ಆಟೋ‍‍ ರಿಕ್ಷಾಗಳನ್ನು ಹಿಂದಿಕ್ಕುತ್ತಾ ಬಜಾಜ್‍‍ನ ಹೊಸ ಕ್ಯೂಟ್ ಕ್ವಾಡ್ರಿ‍‍ಸೈಕಲ್..?

ಆಟೋ ರಿಕ್ಷಾಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ವಿವಿಧ ಹೋರಾಟಗಳ ನಂತರ ಹೊಸ ರೀತಿಯ ಕ್ಯೂಟ್ ಕ್ವಾಡ್ರಿಸೈಕಲ್ ಬೈಕ್ ಅನ್ನು ಅನಾವರಣ ಮಾಡಲು ಬಜಾಜ್ ಸಿದ್ಧವಾಗಿದೆ.

By Rahul Ts

ಆಟೋ ರಿಕ್ಷಾಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ವಿವಿಧ ಹೋರಾಟಗಳ ನಂತರ ಹೊಸ ರೀತಿಯ ಕ್ಯೂಟ್ ಕ್ವಾಡ್ರಿ ಸೈಕಲ್ ಬೈಕ್ ಮಾದರಿಯನ್ನು ಅನ್ನು ಅನಾವರಣ ಮಾಡಲು ಬಜಾಜ್ ಸಿದ್ಧವಾಗಿದೆ. ಈ ವಾಹನವು ಒಮ್ಮೆ ಬಿಡುಗಡೆಗೊಂಡಲ್ಲಿ, ಆಟೋವನ್ನು ನೀವು ಮ್ಯೂಸಿಯಂಗಳಲ್ಲಿ ನೋಡಬೇಕಾದ ಪರಿಸ್ಥಿತಿ ಬರಬಹುದು.

ಆಟೋ‍‍ಗಳನ್ನು ಹಿಂದಿಕ್ಕಲಿದೆಯೆ ಬಜಾಜ್‍‍ನ ಹೊಸ ಕ್ಯೂಟ್ ಕ್ವಾಡ್ರಿ‍‍ಸೈಕಲ್..??

ಹಲವು ಸುತ್ತಿನ ಮಾತುಕತೆಯ ನಂತರ ಭಾರತ ಸರ್ಕಾರವು ಕ್ವಾಡ್ರಿ ಸೈಕಲ್ ಮಾದರಿಗಳಿಗೆ ಅನುಮತಿ ನೀಡಿದೆ. ಹೀಗಾಗಿ ಬಜಾಜ್ ಕ್ಯೂಟ್ ಕ್ವಾಡ್ರಿ ಸೈಕಲ್‌ಗಳನ್ನು ಪರಿಚಯಿಸಲು ಬಜಾಜ್ ಯೋಜನೆ ರೂಪಿಸಿದ್ದು, ಎಲ್ಲವೂ ಅಂದುಕೊಂಡತೆ ಆದಲ್ಲಿ ಇದೇ ವರ್ಷದ ಕೊನೆಯಲ್ಲಿ ಹೊಸ ವಾಹನಗಳು ಖರೀದಿಗೆ ಲಭ್ಯವಾಗಲಿವೆ.

ಆಟೋ‍‍ಗಳನ್ನು ಹಿಂದಿಕ್ಕಲಿದೆಯೆ ಬಜಾಜ್‍‍ನ ಹೊಸ ಕ್ಯೂಟ್ ಕ್ವಾಡ್ರಿ‍‍ಸೈಕಲ್..??

ಕ್ಯೂಟ್ ಕ್ವಾಡ್ರಿ ಸೈಕಲ್ ಅನ್ನು ಆಟೋಮೊಬೈಲ್ ಆಗಿ ಬಳಸಿಕೊಳ್ಳಬಹುದಾಗಿದ್ದು, ಸರ್ಕಾರವು ಈ ವಾಹನವನ್ನು ಕೇವಲ ವಾಣಿಜ್ಯ ಬಳಿಕೆ ಮಾತ್ರ ಬಳಸಲು ಒಪ್ಪಿಗೆಯನ್ನು ನೀಡಿದೆ ಎನ್ನಲಾಗಿದೆ.

ಆಟೋ‍‍ಗಳನ್ನು ಹಿಂದಿಕ್ಕಲಿದೆಯೆ ಬಜಾಜ್‍‍ನ ಹೊಸ ಕ್ಯೂಟ್ ಕ್ವಾಡ್ರಿ‍‍ಸೈಕಲ್..??

ಪ್ರಸ್ತುತ ಈ ಕ್ವಾಡ್ರಿ ಸೈಕಲ್‌ಗಳನ್ನು ಇಂಡಿಯನ್ ಆಟೋಮೊಬೈಲ್ ರಿಸರ್ಚ್ ಸೆಂಟರ್‍‍‍ಗೆ ಕಳುಹಿಸಲಾಗಿದ್ದು, ರಿಸರ್ಚ್ ಸೆಂಟರ್‍‍ನ ಒಪ್ಪಿಗೆಯ ನಂತರ ಇದೇ ವರ್ಷದ ಕೊನೆಯಲ್ಲಿ ಬಜಾಜ್ ಸಂಸ್ಥೆಯು ಬಿಡುಗಡೆಗೊಳಿಸಲಿದೆಯೆಂತೆ.

ಆಟೋ‍‍ಗಳನ್ನು ಹಿಂದಿಕ್ಕಲಿದೆಯೆ ಬಜಾಜ್‍‍ನ ಹೊಸ ಕ್ಯೂಟ್ ಕ್ವಾಡ್ರಿ‍‍ಸೈಕಲ್..??

