4 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪೆಟ್ರೋಲ್ ಕಾರುಗಳಿವು..

ಕುಂಟುಂಬದ ಜೊತೆಗೆ ತಮ್ಮದೆಯಾದ ಕಾರಿನಲ್ಲಿ ಹೊರ ಸಂಚಾರಕ್ಕೆ ಹೋಗಲು ಅದೇಷ್ಟೊ ಮಂದಿಗೆ ಆಸೆ ಇರುತ್ತದೆ. ಆದರೆ ಅವರ ಬಡ್ಜೆಟ್ ಕಡಿಮೆಯಿರುವುದರಿಂದ ಹೊಸ ಕಾರನ್ನು ಖರೀದಿಸಲು ಸಾಧ್ಯವಾಗುವುದಿಲ್ಲ.

By Rahul Ts

ಕುಂಟುಂಬದ ಜೊತೆಗೆ ತಮ್ಮದೆಯಾದ ಕಾರಿನಲ್ಲಿ ಹೊರ ಸಂಚಾರಕ್ಕೆ ಹೋಗಲು ಅದೇಷ್ಟೊ ಮಂದಿಗೆ ಆಸೆ ಇರುತ್ತದೆ. ಆದರೆ ಅವರ ಬಜೆಟ್ ಕಡಿಮೆಯಿರುವುದರಿಂದ ಹೊಸ ಕಾರನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಸಾಧ್ಯವಾದರೂ ಕೂಡ ಯಾವ ಕಾರನ್ನು ಕೊಳ್ಳಬೇಕು ಎಂಬ ಗೊಂದಲದಲ್ಲಿರುತ್ತಾರೆ.

4 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪೆಟ್ರೋಲ್ ಕಾರುಗಳಿವು..

ಮೇಲೆ ಹೇಳಿದಂತೆ ವಾರಕ್ಕೆ ಹಲವಾರು ಕಾರುಗಳು ಬಿಡುಗಡೆಗೊಳ್ಳುತ್ತಿರುತ್ತದೆ. ಆದರೆ ಇರದಲ್ಲಿ ಯಾವುದನ್ನು ಖರೀದಿ ಮಾಡಿದ್ರೆ ಉತ್ತಮ ಎಂಬ ಯೋಚನೆಯಲ್ಲಿರುತ್ತಾರೆ. ಈ ನಿಟ್ಟಿನಲ್ಲಿ ಅಂತವರಿಗೆ ಕೇವಲ ರೂ 4 ಲಕ್ಷದೊಳಗೆ ದೊರೆಯುವ ಉತ್ತಮ ಪೆಟ್ರೋಲ್ ಕಾರುಗಳ ಬಗ್ಗೆ ತಿಳಿಸಲಿದ್ದೇವೆ..

4 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪೆಟ್ರೋಲ್ ಕಾರುಗಳಿವು..

ರೆನಾಲ್ಟ್ ಕ್ವಿಡ್

ಎಂಟ್ರಿ ಲೆವೆಲ್ ಕಾರುಗಳ ಸರಣಿಯಲ್ಲಿ ಬಿಡುಗಡೆಗೊಂಡು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿರುವ ರೆನಾಲ್ಟ್ ಕ್ವಿಡ್ ಕಾರು, ಈಗಲು ಕೂಡಾ ಹಲವಾರು ಮಧ್ಯಮ ವರ್ಗದವರ ಮನಗೆದ್ದಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 2.66 ಲಕ್ಷಕ್ಕೆ ಆರಂಭಿಕ ಬೆಲೆ ಪಡೆದುಕೊಂಡಿದೆ.

4 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪೆಟ್ರೋಲ್ ಕಾರುಗಳಿವು..

ಇನ್ನು ರೆನಾಲ್ಟ್ ಕ್ವಿಡ್ ಕಾರಿನ ಎಂಜಿನ್ ಬಗ್ಗೆ ಹೇಳುವುದಾದರೆ 799ಸಿಸಿ 4 ವೇಲ್ವ್ ಡಿಒಹೆಚ್‍ಸಿ ಪೆಟ್ರೋಲ್ ಎಂಜಿನ್ ಸಹಾಯದಿಂದ 53ಬಿಹೆಚ್‍ಪಿ ಮತ್ತು 72ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

4 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪೆಟ್ರೋಲ್ ಕಾರುಗಳಿವು..

ಮಾರುತಿ ಸುಜುಕಿ ಆಲ್ಟೊ 800

ಮಾರುತಿ ಸುಜುಕಿ ಆಲ್ಟೊ 800 ತನ್ನ ಸುಪೀರಿಯರ್ ಬಿಲ್ಡ್ ಕ್ವಾಲಿಟಿಯಿಂದ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆದು ಹೆಚ್ಚು ಮಾರಾಟಗೊಂಡ ಕಾರು ಎಂಬ ಹೆಸರಿಗೆ ಈ ಕಾರು ಪಾತ್ರವಾಗಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 2.5 ಲಕ್ಷಕ್ಕೆ ಆರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

4 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪೆಟ್ರೋಲ್ ಕಾರುಗಳಿವು..

