Just In
- 11 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 12 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 13 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 14 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- News Realme: ಅಗ್ಗದ 5G ಸ್ಮಾರ್ಟ್ಫೋನ್ ಬಿಡುಗಡೆ ರೆಡಿ; ಇದರ ಬೆಲೆ ಎಷ್ಟು ಗೊತ್ತಾ?
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲೀಟರ್ಗೆ 25 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ 14 ಕಾರುಗಳು..
ಪ್ರತಿಯೊಬ್ಬರ ಜೀವನದಲ್ಲಿ ಕಾರು ಕೊಳ್ಳಬೇಕೆಂಬ ಆಲೋಚನೆಯು ಖಚಿತವಾಗಿಯು ಇರುತ್ತದೆ. ಎಲ್ಲಾ ಅನುಕೂಲವಾದಲ್ಲಿ ಕೆಲವರು ಶೀಘ್ರವೇ ಖರೀದಿಸುತ್ತಾರೆ. ಆದರೆ ಇನ್ನು ಕೆಲವರು ಅವಕಾಶಗಳಿಗಾಗಿ ಕಾಯುತ್ತಾರೆ.
ಪ್ರತಿಯೊಬ್ಬರ ಜೀವನದಲ್ಲಿ ಕಾರು ಕೊಳ್ಳಬೇಕೆಂಬ ಆಲೋಚನೆಯು ಖಚಿತವಾಗಿಯು ಇರುತ್ತದೆ. ಎಲ್ಲಾ ಅನುಕೂಲವಾದಲ್ಲಿ ಕೆಲವರು ಶೀಘ್ರವೇ ಖರೀದಿಸುತ್ತಾರೆ. ಆದರೆ ಇನ್ನು ಕೆಲವರು ಅವಕಾಶಗಳಿಗಾಗಿ ಕಾಯುತ್ತಾರೆ. ಏನೇ ಆದರೂ ಭಾರತದಲ್ಲಿ ಕಾರು ಖರೀದಿಸುವವರ ತಲೆಯಲ್ಲಿ ಮೈಲೇಜ್ ಪ್ರಧಾನ ಅಂಶವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.
ಯಾವ ಕಾರು ಖರೀದಿಸಿದರೂ ಮೈಲೇಜ್ ಪ್ರಧಾನ ಮುಖ್ಯವಾಗಿರುವ ಕಾರಣ, ಬಡ್ಜೆಟ್ ಬೆಲೆಯಲ್ಲಿ ಲೀಟರ್ಗೆ 25 ಕಿಲೋಮೀಟರ್ಗಿಂತ ಹೆಚ್ಚು ಮೈಲೇಜ್ ನೀಡುವ ಕಾರುಗಳ ಬಗ್ಗೆ ಡ್ರೈವ್ಸ್ಪಾರ್ಕ್ ಕನ್ನಡ ಇಂದಿನ ಲೇಖನದಲ್ಲಿ ನಿಮಗೆ ಮಾಹಿತಿ ನೀಡಲಿದೆ.
14. ರೆನಾಲ್ಟ್ ಕ್ವಿಡ್
ಫ್ರೆಂಚ್ ಮೂಲದ ವಾಹನ ತಯಾರಕ ಸಂಸ್ಥೆಯಾದ ರೆನಾಲ್ಟ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಕ್ವಿಡ್ ಹ್ಯಾಚ್ಬ್ಯಾಕ್ ಕಾರು ಈ ಪಟ್ಟಿಯಲ್ಲಿ 14ನೇ ಸ್ಥಾನವನ್ನು ಪಡೆದುಕೊಂಡಿದೆ. ರೆನಾಲ್ಟ್ ಕ್ವಿಡ್ 800ಸಿಸಿ ಪೆಟ್ರೋಲ್ ವೇರಿಯಂಟ್ ಕಾರುಗಳು ಪ್ರತೀ ಲೀಟರ್ಗೆ 25.17 ಕಿಲೋಮೀಟರ್ ಮಲೇಜ್ ನೀಡುತ್ತದೆ.
