ಲೀಟರ್‍‍ಗೆ 25 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ 14 ಕಾರುಗಳು..

ಪ್ರತಿಯೊಬ್ಬರ ಜೀವನದಲ್ಲಿ ಕಾರು ಕೊಳ್ಳಬೇಕೆಂಬ ಆಲೋಚನೆಯು ಖಚಿತವಾಗಿಯು ಇರುತ್ತದೆ. ಎಲ್ಲಾ ಅನುಕೂಲವಾದಲ್ಲಿ ಕೆಲವರು ಶೀಘ್ರವೇ ಖರೀದಿಸುತ್ತಾರೆ. ಆದರೆ ಇನ್ನು ಕೆಲವರು ಅವಕಾಶಗಳಿಗಾಗಿ ಕಾಯುತ್ತಾರೆ.

By Rahul Ts

ಪ್ರತಿಯೊಬ್ಬರ ಜೀವನದಲ್ಲಿ ಕಾರು ಕೊಳ್ಳಬೇಕೆಂಬ ಆಲೋಚನೆಯು ಖಚಿತವಾಗಿಯು ಇರುತ್ತದೆ. ಎಲ್ಲಾ ಅನುಕೂಲವಾದಲ್ಲಿ ಕೆಲವರು ಶೀಘ್ರವೇ ಖರೀದಿಸುತ್ತಾರೆ. ಆದರೆ ಇನ್ನು ಕೆಲವರು ಅವಕಾಶಗಳಿಗಾಗಿ ಕಾಯುತ್ತಾರೆ. ಏನೇ ಆದರೂ ಭಾರತದಲ್ಲಿ ಕಾರು ಖರೀದಿಸುವವರ ತಲೆಯಲ್ಲಿ ಮೈಲೇಜ್ ಪ್ರಧಾನ ಅಂಶವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.

ಲೀಟರ್‍‍ಗೆ 25 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ 14 ಕಾರುಗಳು..

ಯಾವ ಕಾರು ಖರೀದಿಸಿದರೂ ಮೈಲೇಜ್ ಪ್ರಧಾನ ಮುಖ್ಯವಾಗಿರುವ ಕಾರಣ, ಬಡ್ಜೆಟ್ ಬೆಲೆಯಲ್ಲಿ ಲೀಟರ್‍‍ಗೆ 25 ಕಿಲೋಮೀಟರ್‍‍ಗಿಂತ ಹೆಚ್ಚು ಮೈಲೇಜ್ ನೀಡುವ ಕಾರುಗಳ ಬಗ್ಗೆ ಡ್ರೈವ್‍‍ಸ್ಪಾರ್ಕ್ ಕನ್ನಡ ಇಂದಿನ ಲೇಖನದಲ್ಲಿ ನಿಮಗೆ ಮಾಹಿತಿ ನೀಡಲಿದೆ.

ಲೀಟರ್‍‍ಗೆ 25 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ 14 ಕಾರುಗಳು..

14. ರೆನಾಲ್ಟ್ ಕ್ವಿಡ್

ಫ್ರೆಂಚ್ ಮೂಲದ ವಾಹನ ತಯಾರಕ ಸಂಸ್ಥೆಯಾದ ರೆನಾಲ್ಟ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಕ್ವಿಡ್ ಹ್ಯಾಚ್‍‍ಬ್ಯಾಕ್ ಕಾರು ಈ ಪಟ್ಟಿಯಲ್ಲಿ 14ನೇ ಸ್ಥಾನವನ್ನು ಪಡೆದುಕೊಂಡಿದೆ. ರೆನಾಲ್ಟ್ ಕ್ವಿಡ್ 800ಸಿಸಿ ಪೆಟ್ರೋಲ್ ವೇರಿಯಂಟ್ ಕಾರುಗಳು ಪ್ರತೀ ಲೀಟರ್‍‍ಗೆ 25.17 ಕಿಲೋಮೀಟರ್‍ ಮಲೇಜ್ ನೀಡುತ್ತದೆ.

  • ಪೆಟ್ರೋಲ್ ವೇರಿಯಂಟ್ ಕ್ವಿಡ್ ಕಾರಿನ ಪ್ರಾರಂಭಿಕ ಬೆಲೆ ರೂ. 2.79 ಲಕ್ಷ
  • ಲೀಟರ್‍‍ಗೆ 25 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ 14 ಕಾರುಗಳು..

