ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ 3 ಸಿರೀಸ್ ಗ್ರ್ಯಾನ್ ಟೂರಿಸ್ಮೊ ಸ್ಪೋರ್ಟ್ ಕಾರು..

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಮ್‍‍ಡಬ್ಲ್ಯೂ ತಮ್ಮ ನೂತನ 3 ಸಿರೀಸ್ ಗ್ರ್ಯಾನ್ ಟೂರಿಸ್ಮೊ ಕಾರಿನ 320ಡಿ ಜಿಟಿ ಸ್ಪೋರ್ಟ್ ಬೇಸ್ ವೇರಿಯಂಟ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದೆ.

By Rahul Ts

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಮ್‍‍ಡಬ್ಲ್ಯೂ ತಮ್ಮ ನೂತನ 3 ಸಿರೀಸ್ ಗ್ರ್ಯಾನ್ ಟೂರಿಸ್ಮೊ ಕಾರಿನ 320ಡಿ ಜಿಟಿ ಸ್ಪೋರ್ಟ್ ಬೇಸ್ ವೇರಿಯಂಟ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 46.60 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ 3 ಸಿರೀಸ್ ಗ್ರ್ಯಾನ್ ಟೂರಿಸ್ಮೊ ಸ್ಪೋರ್ಟ್ ಕಾರು..

ಈ ಹೊಸ ಕ್ರೀಡಾ ಆವೃತ್ತಿಯ ಪರಿಚಯದೊಂದಿಗೆ, ನಾವು ತಮ್ಮ ವಾಹನಗಳಲ್ಲಿ ಚೈತನ್ಯ ಮತ್ತು ಭಾವೋದ್ರಿಕ್ತ ಆಕಾಂಕ್ಷೆಗಳ ಭಾವನೆಗಳ ಅನುಭವವನ್ನು ಬಯಸುವ ಗ್ರಾಹಕರಿಗೆ ಆಕರ್ಷಕವಾದ ಆಯ್ಕೆಯನ್ನು ಒದಗಿಸುತ್ತಿದ್ದೇವೆ. ಎಂದು ಬಿಎಮ್‍ಡಬ್ಲ್ಯೂ ಗ್ರೂಪ್ ಇಂಡಿಯಾದ ಅಧ್ಯಕ್ಷರಾದ ವಿಕ್ರಮ್ ಪವಾಹ್ ಹೇಳಿಕೊಂಡಿದ್ದಾರೆ.

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ 3 ಸಿರೀಸ್ ಗ್ರ್ಯಾನ್ ಟೂರಿಸ್ಮೊ ಸ್ಪೋರ್ಟ್ ಕಾರು..

ಕಾರಿನ ವಿನ್ಯಾಸ

ಮಾರುಕಟ್ಟೆಗೆ ಲಗ್ಗೆಯಿಟ್ಟ ಈ ಕಾರು ಹೈ ಆಂಡ್ ಲೋ ಬೀಮ್ ಎಲ್ಇಡಿ ಹೆಡ್‍ಲ್ಯಾಂಪ್ಸ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಅನ್ನು ಪಡೆದಿದ್ದು, ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ ಹೊಸ ಬಂಪರ್‍‍ಗಳನ್ನು ಪಡೆದುಕೊಂಡಿದೆ. ಹಾಗು ಕಾರಿನ ಒಳಭಾಗವನ್ನು ಕಪ್ಪು ಬಣ್ಣದ ಲೆಧರ್‍‍ನಿಂದ ಸಜ್ಜುಗೊಳಿಸಲಾಗಿದೆ.

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ 3 ಸಿರೀಸ್ ಗ್ರ್ಯಾನ್ ಟೂರಿಸ್ಮೊ ಸ್ಪೋರ್ಟ್ ಕಾರು..

ಎಂಜಿನ್ ಸಾಮರ್ಥ್ಯ

ಹೊಸದಾಗಿ ಬಿಡುಗಡೆಗೊಂಡ ಬಿಎಮ್‍ಡಬ್ಲ್ಯೂ 320ಡಿ ಜಿಟಿ ಸ್ಪೋರ್ಟ್ ಕಾರು ಕೇವಲ ಡೀಸೆಲ್ ಮಾದರಿಯಲ್ಲಿ ದೊರೆಯಲಿದೆ. 1,995ಸಿಸಿ ಟ್ವಿನ್ ಪವರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 190 ಬಿಹೆಚ್‍‍ಪಿ ಮತ್ತು 400ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 8 ಸ್ಪೀಡ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ 3 ಸಿರೀಸ್ ಗ್ರ್ಯಾನ್ ಟೂರಿಸ್ಮೊ ಸ್ಪೋರ್ಟ್ ಕಾರು..

