ಬಿಡುಗಡೆಗೊಂಡ ಬಿಎಮ್‍ಡಬ್ಲೂ 630ಐ ಗಿಟಿ ಕಾರಿನ ಮತ್ತೊಂದು ವೇರಿಯಂಟ್..

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಮ್‍ಡಬ್ಲೂ ತನ್ನ 6 ಸಿರೀಸ್ ಜಿಟಿ ಕಾರನ್ನು ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಳಿಸಿದೆ.

By Rahul Ts

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಮ್‍ಡಬ್ಲೂ ತನ್ನ 6 ಸಿರೀಸ್ ಜಿಟಿ ಕಾರನ್ನು ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಳಿಸಿದ್ದು, ಕೇವಲ ಈ ಕಾರನ್ನು ಸ್ಪೋರ್ಟ್ಸ್ ಲೈನ್ ಎಂಬ ವೇರಿಯಂಟ್‍‍ನಲ್ಲಿ ಮಾತ್ರ ಬಿಡುಗಡೆಗೊಳಿಸಿತ್ತು.

ಬಿಡುಗಡೆಗೊಂಡ ಬಿಎಮ್‍ಡಬ್ಲೂ 630ಐ ಗಿಟಿ ಕಾರಿನ ಮತ್ತೊಂದು ವೇರಿಯಂಟ್..

ಇದೀಗ ಬಿಎಮ್‍ಡಬ್ಲೂ ಸಂಸ್ಥೆಯು ತಮ್ಮ 6 ಸಿರೀಸ್ ಪೆಟ್ರೋಲ್ ಕಾರಿನ ಲಕ್ಷ್ಯುರಿ ಲೈನ್ ಎಂಬ ವೇರಿಯಂಟ್ ಅನ್ನು ಕೂಡಾ ಬಿಡುಗಡೆಗೊಳಿಸಿದ್ದು, ಬಿಎಮ್‍ಡಬ್ಲ್ಯೂ 630ಐ ಲಕ್ಷ್ಯುರಿ ಲೈನ್ ವೇರಿಯಂಟ್ ಕಾರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.61.80 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಬಿಡುಗಡೆಗೊಂಡ ಬಿಎಮ್‍ಡಬ್ಲೂ 630ಐ ಗಿಟಿ ಕಾರಿನ ಮತ್ತೊಂದು ವೇರಿಯಂಟ್..

ಇದಲ್ಲದೆ ಬಿಎಮ್‍‍ಡಬ್ಲ್ಯೂ ಸಂಸ್ಥೆಯು ಮೊನ್ನೆಯಷ್ಟೆ ತಮ್ಮ 6 ಸಿರೀಸ್ ಕಾರಿನ ಡೀಸೆಲ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಈ ಕಾರು ಕೂಡಾ ಲಕ್ಷ್ಯುರಿ ಲೈನ್ ಮತ್ತು ಎಮ್-ಸ್ಪೋರ್ಟ್ ವೇರಿಯಂಟ್ ಎಂಬ ಎರಡು ವೇರಿಯಂಟ್‍‍ಗಳಲ್ಲಿ ಲಭ್ಯವಿದೆ.

ಬಿಡುಗಡೆಗೊಂಡ ಬಿಎಮ್‍ಡಬ್ಲೂ 630ಐ ಗಿಟಿ ಕಾರಿನ ಮತ್ತೊಂದು ವೇರಿಯಂಟ್..

ಹೊಸ 6 ಸಿರೀಸ್ ಗ್ರ್ಯಾನ್ ಟೂರಿಸ್ಮೊ ಕಾರಿನ ಲಕ್ಷ್ಯುರಿ ಲೈನ್ ಪೆಟ್ರೋಲ್ ವೇರಿಯಂಟ್ ಜುಲೈ‍‍ನಿಂದ ಖರೀದಿಗೆ ಲಭ್ಯವಿದೆ. ಈ ಕಾರು ಹೊರಭಾಗದಲ್ಲಿ ಆಳವಡಿಸಿರುವ ಡಿಸ್ಟಿನ್ಕ್ಟೀವ್ ಬೊನೆಟ್ ಕಾರಿನ ಲುಕ್ ಅನ್ನು ಹೆಚ್ಚಿಸಿದೆ. ಫ್ರೇಮ್‍‍‍ಲೆಸ್ ವಿಂಡೋಸ್ ಮತ್ತು ಕೌಪ್‍‍ನಂತೆ ಕಾಣುವ ರೂಫ್‍‍ಲೈನ್ ಈ ಕಾರನ್ನು ಸ್ಪೋರ್ಟ್ಸ್ ಕಾರಿನಂತೆ ಕಾಣಲು ಸಹಕರಿಸುತ್ತದೆ.

ಬಿಡುಗಡೆಗೊಂಡ ಬಿಎಮ್‍ಡಬ್ಲೂ 630ಐ ಗಿಟಿ ಕಾರಿನ ಮತ್ತೊಂದು ವೇರಿಯಂಟ್..