    13. ಮಹೀಂದ್ರಾ ಕೆಯುವಿ100

    ಮಹೀಂದ್ರಾ ಆಂಡ್ ಮಹೀಂದ್ರಾ ಸ್ಮಾಲ್ ಕ್ರಾಸ್‍ಓವರ್ ಎಸ್‍‍‍ಯುವಿ ಸೆಗ್ಮೆಂಟ್‍‍ನಲ್ಲಿ ಲಾಂಚ್ ಮಾಡಿದ ಕೆಯುವಿ 100 ಕಾರಿನಲ್ಲಿನ 1.2 ಲೀಟರ್ ಡೀಜಲ್ ವೇರಿಯಂಟ್ ಪ್ರತೀ ಲೀಟರ್‍‍ಗೆ 25.32 ಕಿಲೋಮೀಟರ್ ಮೈಲೇಜ್ ನೀಡಲಿದ್ದು, ಇದು ಪೆಟ್ರೋಲ್ ಮಾರದಿಯಲ್ಲಿಯೂ ಲಭ್ಯವಿದೆ.

    • ಡೀಸೆಲ್ ವೇರಿಯಂಟ್‍ ಮಹೀಂದ್ರಾ ಕೆಯುವಿ100 ಕಾರು ರೂ. 5.65 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿದೆ.
    • ಲೀಟರ್‍‍ಗೆ 25 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ 14 ಕಾರುಗಳು..

      12. ಹೋಂಡಾ ಸಿಟಿ

      ಲೀಟರ್‍‍ಗೆ 25ಕಿಲೋಮೀಟರ್‍‍ಗಿಂತ ಹೆಚ್ಚು ಮೈಲೇಜ್ ನೀಡುವ ಕಾರುಗಳ ಪಟ್ಟಿಯಲ್ಲಿ ಮಿಡ್ ಸೈಜ್ ಸೆಡಾನ್ ಸೆಗ್ಮೆಂಟ್‍‍ನಿಂದ ಕೇವಲ ಹೋಂಡಾ ಸಿಟಿ ಮಾತ್ರ ಸ್ಥಾನವನ್ನು ಪಡೆದುಕೊಂಡಿದ್ದು, ಹೋಂಡಾ ಸಿಟಿಯಲ್ಲಿನ 1.5 ಲೀಟರ್ ಡೀಸೆಲ್ ವೇರಿಯಂಟ್ ಲೀಟರ್‍‍ಗೆ 25.6 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

      • ಡೀಸೆಲ್ ವೇರಿಯಂಟ್ ಹೋಂಡಾ ಸಿಟಿ ರೂ.11.2 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿದೆ.
      • ಲೀಟರ್‍‍ಗೆ 25 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ 14 ಕಾರುಗಳು..

        11. ಫೋರ್ಡ್ ಫಿಗೊ ಆಸ್ಫೈರ್

        ಫೋರ್ಡ್ ಫಿಗೊ ಆಸ್ಫೈರ್ ಕಾಂಪ್ಯಾಕ್ಟ್ ಸೆಡಾನ್ ಕಾರಿನಲ್ಲಿರುವ 1.5 ಲೀಟರ್ ಡೀಸೆಲ್ ವೇರಿಯಂಟ್ ಲೀಟರ್‍‍ಗೆ 25.83 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಫೋರ್ಡ್ ಇಂಡಿಯಾ ಶೀಘ್ರದಲ್ಲಿಯೆ ಈ ಕಾರಿನ ಮುಂದಿನ ತಲೆಮಾರನ್ನು ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲಿದೆ.

        • ಡೀಸೆಲ್ ವೇರಿಯಂಟ್ ಫಿಗೊ ಆಸ್ಫೈರ್ ಕಾರು ರೂ. 6.29 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿದೆ.
        • ಲೀಟರ್‍‍ಗೆ 25 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ 14 ಕಾರುಗಳು..

