ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಐಷಾರಾಮಿ ಕಾರು ಮಾಲೀಕರ ವಿರುದ್ಧ ಭರ್ಜರಿ ಕಾರ್ಯಾಚರಣೆ ಆರಂಭಿಸಿರುವ ಸಾರಿಗೆ ಇಲಾಖೆಯು(ಆರ್‌ಟಿಓ) , ತೆರಿಗೆ ಕಟ್ಟದೆ ಕಾನೂನು ಬಾಹಿರವಾಗಿ ರಸ್ತೆ ಬಳಕೆ ಮಾಡುತ್ತಿರುವ ಕಾರು ಮಾಲೀಕರ ಮೇಲೆ ಕಠಿಣ ಕಾನೂನು ಕ್ರಮ ಜರಗಿಸುತ್ತಿದೆ.

By Praveen Sannamani

ಸದ್ಯ ಕೇರಳದಲ್ಲಿ ಪಿವೈ ನೋಂದಣಿಯ ಹೊಂದಿರುವ ಐಷಾರಾಮಿ ಕಾರು ಮಾಲೀಕರಿಗೆ ಸಂಕಷ್ಟ ಎದುರಾಗಿದೆ. ಐಷಾರಾಮಿ ಕಾರು ಮಾಲೀಕರ ವಿರುದ್ಧ ಭರ್ಜರಿ ಕಾರ್ಯಾಚರಣೆ ಆರಂಭಿಸಿರುವ ಸಾರಿಗೆ ಇಲಾಖೆಯು(ಆರ್‌ಟಿಓ) , ತೆರಿಗೆ ಕಟ್ಟದೆ ಕಾನೂನು ಬಾಹಿರವಾಗಿ ರಸ್ತೆ ಬಳಕೆ ಮಾಡುತ್ತಿರುವ ಕಾರು ಮಾಲೀಕರ ಮೇಲೆ ಕಠಿಣ ಕಾನೂನು ಕ್ರಮ ಜರಗಿಸುತ್ತಿದೆ.

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಪುದುಚೇರಿಯಲ್ಲಿ ಐಷಾರಾಮಿ ಕಾರು ಖರೀದಿ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಕಾರಣ ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿಯಲ್ಲಿ ತೆರಿಗೆ ಪ್ರಮಾಣವು ಇತರೆ ರಾಜ್ಯಗಳಿಂತ ಕಡಿಮೆ ಪ್ರಮಾಣದಲ್ಲಿರುವುದು. ಇದರ ಪರಿಣಾಮವೇ ಕೇರಳ ರಸ್ತೆಗಳಲ್ಲಿ ಪಿವೈ ನೋಂದಣಿಯ ಐಷಾರಾಮಿ ಕಾರುಗಳ ಸಂಖ್ಯೆ ಮಿತಿ ಮೀರಿವೆ.

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಆದ್ರೆ ಪುದುಚೇರಿಯಲ್ಲಿ ಕಾರು ನೋಂದಣಿ ನಂತರ ಹೊರ ರಾಜ್ಯಗಳ ರಸ್ತೆಗಳಲ್ಲಿ ಕಾರು ಬಳಕೆ ಮಾಡುವ ಕಾರು ಮಾಲೀಕರು ಆಯಾ ರಾಜ್ಯಗಳ ರಸ್ತೆ ತೆರಿಗೆ ಕಟ್ಟದೇ ಸಾರಿಗೆ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ.

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಇದರ ವಿರುದ್ಧ ಕೇರಳ ರಾಜ್ಯ ಸಾರಿಗೆ ಇಲಾಖೆಯು ಕಠಿಣ ಕ್ರಮ ಜರಗಿಸುತ್ತಿದೆ. ಅವಧಿ ಮೀರಿ ಕೇರಳ ರಸ್ತೆಗಳಲ್ಲಿ ಓಡಾಡುತ್ತಿರುವ ಪಿವೈ ನೋಂದಣಿಯ ಐಷಾರಾಮಿ ಕಾರುಗಳನ್ನು ಸಾರಿಗೆ ಇಲಾಖೆಯ ವಶಕ್ಕೆ ಪಡೆದುಕೊಳ್ಳುತ್ತಿದ್ದು, ಜೊತೆಗೆ ಗಂಭೀರ ಪ್ರಕರಣಗಳಲ್ಲಿ ಕಾರು ಮಾಲೀಕರನ್ನು ಜೈಲಿಗೂ ಅಟ್ಟುತ್ತಿದೆ.

