ಎಸ್‍‍ಯುವಿ ಪ್ರಿಯರಿಗೊಂದು ಸಿಹಿಸುದ್ಧಿ-ಮಾರಾಟಕ್ಕಿವೆ ಆರ್ಮಿ ಜಿಪ್ಸಿ..

ಇಂಡಿಯನ್ ಆರ್ಮಿ ಅಗಾಗ ತಮ್ಮ ಹಳೆಯ ವಾಹನಗಳನ್ನು ಹರಾಜಿಗಿಟ್ಟು, ಆ ಜಾಗದಲ್ಲಿ ಹೊಸ ವಾಹನಗಳನ್ನು ಭರ್ತಿ ಮಾಡುತ್ತದೆ. ಈ ನಿಟ್ಟಿನಲಿ ಈ ಬಾರಿಯು ಕೂಡಾ ಭಾರೀ ಸಂಖ್ಯೆಯಲ್ಲಿ ತಮ್ಮ ಜಿಪ್ಸಿ ಎಸ್‍‍ಯುವಿ ಕಾರುಗಳನ್ನು ಮಾರಾಟಮಾಡಲು ತಯಾರಾಗಿದೆ.

By Rahul Ts

ಇಂಡಿಯನ್ ಆರ್ಮಿ ಅಗಾಗ ತಮ್ಮ ಹಳೆಯ ವಾಹನಗಳನ್ನು ಹರಾಜಿಗಿಟ್ಟು, ಆ ಜಾಗದಲ್ಲಿ ಹೊಸ ವಾಹನಗಳನ್ನು ಭರ್ತಿ ಮಾಡುತ್ತದೆ. ಈ ನಿಟ್ಟಿನಲ್ಲಿ ಈ ಬಾರಿಯು ಕೂಡಾ ಭಾರೀ ಸಂಖ್ಯೆಯ ಜಿಪ್ಸಿ ಎಸ್‍‍ಯುವಿ ಕಾರುಗಳನ್ನು ಮಾರಾಟ ಮಾಡಲು ತಯಾರಿ ನಡೆಸಿದೆ. ಯುದ್ಧ ಸಮಯದಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿದ ಜಿಪ್ಸಿ ಕಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಎಸ್‌ಯುವಿ ಪ್ರಿಯರಿಗೆ ಇದೊಂದು ಸುವರ್ಣಾವಕಾಶ ಎನ್ನಬಹುದು.

ಎಸ್‍‍ಯುವಿ ಪ್ರಿಯರಿಗೊಂದು ಸಿಹಿಸುದ್ಧಿ-ಮಾರಾಟಕ್ಕಿವೆ ಆರ್ಮಿ ಜಿಪ್ಸಿ..

ಅತ್ಯಂತ ಶಕ್ತಿಯುತವಾದ ಇಂಡಿಯನ್ ಆರ್ಮಿಗೆ ಮಾರುತಿ ಜಿಪ್ಸಿ ಎಸ್‍‍ಯುವಿಗಳು ದಶಕಗಳ ಕಾಲ ಸೇವೆಯನ್ನು ನೀಡುತ್ತಲೇ ಬಂದಿದೆ. ಆದ್ರೆ ಸುರಕ್ಷಾ ದೃಷ್ಟಿಯಿಂದ ಮತ್ತು ತಾಂತ್ರಿಕ ಉನ್ನತಿಕರಣ ಹಿನ್ನೆಲೆಯಲ್ಲಿ ಜಿಪ್ಸಿ ಬದಲಾಗಿ ಟಾಟಾ ಸಫಾರಿ ಸ್ಟ್ರೋರ್ಮ್ ಕಾರುಗಳನ್ನು ಖರೀದಿಸಲಾಗುತ್ತಿದೆ.

ಎಸ್‍‍ಯುವಿ ಪ್ರಿಯರಿಗೊಂದು ಸಿಹಿಸುದ್ಧಿ-ಮಾರಾಟಕ್ಕಿವೆ ಆರ್ಮಿ ಜಿಪ್ಸಿ..

