ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ನಾವು ಕಾರು ಖರೀದಿ ಮಾಡುವಾಗ ಹತ್ತಾರು ಬಾರಿ ವಿಚಾರಿಸಿದ ನಂತರವೇ ಖರೀದಿ ಪ್ರಕ್ರಿಯೆ ಮುಂದಾಗುವುದು ಒಳಿತು. ಇಲ್ಲವಾದ್ರೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಖರೀದಿಸಿದ ಕಾರುಗಳು ನಿಮ್ಮನ್ನು ಆರ್ಥಿಕ ಪರಿಸ್ಥಿತಿ ದಕ್ಕೆ ಉಂಟು ಮಾಡಬಹುದು.

By Rahul Ts

ನಾವು ಕಾರು ಖರೀದಿ ಮಾಡುವಾಗ ಹತ್ತಾರು ಬಾರಿ ವಿಚಾರಿಸಿದ ನಂತರವೇ ಖರೀದಿ ಪ್ರಕ್ರಿಯೆ ಮುಂದಾಗುವುದು ಒಳಿತು. ಇಲ್ಲವಾದ್ರೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಖರೀದಿಸಿದ ಕಾರುಗಳು ನಿಮ್ಮನ್ನು ಆರ್ಥಿಕ ಪರಿಸ್ಥಿತಿ ದಕ್ಕೆ ಉಂಟು ಮಾಡಬಹುದು. ಹೀಗಾಗಿಯೇ ಕಾರು ಖರೀದಿಸುವ ಗ್ರಾಹಕರಿಗಾಗಿ ನಿಮ್ಮ ಡ್ರೈವ್ ಸ್ಪಾರ್ಕ್ ತಂಡವು ಅತ್ಯುತ್ತಮ ರೀ ಸೇಲ್ ಮೌಲ್ಯದ ಕಾರುಗಳ ಮಾಹಿತಿಯನ್ನು ನೀಡುತ್ತಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಬಗೆಯ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆದ್ರೆ ಅವುಗಳೆಲ್ಲಾ ಬೆಲೆ, ಎಂಜಿನ್ ವೈಶಿಷ್ಟ್ಯತೆಗಳಲ್ಲಿ ಭಿನ್ನವಾಗಿದ್ದರು ಕೆಲವು ಕಾರು ಮಾತ್ರ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಅಂತಹ ಟಾಪ್ 7 ಕಾರುಗಳ ಮಾಹಿತಿ ಇಲ್ಲಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಮಾರುತಿ ಸುಜುಕಿ ಆಲ್ಟೊ ಕೆ10