- ಪೆಟ್ರೋಲ್ ವೇರಿಯಂಟ್ ಕ್ವಿಡ್ ಕಾರಿನ ಪ್ರಾರಂಭಿಕ ಬೆಲೆ ರೂ. 2.79 ಲಕ್ಷ
- ಡೀಸೆಲ್ ವೇರಿಯಂಟ್ ಮಹೀಂದ್ರಾ ಕೆಯುವಿ100 ಕಾರು ರೂ. 5.65 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿದೆ.
- ಡೀಸೆಲ್ ವೇರಿಯಂಟ್ ಹೋಂಡಾ ಸಿಟಿ ರೂ.11.2 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿದೆ.
- ಡೀಸೆಲ್ ವೇರಿಯಂಟ್ ಫಿಗೊ ಆಸ್ಫೈರ್ ಕಾರು ರೂ. 6.29 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿದೆ.
- ಡೀಸೆಲ್ ವೇರಿಯಂಟ್ ಫಿಗೊ ಕಾರು ರೂ. 6.19 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
- ಡೀಸೆಲ್ ವೇರಿಯಂಟ್ ಸುಜುಕಿ ಇಗ್ನಿಸ್ ಕಾರು ರೂ. 6.38 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
- ಡೀಸೆಲ್ ವೇರಿಯಂಟ್ ಹೋಂಡಾ ಜಾಝ್ ಕಾರು ರೂ. 7.44 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
- ಡೀಸೆಲ್ ವೇರಿಯಂಟ್ ಅಮೇಜ್ ಕಾರು ರೂ. 6.7 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
- ಡೀಸೆಲ್ ವೇರಿಯಂಟ್ ಟಿಯಾಗೊ ಕಾರು ರೂ. 4.81 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿದೆ.
- ಡೀಸೆಲ್ ವೇರಿಯಂಟ್ ಬಲೆನೊ ಕಾರು ರೂ. 6.63 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
- ಡೀಸೆಲ್ ವೇರಿಯಂಟ್ ಡಿಜೈರ್ ಕಾರು ರೂ. 6.57 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
- ಡೀಸೆಲ್ ವೇರಿಯಂಟ್ ಸ್ವಿಫ್ಟ್ ಕಾರು ರೂ. 5.99 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
- ಡೀಸೆಲ್ ವೇರಿಯಂಟ್ ಸಿಯಾಜ್ ಹೈಬ್ರಿಡ್ ಕಾರು ರೂ. 9.71 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
- ಸಿಎನ್ಜಿ ವೇರಿಯಂಟ್ ಆಲ್ಟೊ ಕಾರು ರೂ. 3.86 ಲಕ್ಷದ ಪಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
13. ಮಹೀಂದ್ರಾ ಕೆಯುವಿ100
ಮಹೀಂದ್ರಾ ಆಂಡ್ ಮಹೀಂದ್ರಾ ಸ್ಮಾಲ್ ಕ್ರಾಸ್ಓವರ್ ಎಸ್ಯುವಿ ಸೆಗ್ಮೆಂಟ್ನಲ್ಲಿ ಲಾಂಚ್ ಮಾಡಿದ ಕೆಯುವಿ 100 ಕಾರಿನಲ್ಲಿನ 1.2 ಲೀಟರ್ ಡೀಜಲ್ ವೇರಿಯಂಟ್ ಪ್ರತೀ ಲೀಟರ್ಗೆ 25.32 ಕಿಲೋಮೀಟರ್ ಮೈಲೇಜ್ ನೀಡಲಿದ್ದು, ಇದು ಪೆಟ್ರೋಲ್ ಮಾರದಿಯಲ್ಲಿಯೂ ಲಭ್ಯವಿದೆ.
