ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

By Praveen Sannamani

ಕೇಂದ್ರ ಸಾರಿಗೆ ಇಲಾಖೆಯು ವಾಹನಗಳ ಸುರಕ್ಷತೆಗಾಗಿ ಹಲವು ಕಡ್ಡಾಯ ಸುರಕ್ಷಾ ಕ್ರಮಗಳನ್ನು ಅಳವಡಿಸುವ ಸಂಬಂಧ ಹೊಸ ಮೋಟಾರ್ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದು, ಇವುಗಳಲ್ಲಿ ಎಡಿಎಎಸ್(ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ) ತಂತ್ರಜ್ಞಾನ ಕೂಡಾ ಒಂದಾಗಿದೆ.

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ಎಡಿಎಎಸ್ ತಂತ್ರಜ್ಞಾನವು ಈಗಾಗಲೇ ಐಷಾರಾಮಿ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಒದಗಿಸಲಾಗುತ್ತಿದ್ದು, ಈ ಸೌಲಭ್ಯವನ್ನು ಎಂಟ್ರಿ ಲೆವಲ್ ಕಾರುಗಳಲ್ಲೂ ಸಹ ಕಡ್ಡಾಯ ಮಾಡುವ ಬಗ್ಗೆ ಕೇಂದ್ರ ಸಾರಿಗೆ ಇಲಾಖೆಯು ಚಿಂತನೆ ನಡೆಸಿದೆ. ಕೇವಲ ಪ್ರಯಾಣಿಕ ಕಾರುಗಳಲ್ಲಿ ಅಷ್ಟೇ ಅಲ್ಲದೇ ಹೆವಿ ಡ್ಯೂಟಿ ವಾಣಿಜ್ಯ ವಾಹನಗಳಿಗೂ ಎಡಿಎಎಸ್ ಕಡ್ಡಾಯವಾಗಿದೆ.

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ಈ ಕುರಿತು ಸಾರಿಗೆ ಇಲಾಖೆಯ ಸಭೆಯೊಂದಿಗೆ ಮಾತನಾಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು, ದೇಶದಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ತಗ್ಗಿಸುವ ಉದ್ದೇಶದಿಂದ ಮೋಟಾರ್ ಕಾಯ್ದೆಯಲ್ಲಿ ಸಾಕಷ್ಟು ಬದಲಾವಣೆ ಅವಶ್ಯಕತೆಯಿದ್ದು, ವಾಹನಗಳಲ್ಲಿ ಎಬಿಎಸ್, ಇಬಿಡಿ, ಎಡಿಎಎಸ್ ಸೇರಿದಂತೆ ಹಲವು ಸೌಲಭ್ಯಗಳು ಕಡ್ಡಾಯಗೊಳಿಸಬೇಕಿದೆ ಎಂದಿದ್ದಾರೆ.

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ಹೊಸ ಎಡಿಎಎಸ್ ತಂತ್ರಜ್ಞಾನವು ಈಗಾಗಲೇ ಮುಂದುವರಿದ ರಾಷ್ಟ್ರಗಳಲ್ಲಿ ಕಡ್ಡಾಯ ಮಾಡಲಾಗಿದ್ದು, ದೇಶದಲ್ಲಿ ಇದರ ಅವಶ್ಯಕತೆಯಿದ್ದರೂ ತತಕ್ಷಣವೇ ಜಾರಿ ಮಾಡಲು ಸಾಧ್ಯವಿಲ್ಲ ಎಂದಿರುವ ನಿತಿನ್ ಗಡ್ಕರಿಯವರು ಹೊಸ ಸೌಲಭ್ಯದಿಂದ ಮಧ್ಯಮ ವರ್ಗದವರು ಕಾರು ಖರೀದಿಯೇ ಕಷ್ಟವಾಗಬಹುದು ಎಂದಿದ್ದಾರೆ.

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ಕಾರಣ, ಎಡಿಎಎಸ್ ತಂತ್ರಜ್ಞಾನ ಬಳಕೆಯಿಂದ ಕಾರುಗಳು ಮತ್ತು ವಾಣಿಜ್ಯ ವಾಹನಗಳ ಬೆಲೆಗಳು ಏರಿಕೆಯಾಗಲಿದ್ದು, ಇದರಿಂದ ಹಂತ ಹಂತವಾಗಿ ಒಂದೊಂದೆ ಸುರಕ್ಷಾ ಸೌಲಭ್ಯಗಳನ್ನು ಕಡ್ಡಾಯಗೊಳಿಸುವ ಬಗ್ಗೆ ಸಾರಿಗೆ ಇಲಾಖೆಯು ಚಿಂತನೆ ನಡೆಸುತ್ತಿದೆ.

