ನ್ಯೂ ಅಮೇಜ್ ಜನಪ್ರಿಯತೆಗೊಳ್ಳುತ್ತಿರುವ ಬೆನ್ನಲ್ಲೇ ಹೋಂಡಾದಿಂದ ಬೆಲೆ ಏರಿಕೆ ಶಾಕ್

By Praveen Sannamani

ಕಂಪ್ಯಾಕ್ಟ್ ಸೆಡಾನ್ ಆವೃತ್ತಿಗಳಲ್ಲಿ ಉತ್ತಮ ಬೇಡಿಕೆ ಗಳಿಸುವಲ್ಲಿ ಯಶಸ್ವಿಯಾಗಿರುವ ಹೋಂಡಾ ಅಮೇಜ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೇ ಸಂದರ್ಭದಲ್ಲಿ ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ನ್ಯೂ ಅಮೇಜ್ ಕಾರುಗಳ ಬೆಲೆ ಹೆಚ್ಚಳ ಮಾಡಿದೆ.

ನ್ಯೂ ಅಮೇಜ್ ಜನಪ್ರಿಯತೆಗೊಳ್ಳುತ್ತಿರುವ ಬೆನ್ನಲ್ಲೇ ಹೋಂಡಾದಿಂದ ಬೆಲೆ ಏರಿಕೆ ಶಾಕ್

ಸದ್ಯ ಟಾಪ್ 10 ಕಾರುಗಳ ಮಾರಾಟದಲ್ಲಿ ಸ್ಥಾನ ಪಡೆದಿರುವ ನ್ಯೂ ಅಮೇಜ್ ಕಾರುಗಳು ಬೆಲೆಯಲ್ಲಿ ಬರೋಬ್ಬರಿ 31 ಸಾವಿರ ಬೆಲೆ ಹೆಚ್ಚಳವಾಗಿದ್ದು, ಬಿಡುಗಡೆಯಾದ ಕೇವಲ 2 ತಿಂಗಳಲ್ಲಿ ಹೊಸ ಕಾರುಗಳ ಬೆಲೆ ಹೆಚ್ಚಳ ಮಾಡಿರುವುದು ಮುಂಬರುವ ದಿನಗಳಲ್ಲಿ ಹೊಸ ಕಾರುಗಳ ಖರೀದಿ ಪರಿಣಾಮ ಬೀರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ನ್ಯೂ ಅಮೇಜ್ ಜನಪ್ರಿಯತೆಗೊಳ್ಳುತ್ತಿರುವ ಬೆನ್ನಲ್ಲೇ ಹೋಂಡಾದಿಂದ ಬೆಲೆ ಏರಿಕೆ ಶಾಕ್

ಆದ್ರೆ ಕಾರು ಉತ್ಪನ್ನಗಳ ಬೀಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯ ಎಂದಿರುವ ಹೋಂಡಾ ಸಂಸ್ಥೆಯು ನಷ್ಟ ಸರಿದೂಗಿಸಲು ಬೆಲೆ ಹೆಚ್ಚಳದ ಮಾಡದೇ ಬೇರೆ ಮಾರ್ಗಗಳೇ ಇಲ್ಲವೆಂದಿದೆ.

ನ್ಯೂ ಅಮೇಜ್ ಜನಪ್ರಿಯತೆಗೊಳ್ಳುತ್ತಿರುವ ಬೆನ್ನಲ್ಲೇ ಹೋಂಡಾದಿಂದ ಬೆಲೆ ಏರಿಕೆ ಶಾಕ್

ಹೋಂಡಾ ಅಮೇಜ್ ಕಾರುಗಳಲ್ಲಿ ಡಿಸೇಲ್ ಮತ್ತು ಪೆಟ್ರೋಲ್ ಎರಡು ವರ್ಷನ್‌ಗಳು ಖರೀದಿಗೆ ಲಭ್ಯವಿದ್ದು, ಗ್ರಾಹಕರ ಬೇಡಿಕೆ ತಕ್ಕಂತೆ ಇ, ಎಸ್, ವಿ ಮತ್ತು ವಿಎಕ್ಸ್ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದಾಗಿದೆ. ಇದರಲ್ಲಿ ಆರಂಭಿಕ ಆವೃತ್ತಿಗಳು ಹೆಚ್ಚಿನ ಬೆಲೆ ಏರಿಕೆ ಪಡೆದುಕೊಂಡಿದ್ದರೇ ಟಾಪ್ ಎಂಡ್ ಕಾರುಗಳ ಬೆಲೆಯಲ್ಲಿ ಕಡಿಮೆ ಪ್ರಮಾಣದ ಹೆಚ್ಚಳ ಮಾಡಲಾಗಿದೆ.

