ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಪೋರ್ಷೆ ಕಯೆನ್ ಕಾರಿನ ವಿಷೇಶತೆ ಏನು

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಪೋರ್ಷೆ ತನ್ನ ಎಸ್‍‍ಯುವಿ ಸರಣಿಯ ಮುಂದಿನ ತಲೆಮಾರಿನ ಕಯೆನ್ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.19 ಕೋಟಿಯ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಪೋರ್ಷೆ ಕಯೆನ್ ಕಾರಿನ ವಿಷೇಶತೆ ಏನು

ಪೋರ್ಷೆ ಕಯೆನ್ ಕಾರಿನ ಇನ್ನೆರಡು ಮಾದರಿಗಳಾದ ಕಯೆನ್ನೆ ಇ-ಹೈಬ್ರೀಡ್ ಕಾರಿನ ಬೆಲೆಯನ್ನು ರೂ.1.58 ಕೋಟಿ ಹಾಗು ಕಯೆನ್ ಟರ್ಬೋ ಕಾರಿನ ಬೆಲೆಯನ್ನು ರೂ.1.92 ಕೋಟಿಗೆ ನಿಗದಿ ಮಾಡಲಾಗಿದೆ. ಈ ಬಾರಿ ಬಿಡುಗಡೆಗೊಂಡ ಹೊಸ ಕಯೆನ್ ಕಾರುಗಳು ಹಲವಾರು ನವೀಕರಣಗಳನ್ನು ಪಡೆದುಕೊಂಡಿದ್ದು, ಅವುಗಳ ಕುರಿತಾದ ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಪೋರ್ಷೆ ಕಯೆನ್ ಕಾರಿನ ವಿಷೇಶತೆ ಏನು

ಹೊಸ ತಲೆಮಾರಿನ ಪೋರ್ಷೆ ಕಯೆನ್ ಕಾರುಗಳು ಪೋರ್ಷೆ ಡೈನಾಮಿಕ್ ಲೈಟ್ ಸಿಸ್ಟಮ್ ಅಥವಾ ಎಲ್ಇಡಿ ಮ್ಯಾಟ್ರಿಕ್ಸ್ ಬೀಮ್ ಹೆಡ್‍‍ಲೈಟ್‍ಗಳನ್ನು ಪಡೆದುಕೊಂಡಿದ್ದು, ಮಡ್, ಗ್ರೇವಲ್, ಸ್ಯಾಂಡ್ ಮತ್ತು ರಾಕ್ ಎಂಬ ನಾಲ್ಕು ವಿವಿಧ ಡ್ರೈವಿಂಗ್ ಮೋಡ್‍ಗಳನ್ನು ಪಡೆದುಕೊಂಡಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಪೋರ್ಷೆ ಕಯೆನ್ ಕಾರಿನ ವಿಷೇಶತೆ ಏನು

ಹೊಸ ಪೋರ್ಷೆ ಕಯೆನ್ ಎಸ್‍ಯುವಿ ಕಾರಿನ ಒಳಭಾಗದಲ್ಲಿ 12.3 ಇಂದಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಅಳವಡಿಸಲಾಗಿದ್ದು, ಜೊತೆಗೆ ಅನಾಲಾಗ್ ಟಾಚೋಮೀಟರ್ ಮತ್ತು ಇನ್ನಿತರೆ ಮಾಹಿತಗಳನ್ನು ನೀಡುವ 7 ಇಂಚಿನ ಫುಲ್ ಹೆಚ್‍ಡಿ ಇನ್ಸ್ಟ್ರೂಮೆಂಟ್ ಕಂಶೋಲ್ ಅನ್ನು ನೀಡಲಾಗಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಪೋರ್ಷೆ ಕಯೆನ್ ಕಾರಿನ ವಿಷೇಶತೆ ಏನು