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಕಾರುಗಳ ಪಟ್ಟಿಯಲ್ಲಿ ದೇಶಿಯ ವಾಹನ ತಯಾರಕ ಸಂಸ್ಥೆಯ ಮಾರುತಿ ಸುಜುಕಿಯ ಆಲ್ಟೊ ಕೆ10 ಪ್ರಥಮ ಸ್ಥಾನವನ್ನು ಪಡೆದಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 3.30 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಮಾರುತಿ ಸುಜುಕಿ ಆಲ್ಟೊ ಕೆ10 ಬಳಸಿದ ಕಾರು ಮಾರುಕಟ್ಟೆಯಲ್ಲಿ ರೂ. 1.60 ಲಕ್ಷದಿಂದ ಲಭ್ಯವಿದೆ. ಎಂಟ್ರಿ ಲೆವೆಲ್ ಹ್ಯಾಚ್‍‍ಬ್ಯಾಕ್ ವಿಭಾಗದಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದಿದ್ದು ಇದು ಭಾರತದ ಮಾರುಕಟ್ಟೆಯಲ್ಲಿ ಅತ್ಯುತ್ತಮ ರೀ ಸೇಲ್ ಮೌಲ್ಯವನ್ನು ಹೊಂದಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಮಾರುತಿ ಸುಜುಕಿ ಆಲ್ಟೊ ಕೆ10 ಕಾರುಗಳು 2014ರಲ್ಲಿ ತಮ್ಮ ಪ್ರಥಮ ಫೇಸ್‍‍ಲಿಫ್ಟ್ ಮಾದರಿಯನ್ನು ಪಡೆದುಕೊಂದಿದ್ದು, ಪ್ರಸ್ಥುತ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಮಾಡಲ್ ಕಾರುಗಳು ಪೆಟ್ರೋಲ್ ಮತ್ತು ಸಿನ್‍‍ಜಿ ಆಯ್ಕೆಯೊಂದಿಗೆ ಲಭ್ಯವಿದ್ದು ಜೊತೆಗೆ ಎಂಜಿನ್ ಅನ್ನು ಮ್ಯಾನುವಲ್ ಅಥವ ಎಎಮ್‍ಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಈ ಕಾರಿನ ಪೆಟ್ರೋಲ್ ಮಾದರಿಗಳು 998ಸಿಸಿ ಪೆಟ್ರೋಲ್ ಎಂಜಿನ್ ಸಹಾಯದಿಂದ 67ಬಿಹೆಚ್‍‍ಪಿ ಮತ್ತು 90ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಪೆಟ್ರೋಲ್ ಮಾದಾರಿಯ ಕಾರುಗಳು ಪ್ರತೀ ಲೀಟರ್‍‍ಗೆ 24.07 ಮೈಲೇಜ್ ನೀಡುತ್ತದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಸ್ವಿಫ್ಟ್ ಕಾರುಗಳು 2005 ರಲ್ಲಿ ಬಿಡುಗಡೆಗೊಂಡು ಪ್ರಸ್ಥುತ ಮಾರುಕಟ್ಟೆಯಲ್ಲಿ ಮೂರನೆಯ ತಲೆಮಾರಿನ ಸ್ವಿಫ್ಟ್ ಕಾರುಗಳು ಕೂಡಾ ಖರೀದಿಗೆ ಲಭ್ಯವಿದೆ. ಹೊಸ ಕಾರು ಅಥವ ರೀ ಸೆಲ್ ವಾಲ್ಯೂ ನಲ್ಲಿ ಈ ಕಾರಗೆ ಕೊಟ್ಟ ಹಣಕ್ಕೆ ಯಾವುದೇ ಮೋಸ ಇರುವುದಿಲ್ಲ ಎನ್ನಬಹುದು.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಮಾರುತಿ ಸುಜುಕಿ ಸ್ವಿಫ್ಟ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 4.99 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಪ್ರತಿ ತಿಂಗಳು ಮಾರುತಿ ಸಂಸ್ಥೆಯು ಸುಮಾರು 15,000 ಸಾವಿರಕ್ಕಿಂತ ಹೆಚ್ಚು ಸ್ವಿಫ್ಟ್ ಕಾರುಗಳನ್ನು ಮಾರಾಟಮಾಡುತ್ತಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಮೂರನೆಯ ತಲೆಮಾರಿನ ಸ್ವಿಫ್ಟ್ ಕಾರುಗಳು 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ ಸಹಾಯದಿಂದ 83ಬಿಹೆಚ್‍‍ಪಿ ಮತ್ತು 113 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇನ್ನು 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ 75 ಬಿಹೆಚ್‍‍ಪಿ ಮತ್ತು 190ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದು ಎಂಜಿನ್‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಹೋಂಡಾ ಸಿಟಿ

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ 1995ರಲ್ಲಿ ತಮ್ಮ ಮೊದಲ ಸಿಟಿ ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ 8.72 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂದಿದೆ ಮತ್ತು ಬಳಕೆಯಾದ ಸಿಟಿ ಕಾರುಗಳನ್ನು ರೂ. 3.75 ಲಕ್ಷಕ್ಕೆ ರೀ ಸೆಲ್ ಮಾಡಬಹುದಾಗಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಬಿಡುಗಡೆಗೊಂಡಾಗಿನಿಂದಲೂ ಹೋಂಡಾ ಸಿಟಿ ಕಾರು 2017ರಲ್ಲಿ ಮೊದಲ ಅಪ್ಡೇಟ್ ಅನ್ನು ಪದೆದಿದ್ದು, ಕಾರಿನ ಒಳಭಾಗದಲ್ಲಿ ಮತ್ತು ಒಳಭಾಗದ ವಿನ್ಯಾಸದಲ್ಲಿ ಮಾರ್ಪಾಡುಗಳನ್ನು ಮಾಡಲಾಗಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ತಾಂತ್ರಿಕವಾಗಿ ಹೋಂಡಾ ಸಿಟಿ ಕಾರು 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಅನ್ನು ಪಡೆದುಕೊಂಡಿದೆ. 1.5 ಲೀಟರ್‍‍ನ ಪೆಟ್ರೋಲ್ ಎಂಜಿನ್ 119 ಬಿಹೆಚ್‍‍ಪಿ ಮತ್ತು 145ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಅಥವ ಆಟೋಮ್ಯಾಟಿಕ್ ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಇನ್ನು 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ 99ಬಿಹೆಚ್‍‍ಪಿ ಮತ್ತು 200ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಹ್ಯುಂಡೈ ಎಲೈಟ್ ಐ20

ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಮೊದಲ ಪ್ರೀಮಿಯಮ್ ಹ್ಯಾಚ್‍‍ಬ್ಯಾಕ್ ಎಲೈಟ್ ಐ20 ಕಾರನ್ನು ಬಿಡುಗಡೆಗೊಳಿಸಿದ್ದು, ರೀ ಸೆಲ್ ಮೌಲ್ಯದ ಕಾರುಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

2014ರಲ್ಲಿ ಬಿಡುಗಡೆಗೊಂಡ ಹ್ಯುಂಡೈ ಎಲೈಟ್ ಐ20 ಕಾರು 2018ರಲ್ಲಿ ಈ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಲಾಯಿತು. ಎಲೈಟ್ ಐ20 ಐಷರಾಮಿ ಒಳ ವಿನ್ಯಾಸವನ್ನು ಪಡೆದಿದ್ದು, 7 ಪೆಟ್ರೋಲ್ ವೇರಿಯಂಟ್ ಮತ್ತು 7 ಡೀಸೆಲ್ ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಪೆಟ್ರೋಲ್ ಅಧಾರಿತ ಎಲೈಟ್ ಐ20 ಕಾರುಗಳು 1.2ಲೀಟರ್ ಕಪ್ಪ ಡ್ಯುಯಲ್ ವಿಟಿವಿಟಿ ಎಂಜಿನ್ ಸಹಾಯದಿಂದ 82ಬಿಹೆಚ್‍‍ಪಿ ಮತ್ತು 114ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಇನ್ನು ಡೀಸೆಲ್ ಅಧಾರಿತ ಎಲೈಟ್ ಐ20 ಕಾರುಗಳು 1.4 ಲೀಟರ್ ಯು2 ಸಿಆರ್‍‍ಡಿಐ ಡೀಸೆಲ್ ಎಂಜಿನ್ ಸಹಾಯದಿಂದ 90ಬಿಹೆಚ್‍‍ಪಿ ಮತ್ತು 220ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತು ಎಲೈಟ್ ಐ20 ಫೇಸ್‍‍ಲಿಫ್ಟ್ ಕಾರು ಹೊಸದಾಗಿ 1.4 ಲೀಟರ್ ಡ್ಯುಯಲ್ ವಿಟಿವಿಟಿ ಎಂಜಿನ್ ಅನ್ನು ಪಡೆದುಕೊಂಡಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ರೆನಾಲ್ಟ್ ಕ್ವಿಡ್

ಎಂಟ್ರಿ ಲೆವೆಲ್ ಹ್ಯಾಚ್‍‍ಬ್ಯಾಕ್ ರೆನಾಲ್ಟ್ ಕ್ವಿಡ್ ಕಾರು ಕಾರು ರೂ. 2.67 ಲಕ್ಷದಿಂದ ಪ್ರಾರಂಭಿಕ ಆನ್-ರೋಡ್ ಬೆಲೆಯನ್ನು ಪಡೆದಿದ್ದು, 2014ರಲ್ಲಿ ಬಿಡುಗಡೆಗೊಂದು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಬಳಸಿದ ಕಾರುಗಳಲ್ಲೂ ಈ ಕಾರು ಯಶಸ್ವಿಯಾಗಿ ಮಾರಾಟವಾಗುತ್ತಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ರೆನಾಲ್ಟ್ ಕ್ವಿಡ್ ಹ್ಯಾಚ್‍‍ಬ್ಯಾಕ್ ಕಾರು 799ಸಿಸಿ ಪೆಟ್ರೋಲ್ ಎಂಜಿನ್ ಸಹಾಯದಿಂದ 53 ಬಿಹೆಚ್‍‍ಪಿ ಮತ್ತು 72ಎನ್ ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪ್ರತೀ ಲೀಟರ್‍‍ಗೆ 25.17 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಹೋಂಡಾ ಅಮೇಜ್