          10. ಫೋರ್ಡ್ ಫಿಗೊ

          ಫೋರ್ಡ್ ಇಂಡಿಯಾ ತಮ್ಮ ಫಿಗೊ ಹ್ಯಾಚ್‍‍ಬ್ಯಾಕ್ ಕಾರಿನಲ್ಲಿಯೂ ಕೂಡಾ ಅದೇ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಇದು ಲೀಟರ್‍‍ಗೆ 25.83 ಕಿಲೋಮೀಟರ್‍‍ನ ಮೈಲೇಜ್ ಅನ್ನು ನೀಡುತ್ತದೆ. ಸಂಸ್ಥೆಯು ಈ ಕಾರನ್ನು ಕೂಡ ನವೀಕರಿಸಿ ಶೀಘ್ರದಲ್ಲೆ ಬಿಡುಗಡೆಗೊಳಿಸಲಿದೆ.

          • ಡೀಸೆಲ್ ವೇರಿಯಂಟ್ ಫಿಗೊ ಕಾರು ರೂ. 6.19 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
          • ಲೀಟರ್‍‍ಗೆ 25 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ 14 ಕಾರುಗಳು..

            9. ಮಾರುತಿ ಸುಜುಕಿ ಇಗ್ನಿಸ್

            ಮಾರುತಿ ಸುಜುಕಿ ಕಳೆದ ವರ್ಷದ ಪ್ರಾರಂಭದಲ್ಲಿ ಬಿಡುಗಡೆಗೊಳಿಸಿದ ಇಗ್ನಿಸ್ ಕ್ರಾಸ್‍ಓವರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿನ 1.2 ಲೀಟರ್ ಡೀಸೆಲ್ ಎಂಜಿನ್ ಲೀಟರ್‍‍ಗೆ 27 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

            • ಡೀಸೆಲ್ ವೇರಿಯಂಟ್ ಸುಜುಕಿ ಇಗ್ನಿಸ್ ಕಾರು ರೂ. 6.38 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
            • ಲೀಟರ್‍‍ಗೆ 25 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ 14 ಕಾರುಗಳು..

              8. ಹೋಂಡಾ ಜಾಝ್

              ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಮಾರಾಟಗೊಳಿಸುತ್ತಿರುವ ಜಾಝ್ ಪ್ರೀಮಿಯಮ್ ಹ್ಯಾಚ್‍‍ಬ್ಯಾಕ್‍ನಲ್ಲಿನ 1.5 ಲೀಟರ್ ಡೀಸೆಲ್ ವೇರಿಯಂಟ್ ಲೀಟರ್‍‍ಗೆ 27.3 ಕಿಲೋಮೀಟರ್‍ ಮೈಲೇಜ್ ನೀಡಿ ಈ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದುಕೊಂಡಿದೆ. ಹೋಂಡಾ ಸಂಸ್ಥೆಯು ಶೀಘ್ರವೇ ಈ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

              • ಡೀಸೆಲ್ ವೇರಿಯಂಟ್ ಹೋಂಡಾ ಜಾಝ್ ಕಾರು ರೂ. 7.44 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
              • ಲೀಟರ್‍‍ಗೆ 25 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ 14 ಕಾರುಗಳು..

                7. ಹೋಂಡಾ ಅಮೇಜ್

                ಹೋಂಡಾ ಮೋಟರ್ಸ್ ಮಾರುಕಟ್ಟೆಯಲ್ಲಿ ಎರಡನೆಯ ತಲೆಮಾರಿನ ಅಮೇಜ್ ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ನವೀಕರಿಸಿ ಮತ್ತು ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಗೊಳಿಸಿದೆ. ಹೋಂಡಾ ಅಮೇಜ್‍ ಕಾರಿನಲ್ಲಿನ 1.5 ಲೀಟರ್ ಡೀಸೆಲ್ ವೇರಿಯಂಟ್ ಲೀಟರ್‍‍ಗೆ 27.4 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಈ ಕಾರು ಪೆಟ್ರೋಲ್ ಎಂಜಿನ್ ಜೊತೆಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯೊಂದಿಗೆ ಕೂಡಾ ಲಭ್ಯವಿದೆ.

                • ಡೀಸೆಲ್ ವೇರಿಯಂಟ್ ಅಮೇಜ್ ಕಾರು ರೂ. 6.7 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
                • ಲೀಟರ್‍‍ಗೆ 25 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ 14 ಕಾರುಗಳು..

