ಟಾಟಾ ಸಂಸ್ಥೆಯನ್ನು ಹಾಡಿ ಹೊಗಳಿದ ಆನಂದ್ ಮಹೀಂದ್ರಾ- ಅಸಲಿ ಕಾರಣ ಏನು ಗೊತ್ತಾ?

ಭಾರತದಲ್ಲಿ ಈ ಹಿಂದೆ ಹೊಸ ವಾಹನಗಳ ಖರೀದಿ ವೇಳೆ ಬಹುತೇಕ ಗ್ರಾಹಕರು ಸುರಕ್ಷತೆಗಿಂತ ಹೆಚ್ಚಾಗಿ ಮೈಲೇಜ್ ಮತ್ತು ಕಡಿಮೆ ಬೆಲೆಗೆ ಲಭ್ಯವಿರುವ ವಾಹನಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದರು. ಆದ್ರೆ ಕಾಲ ಬದಲಾಗಿದೆ ಮೈಲೇಜ್ ಮತ್ತು ಕಡಿಮೆ ಬೆಲೆ ಹೊರತು ಪಡಿಸಿ ಹೊಸ ವಾಹನಗಳಲ್ಲಿ ಲಭ್ಯವಿರುವ ಸುರಕ್ಷಾ ಸೌಲಭ್ಯಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದರ ಫಲವಾಗಿಯೇ ಇಂದು ಆಟೋ ಉದ್ಯಮದಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣವಾಗುತ್ತಿದೆ.

ಟಾಟಾ ಮೋಟಾರ್ಸ್ ಅನ್ನು ಅಭಿನಂದಿಸಿದ ಆನಂದ್ ಮಹೀಂದ್ರಾ. ಕಾರಣ ಏನು ಗೊತ್ತಾ.?

ಭಾರತದಲ್ಲಿ ಸದ್ಯ ಮಾರಾಟವಾಗುತ್ತಿರುವ 20ಕ್ಕೂ ಹೆಚ್ಚು ಕಾರುಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿಲ್ಲದಿರುವುದು ವಾಹನ ಸವಾರರಿಗೆ ಮಾರಕವಾಗಿ ಪರಿಣಮಿಸಿದ್ದು, ಅಪಘಾತದ ವೇಳೆ ಸುರಕ್ಷಾ ಸಾಧನಗಳು ಇಲ್ಲದಿರುವುದರಿಂದ ಸಾವುಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನುವುದು ಕಟು ಸತ್ಯ.

ಟಾಟಾ ಮೋಟಾರ್ಸ್ ಅನ್ನು ಅಭಿನಂದಿಸಿದ ಆನಂದ್ ಮಹೀಂದ್ರಾ. ಕಾರಣ ಏನು ಗೊತ್ತಾ.?

ಹೀಗಿರುವಾಗ ಮಾರುಕಟ್ಟೆಯಲ್ಲಿ ಬೇರೆ ದೇಶದ ವಾಹನ ತಯಾರಕ ಸಂಸ್ಥೆಗಳ ವಾಹನಗಳು ಕ್ರಾಶ್ ಟೆಸ್ಟಿಂಗ್ ವೇಳೆ ಅತ್ಯುತ್ತಮವಾದ ಅಂಕಗಳನ್ನು ಪಡೆದುಕೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್‍ನ ನೆಕ್ಸಾನ್ ಎಸ್‍ಯುವಿ ಕಾರು 5ಕ್ಕೆ 5 ಅಂಕಗಳನ್ನು ಪಡೆದುಕೊಂಡು, ಭಾರತದಲ್ಲಿಯೇ ತಯಾರು ಮಾಡಲಾದ ಕಾರಿನ ಸಾಮರ್ಥ್ಯವನ್ನು ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ತೋರಿಸಿದೆ.

ಟಾಟಾ ಮೋಟಾರ್ಸ್ ಅನ್ನು ಅಭಿನಂದಿಸಿದ ಆನಂದ್ ಮಹೀಂದ್ರಾ. ಕಾರಣ ಏನು ಗೊತ್ತಾ.?

