ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ವಾಹನಗಳ ಸಂಖ್ಯೆ ಹೆಚ್ಚಾದಂತೆ ಪಾರ್ಕಿಂಗ್ ಸಮಸ್ಯೆ ಕೂಡಾ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಅದರಲ್ಲೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ಪಾರ್ಕಿಂಗ್ ಸಮಸ್ಯೆ ಒಂದಡೆಯಾದಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರ ಗ್ಯಾಂಗ್‌‌ವೊಂದು ವಾಹನ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ.

ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಮನೆ ಮುಂದೆ ಕಾರು ಪಾರ್ಕಿಂಗ್ ಜಾಗ ಇಲ್ಲ ಅಂತಾ ಅಥವಾ ಎಲ್ಲಾದರೂ ಹೊರಗಡೆ ಹೋದಾಗ ಪಾರ್ಕಿಂಗ್ ಜಾಗ ಇಲ್ಲದೆ ರಸ್ತೆಯ ಬದಿಯಲ್ಲಿ ಪಾರ್ಕಿಂಗ್ ಮಾಡ್ತಿವಿ. ಈ ರೀತಿ ಪಾರ್ಕ್ ಮಾಡುವ ಮುನ್ನ ಇನ್ಮುಂದೆ ನೀವು ಹತ್ತು ಬಾರಿ ಯೋಚನೆ ಮಾಡುವುದು ಒಳಿತು. ಯಾಕೆಂದ್ರೆ ಇಷ್ಟು ದಿನ ಹೊರಗಡೆ ಪಾರ್ಕ್ ಮಾಡುವ ವಾಹನಗಳನ್ನೋ ಇಲ್ಲವೇ ಟೈರ್‌ಗಳನ್ನು ಕಳ್ಳತನ ಮಾಡುವುದನ್ನು ನೋಡಿದ್ವಿ. ಆದ್ರೆ ಇಲ್ಲೊಂದು ಕಳ್ಳರ ಗ್ಯಾಂಗ್ ಕಾರಿನ ಏರ್‌ಬ್ಯಾಗ್ ಮಾತ್ರ ಕಳ್ಳತನ ಮಾಡುತ್ತಿರುವುದು ಕಾರು ಮಾಲೀಕರನ್ನೇ ಬೆಚ್ಚಿಬೀಳಿಸಿದ್ದಾರೆ.

ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಹೌದು, ನಮ್ಮ ಬೆಂಗಳೂರು ನಗರದಲ್ಲಿ ಟೊಯೊಟಾ ಇನೋವಾ ಕಾರಿನಲ್ಲಿರುವ ಏರ್‍‍ಬ್ಯಾಗ್‍ಗಳನ್ನ ಮತ್ತೆ ಇನ್ನಿತರೆ ಸುರಕ್ಷಾ ವೈಶಿಷ್ಟ್ಯತೆ ಉಪಕರಣಗಳನ್ನ ಕಳ್ಳತನ ಮಾಡುವ ಗ್ಯಾಂಗ್ ಒಂದು ಓಡಾಡುತ್ತಿದೆ. ಕೇವಲ ಒಂದು ವಾರದಲ್ಲಿ ನಾಲ್ಕು ಟೊಯೊಟಾ ಕಾರುಗಳಲ್ಲಿನ ಸೇಫ್ಟಿ ಕಿಟ್‍ಗಳನ್ನ ಇವರು ಕದ್ದಿದ್ದಾರೆ ಎಂದರೇ ನೀವು ನಂಬಲೇಬೇಕು.

ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಈ ಖದೀಮರು ಕೇವಲ ಒಂದು ವಾರದೊಳಗೆ ರಸ್ತೆಯ ಬದಿಗಳಲ್ಲಿ ಪಾರ್ಕಿಂಗ್ ಮಾಡಲಾಗಿರುವ ನಾಲ್ಕು ಟೊಯೊಟಾ ಕಾರುಗಳ ಫ್ರಂಟ್ ಸೀಟ್ ಗ್ಲಾಸ್‍‍ಗಳನ್ನು ಹೊಡೆದು, ಕಾರಿನಲ್ಲಿರುವ ಸುರಕ್ಷಾ ಸಾಧನಗಳು, ಎಸಿ ನಿಯಂತ್ರಕಗಳು ಮತ್ತು ಇನ್ನಿತರೆ ಬಿಡಿಭಾಗಗಳನ್ನು ಮಾತ್ರವೇ ಕಳ್ಳತನ ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಈ ಸುದ್ದಿ ತಿಳಿದ ಪೊಲೀಸರು ಸಾಮಾನ್ಯವಾಗಿ ಕಳ್ಳರು ಎಸ್‍ಯುವಿ ಮತ್ತು ಎಂಯುವಿ ಕಾರುಗಳಲ್ಲಿರುವ ಆಡಿಯೊ ಸಿಸ್ಟಂಗಳನ್ನು ಮತ್ತು ಟೈರ್‍‍ಗಳನ್ನು ಕದ್ದು ಬ್ಲಾಕ್ ಮಾರ್ಕೆಟ್‍ನಲ್ಲಿ ಒಳ್ಳೆಯ ಬೆಲೆಗೆ ಅವುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾತ್ರ ಕೇಳಿದ್ರು, ಆದ್ರೆ ಇದೀಗ ಟೊಯೊಟಾ ಕಾರುಗಳನ್ನೇ ಟಾರ್ಗೆಟ್ ಮಾಡಿರುವುದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ.

ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಕಳೆದ 2 ದಿನದ ಹಿಂದಷ್ಟೇ ಉದ್ಯಮಿ ಸೋಮಶೇಖರ್ ಅವರ ಟೊಯೊಟಾ ಇನೋವಾ ಕಾರನ್ನ ಟಾರ್ಗೆಟ್ ಮಾಡಲಾಗಿತ್ತು. ಬೆಂಗಳೂರಿನ ಪ್ರಮೋದ್ ಲೇಔಟ್‌ನ ಆರನೆಯ ಮುಖ್ಯ ರಸ್ತೆಯಲ್ಲಿ ಕಾರು ಪಾರ್ಕಿಂಗ್ ಮಾಡಿದ್ದರು. ಈ ವೇಳೆ ಕಾರಿನ ಗ್ಲಾಸ್ ಒಡೆದು ಒಳಕ್ಕೆ ನುಗ್ಗಿರುವ ಖರೀದಿಮರು ಸುಮಾರು ಮೂರು ಲಕ್ಷ ಮೌಲ್ಯದ ಉಪಕರಣಗಳನ್ನು ಕದ್ದಿದ್ದಾರೆ.

ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಖದೀಮರು ಕಾರಿನಲ್ಲಿದ್ದ ಎರಡು ಏರ್‍‍ಬ್ಯಾಗ್‍ ಕಿಟ್‍ಗಳು, ಆಡಿಯೋ ಸಿಸ್ಟಂ, ಎಸಿ ಕಂಟ್ರೋಲ್, ಸ್ಟಾರ್ಟಿಂಗ್ ಮತ್ತು ಮಿರರ್ ಕಿಟ್ ಹಾಗು ಸನ್‍ಗ್ಲಾಸ್ ಹೋಲ್ಡರ್‍‍ಗಳನ್ನ ಕದ್ದಿರುವುದಾಗಿ ಸೋಮಶೇಖರ್ ಅವರು ಹೇಳಿಕೊಂಡಿದ್ದು, ಜೊತೆಗೆ ಅವರು ಇದೇ ಮೊದಲ ಬಾರಿಗೆ ಕಳ್ಳರು ಕಾರಿನಲ್ಲಿರುವ ಏರ್‍‍ಬ್ಯಾಗ್‍ಗಳನ್ನ ಕದ್ದಿರುವ ವಿಷಯವನ್ನ ಕೇಳಿರುವುದಾಗಿ ಕೂಡಾ ಹೇಳಿಕೊಂಡಿದ್ದಾರೆ.

MOST READ: ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ಬರುತ್ತಿರುವ ಡಿಎಲ್ ಮತ್ತು ಆರ್‌ಸಿಯಿಂದ ಏನು ಲಾಭ ಗೊತ್ತಾ?

ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಇಲ್ಲಿ ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ಖದೀಮರು ಏರ್‍‍ಬ್ಯಾಗ್ ಕಳ್ಳತನ ಮಾಡಲು ಹೊಸ ತಂತ್ರ ಪ್ರಯೋಗಿಸಿದ್ದು, ಯಾವುದೇ ರೀತಿಯಲ್ಲಿ ಉಪಕರಣಗಳನ್ನು ಹಾಳುಮಾಡದೆಯೇ ಏರ್‌ಬ್ಯಾಗ್ ಕಿಟ್ ಹೊರತೆಗಿದಿದ್ದಾರೆ.

ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಇದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿರುವ ಕಾರು ಮಾಲೀಕ ಸೋಮಶೇಖರ್ ಅವರು, ಕಳ್ಳರು ಸರ್ವೀಸ್ ಸೆಂಟರ್‍‍ಗಳಲ್ಲಿ ಕೆಲಸ ಮಾಡುವ ನುರಿತ ಮೆಕ್ಯಾನಿಕ್‌ಗಳಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಇದು ನಾಲ್ಕನೇ ಪ್ರಕರಣ..!