ಈ ಕಾರು ಬಿಎಮ್‍‍ಡಬ್ಲ್ಯೂ ಸಂಸ್ಥೆಯ ಡ್ರೈವಿಂಗ್ ಎಕ್ಸ್ಪೀರಿಯನ್ಸ್ ಕಂಟ್ರೋಲ್ ಸಿಸ್ಟಮ್ ಅನ್ನು ಪಡೆದುಕೊಂಡಿದ್ದು, ಕಂಫರ್ಟ್, ಎಕೊಪ್ರೊ, ಸ್ಪೋರ್ಟ್ ಮತ್ತು ಸ್ಪೋರ್ಟ್ ಪ್ಲಸ್ ಎಂಬ ನಾಲ್ಕು ವಿವಿಧ ಡ್ರೈವಿಂಗ್ ಮೋಡ್‍‍ಗಳನ್ನು ಪಡೆದಿದೆ.

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ 3 ಸಿರೀಸ್ ಗ್ರ್ಯಾನ್ ಟೂರಿಸ್ಮೊ ಸ್ಪೋರ್ಟ್ ಕಾರು..

ವೈಶಿಷ್ಟ್ಯತೆಗಳು

ಬಿಎಮ್‍ಡಬ್ಲ್ಯೂ 320ಡಿ ಜಿಟಿ ಸ್ಪೋರ್ಟ್ ಕಾರಿನಲ್ಲಿ ಆಪಲ್ ಕಾರ್ ಪ್ಲೇ ಸಪೋರ್ಟ್ ಮಾಡುವ 22.3 ಸೆಂಟಿ ಮೀಟರ್‍‍ನ ಕಲರ್ ಡಿಸ್ಪ್ಲೇ, ಡಿವಿಡಿ ಡ್ರೈವ್ ಮತ್ತು 20ಜಿಬಿಯಷ್ಟು ಇಂಟಿಗ್ರೇಟೆಡ್ ಹಾರ್ಡ್ ಡ್ರೈವ್ 3ಡಿ ಮ್ಯಾಪ್‍‍ನೊಂದಿಗೆ ನ್ಯಾವಿಗೇಷನ್ ಸಿಸ್ಟಮ್ ಪ್ರೊಫೆಷನಲ್, ಬಿಎಮ್‍ಡಬ್ಲ್ಯೂ ಆಪ್ಸ್, ಬ್ಲೂಟೂತ್ ಮತ್ತು ಯುಎಸ್‍ಬಿ ಕನೆಕ್ಟಿವಿಟಿ, ರಿಯರ್ ವ್ಯೂ ಕ್ಯಾಮೆರಾ ಎಂಬ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ 3 ಸಿರೀಸ್ ಗ್ರ್ಯಾನ್ ಟೂರಿಸ್ಮೊ ಸ್ಪೋರ್ಟ್ ಕಾರು..

ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ 6 ಏರ್‍‍ಬ್ಯಾಗ್‍‍ಗಳು, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಬ್ರೇಕ್ ಅಸ್ಸಿಸ್ಟ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್, ಕಾರ್ನೆರಿಂಗ್ ಬ್ರೇಕಿಂಗ್ ಕಂಟ್ರೋಲ್, ಸೈಡ್ ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಿಕ್ ವೆಹಿಕಲ್ ಇಮ್ಮೊಬಿಲೈಸರ್ ಮತ್ತು ಕ್ರಾಶ್ ಸೆನ್ಸಾರ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ 3 ಸಿರೀಸ್ ಗ್ರ್ಯಾನ್ ಟೂರಿಸ್ಮೊ ಸ್ಪೋರ್ಟ್ ಕಾರು..

ಹೊಸ 320ಡಿ ಜಿಟಿ ಸ್ಪೋರ್ಟ್ ಸೆಡಾನ್ ಕಾರು ಆಲ್ಫೈನ್ ವೈಟ್, ಬ್ಲಾಕ್ ಸಫೈರ್ ಮೆಟಾಲಿಕ್, ಗ್ಲಾಶಿಯರ್ ಮೆಟಾಲಿಕ್, ಇಂಪೀರಿಯಲ್ ಬ್ಲ್ಯೂ ಬ್ರಿಲಿಯಂಟ್ ಮೆಟಾಲಿಕ್, ಮೆಲ್ಬೌರ್ನ್ ರೆಡ್ ಮೆಟಾಲಿಕ್, ಜಟೊಬಾ ಮೆಟಾಲಿಕ್ ಮತ್ತು ಆರ್ಕ್ಟಿಕ್ ಗೇರ್ ಎಫೆಕ್ಟ್ ಮೆಟಾಲಿಕ್ ಎಂಬ ಏಳು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

Most Read Articles

Kannada
Read more on bmw sports sedan luxury cars
English summary
BMW 3 Series Gran Turismo Sport Launched In India.
Story first published: Thursday, July 12, 2018, 18:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X