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಈಗಾಗಲೇ ಇಂತಹದೇ ನೂರಾರು ಪ್ರಕರಣಗಳನ್ನು ಪತ್ತೆಹಚ್ಚಿರುವ ಕೇರಳ ಸಾರಿಗೆ ಇಲಾಖೆಯ ಅಧಿಕಾರಿಗಳು, ನಟಿ ಅಮುಲಾ ಪೌಲ್ ಸೇರಿದಂತೆ ಹಲವರು ವಿರುದ್ಧ ಕ್ರಮ ಜರಗಿಸಿರುವುದಲ್ಲದೇ ಹತ್ತಾರು ಐಷಾರಾಮಿ ಕಾರುಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಕಳೆದ ವರ್ಷ ಪಿವೈ ನೋಂದಣಿಯೊಂದಿಗೆ ಖರೀದಿಸಲಾಗಿದ್ದ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರು ಕೂಡಾ ತೆರಿಗೆ ವಂಚನೆ ವಿಚಾರದಲ್ಲಿ ಕೇರಳ ಸಾರಿಗೆ ಇಲಾಖೆಯ ವಶವಾಗಿತ್ತು. ಇದರಿಂದ ಎಚ್ಚೇತ್ತುಕೊಂಡ ಕಾರು ಮಾಲೀಕ ಸೈಯದ್ ನಜೀರ್ ಎನ್ನುವವರು ಬರೋಬ್ಬರಿ 60 ಲಕ್ಷ ರೂಪಾಯಿ ಪಾವತಿಸಿದ್ದಲ್ಲದೇ ಪಿವೈ ನೋಂದಣಿಗೆ ಗುಡ್ ಬೈ ಹೇಳಿ ಕೇರಳ ನೋಂದಣಿ ಮಾಡಿಸಿಕೊಂಡಿದ್ದಾರೆ.

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಪದೇ ಪದೇ ಪಿವೈ ನೋಂದಣಿಯ ಕಾರು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಸಾರಿಗೆ ಇಲಾಖೆ ಅಧಿಕಾರಿಗಳ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಬರೋಬ್ಬರಿ 60 ಲಕ್ಷ ಪಾವತಿಸಿರುವ ಸೈಯದ್ ನಜೀರ್, ಪುದುಚೇರಿ ಸಾರಿಗೆ ಇಲಾಖೆಯಿಂದ ಎನ್ಓಸಿ ಪಡೆದು ಕೇರಳ ನೋಂದಣಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಬರೋಬ್ಬರಿ 4.43 ಕೋಟಿ ಬೆಲೆ ಹೊಂದಿರುವ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರುಗಳು ದೇಶದಲ್ಲಿ ಅತಿಹೆಚ್ಚು ಮಾರಾಟವಾಗುತ್ತಿರುವ ಐಷಾರಾಮಿ ಸೆಡಾನ್ ಮಾದರಿಯಾಗಿದ್ದು, ಅದರಲ್ಲೂ ಪಿವೈ ನೋಂದಣಿಯ ಕಾರುಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ.