ತನ್ನ ಕ್ವಾಲಿಟಿ ಮತ್ತು ಪರ್ಫಾರ್‍‍ಮೆನ್ಸ್ ನಿಂದ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡೆದ ಸಬ್-ಕಾಂಪ್ಯಾಕ್ಟ್ ಸೆಡಾನ್ ಹೋಂಡಾ ಅಮೇಜ್ ಕಾರುಗಳು 2013ರಲ್ಲಿ ಬಿಡುಗಡೆಗೊಂಡು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದ್ದು, ರೀ ಸೆಲ್ ಮಾರಾಟದ ಕಾರುಗಳಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಮಾರುತಿ ಸುಜುಕಿ ಡಿಜೈರ್, ಹ್ಯುಂಡೈ ಎಕ್ಸ್ ಸೆಂಟ್, ಫೋರ್ಡ್ ಆಸ್ಫೈರ್, ಟಾಟಾ ಟಿಗೊರ್ ಮತ್ತು ಕ್ಯಾಂಪ್ಯಾಕ್ಟ್ ಸೆಡಾನ್ ಕಾರುಗಳಿಗೆ ಪೈಪೋಟಿ ನೀಡುತ್ತಿರುವ ಹೋಂಡಾ ಅಮೇಜ್ ಕೆಲ ದಿನಿಗಳ ಹಿಂದಷ್ಟೆ ಫೇಸ್‍‍ಲಿಫ್ಟ್ ಮಾದರಿಯನ್ನು ಕೂಡಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಹೊಸ ಹೋಂಡಾ ಅಮೇಜ್ ಕಾರು 1.2 ಲೀಟರ್ ಐ -ವಿಟಕ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ 90ಬಿಹೆಚ್‍‍ಪಿ ಮತ್ತು 110ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇನ್ನು 1.5 ಲೀಟರ್ ಡೀಸೆಲ್ ಎಂಜಿನ್ 100 ಬಿಹೆಚ್‍‍ಪಿ ಮತ್ತು 200ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಎರಡು ಎಂಜಿನ್‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಅಥವ ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಪೆಟ್ರೋಲ್ ಮಾದರಿಯ ಕಾರುಗಳು ಪ್ರತೀ ಲೀಟರ್‍‍ಗೆ 19.5 ಮೈಲೇಜ್ ಮತ್ತು ಡೀಸೆಲ್ ಮಾದರಿಯ ಕಾರುಗಳು 27.4 ಕಿಲೋಮೀಟರ್ ಮೈಲೇಜ್ ನೀಡುತ್ತವೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಟೊಯೊಟಾ ಇಟಿಯಾಸ್ ಲಿವಾ

2011ರಲ್ಲಿ ಟೊಯೊಟಾ ಸಂಸ್ಥೆಯು ತಮ್ಮ ಇಟಿಯಾಸ್ ಲಿವಾ ಸೆಡಾನ್ ಕಾರಿನ ಜೊತೆಯೆ ಇಟಾಯಾಸ್ ಲಿವಾ ಹ್ಯಾಚ್‍‍ಬ್ಯಾಕ್ ಕಾರನ್ನು ಬಿಡುಗಡೆಗೊಳಿದಿದ್ದು, ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ತ್, ಹ್ಯುಂಡೈ ಗ್ಯಾಂಡ್ ಐ10 ಮತ್ತು ನಿಸ್ಸಾನ್ ಮೈಕ್ರಾ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಹೆಚ್ಚು ಮಾರಾಟಗೊಳ್ಳುತ್ತಿರುವ ಟೋಯೊಟಾ ಕಾರುಗಳಲ್ಲಿ ಈ ಕಾರು ಕೂಡಾ ಒಂದಾಗಿದ್ದು, ರೇ ಸೇಲ್ ವಾಲ್ಯೂ ಕೂಡಾ ಉತ್ತಮವಾಗಿದೆ.

ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..

ಟೊಯೊಟಾ ಇಟಿಯಾಸ್ ಲಿವಾ 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 79ಬಿಹೆಚ್‍‍ಪಿ ಮತ್ತು 104 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇನ್ನು 1.4 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 67ಬಿಹೆಚ್‍‍ಪಿ ಮತ್ತು 170ಎನ್ಎಮ್ ಟಾರ್ಕ್ ಅನ್ನ್ ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂದಿದೆ. ಮತ್ತು ಎರಡು ಎಂಜಿನ್‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Most Read Articles

Kannada
English summary
7 of the Best Resale Value Cars in India.
Story first published: Wednesday, June 20, 2018, 13:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X