                  6. ಟಾಟಾ ಟಿಯಾಗೊ

                  ಟಾಟಾ ಮೋಟರ್ಸ್ಸ್ ಸರಿಯಾಗಿ ಎರಡು ವರ್ಷಗಳ ಹಿಂದೆ ಎಂಟ್ರಿ ಲೆವೆಲ್ ಹ್ಯಾಚ್‍‍ಬ್ಯಾಕ್ ಕಾರನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಿತ್ತು. ಟಿಯಾಗೊ ಇದೀಗ ಟಾಟಾ ಸಂಸ್ಥೆಯ ಬೆಸ್ಟ್ ಸೆಲ್ಲಿಂಗ್ ಮಾಡಲ್ ಕಾರಾಗಿ ಸ್ಥಾನವನ್ನು ಪದೆದುಕೊಂಡಿದೆ. ಇದರಲ್ಲಿನ 1.05 ಲೀಟರ್ ಡೀಸೆಲ್ ವೇರಿಯಂಟ್ ಲೀಟರ್‍‍ಗೆ 27.28 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

                  • ಡೀಸೆಲ್ ವೇರಿಯಂಟ್ ಟಿಯಾಗೊ ಕಾರು ರೂ. 4.81 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿದೆ.
                  • ಲೀಟರ್‍‍ಗೆ 25 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ 14 ಕಾರುಗಳು..

                    5. ಮಾರುತಿ ಸುಜುಕಿ ಬಲೆನೊ

                    ಮಾರುತಿ ಸುಜುಕಿ ಇಂಡಿಯನ್ ಪ್ರೀಮಿಯಮ್ ಹ್ಯಾಚ್‍‍ಬ್ಯಾಕ್ ಸೆಗ್ಮೆಂಟ್‍‍ನಲ್ಲಿನ ಬಲೆನೊ ಕಾರು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಮೂರು ಮಾದರಿಯ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರುವ ಬಲೆನೊ ಕಾರಿನ 1.2 ಲೀಟರ್ ಡೀಸೆಲ್ ವೇರಿಯಂಟ್ ಲೀಟರ್‍‍ಗೆ 27.39 ಕಿಲೋಮೀಟರ್‍‍ನ ಮೈಲೇಜ್ ಅನ್ನು ನೀಡುತ್ತದೆ.

                    • ಡೀಸೆಲ್ ವೇರಿಯಂಟ್ ಬಲೆನೊ ಕಾರು ರೂ. 6.63 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
                    • ಲೀಟರ್‍‍ಗೆ 25 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ 14 ಕಾರುಗಳು..

                      4. ಮಾರುತಿ ಸುಜುಕಿ ಡಿಜೈರ್

                      ಭಾರತ ದೇಶದ ಬೆಸ್ಟ್ ಸಿಲ್ಲಿಂಗ್ ಕಾರುಗಳ ಪಟ್ಟಿಯಲ್ಲಿ ಮೊದಲನೆಯ ಸ್ಥಾನವನ್ನು ಪಡೆದ ಹೊಸ ಮಾರುತಿ ಡಿಜೈರ್ ಕಾರು ಎರಡು ಎಂಜಿನ್ ಆಯ್ಕೆಯೊಂದಿಗೆ ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಹೊಸ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್‍‍ನಲ್ಲಿನ 1.2 ಲೀಟರ್ ಡೀಸೆಲ್ ವೇರಿಯಂಟ್ ಲೀಟರ್‍‍ಗೆ 28.4 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

                      • ಡೀಸೆಲ್ ವೇರಿಯಂಟ್ ಡಿಜೈರ್ ಕಾರು ರೂ. 6.57 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
                      • ಲೀಟರ್‍‍ಗೆ 25 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ 14 ಕಾರುಗಳು..

