2023ರ ವೇಳೆಗೆ ರಸ್ತೆಗಿಳಿಯಲಿವೆ ಆ್ಯಪಲ್ ಸೆಲ್ಪ್ ಡ್ರೈವಿಂಗ್ ಕಾರುಗಳು

By Praveen Sannamani

ವಿಶ್ವ ಆಟೋ ಮೊಬೈಲ್ ಉದ್ಯಮದಲ್ಲಿ ಸೆಲ್ಪ್ ಡ್ರೈವಿಂಗ್ ಕಾರುಗಳ ಉತ್ಪಾದನೆ ದಿನದಿಂದ ದಿನಕ್ಕೆ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಈ ಹಿನ್ನೆಲೆ ಜನಪ್ರಿಯ ಸಾಫ್ಟ್‌ವೇರ್ ದಿಗ್ಗಜ ಸಂಸ್ಥೆಯಾದ ಆ್ಯಪಲ್ ಕೂಡಾ ವಿನೂತನ ರೀತಿಯ ಸೆಲ್ಪ್ ಡ್ರೈವಿಂಗ್ ಕಾರು ಉತ್ಪಾದನೆಗೆ ಮುಂದಾಗಿದೆ.

2023ರ ವೇಳೆಗೆ ರಸ್ತೆಗಿಳಿಯಲಿವೆ ಆ್ಯಪಲ್ ಸೆಲ್ಪ್ ಡ್ರೈವಿಂಗ್ ಕಾರುಗಳು

ತಂತ್ರಜ್ಞಾನ ಬೆಳವಣಿಗೆ ಹಿನ್ನೆಲೆ ಜೀವನ ವಿಧಾನಗಳು ಕೂಡಾ ಬದಲಾಗುತ್ತಿದ್ದು, ಸೆಲ್ಪ್ ಡ್ರೈವಿಂಗ್ ಕಾರುಗಳ ಬಗೆಗೆ ವಿಶ್ವಾದ್ಯಂತ ಹೊಸ ಹೊಸ ಚರ್ಚೆಗಳು ಶುರುವಾಗವೆ. ಇದೇ ಕಾರಣಕ್ಕೆ ಜನಪ್ರಿಯ ಆಟೋ ಉತ್ಪಾದನಾ ಸಂಸ್ಥೆಯಾದ ಫೋಕ್ಸ್‌ವ್ಯಾಗನ್ ಜೊತೆಗೂಡಿರುವ ಆ್ಯಪಲ್ ಸಂಸ್ಥೆಯು ಸದ್ಯದಲ್ಲೇ ಹೊಸ ಮಾದರಿಯ ಕಾರುಗಳನ್ನು ಉತ್ಪಾದನೆ ಮಾಡುವ ಸುಳಿವು ನೀಡಿದೆ.

2023ರ ವೇಳೆಗೆ ರಸ್ತೆಗಿಳಿಯಲಿವೆ ಆ್ಯಪಲ್ ಸೆಲ್ಪ್ ಡ್ರೈವಿಂಗ್ ಕಾರುಗಳು

2023ರ ವೇಳೆಗೆ ಸೆಲ್ಪ್ ಡ್ರೈವಿಂಗ್ ಕಾರುಗಳನ್ನು ರೋಡಿಗಿಳಿಸಲು ಯೋಜನೆ ರೂಪಿಸಿರುವ ಆ್ಯಪಲ್ ಸಂಸ್ಥೆಯು, ಉತ್ಪಾದನೆಗೊಳ್ಳಲಿರುವ ವಿನೂತನ ಕಾರಿನ ವೈಶಿಷ್ಟ್ಯತೆಗಳನ್ನು ಸಹ ಬಹಿರಂಗಗೊಳಿಸಿರುವುದು ಹಲವು ಕಾರಣಗಳಿಗೆ ವಿಶೇಷ ಎನ್ನಿಸಲಿದೆ.

2023ರ ವೇಳೆಗೆ ರಸ್ತೆಗಿಳಿಯಲಿವೆ ಆ್ಯಪಲ್ ಸೆಲ್ಪ್ ಡ್ರೈವಿಂಗ್ ಕಾರುಗಳು

ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರ್ ಮಾದರಿಯಲ್ಲಿಯೇ ಆ್ಯಪಲ್ ಮತ್ತು ಫೋಕ್ಸ್‌ವ್ಯಾಗನ್ ಕಾರು ಸಹ ಕಾರ್ಯ ನಿರ್ವಹಿಸಲಿದ್ದು, ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಹೊಸ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಿದೆ.

2023ರ ವೇಳೆಗೆ ರಸ್ತೆಗಿಳಿಯಲಿವೆ ಆ್ಯಪಲ್ ಸೆಲ್ಪ್ ಡ್ರೈವಿಂಗ್ ಕಾರುಗಳು

ಫೋರ್ಕ್ಸ್‌ವ್ಯಾಗನ್ ಸಂಸ್ಥೆಯು ನಿರ್ಮಿಸಿರುವ ಸೆಲ್ಪ್ ಡ್ರೈವಿಂಗ್ ಕಾರುಗಳಲ್ಲಿ ಆ್ಯಪಲ್ ಸಂಸ್ಥೆಯು ತನ್ನ ಸುಧಾರಿತ ಸೆಲ್ಪ್ ಡ್ರೈವ್ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಿದ್ದು, ಇದು ಇತರೆ ಸಂಸ್ಥೆಗಳು ಅಭಿವೃದ್ದಿ ಮಾಡುತ್ತಿರುವ ಹೊಸ ನಮೂನೆಯ ಸೆಲ್ಪ್ ಡ್ರೈವ್ ಕಾರುಗಳಿಂತ ವಿಭಿನ್ನವಾಗಲಿವೆ.

2023ರ ವೇಳೆಗೆ ರಸ್ತೆಗಿಳಿಯಲಿವೆ ಆ್ಯಪಲ್ ಸೆಲ್ಪ್ ಡ್ರೈವಿಂಗ್ ಕಾರುಗಳು

ಇದಲ್ಲದೇ ಸೆಲ್ಪ್ ಡ್ರೈವ್ ತಂತ್ರಜ್ಞಾನದ ಪರೀಕ್ಷೆಗಾಗಿ 2016ರಲ್ಲಿ ಎರಡು ಲೆಕ್ಸಸ್ ಎಸ್‌ಯುವಿ ಕಾರುಗಳನ್ನು ಖರೀದಿ ಮಾಡಿದ್ದ ಆ್ಯಪಲ್ ಸಂಸ್ಥೆಯು ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿ ಯಶಸ್ವಿಯಾಗಿತ್ತು. ತದನಂತರ ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಝ್, ನಿಸ್ಸಾನ್ ಮತ್ತು ಮೆಕ್ಲರನ್ ಸಂಸ್ಥೆಗಳ ಜೊತೆ ಹೊಸ ಕಾರುಗಳ ಅಭಿವೃದ್ಧಿಗೆ ಮುಂದಾಗಿತ್ತು.

2023ರ ವೇಳೆಗೆ ರಸ್ತೆಗಿಳಿಯಲಿವೆ ಆ್ಯಪಲ್ ಸೆಲ್ಪ್ ಡ್ರೈವಿಂಗ್ ಕಾರುಗಳು

ಆದ್ರೆ ಕಾರಣಾಂತರಗಳಿಂದ ಹೊಸ ಯೋಜನೆ ಬಗ್ಗೆ ತಟಸ್ಥವಾಗಿದ್ದ ಆ್ಯಪಲ್ ಸಂಸ್ಥೆಯು ಇದೀಗ ಫೋಕ್ಸ್‌ವ್ಯಾಗನ್ ಸಂಸ್ಥೆಯೊಂದಿಗೆ ತನ್ನ ಕನಸನ್ನು ನನಸು ಮಾಡಲು ಮುಂದಾಗಿದ್ದು, ಯುರೋಪ್ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗಿರುವ ಟಿ6 ವ್ಯಾನ್ ಮಾದರಿಯನ್ನೇ ಸೆಲ್ಪ್ ಡ್ರೈವ್ ಪರೀಕ್ಷೆಗಾಗಿ ಬಳಕೆ ಮಾಡಲು ಉದ್ದೇಶಿಸಲಾಗಿದೆ.

2023ರ ವೇಳೆಗೆ ರಸ್ತೆಗಿಳಿಯಲಿವೆ ಆ್ಯಪಲ್ ಸೆಲ್ಪ್ ಡ್ರೈವಿಂಗ್ ಕಾರುಗಳು

ಒಂದು ವೇಳೆ ಆ್ಯಪಲ್ ಸಂಸ್ಥೆಯು ಸಿದ್ದಗೊಳಿಸಿರುವ ಸೆಲ್ಪ್ ಡ್ರೈವ್ ತಂತ್ರಜ್ಞಾನವು ಫೋಕ್ಸ್‌ವ್ಯಾಗನ್ ಸಂಸ್ಥೆಗಳ ಕಾರುಗಳಲ್ಲಿ ಯಶಸ್ವಿಯಾಗಿದ್ದೇ ಆದಲ್ಲಿ ಮುಂದಿನ 2 ವರ್ಷಗಳ ಅವಧಿಯಲ್ಲಿ ವಿನೂತನ ಸೆಲ್ಪ್ ಡ್ರೈವ್ ಕಾರುಗಳು ಉತ್ಪಾದನೆಗೆ ಅಧಿಕೃತವಾಗಿ ಚಾಲನೆ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

2023ರ ವೇಳೆಗೆ ರಸ್ತೆಗಿಳಿಯಲಿವೆ ಆ್ಯಪಲ್ ಸೆಲ್ಪ್ ಡ್ರೈವಿಂಗ್ ಕಾರುಗಳು

ಒಟ್ಟಿನಲ್ಲಿ ಆ್ಯಪಲ್ ಸಂಸ್ಥೆ ಸಿದ್ದಪಡಿಸಿರುವ ಸೆಲ್ಪ್ ಡ್ರೈವ್ ತಂತ್ರಜ್ಞಾನ ಮತ್ತು ಫೋಕ್ಸ್‌ವ್ಯಾಗನ್ ನಿರ್ಮಾಣದ ಕಾರುಗಳು ಜೊತೆಯಾಗಿ ಆಟೋ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಠಿಸುವ ಇರಾದೆಯಲ್ಲಿದ್ದು, ಪರೀಕ್ಷಾರ್ಥ ಮಾದರಿಗಳು ಹೇಗೆ ಕಾರ್ಯನಿರ್ವಹಿಸಲಿವೆ ಎನ್ನುವುದರ ಆಧಾರದ ಮೇಲೆ ಭವಿಷ್ಯದ ಯೋಜನೆಗಳು ನಿರ್ಧಾರವಾಗಲಿವೆ ಎನ್ನಬಹುದು.

Most Read Articles

Kannada
English summary
Apple car may become reality in 2023.
Story first published: Thursday, August 16, 2018, 17:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X