ಕ್ಯೂ5 ಪೆಟ್ರೋಲ್ ವರ್ಷನ್ ಬಿಡುಗಡೆಯ ಸುಳಿವು ನೀಡಿದ ಆಡಿ..

By Praveen Sannamani

ಡಿಸೇಲ್ ಎಂಜಿನ್‌ಗಿಂತ ಪೆಟ್ರೋಲ್ ಕಾರುಗಳ ಉತ್ಪಾದನೆ ಮೇಲೆ ಹೆಚ್ಚಿನ ಆಸಕ್ತಿ ತೊರುತ್ತಿರುವ ಆಡಿ ಸಂಸ್ಥೆಯು ಸದ್ಯ ಪ್ರಮುಖ ಡೀಸೆಲ್ ವರ್ಷನ್ ಐಷಾರಾಮಿ ಕಾರುಗಳನ್ನು ಪೆಟ್ರೋಲ್ ವರ್ಷನ್‌ನೊಂದಿಗೆ ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಮೊದಲ ಹಂತವಾಗಿ ಕ್ಯೂ5 ಎಸ್‌ಯುವಿ ಕಾರುಗಳು ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯಲಿವೆ.

ಕ್ಯೂ5 ಪೆಟ್ರೋಲ್ ವರ್ಷನ್ ಬಿಡುಗಡೆಯ ಸುಳಿವು ನೀಡಿದ ಆಡಿ..

ಕಳೆದ ಜನವರಿ 18ರಂದು ಮೊದಲ ಬಾರಿಗೆ ಕ್ಯೂ5 ಡಿಸೇಲ್ ವರ್ಷನ್‌ಗಳನ್ನು ಬಿಡುಗಡೆ ಮಾಡಿದ್ದ ಆಡಿ ಸಂಸ್ಥೆಯು ಇದೀಗ ಬೇಡಿಕೆಗೆ ಅನುಗುಣವಾಗಿ ಡೀಸೆಲ್ ವರ್ಷನ್ ಬಿಡುಗಡೆ ಮಾಡುವ ಸುಳಿವು ನೀಡಿದ್ದು, 2017ರಲ್ಲಿ ಬಿಡುಗಡೆಯಾದ ಕ್ಯೂ7 ಪೆಟ್ರೋಲೇ ವರ್ಷನ್ ಮಾದರಿಯಲ್ಲೇ ಹೊಸ ಪೆಟ್ರೋಲ್ ಕಾರುಗಳ ಮಾರಾಟವನ್ನು ಹೆಚ್ಚಿಸಲು ಈ ಯೋಜನೆ ರೂಪಿಸಿದೆ.

ಕ್ಯೂ5 ಪೆಟ್ರೋಲ್ ವರ್ಷನ್ ಬಿಡುಗಡೆಯ ಸುಳಿವು ನೀಡಿದ ಆಡಿ..

ಮಧ್ಯಮ ಗಾತ್ರದ ಐಷಾರಾಮಿ ಎಸ್‌ಯುವಿಗಳಲ್ಲಿ ಜನಮನ್ನಣೆ ಗಳಿಸಿರುವ ಆಡಿ ಸಂಸ್ಥೆಯು ಕ್ಯೂ5 ಡಿಸೇಲ್ ವರ್ಷನ್‌ಗಳ ಬೆಲೆಯನ್ನು ಎಕ್ಸ್‌ಶೋರಂಗಳ ಪ್ರಕಾರ ರೂ.53.25 ಲಕ್ಷಕ್ಕೆ ನಿಗದಿ ಮಾಡಿದ್ದು, ಪೆಟ್ರೋಲ್ ಕಾರುಗಳು ಇದಕ್ಕಿಂತಲೂ ಕಡಿಮೆ ದರಗಳಲ್ಲಿ ಲಭ್ಯವಾಗಲಿವೆ.

ಕ್ಯೂ5 ಪೆಟ್ರೋಲ್ ವರ್ಷನ್ ಬಿಡುಗಡೆಯ ಸುಳಿವು ನೀಡಿದ ಆಡಿ..