12. ಹೋಂಡಾ ಸಿಟಿ
ಲೀಟರ್ಗೆ 25ಕಿಲೋಮೀಟರ್ಗಿಂತ ಹೆಚ್ಚು ಮೈಲೇಜ್ ನೀಡುವ ಕಾರುಗಳ ಪಟ್ಟಿಯಲ್ಲಿ ಮಿಡ್ ಸೈಜ್ ಸೆಡಾನ್ ಸೆಗ್ಮೆಂಟ್ನಿಂದ ಕೇವಲ ಹೋಂಡಾ ಸಿಟಿ ಮಾತ್ರ ಸ್ಥಾನವನ್ನು ಪಡೆದುಕೊಂಡಿದ್ದು, ಹೋಂಡಾ ಸಿಟಿಯಲ್ಲಿನ 1.5 ಲೀಟರ್ ಡೀಸೆಲ್ ವೇರಿಯಂಟ್ ಲೀಟರ್ಗೆ 25.6 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
11. ಫೋರ್ಡ್ ಫಿಗೊ ಆಸ್ಫೈರ್
ಫೋರ್ಡ್ ಫಿಗೊ ಆಸ್ಫೈರ್ ಕಾಂಪ್ಯಾಕ್ಟ್ ಸೆಡಾನ್ ಕಾರಿನಲ್ಲಿರುವ 1.5 ಲೀಟರ್ ಡೀಸೆಲ್ ವೇರಿಯಂಟ್ ಲೀಟರ್ಗೆ 25.83 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಫೋರ್ಡ್ ಇಂಡಿಯಾ ಶೀಘ್ರದಲ್ಲಿಯೆ ಈ ಕಾರಿನ ಮುಂದಿನ ತಲೆಮಾರನ್ನು ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲಿದೆ.
10. ಫೋರ್ಡ್ ಫಿಗೊ
ಫೋರ್ಡ್ ಇಂಡಿಯಾ ತಮ್ಮ ಫಿಗೊ ಹ್ಯಾಚ್ಬ್ಯಾಕ್ ಕಾರಿನಲ್ಲಿಯೂ ಕೂಡಾ ಅದೇ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಇದು ಲೀಟರ್ಗೆ 25.83 ಕಿಲೋಮೀಟರ್ನ ಮೈಲೇಜ್ ಅನ್ನು ನೀಡುತ್ತದೆ. ಸಂಸ್ಥೆಯು ಈ ಕಾರನ್ನು ಕೂಡ ನವೀಕರಿಸಿ ಶೀಘ್ರದಲ್ಲೆ ಬಿಡುಗಡೆಗೊಳಿಸಲಿದೆ.
9. ಮಾರುತಿ ಸುಜುಕಿ ಇಗ್ನಿಸ್
ಮಾರುತಿ ಸುಜುಕಿ ಕಳೆದ ವರ್ಷದ ಪ್ರಾರಂಭದಲ್ಲಿ ಬಿಡುಗಡೆಗೊಳಿಸಿದ ಇಗ್ನಿಸ್ ಕ್ರಾಸ್ಓವರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿನ 1.2 ಲೀಟರ್ ಡೀಸೆಲ್ ಎಂಜಿನ್ ಲೀಟರ್ಗೆ 27 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
8. ಹೋಂಡಾ ಜಾಝ್
ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಮಾರಾಟಗೊಳಿಸುತ್ತಿರುವ ಜಾಝ್ ಪ್ರೀಮಿಯಮ್ ಹ್ಯಾಚ್ಬ್ಯಾಕ್ನಲ್ಲಿನ 1.5 ಲೀಟರ್ ಡೀಸೆಲ್ ವೇರಿಯಂಟ್ ಲೀಟರ್ಗೆ 27.3 ಕಿಲೋಮೀಟರ್ ಮೈಲೇಜ್ ನೀಡಿ ಈ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದುಕೊಂಡಿದೆ. ಹೋಂಡಾ ಸಂಸ್ಥೆಯು ಶೀಘ್ರವೇ ಈ ಕಾರಿನ ಫೇಸ್ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.
7. ಹೋಂಡಾ ಅಮೇಜ್
ಹೋಂಡಾ ಮೋಟರ್ಸ್ ಮಾರುಕಟ್ಟೆಯಲ್ಲಿ ಎರಡನೆಯ ತಲೆಮಾರಿನ ಅಮೇಜ್ ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ನವೀಕರಿಸಿ ಮತ್ತು ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಗೊಳಿಸಿದೆ. ಹೋಂಡಾ ಅಮೇಜ್ ಕಾರಿನಲ್ಲಿನ 1.5 ಲೀಟರ್ ಡೀಸೆಲ್ ವೇರಿಯಂಟ್ ಲೀಟರ್ಗೆ 27.4 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಈ ಕಾರು ಪೆಟ್ರೋಲ್ ಎಂಜಿನ್ ಜೊತೆಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯೊಂದಿಗೆ ಕೂಡಾ ಲಭ್ಯವಿದೆ.
6. ಟಾಟಾ ಟಿಯಾಗೊ
ಟಾಟಾ ಮೋಟರ್ಸ್ಸ್ ಸರಿಯಾಗಿ ಎರಡು ವರ್ಷಗಳ ಹಿಂದೆ ಎಂಟ್ರಿ ಲೆವೆಲ್ ಹ್ಯಾಚ್ಬ್ಯಾಕ್ ಕಾರನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಿತ್ತು. ಟಿಯಾಗೊ ಇದೀಗ ಟಾಟಾ ಸಂಸ್ಥೆಯ ಬೆಸ್ಟ್ ಸೆಲ್ಲಿಂಗ್ ಮಾಡಲ್ ಕಾರಾಗಿ ಸ್ಥಾನವನ್ನು ಪದೆದುಕೊಂಡಿದೆ. ಇದರಲ್ಲಿನ 1.05 ಲೀಟರ್ ಡೀಸೆಲ್ ವೇರಿಯಂಟ್ ಲೀಟರ್ಗೆ 27.28 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.
5. ಮಾರುತಿ ಸುಜುಕಿ ಬಲೆನೊ
ಮಾರುತಿ ಸುಜುಕಿ ಇಂಡಿಯನ್ ಪ್ರೀಮಿಯಮ್ ಹ್ಯಾಚ್ಬ್ಯಾಕ್ ಸೆಗ್ಮೆಂಟ್ನಲ್ಲಿನ ಬಲೆನೊ ಕಾರು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಮೂರು ಮಾದರಿಯ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರುವ ಬಲೆನೊ ಕಾರಿನ 1.2 ಲೀಟರ್ ಡೀಸೆಲ್ ವೇರಿಯಂಟ್ ಲೀಟರ್ಗೆ 27.39 ಕಿಲೋಮೀಟರ್ನ ಮೈಲೇಜ್ ಅನ್ನು ನೀಡುತ್ತದೆ.