MOST READ: ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ಎಡಿಎಎಸ್ ಸೌಲಭ್ಯದಿಂದ ಏನು ಲಾಭ?

ಹೌದು, ಹೊಸ ಸುರಕ್ಷಾ ತಂತ್ರಜ್ಞಾನವಾಗಿರುವ ಎಡಿಎಎಸ್ ಸೌಲಭ್ಯವು ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಎಬಿಎಸ್, ಲೈನ್ ಅಸಿಸ್ಟಂಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಪ್ಯಾಕೇಜ್ ಹೊಂದಿರುತ್ತೆ. ಇದು ವಾಹನ ಚಾಲನೆ ವೇಳೆ ಆಗಬಹುದಾದ ದುರಂತಗಳನ್ನು ತಪ್ಪಿಸಲು ಸಾಕಷ್ಟು ಸಹಕಾರಿಯಾಗಲಿದೆ.

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ಎಡಿಎಎಸ್ ಸೌಲಭ್ಯ ಹೊಂದಿದ ಕಾರುಗಳಿಗೂ ಮತ್ತು ಎಡಿಎಎಸ್ ಇಲ್ಲದ ಕಾರುಗಳಿಗೆ ಹೋಲಿಕೆ ಮಾಡಿದ್ದಲ್ಲಿ ಎಡಿಎಎಸ್ ಪ್ರೇರಿತ ವಾಹನಗಳಿಂದ ಆಗುವ ಅಪಘಾತಗಳ ಸಂಖ್ಯೆ ತಿರಾ ಕಡಿಮೆ ಎಂದು ಹೇಳಬಹುದಾಗಿದ್ದು, ಅತಿ ಕಡಿಮೆ ಅವಧಿಯಲ್ಲಿ ವಾಹನದ ನಿಯಂತ್ರಣ ತೆಗೆದುಕೊಳ್ಳಬಹುದಾಗಿದೆ.

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ಜೊತೆಗೆ ಕೆಲವು ಸಂದರ್ಭಗಳಲ್ಲಿ ನೀವು ರಸ್ತೆಯಲ್ಲಿರುವ ಕಾರು ಲೈನ್ ಬಿಟ್ಟು ರಸ್ತೆ ನಿಯಮ ಮೀರಿ ಚಾಲನೆ ಮಾಡಿದಾಗ ಎಡಿಎಎಸ್ ತಂತ್ರಜ್ಞಾನವು ನಿಮ್ಮನ್ನ ಎಚ್ಚರಿಸುತ್ತೆ. ಈ ಮೂಲಕ ಎದುರಿಗೆ ಬರುವ ವಾಹನಗಳ ಮಾಹಿತಿಯನ್ನು ದೂರದಲ್ಲಿರುವಾಗಲೇ ನೀಡುವುದಲ್ಲದೇ ಆಗಬಹುದಾದ ದುರಂತಗಳನ್ನು ತಪ್ಪಿಸಲಿವೆ.

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ಮರ್ಸಿಡಿಸ್ ಬೆಂಝ್ ಮತ್ತು ವೊಲ್ವೊ ನಿರ್ಮಾಣದ ಪ್ರತಿ ಕಾರು ಮಾದರಿಗಳಲ್ಲೂ ಈಗಾಗಲೇ ಈ ಸೌಲಭ್ಯವನ್ನು ಸ್ಟ್ಯಾಂಡಂರ್ಡ್ ಮಾದರಿಯಲ್ಲಿ ಒದಗಿಸಲಾಗುತ್ತಿದ್ದು, ಮುಂಬರುವ 2019ರ ಅಂತ್ಯದೊಳಗೆ ಎಂಟ್ರಿ ಲೆವಲ್ ಕಾರುಗಳಲ್ಲೂ ಇದು ಕಡ್ಡಾಯವಾಗಿರಲಿದೆ.

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ಹೆಚ್ಚಿದ ಅಪಘಾತಗಳ ಸಂಖ್ಯೆ!

ವರದಿಗಳ ಪ್ರಕಾರ, ದೇಶಾದ್ಯಂತ ಪ್ರತಿವರ್ಷ 1.50 ಲಕ್ಷಕ್ಕಿಂತೂ ಹೆಚ್ಚು ಜನ ಭೀಕರ ರಸ್ತೆ ಅಪಘಾತಗಳಿಂದಾಗಿ ಜೀವ ಕಳೆದುಕೊಳ್ಳುತ್ತಿದ್ದು, ಅತಿ ಹೆಚ್ಚು ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಭಾರತವು ವಿಶ್ವದಲ್ಲೇ ಮೊದಲನೆಯ ಸ್ಥಾನದಲ್ಲಿದೆ.

