ಬೆಂಗಳೂರಿನಲ್ಲಿ ಶೀಘ್ರದಲ್ಲೇ 11 ಕಡೆಗಳಲ್ಲಿ ಇವಿ ಚಾರ್ಜಿಂಗ್ ಪಾಯಿಂಟ್‌ಗಳು ಆರಂಭ..

ರಾಜಧಾನಿ ಬೆಂಗಳೂರು ಭಾರತದಲ್ಲೆ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದ್ದು, ಕರ್ನಾಟಕ ಸರ್ಕಾರವು ನಗರದೆಲ್ಲೆಡೆ ಸೇರಿ 11 ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ ಗಳನ್ನು ಸ್ಥಾಪಿಸಲು ಮುಂದಾಗಿದೆ.

By Rahul

ರಾಜಧಾನಿ ಬೆಂಗಳೂರು ಭಾರತದಲ್ಲೆ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದ್ದು, ಕರ್ನಾಟಕ ಸರ್ಕಾರವು ನಗರದೆಲ್ಲೆಡೆ ಸೇರಿ 11 ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ ಗಳನ್ನು ಸ್ಥಾಪಿಸಲು ಮುಂದಾಗಿದೆ. ನಗರದ ಮೊದಲನೆ ಚಾರ್ಜಿಂಗ್ ಪಾಯಿಂಟ್ ಇದೆ ತಿಂಗಳ 15ರಂದು ಕೆಆರ್ ವೃತ್ತದ ಬೆಸ್ ಕಾಂ ಕಚೇರಿಯಲ್ಲಿ ಸ್ಥಾಪಿಸಲಾಗಿದೆ ಎನ್ನಲಾಗಿದೆ.

ಬೆಂಗಳೂರಿನೆಲ್ಲೆಡೆ ಬರಲಿದೆ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಪಾಯಿಂಟ್ಸ್

'ಭಾರತದಲ್ಲಿ ಇದೇ ಮೊದಲನೆಬಾರಿ ಫೆಬ್ರವರಿ 15ರಂದು ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲಿದ್ದು, ಮೊದಲನೆ ಸ್ಟೇಷನ್ ಕೆಆರ್ ವೃತ್ತದ ಬೆಸ್ಕಾಂನ ಕೇಂದ್ರಕಛೇರಿಯಲ್ಲಿ ಸ್ಥಾಪಿಸಲಾಗಿದೆ. ನಂತರ ಆರು ತಿಂಗಳಳಿನಲ್ಲಿ ನಗರದೆಲ್ಲೆಡೆ 11 ಚಾರ್ಜಿಂಗ್ ಪಾಯಿಂಟ್ ಗಳನ್ನು ಸ್ಥಾಪಿಸುತ್ತೆವೆ, ಆದರೆ ಇನ್ನೂ 11 ಚಾರ್ಜಿಂಗ್ ಸ್ಟೇಷನ್ ಗಳ ಸ್ಥಳಗಳನ್ನು ಗುರುತಿಸಲಾಗುತ್ತಿದ್ದು, ಪ್ರತಿಯೊಂದು ವಾಹನವು 25 ರಿಂದ 30 ನಿಮಿಷಗಳವರೆಗೆ ಚಾರ್ಜ್ ಮಾಡಿಕೊಳ್ಳಬಹುದು' ಎಂದು ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Recommended Video

New Maruti Swift Launch: Price; Mileage; Specifications; Features; Changes
ಬೆಂಗಳೂರಿನೆಲ್ಲೆಡೆ ಬರಲಿದೆ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಪಾಯಿಂಟ್ಸ್

ಬೆಸ್ಕಾಂ ನ ವ್ಯ್ವಸ್ಥಾಪಕ ನಿರ್ಧೇಶಕರಾದಂತಹ ಪಿ.ರಾಜೇಂದ್ರ ಚೋಳನ್ ರವರು 'ಸಾರ್ವಜನಿಕರು ವಿದ್ಯುತ್ ಸೌಲಭ್ಯವನ್ನು ಬಳಸಿಕೊಳ್ಳುವ ಸಲುವಾಗಿ ಚಾರ್ಜಿಂಗ್ ಸ್ಟೇಷನ್ಗೆ ಸಂಚಾರವನ್ನು ಸರಿಪಡಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ಒಂದು ಪ್ರಸ್ತಾಪವನ್ನು ಕಳುಹಿಸಿದ್ದೇವೆ' ಎಂದು ಹೇಳಿದ್ದಾರೆ.