ಘಟನೆ ನಂತರ ಸೋಮಶೇಖರ್ ಅವರು ತಮ್ಮ ಕಾರನ್ನು ಮೈಸೂರು ರಸ್ತೆಯಲ್ಲಿನ ಸರ್ವೀಸ್ ಸೆಂಟರ್‍‍‍ಗೆ ಹೋಗಿ ಚೆಕ್ ಮಾಡಿಸಿದಾಗ ಅವರಿಗೆ ಮತ್ತೊಂದು ಅಚ್ಚರಿ ಕಾದಿತ್ತು. ಯಾಕೆಂದ್ರೆ ಕಳೆದ ಒಂದು ವಾರದಲ್ಲಿ ಇಂತದ್ದೆ 3 ಪ್ರಕರಣಗಳು ನಡೆದಿರುವ ಬಗ್ಗೆ ಸರ್ವೀಸ್ ಸೆಂಟರ್ ಸಿಬ್ಬಂದಿ ಹೇಳಿದ್ದರು.

ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಸೋಮಶೇಖರ ಅವರ ಮನೆಯಿಂದ 50 ಮೀಟರ್‍‍ನ ದೂರದಲ್ಲಿರುವ ಪೀಣ್ಯಾ ನಿವಾಸಿಯಾದ ಸುಹಾಸ್ ಎಸ್ ಕೌಶಿಕ್ ಅವರ ಇನೋವಾ ಕ್ರಿಸ್ಟಾ ಕಾರಿನಲ್ಲಿಯೂ ಸಹ ಇಂತಹದ್ದೆ ಘಟನೆ ಸಂಭವಿಸಿದ್ದು, ಅಕ್ಟೋಬರ್11 ರ ರಾತ್ರಿ ಮನೆ ಮುಂದೆಯೇ ಕಾರ್ ಪಾರ್ಕ್ ಮಾಡಲಾಗಿತ್ತು. ಆದ್ರೆ ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ಆ ಕಾರಿನಲ್ಲಿದ್ದ ಏರ್‍‍ಬ್ಯಾಗ್‍ಗಳನ್ನು ಮತ್ತು ಡ್ಯಾಶ್‍‍ಬೋರ್ಡ್ ಪ್ಯಾನಲ್‍ಗಳನ್ನೇ ಎಗರಿಸಲಾಗಿತ್ತು.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಟೊಯೊಟಾ ಇನೋವಾ ಕಾರುಗಳು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿದೆ. ಈಗಲೂ ಕೂಡಾ ಈ ಕಾರನ್ನು ಸೆಕೆಂಡ್ ಹ್ಯಾಂಡ್‍ ಕಾರುಗಳನ್ನು ಮೂಲ ಬೆಲೆಗೆ ಖರೀದಿಸುತ್ತಾರೆ. ಹೀಗಾಗಿಯೇ ಟೊಯೊಟಾ ಕಾರುಗಳು ಇದೀಗ ಖದೀಮರ ಟಾರ್ಗೆಟ್ ಆಗಿರಬಹುದು ಎನ್ನಲಾಗಿದೆ.

ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಸುಹಾಸ್ ಅವರು ಕೂಡಾ ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದಾಗಲೂ ಅವರಿಗೂ ಕೂಡಾ ಒಂದು ಶಾಕ್ ಕಾದಿತ್ತು. ಅದು ಏನಂದ್ರೆ ಈಗಾಗಲೇ ಇಂತಹದ್ದೆ ಎರಡು ಪ್ರಕರಣಗಳು ಈಗಾಗಲೇ ದಾಖಲಾಗಿವೆ ಎನ್ನವುದು.

ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಈ ಕುರಿತಂತೆ ಬ್ಯಾಟರಾಯನಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ಫುಟೇಜ್‌ನಲ್ಲೂ ಖದೀಮರ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಆದ್ರೆ ಕೆಲವು ಮಾಹಿತಿಗಳ ಪ್ರಕಾರ ಕಳ್ಳರು ಕದ್ದ ಮಾಲ್ ಅನ್ನು ಜೆಸಿ ರಸ್ತೆಯಲ್ಲಿರುವ ಕೆಲ ಕಾರು ಉಪಕರಣಗಳ ಮಳಿಗೆಗಳಲ್ಲಿ ಮಾರಾಟ ಮಾಡಿರಬಹುದು ಎಂದು ಸಂಶಯ ವ್ಯಕ್ತವಾಗಿದೆ. ಹೀಗಾಗಿ ವಾಹನ ಮಾಲೀಕರು ಯಾವುದೇ ಕಾರಣಕ್ಕೂ ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹತ್ತು ಬಾರಿ ಯೋಚಿಸುವುದು ಒಳಿತು.

Source: BangaloreMirror

Most Read Articles

Kannada
English summary
Bengaluru: New parking risk: Gang takes off with airbags.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X