MOST READ: ವಾಹನಗಳಲ್ಲಿ ಯಾಕೆ ಕಡ್ಡಾಯವಾಗಿ ಎಬಿಎಸ್ ಇರಬೇಕು? ಈ ವಿಡಿಯೋ ನೋಡಿ

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ಹೀಗಾಗಿ ವಾಹನಗಳಲ್ಲಿ ಕೆಲವು ಸುರಕ್ಷಾ ಸೌಲಭ್ಯಗಳನ್ನು ಕಡ್ಡಾಯವಾಗುವುದರಿಂದ ಹೆಚ್ಚುತ್ತಿರುವ ಅಪಘಾತಗಳನ್ನು ತಗ್ಗಿಸಬಹುದಾಗಿದ್ದು, ಇದರಿಂದ ಕಾರುಗಳ ಬೆಲೆ ಹೆಚ್ಚಳವಾಗುವುದನ್ನು ನಾವು ಸಹಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ಆದ್ರೆ ಬೆಲೆ ಏರಿಕೆಗಿಂತ ಅಮಾಯಕರ ಜೀವ ಮುಖ್ಯ ಅಲ್ಲವೇ?

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ಇತ್ತೀಚೆಗೆ ಹೊಸ ವಾಹನ ಖರೀದಿ ವೇಳೆ ಸಾಮಾನ್ಯವಾಗಿ ಎಲ್ಲರಿಗೂ ಎದುರಾಗುವ ಪ್ರಶ್ನೆ ಅಂದ್ರೆ ಅದು ಎಬಿಎಸ್ ಇರುವ ವಾಹನ ಖರೀದಿ ಮಾಡೋದಾ ಇಲ್ಲಾ ಕಡಿಮೆ ಬೆಲೆಗೆ ಲಭ್ಯವಿರುವ ಎಬಿಎಸ್ ಇಲ್ಲದ ವಾಹನ ಖರೀದಿ ಮಾಡೋದಾ ಎನ್ನುವ ಗೊಂದಲ ಇದ್ದೆ ಇರುತ್ತೆ. ಯಾಕೆಂದ್ರೆ ಎಬಿಎಸ್ ಮಹತ್ವದ ಗೊತ್ತಿಲ್ಲದ ಗ್ರಾಹಕರು ಸಾಮಾನ್ಯವಾಗಿ ಕಡಿಮೆ ಬೆಲೆಗೆ ಲಭ್ಯವಿರುವ ಎಬಿಎಸ್ ಇಲ್ಲದ ವಾಹನಗಳನ್ನೇ ಹೆಚ್ಚು ಖರೀದಿ ಮಾಡುತ್ತಿದ್ದು, ಹೀಗಾಗಿ ವಾಹನ ಸವಾರರ ಸುರಕ್ಷತೆಗೆ ಸಹಕಾರಿಯಾಗಿರುವ ಎಬಿಎಸ್ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು ಎಂಬುವುದು ನಮ್ಮ ಆಶಯ.

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ಎಬಿಎಸ್(ಆ್ಯಂಟಿ ಬ್ರೇಕ್ ಸಿಸ್ಟಂ) ತಂತ್ರಜ್ಞಾನವು ಇತ್ತೀಚೆಗೆ ಪರಿಚಯಿಸಲಾದ ಹೊಸ ಸುರಕ್ಷಾ ಸೌಲಭ್ಯ ಅಂದುಕೊಂಡಿದ್ದರೇ ತಪ್ಪು. ಎಬಿಎಸ್ ತಂತ್ರಜ್ಞಾನವು ಮಾರುಕಟ್ಟೆಗೆ ಬಂದು ಅದಾಗಲೇ 40 ವರ್ಷಗಳೇ ಗತಿಸಿದ್ದು, ವಾಹನ ಸವಾರರ ಜೀವರಕ್ಷಕವಾಗಿರುವ ಈ ಸೌಲಭ್ಯವನ್ನು ವಾಹನಗಳಲ್ಲಿ ಕಡ್ಡಾಯಗೊಳಿಸಲು ಇದುವರೆಗೂ ಸಾಧ್ಯವಾಗಿಲ್ಲ ಅನ್ನುವುದೇ ಬೇಸರದ ಸಂಗತಿ. ಕೇವಲ ವಾಹನ ಸವಾರರಿಗೆ ಅಷ್ಟೇ ಅಲ್ಲದೇ ಅಮಾಯಕರ ಪ್ರಾಣ ಉಳಿಸಲು ನೆರವಾಗಲಿರುವ ಎಬಿಎಸ್ ಬಗ್ಗೆ ನಿಮಗೆ ಗೊತ್ತಿರದ ಹಲವು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ...