ಬೆಂಗಳೂರಿನೆಲ್ಲೆಡೆ ಬರಲಿದೆ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಪಾಯಿಂಟ್ಸ್

ಬೆಂಗಳೂರು ನಗರವು 72ಲಕ್ಷ ವಾಹನಗಳಲ್ಲಿ, ಕೇವಲ 6,000 ವಿದ್ಯುತ್ ವಾಹನಗಳನ್ನು ಹೊಂದಿದೆ. ಶುದ್ಧ ಇಂಧನ ವಾಹನಗಳ ಬಳಕೆಯನ್ನು ಉತ್ತೇಜಿಸಲು ಬೆಸ್ಕಾಂ ತನ್ನ ಅಧಿಕೃತ ವಾಹನಗಳನ್ನು 100 ಕ್ಕಿಂತಲೂ ಅಧಿಕ ವಿದ್ಯುತ್ ವಾಹನಗಳೊಂದಿಗೆ ಬದಲಿಸಲು ಕೆಲಸ ಮಾಡುತ್ತಿದ್ದು ಇದರಿಂದ ನಗರದಲ್ಲಿರುವ ಮನೆಗಳಿಗೆ ಹಾಗು ಉದ್ಯಮಗಳಿಗೆ ವಿದ್ಯುತ್ ಸಪ್ಲೈನಲ್ಲಿ ಯಾವುದೇ ತೊಂದರೆಯಿರುವುದಿಲ್ಲವೆಂದು ಹೇಳಲಾಗಿದೆ.

ಬೆಂಗಳೂರಿನೆಲ್ಲೆಡೆ ಬರಲಿದೆ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಪಾಯಿಂಟ್ಸ್

'ಟೈಮ್ ಆಫ್ ಡೇ ಟ್ಯಾರಿಫ್' ಈ ಯೋಜನೆಯಲ್ಲಿ ವಾಹನಗಳಿಗೆ ದಿನದ ಸಮಯದಲ್ಲಿ ಒಂದು ಯೂನಿಟ್ಗೆ ರೂ4.5 ಮತ್ತು ರಾತ್ರಿಯ ಸಮಯದಲ್ಲಿ ಒಂದು ಯೂನಿಟಿಗೆ 4.ರೂ ನಿಗಧಿಪಡಿಸಲು ಬೆಎಸ್ಕಾಂ ಸರ್ಕಾರಕ್ಕೆ ಮನವಿ ನೀಡಿದೆ ಎನ್ನಲಾಗಿದೆ.

ಬೆಂಗಳೂರಿನೆಲ್ಲೆಡೆ ಬರಲಿದೆ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಪಾಯಿಂಟ್ಸ್

2030 ರ ಹೊತ್ತಿಗೆ ಭಾರತವು ಸಂಪೂರ್ಣವಾಗಿ ವಿದ್ಯುತ್ ವಾಹನವನ್ನು ಹೊಂದಲಿದೆ ಎಂದು ಭಾರತ ಸರ್ಕಾರ ಘೋಷಿಸಿತು. ಆದಾಗ್ಯೂ, ಕಾರು ತಯಾರಕರು ದೇಶದಲ್ಲಿ ಸೀಮಿತ ಮೂಲಭೂತ ಸೌಕರ್ಯಗಳ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಇದು ವಿದ್ಯುತ್ ವಾಹನಗಳ ವ್ಯಾಪಕ ಚಲನಶೀಲತೆಗೆ ಅಡಚಣೆಯನ್ನುಂಟು ಮಾಡುತ್ತದೆ.

ಬೆಂಗಳೂರಿನೆಲ್ಲೆಡೆ ಬರಲಿದೆ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಪಾಯಿಂಟ್ಸ್

ಸಧ್ಯ ಭಾರತದಲ್ಲಿ ಮಹಿಂದ್ರಾ ಸಂಸ್ಥೆಯು ವಿದ್ಯುತ್ ವಾಹನಗಳನ್ನು ತಾಯಾರಿಸುತ್ತಿದ್ದು, ಭವಿಷ್ಯದಲ್ಲಿ ಟಾಟಾ, ಮಾರುತಿ ಸುಜುಕಿ, ಟೊಯೋಟಾಮತ್ತು ಹ್ಯುಂಡಾಯ್ ಸಂಸ್ಥೆಗಳು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿವೆ.

Most Read Articles

Kannada
English summary
Bengaluru to get electric vehicle charging points across the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X