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಇನ್ನು ನಿಯಮದ ಪ್ರಕಾರ ತೆರಿಗೆ ಪ್ರಮಾಣ ಕಡಿಮೆ ಇರುವ ಪುದುಚೇರಿಯಲ್ಲಿ ಐಷಾರಾಮಿ ಕಾರು ಖರೀದಿಸುವುದು ತಪ್ಪಲ್ಲಾ. ಆದ್ರೆ ಪಿವೈ ನೋಂದಣಿ ಹೊಂದಿರುವ ಕಾರುಗಳು ಪುದುಚೇರಿ ಬಿಟ್ಟು ಹೊರರಾಜ್ಯಗಳಲ್ಲಿ ಬಳಕೆಯಾಗುತ್ತಿದ್ದರೇ ಖರೀದಿಸಿದ 11 ತಿಂಗಳ ಒಳಗಾಗಿ ಆಯಾ ರಾಜ್ಯಗಳಲ್ಲಿ ಕಡ್ಡಾಯವಾಗಿ ರಸ್ತೆ ತೆರಿಗೆಯನ್ನು ಪಾವತಿಸಬೇಕು.

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಖರೀದಿಸಿರುವ ದುಬಾರಿ ಲ್ಯಾಂಬೋರ್ಗಿನಿ ಅವೆಂಟಡಾರ್ ಹೈ-ಎಂಡ್ ಸ್ಫೋರ್ಟ್ಸ್ ಕಾರು ಕೂಡಾ ಪುದುಚೇರಿ ರಿಜಿಸ್ಟ್ರೇಷನ್ ಸಂಖ್ಯೆ (PY01 CD 5008) ಹೊಂದಿದ್ದು, ಪುದುಚೇರಿಯಲ್ಲಿ ನೋಂದಣಿಯಾಗಿ ಕರ್ನಾಟಕದಲ್ಲಿ ಓಡಾಡುತ್ತಿರುವ ಕಾರುಗಳ ಮೇಲೆ ಸಾರಿಗೆ ಇಲಾಖೆಯು (ಆರ್‌ಟಿಓ) ಈಗ ದೃಷ್ಟಿ ಹರಿಸಿದೆ.

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಪುದುಚೇರಿ ರಿಜಿಸ್ಟ್ರೇಷನ್ ಕಾರು ಖರೀದಿಸುವ ಮೂಲಕ ದರ್ಶನ್ ಅವರೇನು ಕಾನೂನು ಬಾಹಿರ ಕೆಲಸವೇನು ಮಾಡಿಲ್ಲ. ಕರ್ನಾಟಕದ ಹೊರಗೆ ರಿಜಿಸ್ಟ್ರೇಷನ್ ಮಾಡಿಕೊಂಡವರು ಒಂದು ವರ್ಷದ ತನಕ ನಮ್ಮ ರಾಜ್ಯದಲ್ಲಿ ಕಾರನ್ನು ಓಡಿಸಬಹುದು. ಅದಕ್ಕಿಂತಲೂ ಹೆಚ್ಚಿನ ಸಮಯ ಓಡಿಸಿದರೆ ಆಗ ಆರ್‌ಟಿಓ ಅಧಿಕಾರಿಗಳ ಕಿರಿಕಿರಿ ತಪ್ಪಿದ್ದಲ್ಲ.

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಹೊಸ ಕಾರಿನ ನೋಂದಣಿಯಲ್ಲಿ ಮೋಸ ಮಾಡಿದ್ದ ಅಮಲಾ ಪೌಲ್‌‌ಗೆ 20 ಲಕ್ಷ ದಂಡ..!!

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಸಲ್ಮಾನ್ ಖಾನ್ ಜೊತೆ ಜಾಲಿ ರೈಡ್‌ಗೆ ಹೋಗಿದ್ದ ನಟಿ ಜಾಕ್ವೆಲಿನ್ ಹೀಗೆ ಮಾಡಿದ್ದು ಸರಿನಾ?

ವಿವಿಧ ಬಣ್ಣಗಳನ್ನು ಹೊಂದಿರುವ ನಂಬರ್ ಪ್ಲೇಟ್‌ಗಳು ಏನನ್ನು ಸೂಚಿಸುತ್ತವೆ ಗೊತ್ತಾ?

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

Most Read Articles

Kannada
Read more on traffic rules bentley
English summary
Bentley Continental GT Owner Pays Rs 60 Lakh For Re-Registration.
Story first published: Monday, April 30, 2018, 14:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X