ಲೀಟರ್‌ಗೆ 32 ಕಿಲೋ ಮೀಟರ್ ಮೈಲೇಜ್ ನೀಡುತ್ತೆ ಈ ಸ್ವಿಫ್ಟ್ ಕಾರು..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಈಗಾಗಲೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯ ಕೆಲಸದಲ್ಲಿ ತೊಡಗಿರುವುದು ನಮಗೆಲ್ಲಾ ತಿಳಿದಿರುವ ಸಂಗತಿ. ಅಲ್ಲದೇ ಮಾಹಿತಿಗಳ ಪ್ರಕಾರ 2020 ಸಂಸ್ಥೆಯು ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗ

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಕಾರ್ಯದಲ್ಲಿ ತೊಡಗಿರುವುದು ಬಹುತೇಕರಿಗೆ ತಿಳಿದಿರುವ ಸಂಗತಿ. ಅಲ್ಲದೇ ಮಾಹಿತಿಗಳ ಪ್ರಕಾರ, 2020ರ ವೇಳೆಗೆ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದ್ದು, ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.

ಲೀಟರ್‍‍ಗೆ 32 ಕಿಲೋಮೀಟರ್ ಮೈಲೇಜ್ ನೀಡತ್ತಂತೆ ಈ ಸ್ವಿಫ್ಟ್ ಕಾರು..

ಇದೀಗ ಹೊಸ ವಿಚಾರವೇನೆಂದರೆ, ಮಾರುತಿ ಸುಜುಕಿ ಸಂಸ್ಥೆಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಲ್ಲಾ ಕಾರುಗಳನ್ನು ಭವಿಷ್ಯದಲ್ಲಿ ಹೊಸ ಎಮಿಷನ್ ನಿಯಮಗಳನ್ನು ಪೂರೈಸಲು ಹೈಬ್ರಿಡ್ ಎಲೆಕ್ಟ್ರಿಕ್ ಕಾರುಗಳನ್ನಾಗಿ ಪರಿವರ್ತಿಸುತ್ತಿದೆ.

ಲೀಟರ್‍‍ಗೆ 32 ಕಿಲೋಮೀಟರ್ ಮೈಲೇಜ್ ನೀಡತ್ತಂತೆ ಈ ಸ್ವಿಫ್ಟ್ ಕಾರು..

ಜಪಾನ್‍‍ನ ಮಾರುಕಟ್ಟೆಯಲ್ಲಿ ಜೂನ್ 2017ರಿಂದಲೇ ಸುಜುಕಿ ಸಂಸ್ಥೆಯು ತಮ್ಮ ಸ್ವಿಫ್ಟ್ ಹೈಬ್ರಿಡ್ ಕಾರನ್ನು ಮಾರಾಟ ಮಾಡುತ್ತಿದ್ದು, ಈ ಕಾರು ಸ್ವಿಫ್ಟ್ ಹೈಬ್ರಿಡ್ ಎಸ್‌ಜಿ ಮತ್ತು ಸ್ವಿಫ್ಟ್ ಹೈಬ್ರಿಡ್ ಎಸ್ಎಲ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಂಡಿದೆ.ಇದೀಗ ಗೈಕಿಂಡೊ ಇಂಡೋನೇಷಿಯನ್ ಇಂಟರ್‍‍ನ್ಯಾಷನಲ್ ಆಟೋ ಶೋನಲ್ಲೂ ಕೂಡಾ ಪ್ರದರ್ಶನಗೊಳಿಸಲಾಗಿದೆ.

ಲೀಟರ್‍‍ಗೆ 32 ಕಿಲೋಮೀಟರ್ ಮೈಲೇಜ್ ನೀಡತ್ತಂತೆ ಈ ಸ್ವಿಫ್ಟ್ ಕಾರು..

ತಾಂತ್ರಿಕ ಅಂಶಗಳನ್ನು ಹೊರತುಪಡಿಸಿ ಕಾರಿನ ಹೊರಭಾಗದಲ್ಲಿ ಜಪಾನ್ ಸಂಸ್ಥೆಯ ಹೊಚ್ಚ ಹೊಸ ಹೈಬ್ರಿಡ್ ಸ್ವಿಫ್ಟ್ ಕಾರು ಯಾವುದೇ ರೀತಿಯ ವಿಶಿಷ್ಟ ಲಕ್ಷಣಗಳನ್ನು ಪಡೆದುಕೊಂಡಿಲ್ಲ ಎನ್ನಬಹದು. ಹಾಗೂ ಈ ಕಾರು 3,840 ಮಿ.ಮೀ ಉದ್ದ, 1,695 ಮಿ.ಮೀ ಅಗಲ ಮತ್ತು 1,500 ಮಿ.ಮೀ ಎತ್ತರ ಮತ್ತು 2,450 ಮಿ.ಮೀ ವೀಲ್ ಬೇಸ್ ಹೊಂದಿರಲಿದೆ.

ಲೀಟರ್‍‍ಗೆ 32 ಕಿಲೋಮೀಟರ್ ಮೈಲೇಜ್ ನೀಡತ್ತಂತೆ ಈ ಸ್ವಿಫ್ಟ್ ಕಾರು..

ಒಳಗೆ, ನೀಲಿ ಬಣ್ಣದ AGS ಸೆಲೆಕ್ಟರ್‌ನಲ್ಲಿ ಅಕ್ಸೆಂಟ್ ಹೊಂದಿದೆ ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು ಹೊಂದಿದೆ. ಸ್ವಿಫ್ಟ್ ಹೈಬ್ರಿಡ್ ಸುಜುಕಿ ಡ್ಯುಯಲ್ ಕ್ಯಾಮೆರಾ ಬ್ರೇಕ್ ಸಪೋರ್ಟ್ ಹೊಂದಿರಲಿದೆ.

