ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ದೇಶದಲ್ಲಿ ದಿನಂಪ್ರತಿ ಸಾವಿರಾರು ಹೊಸ ವಾಹನಗಳು ರಸ್ತೆಗಿಳಿಯುತ್ತಿದ್ದು, ಮಾಲಿನ್ಯ ಪ್ರಮಾಣ ಕೂಡಾ ಅದೇ ರೀತಿಯಲ್ಲಿ ಹೆಚ್ಚುತ್ತಲೇ ಇದೆ. ಹೀಗಾಗಿ ಮಾಲಿನ್ಯ ಪ್ರಮಾಣವನ್ನ ತಗ್ಗಿಸುವ ಸಂಬಂಧ ಸುಪ್ರೀಂಕೋರ್ಟ್ ಹೊಸ ಕಾಯ್ದೆಯೊಂದನ್ನು ಜಾರಿ ಮಾಡುವಂತೆ ಕೇಂದ್ರ ಸಾರಿಗೆ ಇಲಾಖೆಗೆ ಸೂಚಿಸಿದ್ದು, ಇದರಿಂದ ಹೊಸ ವಾಹನಗಳ ಬೆಲೆಗಳು ಮತ್ತಷ್ಟು ದುಬಾರಿಯಾಗಲಿವೆ.

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ಸದ್ಯ ಮಾರುಕಟ್ಟೆಯಲ್ಲಿ ಬಿಎಸ್-4 ಮತ್ತು ಅದಕ್ಕೂ ಹೆಚ್ಚಿನ ಮಟ್ಟದ ತಾಂತ್ರಿಕ ಗುಣವೈಶಿಷ್ಟ್ಯ ಹೊಂದಿರುವ ವಾಹನಗಳಿಗೆ ಮಾತ್ರವೇ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶವಿದ್ದು, ಇದು ಕೂಡಾ ಮುಂದಿನ ಕೆಲವೇ ದಿನಗಳಲ್ಲಿ ನಿಷೇಧವಾಗುವುದು ಖಚಿತವಾಗಿದೆ. ಇದಕ್ಕೆ ಕಾರಣ, ಸದ್ಯ ಮಾರುಕಟ್ಟೆಯಲ್ಲಿರುವ ವಾಹನಗಳು ಮಿತಿ ಮೀರಿದ ಮಾಲಿನ್ಯ ಉತ್ಪತ್ತಿ ಮಾಡುತ್ತಿರುವುದು ದಿನೇ ದಿನೇ ಹೊಸ ಹೊಸ ಸಮಸ್ಯೆಗಳನ್ನು ಹುಟ್ಟುಹಾಕುತ್ತಿವೆ.

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ಈ ಹಿಂದೆ ಕೇಂದ್ರ ಸರ್ಕಾರವು 2017ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ದೇಶಾದ್ಯಂತ ಬಿಎಸ್-3 (ಭಾರತ್ ಸ್ಟೇಜ್) ಸೌಲಭ್ಯಗಳನ್ನು ಒಳಗೊಂಡ ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಮೇಲೆ ನಿಷೇಧ ನಿಷೇಧ ಹೇರಿದ್ದಲ್ಲದೆ ಬಿಎಸ್-4 ಮತ್ತು ಅದಕ್ಕೂ ಮೇಲ್ಪಟ್ಟ ವಾಹನ ಮಾದರಿಗಳ ಮಾರಾಟಕ್ಕೆ ಮಾತ್ರವೇ ಅವಕಾಶ ನೀಡಿತ್ತು.

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ಇದೀಗ ಮತ್ತೊಂದು ಮಹತ್ವದ ಹೆಜ್ಜೆಯಿಡುತ್ತಿರುವ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಸೂಚನೆಯೆಂತೆ 2020ರ ಏಪ್ರಿಲ್ 1ರಿಂದ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟ ಮೇಲೆ ನಿಷೇಧ ಹೇರುವುದು ಖಚಿತವಾಗಿದ್ದು, ಬಿಎಸ್-6 ವಾಹನಗಳು ಮತ್ತು ಅದಕ್ಕೂ ಹೆಚ್ಚಿನ ಮಟ್ಟದ ವಾಹನ ಮಾದರಿಗಳಿಗೆ ಮಾತ್ರವೇ ಅವಕಾಶ ನೀಡಲಿದೆ.

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ಹೊಸ ನಿಯಮ ಜಾರಿ ಉದ್ದೇಶ ಏನು?