ನ್ಯೂ ಅಮೇಜ್ ಜನಪ್ರಿಯತೆಗೊಳ್ಳುತ್ತಿರುವ ಬೆನ್ನಲ್ಲೇ ಹೋಂಡಾದಿಂದ ಬೆಲೆ ಏರಿಕೆ ಶಾಕ್

ಪೆಟ್ರೋಲ್ ವೆರಿಯೆಂಟ್‌ಗಳು ಮತ್ತು ಹೆಚ್ಚಳವಾದ ಬೆಲೆ ಪಟ್ಟಿ

Sr no. Honda Amaze Petrol Variants Old Prices (ex-Delhi) New Prices (ex-Delhi)
1

E MT ₹ 5,59,900 ₹ 5,80,500
2

S MT ₹ 6,49,900 ₹ 6,60,500
3

V MT ₹ 7,09,900 ₹ 7,20,500
4

S CVT ₹ 7,39,900 ₹ 7,50,500
5 VX MT ₹ 7,57,900 ₹ 7,68,500
6 V CVT ₹ 7,99,900 ₹ 8,10,500

ನ್ಯೂ ಅಮೇಜ್ ಜನಪ್ರಿಯತೆಗೊಳ್ಳುತ್ತಿರುವ ಬೆನ್ನಲ್ಲೇ ಹೋಂಡಾದಿಂದ ಬೆಲೆ ಏರಿಕೆ ಶಾಕ್

ಡಿಸೇಲ್ ವೆರಿಯೆಂಟ್‌ಗಳು ಮತ್ತು ಹೆಚ್ಚಳವಾದ ಬೆಲೆ ಪಟ್ಟಿ

Sr no. Honda Amaze Diesel Variants Old Prices (ex-Delhi) New Prices (ex-Delhi)
1

E MT ₹ 6,69,900

₹ 6,90,500

2

S MT ₹ 7,59,900

₹ 7,70,500

3

V MT ₹ 8,19,900

₹ 8,30,500

4

S CVT ₹ 8,39,900

₹ 8,50,500

5 VX MT ₹ 8,67,900

₹ 8,78,500

6 V CVT ₹ 8,99,900

₹ 9,10,500

ನ್ಯೂ ಅಮೇಜ್ ಜನಪ್ರಿಯತೆಗೊಳ್ಳುತ್ತಿರುವ ಬೆನ್ನಲ್ಲೇ ಹೋಂಡಾದಿಂದ ಬೆಲೆ ಏರಿಕೆ ಶಾಕ್

ಇನ್ನು ಸ್ಪೋರ್ಟಿ ಲುಕ್ ಹೊಂದಿರುವ ಅಮೇಜ್ ಕಾರುಗಳು ಎರಡನೇ ತಲೆಮಾರಿನ ಶಾರ್ಪರ್ ಆಂಗಲ್ಸ್, ಬೋಲ್ಡರ್ ಡಿಸೈನ್ ಹಾಗೂ ಆಂಗ್ಯೂಲರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿದ್ದು, 15 ಇಂಚಿನ ಅಲಾಯ್ ವೀಲ್‍‍ಗಳು, ಹಿಂಭಾಗದ ವಿನ್ಯಾಸದಲ್ಲಿ ಹೊಸ ಪ್ರೇರಣೆಯ ಕ್ರೋಮ್ ಸ್ಟ್ರಿಪ್, ಸಿ ಟೈಪ್ ಟೈಲ್‍ ಲೈಟ್ಸ್ ಗಳನ್ನು ಪಡೆದಿದಿರುವುದು ಕಾರಿನ ಆಯ್ಕೆಯ ಮೌಲ್ಯವನ್ನ ಹೆಚ್ಚಿಸಿದೆ.

ನ್ಯೂ ಅಮೇಜ್ ಜನಪ್ರಿಯತೆಗೊಳ್ಳುತ್ತಿರುವ ಬೆನ್ನಲ್ಲೇ ಹೋಂಡಾದಿಂದ ಬೆಲೆ ಏರಿಕೆ ಶಾಕ್

ಎಂಜಿನ್ ವೈಶಿಷ್ಟ್ಯತೆಗಳು

ಹೊಸ ಅಮೇಜ್ ಕಾರುಗಳು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಖರೀದಿಸಬಹುದಾಗಿದ್ದು, ಪೆಟ್ರೋಲ್ ಆವೃತ್ತಿಯು 89-ಬಿಎಚ್‌ಪಿ, 110-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಡಿಸೇಲ್ ಆವೃತ್ತಿಯು 99-ಬಿಎಚ್‌ಪಿ, 200-ಎನ್ಎಂ ಉತ್ಪಾದನೆ ಮಾಡಬಲ್ಲವು.