ಅಷ್ಟೆ ಅಲ್ಲದೇ, ದೇಶಿಯ ಸಂಸ್ಥೆಗಳ ವಾಹನ ಉತ್ಪಾದಕರ ಕಾರುಗಳಲ್ಲಿ ನೆಕ್ಸಾನ್ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಸಂಪೂರ್ಣ ಅಂಕವನ್ನು ಪಡೆದ ಕಾರೆಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಈ ಕುರಿತಾಗಿ ಮಹೀಂದ್ರಾ & ಮಹಿಂದ್ರಾ ಸಂಸ್ಥೆಯ ಅಧ್ಯಕ್ಷರಾದ ಆನಂದ್ ಮಹಿಂದ್ರಾರವರು ಟಾಟಾ ಮೋಟಾರ್ಸ್ ಅನ್ನು ಅಭಿನಂದಿಸಿದ್ದಾರೆ.

ಆನಂದ್ ಮಹೀಂದ್ರಾರವರು ಟಾಟಾ ಮೋಟಾರ್ಸ್ ಅನ್ನು ಅಭಿನಂದಿಸುತ್ತಾ ಮಾಡಿದ ಟ್ವೀಟ್‍ನಲ್ಲಿ 'ಟಾಟಾ ಮೋಟಾರ್ಸ್ ಸಂಸ್ಥೆಯು ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ನೆಕ್ಸಾನ್ ಕಾರು ಗರಿಷ್ಠ ಮಟ್ಟದ ಐದು ಅಂಕಗಳನ್ನು ಪಡೆದ ಕಾರಣಕ್ಕೆ ಅಭಿನಂದಿಸಿದ್ದು, ಮುಂದಿನ ದಿನಗಳಲ್ಲಿ ಮಹೀಂದ್ರಾ ಸಂಸ್ಥೆಯು ಕೂಡಾ ಪ್ರಯಾಣಿಕರಿಗೆ ಸುರಕ್ಷೆತಯನ್ನು ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಟಾಟಾ ಮೋಟಾರ್ಸ್ ಅನ್ನು ಅಭಿನಂದಿಸಿದ ಆನಂದ್ ಮಹೀಂದ್ರಾ. ಕಾರಣ ಏನು ಗೊತ್ತಾ.?

ಎಸ್‍ಯುವಿ ಕಾರುಗಳ ಪಟ್ಟಿಯಲ್ಲಿ ಟಾಟಾ ನೆಕ್ಸಾನ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುತ್ತಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮತ್ತು ಫೋರ್ಡ್ ಇಕೋಸ್ಪೋರ್ಟ್ ಕಾರುಗಳು ಪ್ರಯಾಣಿಕರ ಸುರಕ್ಷತೆಯ ವಿಚಾರದಲ್ಲಿ ಕಡಿಮೆ ಅಂಕಗಳನ್ನು ಪಡೆದುಕೊಂಡಿವೆ.

ಟಾಟಾ ಮೋಟಾರ್ಸ್ ಅನ್ನು ಅಭಿನಂದಿಸಿದ ಆನಂದ್ ಮಹೀಂದ್ರಾ. ಕಾರಣ ಏನು ಗೊತ್ತಾ.?

ಇನ್ನು ಆನಂದ್ ಮಹಿಂದ್ರಾ ಅವರು ಮಾಡಿದ ಟ್ವೀಟ್ ಅನ್ನು ನೋಡಿದರೆ, ಮಹೀಂದ್ರಾ ಸಂಸ್ಥೆಯು ಇನ್ಮುಂದೆ ತಾವು ಬಿಡುಗಡೆಗೊಳಿಸಲಿರುವ ಎಸ್‍201 ಕೋಡ್ ನೇಮ್ ಹೊಂದಿರುವ ಕಾರಿಗೆ ಹೆಚ್ಚಿನ ಸುರಕ್ಷಾ ವೈಶಿಷ್ಟ್ಯತೆಗಳನ್ನು ನೀಡುವುದರ ಬಗ್ಗೆ ಸುಳಿವು ನೀಡಿದ್ದಾರೆ.