ಸದ್ಯ ಕ್ಯೂ5 ಡಿಸೇಲ್ ವರ್ಷನ್‌ಗಳಲ್ಲಿ ಕ್ಯೂ5 ಪ್ರಿಮಿಯಂ ಪ್ಲಸ್ ಮತ್ತು ಕ್ಯೂ5 ಟೆಕ್ನಾಲಜಿ ಎನ್ನುವ ಎರಡು ಕಾರು ಮಾದರಿಗಳಿದ್ದು,ಮೊದಲ ಮಾದರಿಯು ರೂ.53.25 ಲಕ್ಷಕ್ಕೆ ಮತ್ತು ಎರಡನೇ ಮಾದರಿಯು ರೂ. 57.60 ಲಕ್ಷಕ್ಕೆ ಖರೀದಿ ಮಾಡಬಹುದಾಗಿದ್ದು, ಇವು ಪೆಟ್ರೋಲ್ ಮಾದರಿಗಳಲ್ಲಿ ಬಂದಲ್ಲಿ ಸುಮಾರು 5 ಲಕ್ಷದಿಂದ 7 ಲಕ್ಷ ತನಕ ಕಡಿಮೆ ಬೆಲೆಗಳಲ್ಲೇ ಟಾಪ್ ಎಂಡ್ ಮಾದರಿಯನ್ನೇ ಖರೀದಿ ಮಾಡಬಹುದು.

ಕ್ಯೂ5 ಪೆಟ್ರೋಲ್ ವರ್ಷನ್ ಬಿಡುಗಡೆಯ ಸುಳಿವು ನೀಡಿದ ಆಡಿ..

ಎಂಜಿನ್ ವೈಶಿಷ್ಟ್ಯತೆಗಳು

ಕ್ಯೂ5 ಮಾದರಿಗಳು ಡಿಸೇಲ್ ಕಾರುಗಳು 2-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದು, 187-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ. ಹಾಗೆಯೇ ಪೆಟ್ರೋಲ್ ಕಾರುಗಳಲ್ಲೂ ಸಹ 2.0-ಲೀಟರ್ ಎಂಜಿನ್ ಹೊಂದಿರಲಿವೆ ಎನ್ನಲಾಗಿದೆ.

ಕ್ಯೂ5 ಪೆಟ್ರೋಲ್ ವರ್ಷನ್ ಬಿಡುಗಡೆಯ ಸುಳಿವು ನೀಡಿದ ಆಡಿ..

ಇದರ ಜೊತೆಗೆ 7-ಸ್ಪೀಡ್ ಟ್ರಾನಿಕ್ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್, ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ, ವಿಸ್ತರಿಸಿದ ಬೂಟ್ ಸ್ಪೆಸ್, ರೂಮಿರಿಯರ್ ಟೆಕ್ನಾಲಜಿ ಪ್ರೇರಿತ ಒಳವಿನ್ಯಾಸ, ಸಿಂಗಲ್ ಫ್ರೇಮ್ ಗ್ರೀಲ್, ಮ್ಯಾಟಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್, ಸ್ಪೋರ್ಟಿ ಬ್ಯಾನೆಟ್, ಎಲ್‌ಇಡಿ ಟೈಲ್‌ಗೇಟ್ ಪಡೆದುಕೊಂಡಿದೆ.

ಕ್ಯೂ5 ಪೆಟ್ರೋಲ್ ವರ್ಷನ್ ಬಿಡುಗಡೆಯ ಸುಳಿವು ನೀಡಿದ ಆಡಿ..