ಇದಲ್ಲದೆ ಪೋರ್ಷೆ ಕಯೆನ್ ಕಾರು ಹೆಡ್ಸ್ ಅಪ್ ಡಿಸ್ಪ್ಲೇ, ಮಸಾಜ್ ಸೀಟ್ಸ್, ಹೀಟೆಡ್ ವಿಂಡ್‍‍ಸ್ಕ್ರೀನ್ ಮತ್ತು ಅಡಾಪ್ಟೀವ್ ಕ್ರೂಸ್ ಕಂಟ್ರೋಲ್‍‍ನೊಂದಿಗೆ ಪೋರ್ಷೇ ಇನ್ನೊಡ್ರೈವ್ ಎಂಬ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಪೋರ್ಷೆ ಕಯೆನ್ ಕಾರಿನ ವಿಷೇಶತೆ ಏನು

ಹೊಸ ತಲೆಮಾರಿನ ಪೋರ್ಷೆ ಕಯೆನ್ ಎಸ್‍‍ಯುವಿ ಕಾರು 3.0 ಲೀಟರ್ ಟರ್ಬೋಚಾರ್ಜ್ಡ್ ವಿ6 ಎಂಜಿನ್ ಅನ್ನು ಹೊಂದಿದ್ದು, 335ಬಿಹೆಚ್‍‍ಪಿ ಮತ್ತು 450ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಪೋರ್ಷೆ ಕಯೆನ್ ಕಾರಿನ ವಿಷೇಶತೆ ಏನು

ಪೋರ್ಷೆ ಕಯೆನ್ ಎಸ್ 2.9 ಲೀಟರ್, ಟ್ವಿನ್ ಟರ್ಬೊ ವಿ6 ಎಂಜಿನ್ ಸಹಾಯದಿಂದ 434 ಬಿಹೆಚ್‍‍ಪಿ ಮತ್ತು 550ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದ್ದು, ಇನ್ನು ಕಯೆನ್ ಟರ್ಬೋ ವೇರಿಯಂಟ್ 4 ಲೀಟರ್ ಬೈ-ಟರ್ಬೋ ವಿ8 ಎಂಜಿನ್ ಸಹಾಯದಿಂದ 542ಬಿಹೆಚ್‍ಪಿ ಮತ್ತು 770ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪದೆದುಕೊಂಡಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಪೋರ್ಷೆ ಕಯೆನ್ ಕಾರಿನ ವಿಷೇಶತೆ ಏನು

ಪೋರ್ಷೇ ಕಯೆನ್ ಇ-ಹೈಬ್ರಿಡ್ ಕಾರು ಕೂಡಾ 3.0 ಲೀಟರ್ ವಿ6 ಎಂಜಿನ್ ಅನ್ನು ಆಯ್ಕೆಯಾಗಿ ಪಡೆದಿರಲಿದ್ದು, ಎಲೆಕ್ಟ್ರಿಕ್ ಮೋಟಾರ್ ಅನ್ನು ಕೂಡಾ ಅಳವಡಿಸಲಾಗಿದೆ. ಈ ಕಾರು 455ಬಿಹೆಚ್‍‍ಪಿ ಮತ್ತು 700ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಗಂಟೆಗೆ 253 ಕಿಲೋಮೀಟರ್‍‍ನಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಪೋರ್ಷೆ ಕಯೆನ್ ಕಾರಿನ ವಿಷೇಶತೆ ಏನು

ಹೊಸ ತಲೆಮಾರಿನ ಪೋರ್ಷೆ ಕಯೆನ್ ಎಸ್‍‍ಯುವಿ ಕಾರು ಭಾರತಕ್ಕೆ ಆಗಮಿಸಿದ್ದು, ಈ ಕಾರು ಒಮ್ಮೆ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ಎಕ್ಸ್, ಆಡಿ ಕ್ಯೂ7 ಮತ್ತು ಬಿಎಮ್‍ಡಬ್ಲ್ಯೂ ಎಕ್ಸ್5 ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ.

Most Read Articles

Kannada
English summary
2018 Porsche Cayenne Range Launched In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X