ವೊಲ್ವೊ ಎಕ್ಸ್‌ಸಿ 60 ಎಸ್‌ಯುವಿ ಕಾರು ಭಾರತದಲ್ಲಿ ಬಿಡುಗಡೆ; ಬೆಲೆ ರೂ.55.90 ಲಕ್ಷ

By Girish

ವೊಲ್ವೊ ಎಕ್ಸ್‌ಸಿ 60 ಎಸ್‌ಯುವಿ ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ವೊಲ್ವೊ ಎಕ್ಸ್‌ಸಿ 60 ವಾಹನವು ರೂ.55.90 ಲಕ್ಷ ರೂ. ಎಕ್ಸ್ ಶೋರೂಂ (ದೆಹಲಿ) ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ವೊಲ್ವೊ ಎಕ್ಸ್‌ಸಿ 60 ಎಸ್‌ಯುವಿ ಕಾರು ಭಾರತದಲ್ಲಿ ಬಿಡುಗಡೆ; ಬೆಲೆ ರೂ.55.90 ಲಕ್ಷ

ಹೊಸ ಪೀಳಿಗೆಯ ಎಕ್ಸ್‌ಸಿ 60 ಎಸ್‌ಯುವಿ ಕಾರು, ವೊಲ್ವೊ ಕಂಪನಿಯ ನೂತನ ತಂತ್ರಜ್ಞಾನ ಪಡೆದು ಅನಾವರಣಗೊಂಡಿರುವ ಸ್ಕೇಲೆಬಲ್ ಪ್ರೊಡಕ್ಟ್ ಆರ್ಕಿಟೆಕ್ಚರ್(SPA) ಪ್ಲಾಟ್‌ಫಾರಂ ಆಧರಿಸಿ ನಿರ್ಮಿಸಲಾಗಿದ್ದು, ಈ ಹೊಸ ಕಾರು ಇನ್ಸ್‌ಕ್ರಿಪ್ಷನ್ ಎಂಬ ಹೆಸರಿನ ರೂಪಾಂತರವನ್ನು ಮಾತ್ರ ಪಡೆದುಕೊಂಡಿದೆ.

ವೊಲ್ವೊ ಎಕ್ಸ್‌ಸಿ 60 ಎಸ್‌ಯುವಿ ಕಾರು ಭಾರತದಲ್ಲಿ ಬಿಡುಗಡೆ; ಬೆಲೆ ರೂ.55.90 ಲಕ್ಷ

ಹೊಸದಾಗಿ ಬಿಡುಗಡೆಯಾದ ವೊಲ್ವೊ ಎಕ್ಸ್‌ಸಿ 60 ಎಸ್‌ಯುವಿ ಕಾರು ಭಾರತದಲ್ಲಿ ಎರಡನೇ ತಲೆಮಾರಿನ ಮಾದರಿಯಾಗಿದೆ ಮತ್ತು 2011 ರಿಂದಲೂ ಮಾರಾಟವಾಗುತ್ತಿರುವ ಹಳೆಯ ಆವೃತ್ತಿಯ ಬದಲಾಗಿ ಬಿಡುಗಡೆಗೊಂಡಿದೆ.

ವೊಲ್ವೊ ಎಕ್ಸ್‌ಸಿ 60 ಎಸ್‌ಯುವಿ ಕಾರು ಭಾರತದಲ್ಲಿ ಬಿಡುಗಡೆ; ಬೆಲೆ ರೂ.55.90 ಲಕ್ಷ

ಭಾರತದಲ್ಲಿ, ಹೊಸ ಎಕ್ಸ್‌ಸಿ 60 ಕಾರು, 1,969 ಸಿಸಿ ಫೋರ್ ಸಿಲಿಂಡರ್ ಟ್ವಿನ್ ಟರ್ಬೊ‌ಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಿದ್ದು, ಈ ಎಂಜಿನ್ 233 ಬಿಎಚ್‌ಪಿ ಮತ್ತು 480 ಎನ್ಎಂ ಟಾರ್ಕ್ ಶಕ್ತಿಯನ್ನು ಉತ್ಪಾದಿಸುತ್ತದೆ.