ಟಾಟಾ ಮೋಟಾರ್ಸ್ ಇಂಡಿಯನ್ ಆರ್ಮಿಗೆ ಬೇಕಾದ ಸಫಾರಿ ಸ್ಟ್ರೋಮ್ ಎಸ್‍‍ಯುವಿ ಕಾರುಗಳನ್ನು ಪ್ರತ್ಯೇಕವಾಗಿ ಅಭಿವೃದ್ಧಿ ಪಡಿಸಿ ಸೇನೆಗೆ ಒದಗಿಸುತ್ತಿದ್ದು, ಸೇನಾಧಿಕಾರಿಗಳು ಮತ್ತು ಸಿಬ್ಭಂದಿಗಳು ಇವುಗಳನ್ನ ತಮ್ಮ ಬೇಡಿಕೆಗೆ ಅನುಸಾರವಾಗಿ ಈ ಕಾರನ್ನು ಬಳಸುತ್ತಾರೆ.

ಎಸ್‍‍ಯುವಿ ಪ್ರಿಯರಿಗೊಂದು ಸಿಹಿಸುದ್ಧಿ-ಮಾರಾಟಕ್ಕಿವೆ ಆರ್ಮಿ ಜಿಪ್ಸಿ..

ಹೀಗಾಗಿಯೇ ಇಂಡಿಯನ್ ಆರ್ಮಿಯಲ್ಲಿ ಸುಧೀರ್ಘ ಕಾಲ ಸೇವೆಯನ್ನು ಒದಗಿಸಿದ ಜಿಪ್ಸಿ ವಾಹನಗಳು ಈಗ ಸೇವೆಯಿಂದ ವಿಮುಕ್ತಿಗೊಳ್ಳುತ್ತಿದ್ದು, ಆರ್ಮಿ ಉಪಯೋಗಿಸಿದ್ದ ಜಿಪ್ಸಿ ವಾಹನಗಳನ್ನು ಆಯ್ಕೆ ಮಾಡಲಿರವ ಗ್ರಾಹಕರಿಗೆ 15 ವರ್ಷದ ವಾರೆಂಟಿಯೊಂದಿಗೆ ಹೊಸ ರಿಜಿಸ್ಟ್ರೇಷನ್ ಕೂಡಾ ನೀಡಲಿವೆ.

ಎಸ್‍‍ಯುವಿ ಪ್ರಿಯರಿಗೊಂದು ಸಿಹಿಸುದ್ಧಿ-ಮಾರಾಟಕ್ಕಿವೆ ಆರ್ಮಿ ಜಿಪ್ಸಿ..

ಇಂಡಿಯನ್ ಆರ್ಮಿಗೆ ಸೇವೆ ಸಲ್ಲಿಸಿದ ಮಾರುತಿ ಜಿಪ್ಸಿ ವಾಹನವನ್ನು ಖರೀದಿ ಮಾಡಲು ಬಯಸುವವರಿಗೆ ಇದೊಂದು ಸುವರ್ಣಾವಕಾಶ. ಹರಾಜಿನಲ್ಲಿ ಇವುಗಳನ್ನು ತಮ್ಮದಾಗಿಸಿಕೊಳ್ಳಲು ಬಯಸುವವರು ಸಾಂಕೇತಿಕವಾಗಿ ಮತ್ತು ವಿನ್ಯಾಸದ ಪರವಾಗಿ ಹಲವು ಮಾಡಿ‍‍ಫಿಕೇಷನ್ ಮಾಡಿಸಿದ್ದಲ್ಲಿ ಹೊಸದಾಗಿ ಕಾಣಿಸುತ್ತವೆ.

ಎಸ್‍‍ಯುವಿ ಪ್ರಿಯರಿಗೊಂದು ಸಿಹಿಸುದ್ಧಿ-ಮಾರಾಟಕ್ಕಿವೆ ಆರ್ಮಿ ಜಿಪ್ಸಿ..

ಒಂದೊಂದು ವಾಹನವನ್ನು ಒಂದು ಲಕ್ಷ ರೂಪಾಯಿಯಿಂದ ಹರಾಜನ್ನು ಶುರು ಮಾಡಲಿದೆ. ಇಂಡಿಯನ್ ಆರ್ಮಿ ಹರಾಜಿನಿಂದ ಹತ್ತಾರು ಸಂಖ್ಯೆಯಲ್ಲಿ ಮಾರುತಿ ಜಿಪ್ಸಿ ವಾಹನವನ್ನು ತಮ್ಮದಾಗಿಸಿಕೊಂಡ ಪುಣೆಗೆ ಸೇರಿದ ನೀಲೇಶ್ ಜೆಂಡೆ ಅವುಗಳನ್ನು ಪುಣೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಎಸ್‍‍ಯುವಿ ಪ್ರಿಯರಿಗೊಂದು ಸಿಹಿಸುದ್ಧಿ-ಮಾರಾಟಕ್ಕಿವೆ ಆರ್ಮಿ ಜಿಪ್ಸಿ..