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

1950ರಲ್ಲೇ ಈ ಬಗ್ಗೆ ಸಂಶೋಧನೆ..!

ಹೌದು, ಎಬಿಎಸ್ ತಂತ್ರಜ್ಞಾನವು 1950ರಲ್ಲೇ ಮನ್ನಲೆಗೆ ಬಂದಿದ್ದು, ಮೊದಮೊದಲು ಈ ಸುರಕ್ಷಾ ಸೌಲಭ್ಯವನ್ನು ರೈಲು ಮತ್ತು ವಿಮಾನಗಳಲ್ಲಿ ಬಳಕೆ ಮಾಡಲಾಗುತ್ತಿತ್ತು. ರೈಲುಗಳು ವೇಗದ ಸಂದರ್ಭದಲ್ಲೂ ಕಡಿಮೆ ಅವಧಿಯಲ್ಲಿ ನಿಲುಗಡೆಗೆ ಮತ್ತು ವಿಮಾನಗಳು ರನ್ ವೇ ವೇಳೆ ನಿಯಂತ್ರಣ ತೆಗೆದುಕೊಳ್ಳಲು ಇದರ ಆರಂಭವಾಯ್ತು.

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ತದನಂತರ ಈ ಬಗ್ಗೆ ಆಸಕ್ತಿ ತೊರಿದ ಜನಪ್ರಿಯ ವಾಹನ ಉತ್ಪಾದನಾ ಸಂಸ್ಥೆಗಳು ಹೊಸ ಸುರಕ್ಷಾ ಸೌಲಭ್ಯವನ್ನು ಒದಗಿಸಲು ಮುಂದಾಗಿದ್ದಲ್ಲದೇ ಗ್ರಾಹಕರ ಬಳಿ ಈ ಬಗ್ಗೆ ಅರಿವು ಮೂಡಿಸ ತೊಡಗಿದವು. ಇದರ ಪರಿಣಾಮವೇ 1978ರಲ್ಲಿ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಮೊದಲ ಬಾರಿಗೆ ತನ್ನ ಡಬ್ಲ್ಯು116 ಕಾರುಗಳಲ್ಲಿ ಈ ಸೌಲಭ್ಯವನ್ನು ಅಧಿಕೃತವಾಗಿ ಬಳಕೆ ಮಾಡಿತು.

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ಇದಾದ ಬಳಿಕ ಎಬಿಎಸ್ ತಂತ್ರಜ್ಞಾನದಲ್ಲಿ ಮತ್ತಷ್ಟು ಬದಲಾವಣೆ ಹೊರತರಲು ಮುಂದಾದ ಬಾಷ್ ಮತ್ತು ಡೈಮ್ಲರ್ ಸಂಸ್ಥೆಗಳು ವಿವಿಧ ಮಾದರಿಯ ಎಬಿಎಸ್ ಸೌಲಭ್ಯಗಳನ್ನು ಪರಿಚಯಿಸಿದ್ದಲ್ಲದೇ ಪ್ರಯಾಣಿಕ ಕಾರುಗಳು ಮತ್ತು ಸೂಪರ್ ಬೈಕ್ ಮಾದರಿಗಳಲ್ಲೂ ಇದರ ಬಳಕೆಯನ್ನು ಹೆಚ್ಚಿಸಿದವು.

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ಹಾಗಾದ್ರೆ ಎಬಿಎಸ್‌ನಿಂದ ಏನು ಲಾಭ?

ಇದು ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡಬಹುದಾದ ಸಹಜ ಪ್ರಶ್ನೆ. ಒಂದು ವೇಳೆ ನಿಮ್ಮ ಬೈಕ್‌ ಮತ್ತು ಕಾರುಗಳಲ್ಲಿ ಎಬಿಎಸ್ ತಂತ್ರಜ್ಞಾನ ಅಳವಡಿಕೆ ಇದ್ದಲ್ಲಿ ಅಪಘಾತಗಳ ತೀವ್ರತೆಯನ್ನು ತಡೆಯಬಹುದಾಗಿದ್ದು, ಜೊತೆಗೆ ಬ್ರೇಕಿಂಗ್ ವ್ಯವಸ್ಥೆ ಮೇಲೆ ಸಂಪೂರ್ಣ ಹಿಡಿದ ಸಾಧಿಸಬಹುದಾಗಿದೆ.