                        3. ಮಾರುತಿ ಸ್ವಿಫ್ಟ್

                        ಮಾರುತಿ ಸುಜುಕಿ ಭಾರತ ದೇಶದ ಮೋಸ್ಟ್ ಪಾಪುಲರ್ ಹ್ಯಾಚ್‍‍ಬ್ಯಾಕ್ ಸ್ವಿಫ್ಟ್ ಕಾರನ್ನು ಈ ವರ್ಷದ ಪ್ರಾರಂಭದಲ್ಲಿ ಮೂರನೆಯ ತಲೆಮಾರಿನಲ್ಲಿ ಬಿಡುಗಡೆಗೊಳಿಸಿತ್ತು. ಅದೇ ಹಿಂದಿನ ತಲೆಮಾರಿನ ಎಂಜಿನ್ ಆಯ್ಕೆಯಲ್ಲಿ ಡೀಸೆಲ್ ಮತ್ತು ವೈಶಿಷ್ಟ್ಯತೆಗಳಲ್ಲಿ ಭಾರೀ ಬದಲಾವಣೆಗಳನ್ನು ಮಾಡಲಾಗಿದೆ. ಸ್ವಿಫ್ಟ್ ಕಾರಿನಲ್ಲಿನ 1.2 ಲೀಟರ್ ಡೀಸೆಲ್ ವೇರಿಯಂಟ್ ಲೀಟರ್‍‍ಗೆ 28.4 ಕಿಲೋಮೀಟರ್‍‍ಗಳ ಮೈಲೇಜ್ ನೀಡುತ್ತದೆ.

                        • ಡೀಸೆಲ್ ವೇರಿಯಂಟ್ ಸ್ವಿಫ್ಟ್ ಕಾರು ರೂ. 5.99 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
                        • ಲೀಟರ್‍‍ಗೆ 25 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ 14 ಕಾರುಗಳು..

                          2. ಮಾರುತಿ ಸಿಯಾಜ್ ಹೈಬ್ರಿಡ್

                          ಮಾರುತಿ ಸುಜುಕಿ ಸಿಯಾಜ್ ಹೈಬ್ರಿಡ್ ಲೀಟರ್‍‍ಗೆ 28.09 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತಿದ್ದು ಈ ಪಟ್ಟಯಲ್ಲಿ ಎರಡನೆಯ ಸ್ಥಾನವನ್ನು ಪಡೆದುಕೊಂಡಿದೆ. ಮಾರುತಿ ಸಿಯಾಜ್ ಹೈಬ್ರೀಡ್ ವೇರಿಯಂಟ್ ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯನ್ನು ಅಳವಡಿಸಿರುವ ಕಾರಣ ಇದು ಸಾಧಾರಣ ಎಂಜಿನ್‍‍ಗಿಂತಾ ಅಧಿಕವಾದ ಮೈಲೇಜ್ ನೀಡುತ್ತದೆ.

                          • ಡೀಸೆಲ್ ವೇರಿಯಂಟ್ ಸಿಯಾಜ್ ಹೈಬ್ರಿಡ್ ಕಾರು ರೂ. 9.71 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
                          • ಲೀಟರ್‍‍ಗೆ 25 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ 14 ಕಾರುಗಳು..

                            1. ಮಾರುತಿ ಆಲ್ಟೊ

                            ಮಾರುತಿ ಸುಜುಕಿ ಸಂಸ್ಥೆಯ ಬೆಸ್ಟ್ ಸೆಲ್ಲಿಂಗ್ ಮಾಡಲ್ ಆಲ್ಟೋ ಸಿಎನ್‍ಜಿ ವೇರಿಯಂಟ್ ಗರಿಷ್ಠವಾಗಿ ಲೀಟರ್‍‍ಗೆ 33.44 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಮಾರುತಿ ಆಲ್ಟೊ 800ಸಿಸಿ ಪೆಟ್ರೋಲ್ ಮತ್ತು ಸಿಎನ್‍‍ಜಿ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.

                            • ಸಿಎನ್‍‍ಜಿ ವೇರಿಯಂಟ್ ಆಲ್ಟೊ ಕಾರು ರೂ. 3.86 ಲಕ್ಷದ ಪಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
                            • ಸೂಚನೆ : ಎಲ್ಲಾ ಮೈಲೇಜ್ ವಿವಿರಗಳನ್ನು ಕಂಪೆನಿಗಳ ಎಆರ್‍ಎಐ ಸಮರ್ಪಿಸಿರುವ ವಿವರಗಳ ಆಧಾರವಾಗಿ ಬರೆಯಲಾಗಿದೆ. ಮತ್ತು ಬೆಲೆಯು ವಿವಿಧ ಪಟ್ಟಣಗಳು, ಡಿಲರ್‍‍ಗಳು ಮತ್ತು ವೇರಿಯಂಟ್‍‍‍ನ ಆಧಾರದ ಮೇಲೆ ವ್ಯತ್ಯಾಸವಿರಬಹುದು.

Most Read Articles

Kannada
English summary
Cars with mileage of over 25 kmpl in india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X