ವಿಶ್ವಾದ್ಯಂತ ಈಗಾಗಲೇ ಪರಿಸರ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಹೆಚ್ಚು ಹೊಗೆ ಉಗುಳುವ ವಾಹನಗಳಿಗೆ ಬ್ರೇಕ್ ಹಾಕಲು ಯುರೋಪ್‌ನಲ್ಲಿ ಯುರೋ-6, ಇತರೆ ಖಂಡಗಳಲ್ಲಿ ವಿವಿಧ ಮಾದರಿಯ ಗುಣಮಟ್ಟದ ವಾಹನಗಳಿಗೆ ಮಾತ್ರವೇ ಅವಕಾಶವಿದ್ದು, ಇದರ ಭಾಗವಾಗಿ ಭಾರತದಲ್ಲಿ ಬಿಎಸ್-6 ವಾಹನಗಳು ರಸ್ತೆಗಿಳಿಯಲಿವೆ.

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ಯುರೋಪ್‌ನಲ್ಲಿ ಈ ಹಿಂದೆ 2016ರಿಂದಲೇ ಯುರೋ-6 ತಾಂತ್ರಿಕ ಅಂಶಗಳನ್ನು ಹೊಂದಿರುವ ವಾಹನಗಳಿಗೆ ಮಾತ್ರವೇ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದ್ದು, ಇದು ಬಿಎಸ್-6 ವೈಶಿಷ್ಟ್ಯತೆಗೆ ಸರಿಸಮನಾಗಿದೆ.

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ಹೊಸ ನಿಯಮ ಜಾರಿಯಿಂದಾಗಿ ವಾಹನ ಎಂಜಿನ್ ಮಾದರಿಗಳಲ್ಲಿ ಭಾರೀ ಬದಲಾವಣೆಯಾಗಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಎಂಜಿನ್ ಮಾದರಿಗಿಂತಲೂ ಬಿಎಸ್-6 ಹೆಚ್ಚಿನ ಗುಣಮಟ್ಟದೊಂದಿಗೆ ಹೊಗೆ ಉಗುಳುವ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ತಗ್ಗಿಸಲಿದೆ.

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ಹೀಗಿರುವಾಗ ಮಾಲಿನ್ಯದಲ್ಲಿ ಬಹುದೊಡ್ಡ ಕೊಡುಗೆ ಹೊಂದಿರುವ ಭಾರತದಲ್ಲಿ ಬಿಎಸ್-6 ವೈಶಿಷ್ಟ್ಯತೆಯ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೆಚ್ಚಿನ ಒತ್ತಡಗಳಿದ್ದು, ಇದೀಗ ಸುಪ್ರೀಂಕೋರ್ಟ ಕೂಡಾ ಈ ಕುರಿತಂತೆ ಮಹತ್ವದ ಆದೇಶವನ್ನು ಹೊರಡಿಸಿರುವುದು ಕೇಂದ್ರ ಸರ್ಕಾರವು ಪಾಲನೆ ಮಾಡಲೇಬೇಕಾದ ಅನಿವಾರ್ಯತೆಯಲ್ಲಿದೆ.

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ತೀರ್ಪಿನ ಪ್ರಕಾರ, ಮುಂಬರುವ ದಿನಗಳಲ್ಲಿ ಮಾಲಿನ್ಯ ತಡೆಯಲು ಬಿಎಸ್-6 ತಾಂತ್ರಿಕ ಅಂಶಗಳ ಅಳವಡಿಕೆ ಅವಶ್ಯವಿದ್ದು, 2020ರ ಏಪ್ರಿಲ್ 1ರಿಂದಲೇ ಹೊಸ ನಿಯಮ ಜಾರಿಗೆ ಸಿದ್ದತೆ ಮಾಡಿಕೊಳ್ಳುವಂತೆ ಕೇಂದ್ರಕ್ಕೆ ಖಡಕ್ ಸೂಚನೆ ನೀಡಿದೆ.

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ವಾಹನಗಳ ಬೆಲೆ ಗಗನಮುಖಿ..!

ಮೇಲೆ ಹೇಳಿದಂತೆ ಬಿಎಸ್ 6 ವಾಹನಗಳ ಎಂಜಿನ್ ಮಾದರಿಯು ಸುಧಾರಿತ ತಂತ್ರಜ್ಞಾನ ಹೊಂದಿರುವುದರಿಂದ ಕಾರಿನ ಬೆಲೆಗಳು ಶೇ.5 ರಿಂದ ಶೇ.10ರಷ್ಟು ಹೆಚ್ಚಳವಾಗಲಿದ್ದು, ಉದಾಹರಣೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ರೂ.5 ಲಕ್ಷ ಮೌಲ್ಯದ ಕಾರು ಹೊಸ ಎಂಜಿನ್ ಜೋಡಣೆಯ ನಂತರ ಕನಿಷ್ಠ ಅಂದ್ರು ರೂ. 25 ಸಾವಿರದಿಂದ ರೂ. 40 ಸಾವಿರ ಹೆಚ್ಚಳವಾಗಬಹುದು.