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ಮತ್ತೊಂದು ಮುಖ್ಯ ವಿಚಾರ ಏನೆಂದರೆ ಎಬಿಎಸ್ ತಂತ್ರಜ್ಞಾನವು ಸವಾರಿಗೆ ಸಂಪೂರ್ಣ ಸುರಕ್ಷತೆಯನ್ನು ನೀಡಲಿದ್ದು, ಹೊಸ ನಿಮಯದಿಂದ ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ಕೂಡಾ ತಡೆಯಬಹುದಾಗಿದೆ.

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ದೇಶದ ವಾಹನ ಉತ್ಪಾದನಾ ಸಂಸ್ಥೆಗಳು ಈ ನಿಟ್ಟಿನಲ್ಲಿ ಗ್ರಾಹಕರನ್ನು ಸೆಳೆಯುವ ಎಬಿಎಸ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದ್ದು, ಇನ್ನು ಕೆಲವು ವಾಹನ ಉತ್ಪಾದನಾ ಸಂಸ್ಥೆಗಳು ಎಬಿಎಸ್‌ ಅಳವಡಿಕೆಯಿಂದ ಬೆಲೆ ಹೆಚ್ಚಳವಾದ್ರೆ ಬೇಡಿಕೆ ತಗ್ಗಲಿದೆ ಎನ್ನುವ ಭಯದಿಂದ ಆಯ್ಕೆ ರೂಪದಲ್ಲಿ ನೀಡುತ್ತಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ.

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ಆದ್ರೆ ಎಬಿಎಸ್ ಇಲ್ಲದ ವಾಹನಗಳಿಗೂ ಮತ್ತು ಎಬಿಎಸ್ ಸಹಿತ ವಾಹನಗಳಿಗೂ ಹೋಲಿಕೆ ಮಾಡಿದಾಗ ಎಬಿಎಸ್ ಸಹಿತ ವಾಹನಗಳು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷೆ ನೀಡುವುದರಲ್ಲಿ ಶಕ್ತವಾಗಿದ್ದು, ಬೆಲೆ ಹೆಚ್ಚಳವಾಗುತ್ತೆ ಎನ್ನುವ ಒಂದೇ ಒಂದು ಉದ್ದೇಶದಿಂದ ಎಬಿಸ್ ರಹಿತ ವಾಹನಗಳನ್ನು ಖರೀದಿಸುವುದು ಅಪಾಯದ ಮೊದಲ ಹೆಜ್ಜೆ ಅನ್ನುವುದನ್ನ ಗ್ರಾಹಕರು ಅರಿತುಕೊಳ್ಳಬೇಕು.

ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಲಿದೆ ಎಡಿಎಎಸ್ ತಂತ್ರಜ್ಞಾನ

ಕೇಂದ್ರದಿಂದ ಸದ್ಯದಲ್ಲೇ ಮಹತ್ವದ ನಿರ್ಧಾರ..!

ದೇಶದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಗೆ ಪ್ರಮುಖ ಕಾರಣ ಅಂದ್ರೆ ವಾಹನಗಳಲ್ಲಿ ಜೋಡಿಸಲಾಗುವ ತಾಂತ್ರಿಕ ಸೌಲಭ್ಯಗಳ ಕೊರತೆ ಅಂದ್ರೆ ತಪ್ಪಾಗುವುದಿಲ್ಲ. ಯಾಕೆಂದ್ರೆ ಅಗ್ಗದ ಬೆಲೆಯ ವಾಹನಗಳಿಂದಾಗಿ ಅಮಾಯಕರ ಜೀವಗಳು ಬಲಿಯಾಗುತ್ತಿದ್ದು, ಕೇಂದ್ರ ಸರ್ಕಾರವು ಜಾರಿ ಮಾಡಲು ಹೊರಟಿರುವ ಹೊಸ ಸುರಕ್ಷಾ ಮಾರ್ಗಸೂಚಿಯು ಪ್ರಸ್ತುತ ದಿನಗಳಲ್ಲಿ ಮಹತ್ವ ಎನ್ನಿಸಲಿದೆ. ಕೇಂದ್ರ ಸರ್ಕಾರವು 2019ರ ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಪ್ರತಿಯೊಂದು ವಾಹನಕ್ಕೂ ಎಬಿಎಸ್ ಕಡ್ಡಾಯಗೊಳಿಸುತ್ತಿದ್ದು, ಹೊಸ ಸುರಕ್ಷಾ ಮಾರ್ಗಸೂಚಿಯಿಂದ ಅಪಘಾತಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಬಹುದು ಎಂದು ಅಂದಾಜಿಸಲಾಗುತ್ತಿದೆ.

Most Read Articles

Kannada
Read more on auto news
English summary
ADAS (Advanced Driver Assistance System) To Become Mandatory In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X