4. ಮಾರುತಿ ಸುಜುಕಿ ಡಿಜೈರ್
ಭಾರತ ದೇಶದ ಬೆಸ್ಟ್ ಸಿಲ್ಲಿಂಗ್ ಕಾರುಗಳ ಪಟ್ಟಿಯಲ್ಲಿ ಮೊದಲನೆಯ ಸ್ಥಾನವನ್ನು ಪಡೆದ ಹೊಸ ಮಾರುತಿ ಡಿಜೈರ್ ಕಾರು ಎರಡು ಎಂಜಿನ್ ಆಯ್ಕೆಯೊಂದಿಗೆ ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಹೊಸ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ನಲ್ಲಿನ 1.2 ಲೀಟರ್ ಡೀಸೆಲ್ ವೇರಿಯಂಟ್ ಲೀಟರ್ಗೆ 28.4 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
3. ಮಾರುತಿ ಸ್ವಿಫ್ಟ್
ಮಾರುತಿ ಸುಜುಕಿ ಭಾರತ ದೇಶದ ಮೋಸ್ಟ್ ಪಾಪುಲರ್ ಹ್ಯಾಚ್ಬ್ಯಾಕ್ ಸ್ವಿಫ್ಟ್ ಕಾರನ್ನು ಈ ವರ್ಷದ ಪ್ರಾರಂಭದಲ್ಲಿ ಮೂರನೆಯ ತಲೆಮಾರಿನಲ್ಲಿ ಬಿಡುಗಡೆಗೊಳಿಸಿತ್ತು. ಅದೇ ಹಿಂದಿನ ತಲೆಮಾರಿನ ಎಂಜಿನ್ ಆಯ್ಕೆಯಲ್ಲಿ ಡೀಸೆಲ್ ಮತ್ತು ವೈಶಿಷ್ಟ್ಯತೆಗಳಲ್ಲಿ ಭಾರೀ ಬದಲಾವಣೆಗಳನ್ನು ಮಾಡಲಾಗಿದೆ. ಸ್ವಿಫ್ಟ್ ಕಾರಿನಲ್ಲಿನ 1.2 ಲೀಟರ್ ಡೀಸೆಲ್ ವೇರಿಯಂಟ್ ಲೀಟರ್ಗೆ 28.4 ಕಿಲೋಮೀಟರ್ಗಳ ಮೈಲೇಜ್ ನೀಡುತ್ತದೆ.
2. ಮಾರುತಿ ಸಿಯಾಜ್ ಹೈಬ್ರಿಡ್
ಮಾರುತಿ ಸುಜುಕಿ ಸಿಯಾಜ್ ಹೈಬ್ರಿಡ್ ಲೀಟರ್ಗೆ 28.09 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತಿದ್ದು ಈ ಪಟ್ಟಯಲ್ಲಿ ಎರಡನೆಯ ಸ್ಥಾನವನ್ನು ಪಡೆದುಕೊಂಡಿದೆ. ಮಾರುತಿ ಸಿಯಾಜ್ ಹೈಬ್ರೀಡ್ ವೇರಿಯಂಟ್ ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯನ್ನು ಅಳವಡಿಸಿರುವ ಕಾರಣ ಇದು ಸಾಧಾರಣ ಎಂಜಿನ್ಗಿಂತಾ ಅಧಿಕವಾದ ಮೈಲೇಜ್ ನೀಡುತ್ತದೆ.
1. ಮಾರುತಿ ಆಲ್ಟೊ
ಮಾರುತಿ ಸುಜುಕಿ ಸಂಸ್ಥೆಯ ಬೆಸ್ಟ್ ಸೆಲ್ಲಿಂಗ್ ಮಾಡಲ್ ಆಲ್ಟೋ ಸಿಎನ್ಜಿ ವೇರಿಯಂಟ್ ಗರಿಷ್ಠವಾಗಿ ಲೀಟರ್ಗೆ 33.44 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಮಾರುತಿ ಆಲ್ಟೊ 800ಸಿಸಿ ಪೆಟ್ರೋಲ್ ಮತ್ತು ಸಿಎನ್ಜಿ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.
ಸೂಚನೆ : ಎಲ್ಲಾ ಮೈಲೇಜ್ ವಿವಿರಗಳನ್ನು ಕಂಪೆನಿಗಳ ಎಆರ್ಎಐ ಸಮರ್ಪಿಸಿರುವ ವಿವರಗಳ ಆಧಾರವಾಗಿ ಬರೆಯಲಾಗಿದೆ. ಮತ್ತು ಬೆಲೆಯು ವಿವಿಧ ಪಟ್ಟಣಗಳು, ಡಿಲರ್ಗಳು ಮತ್ತು ವೇರಿಯಂಟ್ನ ಆಧಾರದ ಮೇಲೆ ವ್ಯತ್ಯಾಸವಿರಬಹುದು.