ಇನ್ನು ಮಾರುತಿ ಸುಜುಕಿ ಆಲ್ಟೊ 800 ಕಾರಿನ ಎಂಜಿನ್ ವಿಚಾರದ ಬಗ್ಗೆ ಹೇಳುವುದಾದರೇ 799ಸಿಸಿ ಪೆಟ್ರೋಲ್ ಎಂಜಿನ್ ಸಹಾಯದಿಂದ 48 ಬಿಹೆಚ್‍ಪಿ ಮತ್ತು 69ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

4 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪೆಟ್ರೋಲ್ ಕಾರುಗಳಿವು..

ಡಟ್ಸನ್ ರೆಡಿ ಗೋ

ಡಟ್ಸನ್ ತಮ್ಮ ರೆಡಿ ಗೊ ಮತ್ತು ರೆಡಿ ಗೋ ಪ್ಲಸ್ (7 ಸೀಟ್ಸ್) ಕಾರುಗಳನ್ನು ಬಿಡಗಡೆಗೊಳಿಸಿದ್ದು, ಸಣ್ಣ ಹ್ಯಾಚ್‍‍ಬ್ಯಾಕ್ ಕಾರಾದ ಡಟ್ಸನ್ ರೆಡಿ ಗೋ ಕಾರು ಮಾತ್ರ ಮಾರಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಡಟ್ಸನ್ ರೆಡಿ ಗೋ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 2.49 ಲಕ್ಷಕ್ಕೆ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

4 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪೆಟ್ರೋಲ್ ಕಾರುಗಳಿವು..

ಇನ್ನು ಕಾರಿನ ಎಂಜಿನ್ ವಿಷಯಕ್ಕೆ ಬಂದರೆ 799ಸಿಸಿ ಪೆಟ್ರೋಲ್ ಎಂಜಿನ್ ಸಹಾಯದಿಂದ 53ಬಿಹೆಚ್‍ಪಿ ಮತ್ತು 72ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ.

4 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪೆಟ್ರೋಲ್ ಕಾರುಗಳಿವು..

ಮಾರುತಿ ಸುಜುಕಿ ಆಲ್ಟೊ ಕೆ10

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಹೊಸ ಆವೃತ್ತಿಯ ಆಲ್ಟೋ ಕಾರನ್ನು ಬಿಡುಗದೆಗೊಳಿಸಿದ್ದು, ಮಾರುಕಟ್ಟೆಯಲ್ಲಿ ಆಲ್ಟೋ ಕೆ10 ಎಂಬ ಹೆಸರಿನಲ್ಲಿ ಮಾರಾಟಗೊಳ್ಳುತ್ತಿದೆ. ಆಲ್ಟೊ ಕೆ10 ಕಾರು ಆಲ್ಟೋ 800 ಕಾರಿಗಿಂತ ದೊಡ್ಡ ವೇರಿಯಂಟ್ ಆಗಿದ್ದು ಹೊಸ ಎಂಜಿನ್ ಅನ್ನು ಪಡೆದುಕೊಂಡಿದೆ.

4 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪೆಟ್ರೋಲ್ ಕಾರುಗಳಿವು..

ಆಲ್ಟೋ ಕೆ10 ಕಾರು 998ಸಿಸಿ 1.0 ಲೀಟರ್ 3 ಸಿಲೆಂಡರ್ ಎಂಜಿನ್ ಸಹಾಯದಿಂದ 67ಬಿಹೆಚ್‍ಪಿ ಮತ್ತು 90ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡಿದಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 3.29 ಲಕ್ಷಕ್ಕೆ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

4 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪೆಟ್ರೋಲ್ ಕಾರುಗಳಿವು..

ಟಾಟಾ ಟಿಯಾಗೊ

ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 3.3 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿರುವ ಟಾಟಾ ಟಿಯಾಗೊ ಕಾರುಗಳು ಎಂಟ್ರಿ ಲೆವೆಲ್ ಕಾರುಗಳಲ್ಲಿ ಹೆಚ್ಚು ಸದ್ದು ಮಾಡಿದ್ದು ಟಾಟಾ ಸಂಸ್ಥೆಯ ರೆವಾಟ್ರಾನ್ ಮತ್ತು ರೆವೊಟೊರ್ಕ್ ರೀತಿಯಲ್ಲಿ ಎಂಜಿನ್ ಅನ್ನು ಪಡೆದುಕೊಂಡಿವೆ.

4 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪೆಟ್ರೋಲ್ ಕಾರುಗಳಿವು..

ಟಾಟಾ ