ಪ್ರತಿ ಚಾರ್ಜ್‌ಗೆ 155ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ದೇಶದ್ಯಾಂತ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಹೊಸ ಕ್ರಾಂತಿಯೊಂದು ಶುರುವಾಗಿದ್ದು, ಇದಕ್ಕೆ ಪೂರಕ ಎನ್ನುವಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ವರ್ಷನ್ ವಾಹನಗಳ ಉತ್ಪಾದನೆಯನ್ನು ತೀವ್ರಗೊಳಿಸಿವೆ.

By Praveen Sannamani

ದೇಶದ್ಯಾಂತ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಹೊಸ ಕ್ರಾಂತಿಯೊಂದು ಶುರುವಾಗಿದ್ದು, ಇದಕ್ಕೆ ಪೂರಕ ಎನ್ನುವಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ವರ್ಷನ್ ವಾಹನಗಳ ಉತ್ಪಾದನೆಯನ್ನು ತೀವ್ರಗೊಳಿಸಿವೆ. ಈ ಮಧ್ಯೆ ಬಾಜೊನ್ ಎನ್ನುವ ಸಂಸ್ಥೆಯೊಂದು ಇ100 ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡಗೊಳಿಸಲು ಮುಂದಾಗಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಪ್ರತಿ ಚಾರ್ಜ್‌ಗೆ 155ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ಮಹೀಂದ್ರಾ ಇ2ಒ ಮಾದರಿಗಿಂತಲೂ ಚಿಕ್ಕ ವಿನ್ಯಾಸ ಹೊಂದಿರುವ ಬಾಜೊನ್ ಇ100 ಎಲೆಕ್ಟ್ರಿಕ್ ಕಾರುಗಳು ಗಾತ್ರದಲ್ಲಿ ಚಿಕ್ಕದಿದ್ದರೂ ತಾಂತ್ರಿಕವಾಗಿ ವಿಶೇಷ ವಿನ್ಯಾಸಗಳನ್ನು ಹೊಂದಿದ್ದು, ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ ವೇಳೆ ಹೊಸ ಕಾರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ವಾಹನ ಸವಾರರ ಆಶ್ಚರ್ಯಕ್ಕೆ ಕಾರಣವಾಗಿದೆ.

ಪ್ರತಿ ಚಾರ್ಜ್‌ಗೆ 155ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ಗುರುಗ್ರಾಮ್ ಬಳಿಯ ದೆಹಲಿ-ಜೈಪುರ್ ಹೆದ್ದಾರಿಯಲ್ಲಿ ಬಾಜೊನ್ ಇ100 ಎಲೆಕ್ಟ್ರಿಕ್ ಕಾರುಗಳನ್ನು ಸ್ಪಾಟ್ ನಡೆಸಲಾಗಿದ್ದು, ಅತ್ಯುತ್ತಮ ಎಂಜಿನ್ ಕಾರ್ಯಕ್ಷಮತೆ ಮತ್ತು ಉತ್ತಮ ಮಾದದಿಯ ಬ್ಯಾಟರಿ ಸೌಲಭ್ಯದೊಂದಿಗೆ ಅಧಿಕ ಮಟ್ಟದ ಮೈಲೇಜ್ ಹಿಂದಿರುಗಿಸಬಲ್ಲದು.

ಪ್ರತಿ ಚಾರ್ಜ್‌ಗೆ 155ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ಬ್ಯಾಟರಿ ಸಾಮರ್ಥ್ಯ

ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯ ಹೊಂದಿರುವ ಬಾಜೊನ್ ಎಲೆಕ್ಟ್ರಿಕ್ ಕಾರುಗಳು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, 39-ಬಿಎಚ್‌ಪಿ ಮತ್ತು 110-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಪಡೆದುಕೊಂಡಿದೆ ಎನ್ನಲಾಗಿದೆ.

ಪ್ರತಿ ಚಾರ್ಜ್‌ಗೆ 155ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ಈ ಮೂಲಕ ಪ್ರತಿ ಚಾರ್ಜಿಂಗ್‌ಗೆ ಬರೋಬ್ಬರಿ 155ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲ ಗುಣಹೊಂದಿರುವ ಈ ಎಲೆಕ್ಟ್ರಿಕ್ ಕಾರುಗಳು ಪೂರ್ಣ ಪ್ರಮಾಣದ ಬ್ಯಾಟರಿ ಚಾರ್ಜಿಂಗ್‌ಗಾಗಿ 7.5 ಗಂಟೆ ಸಮಯಾವಕಾಶ ತೆಗೆದುಕೊಳ್ಳುತ್ತೆ.