ಬಿಎಮ್‍ಡಬ್ಲ್ಯೂ ಕಾರಿನ ಒಳಭಾಗದಲ್ಲಿ ನಾಯ್ಸ್ ಇನ್ಸೂಲೇಷನ್, 2 ವಿಭಜಿತ ಸನ್‍ರೂಫ್, ಆರಾಮದಾಯಕ ಕ್ಯೂಷನ್ ಹೆಡ್‍‍ರೆಸ್ಟ್ ಮತ್ತು ವಿದ್ಯುತ್‍‍ನಿಂದ ಅಡ್ಜಸ್ಟ್ ಮಾಡಬಹುದಾದ ಬ್ಲೈಂಡ್‍‍ಫೋಲ್ಡ್ಸ್ ಅನ್ನು ಅಳವಡಿಸಲಾಗಿದೆ. ಇದಲ್ಲದೆ ಕಾರಿನ ಒಳಭಾಗವನ್ನು ಫೈನ್ ವುಡ್ಸ್ ನಿಂದ ಸಜ್ಜುಗೊಳಿಸಲಾಗಿದೆ.

ಬಿಡುಗಡೆಗೊಂಡ ಬಿಎಮ್‍ಡಬ್ಲೂ 630ಐ ಗಿಟಿ ಕಾರಿನ ಮತ್ತೊಂದು ವೇರಿಯಂಟ್..

ಬಿಎಮ್‍ಡಬ್ಲ್ಯೂ 630ಐ ಜಿಟಿ ಕಾರು ಬಹುಕ್ರಿಯಾತ್ಮಕ ಇನ್ಸ್ಟ್ರೂಮೆಂಟ್ ಡಿಸ್ಪ್ಲೇ, ಟಚ್ ಕಂಟ್ರೋಲ್, ಬಿಎಮ್‍‍ಡಬ್ಲ್ಯೂ ಆಪ್ಸ್ ಮತ್ತು ಕನೆಕ್ಟಿವಿಟಿ, ಆಪಲ್ ಕಾರ್‍‍ಫ್ಲೇ ಮತ್ತು ಆಂಡ್ರಾಯ್ಡ್ ಆಟೋ ಎಂಬ ಇನ್ನಿತರೆ ವೈಶಿಷ್ಟ್ಯತೆಗಳನ್ನು ಕೂಡಾ ಪಡೆದುಕೊಂಡಿದೆ.

ಬಿಡುಗಡೆಗೊಂಡ ಬಿಎಮ್‍ಡಬ್ಲೂ 630ಐ ಗಿಟಿ ಕಾರಿನ ಮತ್ತೊಂದು ವೇರಿಯಂಟ್..

ಬಿಎಮ್‍‍ಡಬ್ಲ್ಯೂ 6 ಸಿರೀಸ್ ಗಿಟಿ ಕಾರು ಇದಲ್ಲದೆ ಎರಡು 10.2 ಇಂಚಿನ ಕಲರ್ ಸ್ಕ್ರೀನ್‍‍‍ಗಳನ್ನು ಪ್ಯಾಸೆಂಜರ್ ಸೀಟ್‍‍ನ ಹಿಂದೆ ಅಳವಡಿಸಲಾಗಿದೆ. ಈ ಸ್ಕ್ರೀನ್‍‍ಗಳು ಬ್ಲ್ಯೂ ರೇ ಪ್ಲೇಯರ್, ಹೆಚ್‍‍ಡಿಎಮ್‍ಐ ಕನೆಕ್ಷನ್ ಮತ್ತು ಎಮ್‍‍ಪಿ3 ಪ್ಲೇಯರ್ ಆಯ್ಕೆಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಬಿಎಮ್‍ಡಬ್ಲೂ 630ಐ ಗಿಟಿ ಕಾರಿನ ಮತ್ತೊಂದು ವೇರಿಯಂಟ್..

ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ 6 ಅರ್‍‍‍ಬ್ಯಾಗ್ಸ್, ಎಬಿಎಸ್ ಬ್ರೇಕಿಂಗ್ ಅಸ್ಸಿಸ್ಟ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಕಾರ್ನೆರಿಂಗ್ ಬ್ರೇಕ್ ಕಂಟ್ರೋಲ್, ಹಿಲ್ ಡೆಸ್ಸೆಂಟ್ ಕಂಟ್ರೋಲ್, ರನ್ ಫ್ಲ್ಯಾಟ್ ಟೈರ್ಸ್, ಸೈಡ್ ಇಂಪ್ಯಾಕ್ಟ್ ಪ್ರೊಟೆಕ್ಷನ್ ಮತ್ತು ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ ಎಂಬ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಬಿಎಮ್‍ಡಬ್ಲೂ 630ಐ ಗಿಟಿ ಕಾರಿನ ಮತ್ತೊಂದು ವೇರಿಯಂಟ್..

ಎಂಜಿನ್ ಸಾಮರ್ಥ್ಯ

ಬಿಎಮ್‍‍ಡಬ್ಲ್ಯೂ 6 ಸಿರೀಸ್ ಜಿಟಿ ಕಾರು 2.0 ಲೀಟರ್ 4 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 258ಬಿಹೆಚ್‍‍ಪಿ ಮತ್ತು 400ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಸ್ಪೋರ್ಟ್ಸ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Most Read Articles

Kannada
Read more on bmw sedan luxury cars
English summary
BMW 630i GT Luxury Line launched In India; Priced At Rs 61.80 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X