ಇನ್ನು ಹೊಸ ಕಾರುಗಳಲ್ಲಿ ಸುಧಾರಿತ ತಂತ್ರಜ್ಞಾನ ಬಳಕೆ ಹಿನ್ನೆಲೆ ಈ ಹಿಂದಿನ ಕ್ಯೂ5ಗಿಂತ ಹೊಸ ಕ್ಯೂ5 ಕಾರುಗಳು 90 ಕೆಜಿಯಷ್ಟು ಹಗುರವಾಗಿದ್ದು, ತ್ರಿ ಸ್ಪೋಕ್ ಲೆದರ್ ಸ್ಟಿರಿಂಗ್, ವಿದ್ಯುತ್ ಪ್ರೇರಣೆಯ ಫ್ರಂಟ್ ಸೀಟು ಮತ್ತು ಚಾಲಕ ಭಾಗದಲ್ಲಿ ಮೆಮೊರಿ ಸ್ಲಾಟ್ ನೀಡಲಾಗಿದೆ.

ಕ್ಯೂ5 ಪೆಟ್ರೋಲ್ ವರ್ಷನ್ ಬಿಡುಗಡೆಯ ಸುಳಿವು ನೀಡಿದ ಆಡಿ..

ಕ್ಯೂ5 ಕಾರುಗಳಲ್ಲಿ ಇತರೆ ಮಾದರಿಗಳಿಂತ ಹೆಚ್ಚಿನ ಗುಣಮಟ್ಟ ಕಾಯ್ದುಕೊಂಡಿರುವ ಆಡಿ ಸಂಸ್ಥೆಯು ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಿದ್ದು, 8 ಏರ್‌ಬ್ಯಾಗ್, ಪಾರ್ಕಿಂಗ್ ರಿರ್ ಕ್ಯಾಮೆರಾ ಮತ್ತು ಕಂಫರ್ಟ್, ಡೈನಾಮಿಕ್, ಆಟೋ , ಆಪ್ ರೋಡ್ ಚಾಲನಾ ಸೌಲಭ್ಯಗಳನ್ನು ಒದಗಿಸಲಾಗಿದೆ.

ಕ್ಯೂ5 ಪೆಟ್ರೋಲ್ ವರ್ಷನ್ ಬಿಡುಗಡೆಯ ಸುಳಿವು ನೀಡಿದ ಆಡಿ..

ಪ್ರತಿ ಸ್ಪರ್ಧಿಗಳು

ಮರ್ಸಿಡಿಸ್ ಬೆಂಝ್ ಜಿಎಲ್‌ಸಿ, ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್, ಬಿಎಂಡಬ್ಲ್ಯು ಎಕ್ಸ್3, ಲೆಕ್ಸಸ್ 300ಹೆಚ್ ಮತ್ತು ವೊಲ್ವೋ ಎಕ್ಸ್‌ಸಿ60 ಮಾದರಿಗಳಿಗೆ ಆಡಿ ಕ್ಯೂ5 ಪೆಟ್ರೋಲ್ ಕಾರುಗಳು ಪ್ರತಿಸ್ಪರ್ಧಿಯಾಗಲಿದೆ.

ಕ್ಯೂ5 ಪೆಟ್ರೋಲ್ ವರ್ಷನ್ ಬಿಡುಗಡೆಯ ಸುಳಿವು ನೀಡಿದ ಆಡಿ..

ಒಟ್ಟಿನಲ್ಲಿ ವಿವಿಧ ಕಾರು ಉತ್ಪನ್ನಗಳ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ಆಡಿ ಸಂಸ್ಥೆಯು ಹೊಸ ಕಾರುಗಳನ್ನು ಮುಂಬರುವ 2 ತಿಂಗಳ ಅವಧಿಯಲ್ಲಿ ಬಿಡುಗಡೆ ಮಾಡುವ ನೀರಿಕ್ಷೆಯಿದ್ದು, ಕ್ಯೂ5 ಪೆಟ್ರೋಲ್ ವರ್ಷನ್‌ಗಳು ಕೂಡಾ ನೀರಿಕ್ಷಿತ ಮಟ್ಟದ ಮಾರಾಟ ಪ್ರಮಾಣ ದಾಖಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

Most Read Articles

Kannada
Read more on audi suv
English summary
Audi Q5 Petrol India Launch Details Revealed.
Story first published: Friday, June 22, 2018, 13:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X