ಮಳೆ ನೀರು ಮಿಶ್ರಿತ ಡೀಸೆಲ್ ಬಳಕೆ- ಕೆಟ್ಟು ನಿಂತ 30ಕ್ಕೂ ಹೆಚ್ಚು ಬಿಎಂಟಿಸಿ ವೊಲ್ವೋ ಬಸ್‌ಗಳು

ಮಳೆ ನೀರು ಮಿಶ್ರಿತ ಡೀಸೆಲ್ ಬಳಿಕೆಯಿಂದಾಗಿ 30ಕ್ಕೂ ಹೆಚ್ಚು ಬಿಎಂಟಿಸಿ ವೊಲ್ಪೋ ಬಸ್‌ಗಳು ಕೆಟ್ಟುನಿಂತಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ಎಡೆಬಿಡದೆ ಸುರಿಯುತ್ತಿರುವ ಮಳೆಯೇ ಇಷ್ಟೇಲ್ಲಾ ಅವಾಂತರಕ್ಕೆ ಕಾರಣವಾಗಿದೆ.

By Praveen

ಮಳೆ ನೀರು ಮಿಶ್ರಿತ ಡೀಸೆಲ್ ಬಳಿಕೆಯಿಂದಾಗಿ 30ಕ್ಕೂ ಹೆಚ್ಚು ಬಿಎಂಟಿಸಿ ವೊಲ್ಪೋ ಬಸ್‌ಗಳು ಕೆಟ್ಟುನಿಂತಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ಎಡೆಬಿಡದೆ ಸುರಿಯುತ್ತಿರುವ ಮಳೆಯೇ ಇಷ್ಟೇಲ್ಲಾ ಅವಾಂತರಕ್ಕೆ ಕಾರಣವಾಗಿದೆ.

ಮಳೆ ನೀರು ಮಿಶ್ರಿತ ಡೀಸೆಲ್ ಬಳಕೆ- ಕೆಟ್ಟು ನಿಂತ ವೊಲ್ವೋ ಬಸ್‌ಗಳು

ಕಳೆದ 15 ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿಲ್ಲದೆ ಹತ್ತಾರು ಜನ ಪ್ರಾಣಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಇದೇ ವೆೇಳೆ ಬೃಹತ್ ಬೆಂಗಳೂರು ನಗರ ಸಾರಿಗೆ ಇಲಾಖೆಗೂ ಅಪಾರ ನಷ್ಟ ಉಂಟಾಗಿದ್ದು, 30ಕ್ಕೂ ಹೆಚ್ಚು ವೊಲ್ವೋ ಬಸ್‌ಗಳು ಕೆಟ್ಟು ನಿಂತಿವೆ.

ಮಳೆ ನೀರು ಮಿಶ್ರಿತ ಡೀಸೆಲ್ ಬಳಕೆ- ಕೆಟ್ಟು ನಿಂತ ವೊಲ್ವೋ ಬಸ್‌ಗಳು

ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ನಿನ್ನೆಯಷ್ಟೇ ಈ ಘಟನೆ ನಡೆದಿದ್ದು, ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಂಕ್‌ನಲ್ಲಿರುವ ನೆಲದಡಿ ಪೆಟ್ರೋಲ್ ಮತ್ತು ಡೀಸೆಲ್ ಟ್ಯಾಂಕರ್‌ಗಳಿಗಳಲ್ಲಿ ಕಲುಷಿತ ನೀರು ನುಗ್ಗಿದೆ.

ಮಳೆ ನೀರು ಮಿಶ್ರಿತ ಡೀಸೆಲ್ ಬಳಕೆ- ಕೆಟ್ಟು ನಿಂತ ವೊಲ್ವೋ ಬಸ್‌ಗಳು

ಆದ್ರೆ ಈ ಬಗ್ಗೆ ಪೆಟ್ರೋಲ್ ಬಂಕ್ ಸಿಬ್ಬಂದಿಯೂ ಮುನ್ನೆಚ್ಚೆರಿಕೆ ವಹಿಸದ ಹಿನ್ನೆಲೆ ಬಸ್‌ಗಳು ಕೆಟ್ಟು ನಿಲ್ಲುವಂತಹ ಪರಿಸ್ಥಿತಿ ಬಂದೊಗಿದ್ದು, ಕಲುಷಿತ ಡೀಸೆಲ್ ತುಂಬಿಸಿಕೊಂಡಿದ್ದ 30ಕ್ಕೂ ಹೆಚ್ಚು ವೊಲ್ವೊ ಬಸ್‌ಗಳ ಎಂಜಿನ್‌ಗಳ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ.