ಪ್ರತಿ ಚಾರ್ಜ್‌ಗೆ 155ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ಕಾರಿನ ವೈಶಿಷ್ಟ್ಯತೆಗಳು

ಟು ಡೋರ್ ವೈಶಿಷ್ಟ್ಯತೆ ಹೊಂದಿರುವ ಬಾಜೊನ್ ಎಲೆಕ್ಟ್ರಿಕ್ ಕಾರುಗಳಲ್ಲಿ 7-ಇಂಚಿನ ಇನ್ಪೋಟೈನ್‌ಮೆಂಟ್ ಸ್ಕೀನ್, ವೈ-ಫೈ, ಟಚ್‌ಪ್ಯಾಡ್ ಕಂಟ್ರೊಲರ್, ಎಲೆಕ್ಟ್ರಿಕ್ ಪವರ್ ಸ್ಟಿರಿಂಗ್ ಮತ್ತು ಕೀ ಲೆಸ್ ಎಂಟ್ರಿ ಸೌಲಭ್ಯಗಳನ್ನ ಪಡೆದುಕೊಂಡಿದೆ.

ಪ್ರತಿ ಚಾರ್ಜ್‌ಗೆ 155ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ಸುರಕ್ಷಾ ಸೌಲಭ್ಯಗಳು

ಸಾಮಾನ್ಯ ಕಾರುಗಳಲ್ಲಿ ಕಂಡುಬರುವ ಬಹುತೇಕ ಸೌಲಭ್ಯಗಳ ಈ ಕಾರಿನಲ್ಲಿದ್ದು, ಸುರಕ್ಷೆತೆಗಾಗಿ ಎಬಿಎಸ್ ಟೆಕ್ನಾಲಜಿ, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಪಾರ್ಕಿಂಗ್ ಸೆನ್ಸಾರ್, ಪೆಡೆಸ್ಟ್ರೇಷನ್ ಅಲರ್ಟ್ ಸಿಸ್ಟಂ ಮತ್ತು ISOFIX ಚೈಲ್ಡ್ ಸೆಫ್ಟಿ ಸೀಟ್‌ಗಳು ಸಹ ಇದರಲ್ಲಿವೆ.

ಪ್ರತಿ ಚಾರ್ಜ್‌ಗೆ 155ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ಕಾರಿನ ಗಾತ್ರ

1,600ಎಂಎಂ ವೀಲ್ಹ್ ಬೆಸ್ ಹೊಂದಿರುವ ಈ ಸಣ್ಣ ಎಲೆಕ್ಟಿಕ್ ಕಾರು 1,670ಎಂಎಂ ಎತ್ತರ ಹೊಂದಿದೆ. ಇದಲ್ಲದೇ ಇತರೆ ಕಾರುಗಳಿಂತಲೂ ವಿಶೇಷ ವಿನ್ಯಾಸ ಹೊಂದಿರುವ ಈ ಕಾರಿನಲ್ಲಿ ರೈಟ್ ಸೈಡ್ ಅಥವಾ ಲೆಫ್ಟ್ ಸೈಡ್ ಸ್ಟಿರಿಂಗ್ ಆಯ್ಕೆ ಇರಲಿದೆ.

ಪ್ರತಿ ಚಾರ್ಜ್‌ಗೆ 155ಕಿ.ಮೀ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ಕಾರಿನ ಬೆಲೆ ಮತ್ತು ಬಿಡುಗಡೆ

ನೋಡಲು ಸಣ್ಣ ಗಾತ್ರ ಕಾರು ಮಾದರಿಯಾದರೂ ಕಾರಿನ ಫೀಚರ್ಸ್‌ಗಳು ಉತ್ತಮವಾಗಿದ್ದು, ಈ ಕಾರಿನ ಬೆಲೆಯು ರೂ. 2.50 ಲಕ್ಷದಿಂದ 3 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಆದ್ರೆ ಬಿಡುಗಡೆಯ ಬಗೆಗೆ ನಿಖರ ಮಾಹಿತಿ ಇಲ್ಲವಾದ್ರು 2018ರ ಕೊನೆಯಲ್ಲಿ ಇಲ್ಲದೇ 2019ರ ಮೊದಲಾರ್ಧದಲ್ಲಿ ಈ ಕಾರು ಬಿಡುಗಡೆಯಾಗುವುದು ಮಾತ್ರ ಖಚಿತ.

Source: Team bhp

Most Read Articles

Kannada
Read more on electric cars evergreen
English summary
Baojun E100 electric car spotted In India.
Story first published: Friday, July 6, 2018, 17:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X