ಲೀಟರ್‍‍ಗೆ 32 ಕಿಲೋಮೀಟರ್ ಮೈಲೇಜ್ ನೀಡತ್ತಂತೆ ಈ ಸ್ವಿಫ್ಟ್ ಕಾರು..

ಸ್ವಿಫ್ಟ್ ಹೈಬ್ರಿಡ್ ಕಾರು 91 ಪಿಎಸ್ 1.2 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 10 ಕೆ.ವಿ ಮೋಟಾರ್ ಜನರೇಟರ್ ಯುನಿಟ್ ಮೋಟರ್ ಮತ್ತು 5-ಸ್ಪೀಡ್ AGS(ಆಟೋಮೇಟೆಡ್ ಮಾನ್ಯುಯಲ್ ಟ್ರಾನ್ಸ್‌ಮಿಷನ್) ಗೇರ್‌ಬಾಕ್ಸ್ ಹೊಂದಿರಲಿದೆ. ಕಡಿಮೆ ಹೊರೆ ಹೊಂದಿರುವ ಸಂದರ್ಭದಲ್ಲಿ, ಸಿಸ್ಟಮ್ ಎಂಜಿನ್ ಬಂದ್ ಮಾಡಿ ಸಂಪೂರ್ಣ ವಿದ್ಯುತ್ ಮೋಡ್‌ನಲ್ಲಿ ಬಹಳ ದೂರದವರೆಗೂ ಚಲಿಸಬಹುದಾಗಿದೆ.

ಲೀಟರ್‍‍ಗೆ 32 ಕಿಲೋಮೀಟರ್ ಮೈಲೇಜ್ ನೀಡತ್ತಂತೆ ಈ ಸ್ವಿಫ್ಟ್ ಕಾರು..

ಸ್ವಿಫ್ಟ್ ಹೈಬ್ರಿಡ್ ಕಾರು ಅತ್ಯದ್ಭುತವೆನ್ನಿಸುವ ಲೀಟರ್‌ಗೆ 32 ಕಿ.ಮೀ (JC08 cycle) ಮೈಲೇಜ್ ನೀಡಲಿದೆ ಮತ್ತು 2WD ಆಯ್ಕೆಯಲ್ಲಿ ಲಭ್ಯವಿದೆ ಎಂದು ಸುಜುಕಿ ಹೇಳಿಕೊಂಡಿದೆ.

ಲೀಟರ್‍‍ಗೆ 32 ಕಿಲೋಮೀಟರ್ ಮೈಲೇಜ್ ನೀಡತ್ತಂತೆ ಈ ಸ್ವಿಫ್ಟ್ ಕಾರು..

ಭಾರತದಲ್ಲಿ ಹೈಬ್ರಿಡ್ ವಾಹನಗಳ ಅಭಿವೃದ್ಧಿ ಹೊಸ ಹಂತದಲ್ಲಿದೆ. ಹೆಚ್ಚಿದ ಜಾಗೃತಿಗೆ ಬೇಡಿಕೆಯು ಹೆಚ್ಚುತ್ತಿರುವಾಗ, ಸರ್ಕಾರವು ಹಿನ್ನಡೆ ತೆಗೆದುಕೊಂಡಿತ್ತು. ಕಳೆದ ವರ್ಷ ಭಾರತೀಯ ಸರ್ಕಾರವು ಹೈಬ್ರಿಡ್ ವಾಹನಗಳ ತೆರಿಗೆಯನ್ನು 43% ಗೆ ಏರಿಸಿತು. ಮುಂದಿನ ಬಜೆಟ್‍‍ನಲ್ಲಿ ಆಶಾದಾಯಕವಾಗಿ, ಭಾರತದಲ್ಲಿ ಹೈಬ್ರಿಡ್ ಕಾರುಗಳ ಬೆಳವಣಿಗೆಯನ್ನು ಅನುಮತಿಸಲು ಈ ತೆರಿಗೆಗಳನ್ನು ಹಿಂತೆಗೆದುಕೊಳ್ಳಲಾಗುತ್ತದೆ.

ಲೀಟರ್‍‍ಗೆ 32 ಕಿಲೋಮೀಟರ್ ಮೈಲೇಜ್ ನೀಡತ್ತಂತೆ ಈ ಸ್ವಿಫ್ಟ್ ಕಾರು..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಮನೆಯಲ್ಲಿ ಸ್ಪೋಟಗೊಂಡ ಎಲೆಕ್ಟ್ರಿಕ್ ಸ್ಕೂಟರ್ : ವೀಡಿಯೊ

ಸ್ಟೀರಿಂಗ್ ವ್ಹೀಲ್ ವಾಹನದ ಮಧ್ಯದಲ್ಲಿ ಏಕೆ ಇರುವುದಿಲ್ಲ ಗೊತ್ತಾ..??

ಮಳೆಗಾಲದಲ್ಲಿ ಘಾಟ್ ರಸ್ತೆಯಲ್ಲಿ ಸುರಕ್ಷಿತ ಚಾಲನೆಗಾಗಿ ಅಮೂಲ್ಯ ಟಿಪ್ಸ್..

ಮಳೆಗಾಲದಲ್ಲಿ ವಾಹನ ಚಾಲನೆಗೂ ಮುನ್ನ ಈ ಎಚ್ಚರಿಕೆ ಕ್ರಮಗಳನ್ನ ತಪ್ಪದೇ ಪಾಲಿಸಿ..!

ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!

Most Read Articles

Kannada
English summary
2018 Maruti Swift based Swift Hybrid delivers 32 kmpl mileage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X