ಮಳೆ ನೀರು ಮಿಶ್ರಿತ ಡೀಸೆಲ್ ಬಳಕೆ- ಕೆಟ್ಟು ನಿಂತ ವೊಲ್ವೋ ಬಸ್‌ಗಳು

ಇನ್ನು ಘಟನೆಗೂ ಮುನ್ನ ಎಂದಿನಂತೆ ಕತ್ತಿಗುಪ್ಪೆಯಲ್ಲಿರುವ ಭಾರತ್ ಪೆಟ್ರೋಲಿಯಂನಲ್ಲಿ ವೊಲ್ವೋ ಬಸ್‌ಗಳು ಡೀಸೆಲ್ ಟ್ಯಾಂಕರ್ ಅನ್ನು ಭರ್ತಿ ಮಾಡಿಸಿಕೊಂಡಿವೆ. ಆದ್ರೆ ಡೀಸೆಲ್ ತುಂಬಿಸಿದ ಕೇವಲ 5 ನಿಮಿಷದಲ್ಲಿ ಬಸ್‌ಗಳು ಕೆಟ್ಟು ನಿಂತಿವೆ.

ಮಳೆ ನೀರು ಮಿಶ್ರಿತ ಡೀಸೆಲ್ ಬಳಕೆ- ಕೆಟ್ಟು ನಿಂತ ವೊಲ್ವೋ ಬಸ್‌ಗಳು

ಆದ್ರೆ ಬಸ್‌ಗಳ ಎಂಜಿನ್ ಸ್ಥಗಿತಕ್ಕೆ ಮೂಲ ಕಾರಣ ಏನು ಎನ್ನುವ ಬಗ್ಗೆ ಗೊಂದಲದಲ್ಲಿದ್ದ ಬಸ್ ಚಾಲಕರು ಹಾಗೂ ನಿರ್ವಾಹಕರು ತದನಂತರ ಪೆಟ್ರೋಲ್ ಬಂಕ್ ಸಿಬ್ಬಂದಿ ಜೊತೆ ವಾಗ್ವಾದ ಮಾಡಿದ್ದಾರೆ. ಆಗಲೇ ಡಿಸೇಲ್‌ನಲ್ಲಿ ಮಳೆ ನೀರು ನುಗ್ಗಿರುವ ಅಂಶ ಪತ್ತೆಯಾಗಿದೆ.

ಮಳೆ ನೀರು ಮಿಶ್ರಿತ ಡೀಸೆಲ್ ಬಳಕೆ- ಕೆಟ್ಟು ನಿಂತ ವೊಲ್ವೋ ಬಸ್‌ಗಳು

ಸದ್ಯ ಕೆಟ್ಟು ನಿಂತಿರುವ ವೊಲ್ಪೋ ಬಸ್‌ಗಳ ರಿಪೇರಿ ಕಾರ್ಯ ನಡೆಯುತ್ತಿದ್ದು, ಬಿಎಂಟಿಸಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಹಿತಿಗಳ ಪ್ರಕಾರ ಇನ್ನು ಎರಡು ಮೂರು ದಿನಗಳಲ್ಲಿ ಕೆಟ್ಟ ಬಸ್‌ಗಳ ಎಂಜಿನ್ ಸರಿಪಡಿಸುವಿಕೆ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲೇ ಸೇವೆಗೆ ಲಭ್ಯವಾಗಲಿವೆ.

ಮಳೆ ನೀರು ಮಿಶ್ರಿತ ಡೀಸೆಲ್ ಬಳಕೆ- ಕೆಟ್ಟು ನಿಂತ ವೊಲ್ವೋ ಬಸ್‌ಗಳು

ಇನ್ನು ಕೆಟ್ಟ ಬಸ್ ರಿಪೇರಿ ಕಾರ್ಯಕ್ಕಾಗಿ ಪ್ರತಿ ಬಸ್‌ಗೆ ರೂ. 8 ರಿಂದ 10 ಲಕ್ಷ ಖರ್ಚು ತಗಲುತ್ತದೆ ಎನ್ನಲಾಗಿದ್ದು, ಕುಲುಷಿತ ನೀರು ಹೊಕ್ಕಿರುವ ಎಂಜಿನ್, ಪಿಸ್ಟನ್ ಭಾಗಗಳನ್ನು ಹೊಸದಾಗಿ ಅಳವಡಿಕೆ ಮಾಡಿದಾಗಲೇ ಬಸ್‌ಗಳನ್ನು ಮೂಲ ಸ್ಥಿತಿಗೆ ತರಬಹುದಾಗಿದೆ.

Most Read Articles

Kannada
English summary
Read in Kannada about 30 BMTC Volvo buses filled with diesel mixed with water.
Story first published: Monday, October 16, 2017, 13:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X