ಭವಿಷ್ಯದ ಇವಿ ಮೋಟಾರ್ ಸೈಕಲ್‌ಗಳ ಬಗ್ಗೆ ಸುಳಿವು ನೀಡಿದ ಅಥೆರ್ ಎನರ್ಜಿ

ಕಳೆದ ವಾರಷ್ಟೇ ಬೆಂಗಳೂರು ಮೂಲದ ಪ್ರತಿಷ್ಠಿತ ಅಥೆರ್ ಎನರ್ಜಿ ಸಂಸ್ಥೆಯು ತನ್ನ ಮೊದಲ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‍ ಮಾದರಿಗಳಾದ 340 ಮತ್ತು 450 ಎನ್ನುವ ಎರಡು ವಿಭಿನ್ನ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

By Praveen Sannamani

ಕಳೆದ ವಾರಷ್ಟೇ ಬೆಂಗಳೂರು ಮೂಲದ ಪ್ರತಿಷ್ಠಿತ ಅಥೆರ್ ಎನರ್ಜಿ ಸಂಸ್ಥೆಯು ತನ್ನ ಮೊದಲ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‍ ಮಾದರಿಗಳಾದ 340 ಮತ್ತು 450 ಎನ್ನುವ ಎರಡು ವಿಭಿನ್ನ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದೀಗ ಮತ್ತಷ್ಟು ಹೊಸ ಮಾದರಿಯ ಮೋಟಾರ್ ಸೈಕಲ್‌ಗಳನ್ನು ಪರಿಚಯಿಸುವ ಸುಳಿವು ನೀಡಿದೆ.

ಭವಿಷ್ಯದ ಇವಿ ಮೋಟಾರ್ ಸೈಕಲ್‌ಗಳ ಬಗ್ಗೆ ಸುಳಿವು ನೀಡಿದ ಅಥೆರ್ ಎನರ್ಜಿ

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಥೆರ್ ಎನರ್ಜಿ ಸಂಸ್ಥಾಪಕ ಅಧ್ಯಕ್ಷ ತರುಣ್ ಮೆಹ್ತಾ ಅವರು, ಬೆಳೆಯುತ್ತಿರುವ ಭಾರತದಲ್ಲಿ ಇ-ಮೊಬಿಲಿಟಿಗೆ ಉತ್ತಮ ಬೇಡಿಕೆಯಿದ್ದು, ಈ ಹಿನ್ನೆಲೆ ಮುಂದಿನ 2 ವರ್ಷಗಳ ಅವಧಿಯಲ್ಲಿ ಹೊಸ ಮಾದರಿಯ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಮಾದರಿಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದೇವೆ ಎಂದಿದ್ದಾರೆ.

ಭವಿಷ್ಯದ ಇವಿ ಮೋಟಾರ್ ಸೈಕಲ್‌ಗಳ ಬಗ್ಗೆ ಸುಳಿವು ನೀಡಿದ ಅಥೆರ್ ಎನರ್ಜಿ

ಇದಕ್ಕಾಗಿ ಮಾರುಕಟ್ಟೆ ಅಧ್ಯಯನ ನಡೆಸಿರುವ ಅಥೆರ್ ಸಂಸ್ಥೆಯು ಯುವ ಗ್ರಾಹಕರ ಬೇಡಿಕೆಗೆ ತಕ್ಕಂತೆ ತನ್ನ ಹೊಸ ಎಲೆಕ್ಟ್ರಿಕ್ ಬೈಕ್ ಉತ್ಪನ್ನಗಳನ್ನು ಸಿದ್ದಗೊಳಿಸಲಿದ್ದು, ಪ್ರತಿ ಗಂಟೆಗೆ ಗರಿಷ್ಠವಾಗಿ 120 ಕಿ.ಮೀ ನಿಂದ 140 ಕಿ.ಮೀ ವೇಗವನ್ನ ಪಡೆದುಕೊಳ್ಳಬಲ್ಲ ಬೈಕ್‌ಗಳನ್ನು ಸಿದ್ದಗೊಳಿಸುವುದಾಗಿ ಸಂದರ್ಶನದಲ್ಲಿ ಹೇಳಿಕೊಂಡಿದೆ.

ಭವಿಷ್ಯದ ಇವಿ ಮೋಟಾರ್ ಸೈಕಲ್‌ಗಳ ಬಗ್ಗೆ ಸುಳಿವು ನೀಡಿದ ಅಥೆರ್ ಎನರ್ಜಿ

ಸದ್ಯ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಅಥೆರ್ 340 ಮತ್ತು 450 ಸ್ಕೂಟರ್‌ಗಳು ಹಲವು ಕಾರಣಗಳಿಂದ ವಿಶೇಷ ಎನ್ನಿಸಲಿದ್ದು, 340 ಸ್ಕೂಟರ್ ಬೆಲೆಯನ್ನು ಆನ್ ರೋಡ್ ಪ್ರಕಾರ ರೂ.1.09 ಲಕ್ಷಕ್ಕೆ ಮತ್ತು 450 ಸ್ಕೂಟರಿನ ಬೆಲೆಯನ್ನು ಆನ್ ರೋಡ್ ಪ್ರಕಾರ ರೂ.1.24 ಲಕ್ಷಕ್ಕೆ ಬಿಡುಗಡೆ ಮಾಡಿದೆ.