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ಹಾಗೆಯೇ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಪ್ರತಿ ಲಕ್ಷಕ್ಕೆ ರೂ. 6 ಸಾವಿರದಿಂದ ರೂ.10 ಸಾವಿರ ಹೆಚ್ಚಳವಾದಲ್ಲಿ ವಾಣಿಜ್ಯ ವಾಹನಗಳ ಬೆಲೆಯಲ್ಲೂ ಭಾರೀ ಹೆಚ್ಚಳ ಕಂಡುಬರಲಿದೆ. ಇದಲ್ಲದೇ ಬಿಎಸ್ 6 ಬರುವುದಕ್ಕೂ ಮುನ್ನ 2019ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ 125 ಸಿಸಿ ಮೇಲ್ಪಟ್ಟ ವಾಹನಗಳಲ್ಲಿ ಎಬಿಎಸ್ ಕಡ್ಡಾಯ ನಿಯಮ ಕೂಡಾ ವಾಹನಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ.

MOST READ: ದೇಶದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆ..!

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

125 ಸಿಸಿ ಬೈಕ್‌ಗಳಿಗೆ ಎಬಿಎಸ್..!

ವಾಹನ ಜಗತ್ತಿನ ಕ್ರಾಂತಿಕಾರಿ ಬೆಳವಣಿಗೆಯೊಂದರಲ್ಲಿ ದೇಶದಲ್ಲೂ 125 ಸಿಸಿ ಹಾಗೂ ಮೇಲ್ಪಟ್ಟ ಬೈಕ್‌ಗಳಿಗೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಬಳಕೆ ಕೂಡಾ ಕಡ್ಡಾಯವಾಗಲಿದೆ. ದೇಶದಲ್ಲಿ ರಸ್ತೆ ಅಪಘಾತದಿಂದಾಗಿ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಇಂತಹದೊಂದು ಗಮನಾರ್ಹ ಬೆಳವಣೆಗೆ ಕಂಡುಬಂದಿದೆ.

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ಸಾರಿಗೆ ಇಲಾಖೆಯು 2019ರ ಎಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಎಬಿಎಸ್ ಕಡ್ಡಾಯ ಬಳಕೆಯನ್ನು ಜಾರಿಗೆ ತರುತ್ತಿದ್ದು, ನಿಮಗೆಲ್ಲರಿಗೂ ತಿಳಿದಿರುವಂತೆಯೇ ಭಾರತೀಯ ಮಧ್ಯಮ ವರ್ಗದ ಜನರು ಮೋಟಾರುಸೈಕಲ್‌ಗಳನ್ನೇ ಅತಿ ಹೆಚ್ಚು ನೆಚ್ಚಿಕೊಂಡಿದ್ದಾರೆ. ಇದರಿಂದಲೇ ಮೋಟಾರುಸೈಕಲ್ ಮಾರುಕಟ್ಟೆಯು ಆಗಾಧವಾಗಿ ಬೆಳೆದು ನಿಂತಿದೆ.

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ಇನ್ನೊಂದೆಡೆ ಸುರಕ್ಷತೆಯತ್ತ ಗಮನ ಹಾಯಿಸಿದಾಗ ಅತ್ಯಂತ ಕೆಳ ಮಟ್ಟದಲ್ಲಿದ್ದು, ಸಾರಿಗೆ ಸಚಿವಾಲಯದ 2017ರ ಮಾಹಿತಿ ಪ್ರಕಾರ, ದೇಶಾದ್ಯಂತ ರಸ್ತೆ ಅಪಘಾತಗಳಲ್ಲಿ 40 ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನ ಸವಾರರು ಸಾವೀಗೀಡಾಗಿದ್ದರು.

MOST READ: ನಕಲಿ ನಂಬರ್ ಪ್ಲೇಟ್‍ ಮಾಫಿಯಾ- ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಹುಷಾರ್..!