ಈ ವಾಹನಗಳನ್ನು ದೇಶದಲ್ಲಿ ಎಲ್ಲಿ ಬೇಕಾದರೂ ಡೆಲಿವರಿ ಮಾಡುತ್ತಾರಂತೆ. ಮತ್ತು ಆಯಾ ರಾಷ್ಟ್ರದಲ್ಲಿ ಇವುಗಳನ್ನು 15 ವರ್ಷದ ವರೆಗು ನೂತನ ವಾಹನ ರಿಜಿಸ್ಟ್ರೇಷನ್ ಅನ್ನು ಮಾಡಿಸಿಕೊಳ್ಳಬಹುದು. ಆರ್‍ಮಿ ಸರ್ವಿಸ್‍‍ನಿಂದ ಹೊರಬಿದ್ದ ವಾಹನಗಳು ಹೆಚ್ಚು ಕಾಲದ ವರೆಗು ಉತ್ತಮ ಕಂಡೀಷನ್‍‍ನಲ್ಲಿಯೆ ಇದೆ. ಆದರೆ ತಾಂತ್ರಿಕವಾಗಿ ಕೊಂಚ ರಿಪೇರಿಗಳನ್ನು ಮಾಡತಕ್ಕದ್ದು ಎಂದು ಹೇಳಲಾಗುತ್ತಿದೆ.

ಎಸ್‍‍ಯುವಿ ಪ್ರಿಯರಿಗೊಂದು ಸಿಹಿಸುದ್ಧಿ-ಮಾರಾಟಕ್ಕಿವೆ ಆರ್ಮಿ ಜಿಪ್ಸಿ..

ನೀಲೇಷ್ ಜೆಂಡೆ ಮಾರಾಟಕ್ಕಿಟ್ಟಿರುವ ಮಾರುತಿ ಜಿಪ್ಸಿ ವಾಹನಗಳಲ್ಲಿ ಎಮ್‍‍ಜಿ10ಡಬ್ಲ್ಯೂ ಸಾಫ್ಟ್-ಟಾಪ್ ವೇರಿಯಂಟ್‍‍ಗಳಿವೆ. ಈ ವೇರಿಯಂಟ್‍‍ಗಳಲ್ಲಿ 80ಬಿಹೆಚ್‍‍ಪಿ ಮತ್ತು 110ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ 1.3 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನು ಅಳವಡಿಸಲಾಗಿದೆ.

ಎಸ್‍‍ಯುವಿ ಪ್ರಿಯರಿಗೊಂದು ಸಿಹಿಸುದ್ಧಿ-ಮಾರಾಟಕ್ಕಿವೆ ಆರ್ಮಿ ಜಿಪ್ಸಿ..

ಈ ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು ಮತ್ತು ಹೈ ರೇಂಜ್ ಟ್ಯಾನ್ಫರ್ ಕೇರ್ ಸಹಾಯದಿಂದ ಪವರ್ ಮತ್ತು ಟಾರ್ಕ್ ಅನ್ನು ಕಾರಿನ ನಾಲ್ಕು ಚಕ್ರಗಳಿಗೆ ರವಾನಿಸುತ್ತದೆ. ಮಾರುತಿ ಜಿಪ್ಸಿ ಅತ್ಯಂತ ಕಠಿಣವಾದ ಮತ್ತು ನಂಬಿಕೆನ್ನುಳಿಸಿಕೊಂಡ ವಾಹನವಾಗಿದೆ.

ಎಸ್‍‍ಯುವಿ ಪ್ರಿಯರಿಗೊಂದು ಸಿಹಿಸುದ್ಧಿ-ಮಾರಾಟಕ್ಕಿವೆ ಆರ್ಮಿ ಜಿಪ್ಸಿ..