ಭವಿಷ್ಯದ ಇವಿ ಮೋಟಾರ್ ಸೈಕಲ್‌ಗಳ ಬಗ್ಗೆ ಸುಳಿವು ನೀಡಿದ ಅಥೆರ್ ಎನರ್ಜಿ

ಹೀಗಾಗಿ ಅಥೆರ್ ಎನರ್ಜಿ ಸಂಸ್ಥೆಯು ಮುಂಬರುವ ದಿನಗಳಲ್ಲಿ ಅಭಿವೃದ್ಧಿ ಮಾಡಲಿರುವ ಮೋಟಾರ್ ಸೈಕಲ್‌ಗಳು 1.50 ಲಕ್ಷದಿಂದ 2 ಲಕ್ಷದ ತನಕ ಇರಬಹುದೆಂದು ನೀರಿಕ್ಷಿಸಲಾಗಿದ್ದು, ಪ್ರತಿ ಚಾರ್ಜ್‌ಗೆ 150ರಿಂದ 200 ಕಿ.ಮೀ ಮೈಲೇಜ್ ನೀಡಬಲ್ಲ ಲಿಥೀಯಂ ಅಯಾನ್ ಬ್ಯಾಟರಿ ಬಳಕೆ ಮಾಡಲಿದೆ.

ಭವಿಷ್ಯದ ಇವಿ ಮೋಟಾರ್ ಸೈಕಲ್‌ಗಳ ಬಗ್ಗೆ ಸುಳಿವು ನೀಡಿದ ಅಥೆರ್ ಎನರ್ಜಿ

ಇನ್ನು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಿರುವ ಅಥೆರ್ ಹೊಸ ಸ್ಕೂಟರ್‌ಗಳು ಒಂದು ಬಾರಿ ಪೂರ್ಣಪ್ರಮಾಣ ಬ್ಯಾಟರಿ ಚಾರ್ಜ್ ಮಾಡಿದಲ್ಲಿ 340 ಸ್ಕೂಟರ್‌ಗಳು 60 ಕಿ.ಮೀ ಮೈಲೇಜ್ ಮತ್ತು 450 ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ 75 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲವು.

ಭವಿಷ್ಯದ ಇವಿ ಮೋಟಾರ್ ಸೈಕಲ್‌ಗಳ ಬಗ್ಗೆ ಸುಳಿವು ನೀಡಿದ ಅಥೆರ್ ಎನರ್ಜಿ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಇನ್‌ಬಿಲ್ಟ್ ರಿವರ್ಸ್ ಅಸಿಸ್ಟ್ ಫಿಚರ್ಸ್ ನೀಡಲಾಗಿದ್ದು, ಹಿಮ್ಮುಖವಾಗಿ ಪ್ರತಿ ಗಂಟೆಗೆ 5 ಕಿ.ಮಿ ವೇಗದಲ್ಲಿ ಚಲಿಸುವ ಗುಣವಿಶೇಷತೆ ಹೊಂದಿದೆ. ಇದು ಪಾರ್ಕಿಂಗ್ ಸ್ಲಾಟ್‌ಗಳಲ್ಲಿ ಸ್ಕೂಟರ್‌ಗಳನ್ನು ಹೊರತೆಗೆಯಲು ಹೆಚ್ಚು ಅನುಕೂಲಕರವಾಗಲಿದೆ.

ಭವಿಷ್ಯದ ಇವಿ ಮೋಟಾರ್ ಸೈಕಲ್‌ಗಳ ಬಗ್ಗೆ ಸುಳಿವು ನೀಡಿದ ಅಥೆರ್ ಎನರ್ಜಿ

ಅಥೆರ್ 340 ಮತ್ತು 450 ಸ್ಕೂಟರ್‌ಗಳಲ್ಲಿ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿದ್ದು, ನ್ಯಾವಿಗೆಷನ್, ಸ್ಮಾರ್ಟ್ ಫೋನ್ ಮೂಲಕ ನಿಯಂತ್ರಣ ಮಾಡಬಹುದಾದ ಪಾರ್ಕಿಂಗ್ ಅಸಿಸ್ಟ್, ಚಾರ್ಜಿಂಗ್ ಪಾಯಿಂಟ್ ಟ್ರ್ಯಾಕರ್ ಸೌಲಭ್ಯ ಸಹ ಇದರಲ್ಲಿದೆ.

ಭವಿಷ್ಯದ ಇವಿ ಮೋಟಾರ್ ಸೈಕಲ್‌ಗಳ ಬಗ್ಗೆ ಸುಳಿವು ನೀಡಿದ ಅಥೆರ್ ಎನರ್ಜಿ

ಒಟ್ಟಿನಲ್ಲಿ ಅಥೆರ್ ಸಂಸ್ಥೆಯ ಹೊಸ ಮೋಟಾರ್ ಸೈಕಲ್‌ಗಳ ನಿರ್ಮಾಣದ ಕುರಿತು ಭಾರೀ ಚರ್ಚೆಗಳು ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಹೊಸ ಎಲೆಕ್ಟ್ರಿಕ್ ಬೈಕ್‌ಗಳ ಬಗೆಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿವೆ.

Most Read Articles

Kannada
English summary
Ather Energy to launch a high-performance electric motorcycle next; Details revealed.
Story first published: Monday, June 11, 2018, 19:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X