MOST READ: ವಾಹನ ಮಾಲೀಕರೇ ಇತ್ತ ಗಮನಿಸಿ - ನಂಬರ್ ಪ್ಲೇಟ್‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ?

ಟಾಟಾ ಮೋಟಾರ್ಸ್ ಅನ್ನು ಅಭಿನಂದಿಸಿದ ಆನಂದ್ ಮಹೀಂದ್ರಾ. ಕಾರಣ ಏನು ಗೊತ್ತಾ.?

ಅಷ್ಟೆ ಅಲ್ಲ, ಮಹೀಂದ್ರಾ ಸಂಸ್ಥೆಯು ಇತ್ತೀಚೆಗೆ ಬಿಡುಗಡೆಗೊಳಿಸಿದ ಮರಾಜೊ ಎಂಪಿವಿ ಕಾರು ಕೂಡಾ ಕ್ರ್ಯಾಶ್ ಟೆಸ್ಟಿಂಗ್ ಅನ್ನು ನಡೆಸಿದ್ದು, ಒಟ್ಟು ನಾಲ್ಕು ಅಂಕಗಳನ್ನು ಪಡೆದು ಮರುಕಟ್ಟೆಯಲ್ಲಿ ಸುರಕ್ಷತೆಯ ಎಂಪಿವಿ ಕಾರು ಎಂಬ ಹೆಗ್ಗಳಿಕೆಯನ್ನು ಕೂಡಾ ಪಡೆದುಕೊಂಡಿದೆ.

ಟಾಟಾ ಮೋಟಾರ್ಸ್ ಅನ್ನು ಅಭಿನಂದಿಸಿದ ಆನಂದ್ ಮಹೀಂದ್ರಾ. ಕಾರಣ ಏನು ಗೊತ್ತಾ.?

ಈ ಮೂಲಕ ದೇಶಿಯ ವಾಹನ ತಯಾರಕ ಸಂಸ್ಥೆಗಳು ತಮ್ಮ ಗ್ರಾಹಕರ ಸುರಕ್ಷೆಯ ಸಲುವಾಗಿ ತಮ್ಮ ಉತ್ಪನ್ನಗಳಲ್ಲಿ ಹೆಚ್ಚಿನ ಸುರಕ್ಷತಾ ಉಪಕರಣಗಳನ್ನು ಅಳವಡಿಸುತ್ತಿರುವುದು ಸಂತೋಷದ ವಿಚಾರವಾಗಿದ್ದು, ಇನ್ನು ಮಾರುತಿ ಸುಜುಕಿ ಸಂಸ್ಥೆಯು ಕೂಡಾ ತಮ್ಮ ಕಾರುಗಳಲ್ಲಿ ಹೆಚ್ಚಿನ ಸುರಕ್ಷಾ ಉಪಕರಣಗಳನ್ನು ನೀಡಬೇಕಾಗಿ ಕೆಲವರು ಆಗ್ರಹಿಸಿದ್ದಾರೆ.

ಟಾಟಾ ಮೋಟಾರ್ಸ್ ಅನ್ನು ಅಭಿನಂದಿಸಿದ ಆನಂದ್ ಮಹೀಂದ್ರಾ. ಕಾರಣ ಏನು ಗೊತ್ತಾ.?

2017ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಟಾಟಾ ಜನಪ್ರಿಯ ನೆಕ್ಸಾನ್ ಎಸ್‌ಯುವಿ ಕಾರುಗಳು ಸದ್ಯ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸುತ್ತಿದ್ದು, ಇದರೊಂದಿಗೆ ಸುರಕ್ಷತೆಯಲ್ಲೂ ಹೊಸ ಭರವಸೆ ಮೂಡಿಸುವ ಮೂಲಕ ಪ್ರತಿಷ್ಠಿತ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ ತನ್ನದಾಗಿಸಿಕೊಂಡಿದೆ.

ಟಾಟಾ ಮೋಟಾರ್ಸ್ ಅನ್ನು ಅಭಿನಂದಿಸಿದ ಆನಂದ್ ಮಹೀಂದ್ರಾ. ಕಾರಣ ಏನು ಗೊತ್ತಾ.?

ಹೊಸ ಕಾರುಗಳ ಸುರಕ್ಷಾ ವಿಚಾರಕ್ಕೆ ಸಂಬಂಧಿಸಿದಂತೆ ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಮ್ (ಎನ್‌ಸಿಎಪಿ) ಏಜೆನ್ಸಿಯು ನಡೆಸುವ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಖರೀದಿಗೆ ಅತ್ಯುತ್ತಮ ಎನಿಸಿರುವ ಟಾಟಾ ನೆಕ್ಸಾನ್ ಎಸ್‌ಯುವಿ ಕಾರುಗಳು ಪೂರ್ಣ ಪ್ರಮಾಣದ 5 ಸ್ಟಾರ್ ರೇಟಿಂಗ್ ತನ್ನದಾಗಿಸಿಕೊಂಡಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಸದ್ಯ ಹೊಸ ಮೈಲಿಗಲ್ಲಿಗೆ ಕಾರಣವಾಗಿದೆ.

ಟಾಟಾ ಮೋಟಾರ್ಸ್ ಅನ್ನು ಅಭಿನಂದಿಸಿದ ಆನಂದ್ ಮಹೀಂದ್ರಾ. ಕಾರಣ ಏನು ಗೊತ್ತಾ.?

ಇದು ಭಾರತೀಯ ಆಟೋ ಉತ್ಪಾದನಾ ಸಂಸ್ಥೆಯೊಂದು ನಿರ್ಮಾಣ ಮಾಡಿದ ಕಾರೊಂದು 5 ಸ್ಟಾರ್ ರೇಟಿಂಗ್ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಐಷಾರಾಮಿ ಕಾರುಗಳನ್ನು ಹೊರತುಪಡಿಸಿ ಮಧ್ಯಮ ಗಾತ್ರದ ಕಾರುಗಳಲ್ಲಿ ಪೂರ್ಣ ಪ್ರಮಾಣದ ಸುರಕ್ಷಾ ರೇಟಿಂಗ್ ಬಂದಿದ್ದು ನೆಕ್ಸಾನ್ ಕಾರಿಗೆ ಮಾತ್ರ ಎನ್ನುವುದು ಬಹುಮುಖ್ಯ ವಿಚಾರ.

MOST READ: ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ಏನಿದು ಕ್ರ್ಯಾಶ್ ಟೆಸ್ಟಿಂಗ್?

ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‌ಸಿಎಪಿ ಮತ್ತು ಏಷಿಯಾ ಎನ್‌ಸಿಎಪಿ ಹಾಗೂ ಲ್ಯಾಟಿನ್ ಎನ್‌ಸಿಎಪಿ ಸಂಸ್ಥೆಗಳು ಹೊಸ ಕಾರುಗಳಲ್ಲಿನ ಸುರಕ್ಷಾ ವೈಶಿಷ್ಟ್ಯತೆಗಳಿಗೆ ರೇಟಿಂಗ್ ನೀಡುತ್ತವೆ.

ಟಾಟಾ ಮೋಟಾರ್ಸ್ ಅನ್ನು ಅಭಿನಂದಿಸಿದ ಆನಂದ್ ಮಹೀಂದ್ರಾ. ಕಾರಣ ಏನು ಗೊತ್ತಾ.?

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 4, 3, 2, 1, 0 ಸ್ಟಾರ್ ರೇಟಿಂಗ್ ಬಂದಲ್ಲಿ ಅನುಕ್ರಮವಾಗಿ ಉತ್ತಮ, ಖರೀದಿಗೆ ಯೋಗ್ಯ, ಸಾಧರಣ, ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ.

Most Read Articles

Kannada
English summary
Anand Mahindra Congrates To Tata Motors. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X