ಬಜಾಜ್ ಸಂಸ್ಥೆಯು ಈ ವಾಹನವನ್ನು ಈಗಾಗಲೇ ವಿವಿಧ ರಾಷ್ಟ್ರಗಳಿಗೆ ರಫ್ತು ಕೂಡಾ ಮಾಡುತ್ತಿದ್ದು, ಪ್ರತಿ ತಿಂಗಳಿಗೆ 5000 ಯೂನಿಟ್ ಕ್ಯೂಟ್ ಕ್ವಾಡ್ರಿಗಳನ್ನು ಉತ್ಪಾದಿಸುತ್ತಿದೆ. ಕ್ಯೂಟ್ ಕ್ವಾಡ್ರಿ ಸೈಕಲ್‌ಗಳು ನಾಲ್ಕು ಚಕ್ರಗಳನ್ನು ಪಡೆದುಕೊಂಡಿರಲಿದ್ದು, ಆಟೋಗಿಂತ ಹೆಚ್ಚು ಶಕ್ತಿಶಾಲಿಯಾಗಿರಲಿದೆ.

ಆಟೋ‍‍ಗಳನ್ನು ಹಿಂದಿಕ್ಕಲಿದೆಯೆ ಬಜಾಜ್‍‍ನ ಹೊಸ ಕ್ಯೂಟ್ ಕ್ವಾಡ್ರಿ‍‍ಸೈಕಲ್..??

ಕ್ಯೂಟ್ ಕ್ವಾಡ್ರಿ ಸೈಕಲ್‌ಗಳು 217ಸಿಸಿ 4 ಸ್ಟ್ರೋಕ್ಸ್ ಮತ್ತು ಸಿಂಗಲ್ ಸಿಲಿಂಡರ್ , ಲಿಕ್ವಿಡ್ ಕೂಲ್ ಫ್ಯುಯಲ್ ಇಂಜೆಕ್ಷನ್ ಸಹಾಯದಿಂದ 13 ಬಿಹೆಚ್‍‍ಪಿ ಮತ್ತು 20 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ.

ಆಟೋ‍‍ಗಳನ್ನು ಹಿಂದಿಕ್ಕಲಿದೆಯೆ ಬಜಾಜ್‍‍ನ ಹೊಸ ಕ್ಯೂಟ್ ಕ್ವಾಡ್ರಿ‍‍ಸೈಕಲ್..??

ಕ್ಯೂಟ್ ಕ್ವಾಡ್ರಿ ಸೈಕಲ್‌ಳು ಗರಿಷ್ಠವಾಗಿ ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, 2752-ಎಮ್ಎಮ್ ಉದ್ದ, 1312- ಎಮ್ಎಮ್ ಅಗಲ ಮತ್ತು 1650-ಎಮ್ಎಮ್ ಎತ್ತರವನ್ನು ಪಡೆದಿದ್ದು ಜೊತೆಗೆ ಸಿಎನ್‍‍ಜಿ ವರ್ಷನ್‍‍ನಲ್ಲಿ ಕೂಡಾ ಲಭ್ಯವಿರಲಿದೆ.

ಆಟೋ‍‍ಗಳನ್ನು ಹಿಂದಿಕ್ಕಲಿದೆಯೆ ಬಜಾಜ್‍‍ನ ಹೊಸ ಕ್ಯೂಟ್ ಕ್ವಾಡ್ರಿ‍‍ಸೈಕಲ್..??

ಕ್ಯೂಟ್ ಕ್ವಾಡ್ರಿ ಸೈಕಲ್ ಅನ್ನು ಮೂಲತಃ ವಾಣಿಜ್ಯ ಪ್ರಯಾಣಿಕ ವಾಹನಗಳು ಮಾತ್ರ ಉಪಯೋಗಿಸಲು ಯೋಜಿಸಲಾಗಿತ್ತು. ಪ್ರಸ್ತುತ ವಿದೇಶಿ ವಿನಿಮಯ ಕೇಂದ್ರದಲ್ಲಿರುವ ಆಟೋ ರಿಕ್ಷಾ ಚಾಲಕರುಗಳಿಗೆ ಇದು ಬಹುಮುಖ್ಯವಾಗಿದ್ದು ಅವರೆಲ್ಲರೂ ಈ ಕ್ವಾರಿಯನ್ನು ಬಳಸಬಹುದಾಗಿದೆ. ಇಲ್ಲವಾದಲ್ಲಿ ರಿಕ್ಷಾಗಳು ಕಾಣೆಯಾದಂತೆ ಮುಂದಿನ ದಿನಗಳಲ್ಲಿ ಆಟೋಗಳು ಕೂಡಾ ಕಾಣೆಯಾಗಬಹುದು.

ಆಟೋ‍‍ಗಳನ್ನು ಹಿಂದಿಕ್ಕಲಿದೆಯೆ ಬಜಾಜ್‍‍ನ ಹೊಸ ಕ್ಯೂಟ್ ಕ್ವಾಡ್ರಿ‍‍ಸೈಕಲ್..??

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಸಾಮಾನ್ಯ ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಪ್ರತಿ ಚಾರ್ಜ್‌ಗೆ 547 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು....

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಸೇನಾ ಟ್ರಕ್‌ಗೆ ಡಿಕ್ಕಿ ಹೊಡೆದ ನಿಸ್ಸಾನ್ ಮೈಕ್ರಾ- ಸ್ಥಳದಲ್ಲೇ ಐವರು ದುರ್ಮರಣ

ಈ MLA ಮಾಡಿದ ಕೆಲಸವನ್ನು ನಿಜವಾಗಿಯೂ ಮೆಚ್ಚಲೇಬೇಕು..

Most Read Articles

Kannada
Read more on ಬಜಾಜ್
English summary
Bajaj Qute quadricycle’s launch timeline in India finally REVEALED.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X