ಲಕ್ಷ ರೂಪಾಯಿಗಳನ್ನು ನೀಡಿ ಇಂಡಿಯನ್ ಆರ್ಮಿ ಬಳಸಿದ ಮಾರುತಿ ಜಿಪ್ಸಿ ವಾಹನಗಳನ್ನು ಖರೀದಿ ಮಾಡಿದರೆ ಮತ್ತೊಂದು ಲಕ್ಷ ನೀಡಿ ಎಸ್‍‍ಯುವಿ ಮೊತ್ತವನ್ನು ಫುಲ್ ಕಂಡೀಷನ್‍‍ನಲ್ಲಿ ತಂದುಕೊಂಡರೆ ಹಲವು ವರ್ಷಗಳ ವರೆಗೆ ಎಂತಹ ತೊಂದರೆಗಳು ಇಲ್ಲದೆಯೆ ಬಳಸಬಹುದು.

ಎಸ್‍‍ಯುವಿ ಪ್ರಿಯರಿಗೊಂದು ಸಿಹಿಸುದ್ಧಿ-ಮಾರಾಟಕ್ಕಿವೆ ಆರ್ಮಿ ಜಿಪ್ಸಿ..

ಮರುತಿ ಜಿಪ್ಸಿ ವಾಹನಗಳ ತಯಾರಿಕೆ ಕೂಡಾ ಕೊನೆಗೊಳ್ಳಲಿದ್ದು, ಮುಂದಿನ ವರ್ಷದಲ್ಲಿ ಇವುಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಲಿದೆ. ಹೀಗಾಗಿ ಪ್ರಸ್ತುತ ಇರುವ ಮಾರುತಿ ಜಿಪ್ಸಿ ಭಾರತ್ ನ್ಯೂ ವೆಹಿಕಲ್ ಅಸ್ಸೆಸ್ಮೆಂಟ್ ಪ್ರೋಗ್ರಾಮ್ (BNVSAP) ಭದ್ರತಾ ಪರಿಣಾಮಗಳನ್ನು ಅನುಸರಿಸುವುದು ಕಷ್ಟವೇ ಸರಿ.

ಎಸ್‍‍ಯುವಿ ಪ್ರಿಯರಿಗೊಂದು ಸಿಹಿಸುದ್ಧಿ-ಮಾರಾಟಕ್ಕಿವೆ ಆರ್ಮಿ ಜಿಪ್ಸಿ..

ಮಾರುತಿ ಜಿಪ್ಸಿ ಗ್ರಾಹಕರಿಂದ ಅಷ್ಟಾಗಿ ಬೇಡಿಕೆಯೂ ದೊರೆಯುತ್ತಿಲ್ಲ. ಇಂಡಿಯನ್ ಆರ್ಮಿ ಕೂಡಾ ಈಗ ಇವುಗಳ ಸ್ಥಾನದಲ್ಲಿ ಅತ್ಯಾಧುನಿಕ ಟಾಟಾ ಸಫಾರಿ ಸ್ಟ್ರೋರ್ಮ್ ಎಸ್‍‍ಯುವಿ ಕಾರನ್ನು ಆಯ್ಕೆ ಮಾಡಿಕೊಂಡಿದೆ.

ಎಸ್‍‍ಯುವಿ ಪ್ರಿಯರಿಗೊಂದು ಸಿಹಿಸುದ್ಧಿ-ಮಾರಾಟಕ್ಕಿವೆ ಆರ್ಮಿ ಜಿಪ್ಸಿ..

ಇಂಡಿಯನ್ ಆರ್‍ಮಿ ಉಪಯೋಗಿಸಿದ ಮಾರುತಿ ಜಿಪ್ಸಿ ವಾಹನಗಳನ್ನು ಮಾರಾಟ ಮಾಡುತ್ತಿರುವ ನೀಲೇಷ್ ಜೆಂಡೆ ಅವರ ಫೇ‍‍ಸ್‍‍ಬುಕ್ ಖಾತೆಯ ಮುಖಾಂತರ ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದ್ದು, ಇಲ್ಲವಾದಲ್ಲಿ 9421252599 ಅಥವಾ 8208338220 ನಂಬರ್‍‍ಗೆ ಕರೆ ಮಾಡಬಹುದಾಗಿದೆ.

Most Read Articles

Kannada
Read more on maruti suzuki sale suv
English summary
Buy cheap used indian army maruti gypsy suvs register as new for 15 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X