ನ್ಯೂ ಅಮೇಜ್ ಜನಪ್ರಿಯತೆಗೊಳ್ಳುತ್ತಿರುವ ಬೆನ್ನಲ್ಲೇ ಹೋಂಡಾದಿಂದ ಬೆಲೆ ಏರಿಕೆ ಶಾಕ್

ಇದಲ್ಲದೇ ಹೊಸ ಕಾರುಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಿದ್ದು, ಮ್ಯಾನುವಲ್‌ಗಿಂತ ಡಿಸೇಲ್ ಆವೃತ್ತಿಗಿಂತ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಡಿಸೇಲ್ ಆವೃತ್ತಿಯು 79-ಬಿಎಚ್‌ಪಿ ಮತ್ತು 160-ಎನ್ಎಂ ಟಾರ್ಕ್ ಮಾತ್ರ ಉತ್ಪಾದಿಸಲಿವೆಯೆಂತೆ.

ನ್ಯೂ ಅಮೇಜ್ ಜನಪ್ರಿಯತೆಗೊಳ್ಳುತ್ತಿರುವ ಬೆನ್ನಲ್ಲೇ ಹೋಂಡಾದಿಂದ ಬೆಲೆ ಏರಿಕೆ ಶಾಕ್

ಇನ್ನು ಕಾರಿನ ವಿನ್ಯಾಸಗಳ ಬಗೆಗೆ ಹೇಳುವುದಾದರೇ, ನ್ಯೂ ಜನರೇಷನ್ ಪ್ಯಾಟ್‌ಫಾರ್ಮ್‌ ಮೇಲೆ ಸಿದ್ದಗೊಂಡಿರುವ ಹೊಸ ಅಮೇಜ್ ಕಾರುಗಳು ಹಿಂದಿನ ಮಾದರಿಗಿಂತ 134 ಕೆಜಿ ತೂಕ ಕಡಿತಗೊಂಡಿದ್ದು, ಇದು ಇಂಧನ ಕಾರ್ಯಕ್ಷಮತೆ ಹೆಚ್ಚಿಸಲು ಇದು ಪರೋಕ್ಷವಾಗಿ ಸಹಕಾರಿಯಾಗಿದೆ.

ನ್ಯೂ ಅಮೇಜ್ ಜನಪ್ರಿಯತೆಗೊಳ್ಳುತ್ತಿರುವ ಬೆನ್ನಲ್ಲೇ ಹೋಂಡಾದಿಂದ ಬೆಲೆ ಏರಿಕೆ ಶಾಕ್

ಅಮೇಜ್ ಕಾರಿನ ಮೈಲೇಜ್

* ಮ್ಯಾನುವಲ್ ಗೇರ್‌ಬಾಕ್ಸ್ ಕಾರುಗಳು- ಪೆಟ್ರೋಲ್ ಆವೃತ್ತಿ- 19.5 ಕಿ.ಮೀ (ಪ್ರತಿ ಲೀಟರ್‌ಗೆ), ಡಿಸೇಲ್ ಆವೃತ್ತಿ- 27.8 ಕಿ.ಮಿ (ಪ್ರತಿ ಲೀಟರ್‌ಗೆ)

* ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಕಾರುಗಳು- ಪೆಟ್ರೋಲ್ ಆವೃತ್ತಿ- 19 ಕಿ.ಮೀ (ಪ್ರತಿ ಲೀಟರ್‌ಗೆ), ಡಿಸೇಲ್ ಆವೃತ್ತಿ- 23.8 ಕಿ.ಮಿ (ಪ್ರತಿ ಲೀಟರ್‌ಗೆ)

ನ್ಯೂ ಅಮೇಜ್ ಜನಪ್ರಿಯತೆಗೊಳ್ಳುತ್ತಿರುವ ಬೆನ್ನಲ್ಲೇ ಹೋಂಡಾದಿಂದ ಬೆಲೆ ಏರಿಕೆ ಶಾಕ್

ಕಾರಿನ ಇಂಟಿರಿಯರ್ ವಿನ್ಯಾಸಗಳು

ಹೊಸ ಅಮೇಜ್ ಕಾರುಗಳು ಎಲ್ಇಡಿ ಡಿಎಲ್‍ಆರ್, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಅನ್ನು ಒಳಗೊಂಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲರ್, ಸ್ಟೀರಿಂಗ್ ಮೌಟೆಂಡ್ ಕಂಟ್ರೋಲರ್ ಮತ್ತು ಪೆಡಲ್ ಶಿಫ್ಟರ್ಸ್ ಅನ್ನು ಅಳವಡಿಸಲಾಗಿದೆ.

ನ್ಯೂ ಅಮೇಜ್ ಜನಪ್ರಿಯತೆಗೊಳ್ಳುತ್ತಿರುವ ಬೆನ್ನಲ್ಲೇ ಹೋಂಡಾದಿಂದ ಬೆಲೆ ಏರಿಕೆ ಶಾಕ್

ಜೊತೆಗಗೆ ಕೀ ಲೇಸ್ ಎಂಟ್ರಿ, ಎಬಿಎಸ್, ಇಬಿಡಿ, ಸೆಂಟ್ರಲ್ ಲಾಕಿಂಗ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಕ್ರೂಸ್ ಕಂಟ್ರೋಲರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆ ಸೆನ್ಸಾರ್ ಒದಗಿಸಲಾಗಿದ್ದು, ಮಾರುತಿ ಡಿಜೈರ್, ಹ್ಯುಂಡೈ ಎಕ್ಸ್ಸೆಂಟ್ ಮತ್ತು ಟಾಟಾ ಟಿಗೋರ್ ಕಾರುಗಳಿಗೆ ತ್ರೀವ ಪೈಪೋಟಿ ನೀಡಲಿದೆ.

ನ್ಯೂ ಅಮೇಜ್ ಜನಪ್ರಿಯತೆಗೊಳ್ಳುತ್ತಿರುವ ಬೆನ್ನಲ್ಲೇ ಹೋಂಡಾದಿಂದ ಬೆಲೆ ಏರಿಕೆ ಶಾಕ್

ಖರೀದಿಗೆ ಲಭ್ಯವಿರುವ ಬಣ್ಣಗಳು

ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಒಟ್ಟು 5 ಬಣ್ಣಗಳಲ್ಲಿ ಲಭ್ಯವಿರುವ ಹೊಸ ಅಮೇಜ್ ಕಾರುಗಳು ರೆಡಿಯೆಂಟ್ ರೆಡ್, ವೈಟ್ ಆರ್ಕಿಡ್ ಪರ್ಲ್, ಲೂನಾರ್ ಸಿಲ್ವರ್ ಮೆಟಾಲಿಕ್, ಗೊಲ್ಡನ್ ಬ್ರೌನ್ ಮೆಟಾಲಿಕ್ ಮತ್ತು ಮಾರ್ಡನ್ ಸ್ಟ್ರಿಲ್ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ನ್ಯೂ ಅಮೇಜ್ ಜನಪ್ರಿಯತೆಗೊಳ್ಳುತ್ತಿರುವ ಬೆನ್ನಲ್ಲೇ ಹೋಂಡಾದಿಂದ ಬೆಲೆ ಏರಿಕೆ ಶಾಕ್

ಒಟ್ಟಿನಲ್ಲಿ 2ನೇ ತಲೆಮಾರಿನ ವೈಶಿಷ್ಟ್ಯತೆಗಳನ್ನು ಹೊತ್ತು ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಅಮೇಜ್ ಕಾರುಗಳು ಪ್ರಿಮಿಯಂ ವೈಶಿಷ್ಟ್ಯತೆಗಳೊಂದಿಗೆ ಮಿಂಚುತ್ತಿದ್ದು, ಇದೇ ವೇಳೆ ಬೆಲೆ ಏರಿಕೆ ಮಾಡಿರುವುದು ಕಾರು ಖರೀದಿ ಮೇಲೆ ಯಾವ ಪರಿಣಾಮ ಬೀರಲಿದೆ ಎನ್ನುವುದು ಮುಂಬರುವ ದಿನಗಳಲ್ಲಿ ಸ್ಪಷ್ಟವಾಗಲಿದೆ.

Most Read Articles

Kannada
Read more on price hike amaze
English summary
2018 Honda Amaze prices increase.
Story first published: Friday, August 3, 2018, 19:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X