ವೊಲ್ವೊ ಎಕ್ಸ್‌ಸಿ 60 ಎಸ್‌ಯುವಿ ಕಾರು ಭಾರತದಲ್ಲಿ ಬಿಡುಗಡೆ; ಬೆಲೆ ರೂ.55.90 ಲಕ್ಷ

ನಾಲ್ಕು ಚಕ್ರಗಳಿಗೂ ಶಕ್ತಿ ಕಳುಹಿಸುವ 8-ಸ್ಪೀಡ್ ಗೇರ್‌ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯವನ್ನು ಈ ಡೀಸೆಲ್ ಎಂಜಿನ್ ಪಡೆದುಕೊಂಡಿದೆ. ಹೊಸ ವೊಲ್ವೊ ಎಕ್ಸ್‌ಸಿ 60 ಕಾರು, ಆಡಿ ಕ್ಯೂ5, ಬಿಎಂಡಬ್ಲ್ಯೂ ಎಕ್ಸ್3, ಮರ್ಸಿಡಿಸ್ ಬೆಂಜ್ ಜಿಎಲ್‌ಸಿ, ಜಗ್ವಾರ್ ಎಫ್-ಪೇಸ್ ಮತ್ತು ಮುಂಬರುವ ಲೆಕ್ಸಸ್ ಎನ್ಎಕ್ಸ್ 300 ಎಚ್ ಕಾರುಗಳನ್ನು ಎದುರಿಸಲಿದೆ.

ವೊಲ್ವೊ ಎಕ್ಸ್‌ಸಿ 60 ಎಸ್‌ಯುವಿ ಕಾರು ಭಾರತದಲ್ಲಿ ಬಿಡುಗಡೆ; ಬೆಲೆ ರೂ.55.90 ಲಕ್ಷ

ಹೊಸ ಎಕ್ಸ್‌ಸಿ 60 ಕಾರು ವೊಲ್ವೊ ಕಂಪನಿಯ ಪ್ರಮುಖ ವಾಹನವಾಗಿದೆ. ಈ ಕಾರು ಎಕ್ಸ್‌ಸಿ 90 ಕಾರಿನಿಂದ ಹೆಚ್ಚಿನ ವಿನ್ಯಾಸವನ್ನು ಪಡೆಯುತ್ತದೆ. ಮುಂಭಾಗದಲ್ಲಿ, ಹೊಸ ಎಕ್ಸ್‌ಸಿ 60 ಕಂಪೆನಿಯ ಸಿಗ್ನೇಚರ್ ಮಲ್ಟಿ-ಸ್ಲಾಟ್ ಕ್ರೋಮ್ ಗ್ರಿಲ್ ಪಡೆದುಕೊಂಡಿದೆ.

ವೊಲ್ವೊ ಎಕ್ಸ್‌ಸಿ 60 ಎಸ್‌ಯುವಿ ಕಾರು ಭಾರತದಲ್ಲಿ ಬಿಡುಗಡೆ; ಬೆಲೆ ರೂ.55.90 ಲಕ್ಷ

ಹಿಂಭಾಗದಲ್ಲಿ, ಎಸ್‌ಯುವಿ ಹೊಚ್ಚ ಹೊಸ ನೋಟವನ್ನು ಪಡೆಯುತ್ತದೆ ಮತ್ತು ಲಂಬವಾಗಿ ವಿನ್ಯಾಸಗೊಳಿಸಿದ ಎಲ್ಇಡಿ ಟೈಲ್ ಲ್ಯಾಂಪ್‌ಗಳು, ರೂಫ್ ಮೌಂಟೆಡ್ ಸ್ಪಾಯ್ಲರ್ ಕಾರಿಗೆ ಹೊಸ ಲುಕ್ ನೀಡಿದೆ.

ವೊಲ್ವೊ ಎಕ್ಸ್‌ಸಿ 60 ಎಸ್‌ಯುವಿ ಕಾರು ಭಾರತದಲ್ಲಿ ಬಿಡುಗಡೆ; ಬೆಲೆ ರೂ.55.90 ಲಕ್ಷ

9.0 ಇಂಚಿನ ಸೆಂಟರ್ ಸೆನ್ಸಸ್ ಟಚ್‌ಸ್ಕ್ರೀನ್ ಸಿಸ್ಟಮ್ ಹಾಗೂ 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಅಸಿಸ್ಟೆಂಟ್, ಸೆಮಿ ಆಟೋಮ್ಯಾಟಿಕ್ ಪಾರ್ಕಿಂಗ್ ಮತ್ತು ಲೇನ್ ನಿರ್ಗಮನ ಎಚ್ಚರಿಕೆ ಸೇರಿದಂತೆ ಮುಂತಾದ ಡ್ರೈವರ್ ಸಹಾಯಕ ವೈಶಿಷ್ಟ್ಯಗಳೊಂದಿಗೆ ಎಸ್‌ಯುವಿ ಬಿಡುಗಡೆಗೋಡಿದೆ.

Most Read Articles

Kannada
English summary
Volvo XC60 Launched In India.
Story first published: Tuesday, December 12, 2017, 16:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X