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ಅಂದರೆ ದೇಶದ ರಸ್ತೆಯಲ್ಲಿ ನಡೆಯುವ ಒಟ್ಟು ಅಪಘಾತದ ಶೇಕಡಾ 60ರಷ್ಟು ದ್ವಿಚಕ್ರ ಸವಾರರೇ ಹೆಚ್ಚು ಪ್ರಾಣಕಳೆದುಕೊಳ್ಳುತ್ತಿದ್ದು, ಇಂತಹ ಬಹುತೇಕ ಪ್ರಕರಣಗಳಲ್ಲಿ ಸವಾರರು ಕನಿಷ್ಠ ಹೆಲ್ಮೆಟ್ ಕೂಡಾ ಧರಿಸುವುದಿಲ್ಲವೆಂಬುದು ಕಂಡುಬಂದಿದೆ.

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ಇದರಿಂದ ಪ್ರಯಾಣಿಕ ಅಪಾಯದಿಂದ ಪಾರಾಗುವ ಎಲ್ಲ ಸಾಧ್ಯತೆಗಳು ಕ್ಷೀಣಿಸುತ್ತದೆ. ಈಗ ಯುರೋಪ್ ರಸ್ತೆ ಕಾನೂನಿಂದ ಪ್ರೇರಣೆ ಪಡೆದಿರುವ ಭಾರತದ ಸಾರಿಗೆ ಅಧಿಕಾರಿಗಳು ದೇಶದಲ್ಲೂ 125 ಸಿಸಿ ಹಾಗೂ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಎಬಿಎಸ್ ಬಳಕೆ ಕಡ್ಡಾಯಗೊಳಿಸಲು ನಿರ್ಧರಿಸಿದೆ.

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ಅಷ್ಟಕ್ಕೂ ಎಬಿಎಸ್ ಎಂದರೇನು? ಹೇಗೆ ಕೆಲಸ ಮಾಡುತ್ತದೆ?

ಎಬಿಎಸ್ ಪೂರ್ಣ ರೂಪವೇ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್). ಸಾಮಾನ್ಯವಾಗಿ ಹಠಾತ್ ಆಗಿ ಬ್ರೇಕ್ ಒತ್ತಿದಾಗ ಚಕ್ರದ ಚಾಲನೆ ಒಮ್ಮೆಲೇ ನಿಲುಗಡೆಯಾಗುತ್ತದೆ. ಇದರ ಪರಿಣಾಮ ಸ್ಟೀರಿಂಗ್ ಹಾಗೂ ಹ್ಯಾಂಡಲ್ ಲಾಕ್ ಆಗಿ ಗಾಡಿ ಸ್ಕಿಡ್ ಆಗುವ ಸಾಧ್ಯತೆ ಇದ್ದು, ಈ ವೇಳೆ ಚಾಲಕರಿಗೆ ಅಪಘಾತದಿಂದ ತಪ್ಪಿಸಿಕೊಳ್ಳಲು ಅವಕಾಶವಿರುವುದಿಲ್ಲ.

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ಇಂತಹ ಅವಘಡ ಸಾಧ್ಯತೆಗಳನ್ನು ತಪ್ಪಿಸುವ ಹಾಗೂ ಬ್ರೇಕಿಂಗ್ ಅಂತರವನ್ನು ಸಾಕಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಆಟೋ ಎಂಜಿನಿಯರ್‌ಗಳು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಎಂಬ ಬ್ರೇಕಿಂಗ್ ತಂತ್ರಜ್ಞಾನವನ್ನು ಪರಿಚಯಿಸಿರುವುದು.

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

ಬ್ರೇಕ್ ಒತ್ತಿದ ಸಂದರ್ಭದಲ್ಲಿ ಚಕ್ರ ಹಠಾತ್ ಆಗಿ ಬಂದ್ ಆಗುವುದಿಲ್ಲ. ಬದಲಾಗಿ ವೇಗವನ್ನು ಕಡಿತಗೊಳಿಸಿ, ತಿರುಗಿಸುತ್ತಲೇ ಇರುತ್ತದೆ. ಇದರಿಂದ ಅಪಘಾತ ಸಂದರ್ಭದಲ್ಲಿ ಸವಾರರು ತಮ್ಮ ವಾಹನದ ದಿಕ್ಕನ್ನು ಬದಲಾಯಿಸುವ ಅವಕಾಶವಿರುತ್ತದೆ. ಈ ಮೂಲಕ ಆಗಬಹುದಾದ ದುರಂತಗಳನ್ನು ತಪ್ಪಿಸಬಹುದಾಗಿದೆ.

Most Read Articles

Kannada
English summary
How BS-VI norms will affect auto makers, buyers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X