಿತ ಕಾರುಗಳ ಬಗ್ಗೆ ಅತ್ಯಂತ ಹೆಚ್ಚು ಒಲವು ತೋರಿರುವ ಕಂಪೆನಿಗಳಲ್ಲಿ ಉಬರ್ ಕೂಡ ಒಂದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಕೂಡ.

ವೆಮೂ ಸ್ವಯಂ-ಚಾಲಿತ ಕಾರು ಸಂಸ್ಥೆಯ ವಿರುದ್ಧ ನೆಡೆದ ನ್ಯಾಯ ಸಮರದಲ್ಲಿ, ಸೋಮವಾರ ಹೊರಬಿದ್ದ ಈ ಆದೇಶದಿಂದಾಗಿ ಉಬರ್ ಸಂಸ್ಥೆಗೆ ಹೆಚ್ಚಿನ ಮಟ್ಟದ ಹಿನ್ನಡೆಯಾಗಿದ್ದು, ಇದರಿಂದಾಗಿ ತನ್ನ ಘನತೆಗೆ ಪೆಟ್ಟು ಮಾಡಿಕೊಂಡಿದೆ.

ಸ್ವಯಂ-ಚಾಲಿತ ಕಾರುಗಳ ಬಗ್ಗೆ ಅತ್ಯಂತ ಹೆಚ್ಚು ಒಲವು ತೋರಿರುವ ಕಂಪೆನಿಗಳಲ್ಲಿ ಉಬರ್ ಕೂಡ ಒಂದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಕೂಡ.

ಉಬರ್ ಸಂಸ್ಥೆಯ ವಿರುದ್ಧ ಆದೇಶ ಹೊರಬಿದ್ದಿದರೂ ಸಹ 'ಸೆಲ್ಫ್ ಡ್ರೈವ್' ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನ್ಯಾಯಾಲಯ ಉಬರ್ ಸಂಸ್ಥೆಗೆ ಮತ್ತೆ ಸ್ವಯಂ ಚಾಲಿತ ಕಾರುಗಳ ಮೇಲೆ ಅಧ್ಯಯನ ನೆಡೆಸಲು ಅನುಮತಿ ನೀಡಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಉಬರ್ ಕಂಪನಿ ಸರಿ ಸುಮಾರು 680 ಮಿಲಿಯನ್ ಡಾಲರ್ (43.538 ಶತಕೋಟಿ ಡಾಲರ್) ಹಣ ನೀಡಿ ಒಟ್ಟೊ ಕಂಪನಿಯನ್ನು ಖರೀದಿಸಿತ್ತು.

ಗೂಗಲ್ ಕಂಪನಿಯ ವೆಮೂ ಸ್ವಯಂ-ಚಾಲಿತ ಕಾರು ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಂಥೋನಿ ಲೆವಾಂಡೋಸ್ಕಿ ಅವರು ಗೂಗಲ್ ತೊರೆದು ಒಟ್ಟೊ ಸ್ವಯಂ ಚಾಲಿತ ಕಾರು ವಿಭಾಗದ ಮುಖ್ಯಸ್ಥರಾಗಿ ಕೆಲಸವನ್ನು ಪ್ರಾರಂಭಿಸಿದ್ದರು.

ಕಂಪನಿ ತೊರೆಯುವ ಮೊದಲು ಅಂಥೋನಿ ಲೆವಾಂಡೋಸ್ಕಿ ಅವರು ಕಂಪನಿಯ ಕೆಲವು ಕೆಲವು ಗೌಪ್ಯ ಧಾಖಲೆಗಳನ್ನು ಕದ್ದಿದ್ದಾರೆ ಎಂದು ಗೂಗಲ್ ಆರೋಪಿಸಿತ್ತು.

ಗೂಗಲ್ ಮನವಿಯನ್ನು ಮಾನ್ಯ ಮಾಡಿದ ನ್ಯಾಯಾಲಯವು ಕದ್ದಿರುವ ಗೌಪ್ಯ ಮಾಹಿತಿಗಳನ್ನು ಈ ಕೂಡಲೇ ಹಿಂತಿರುಗಿಸುವಂತೆ ಆದೇಶ ಮಾಡಿದೆ.

Most Read Articles

Kannada
Read more on ಉಬರ್ uber
English summary
Read in Kannada about US Federal court ordered Uber to return stolen files to Google's Waymo. Know more about court order, this issue and more...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X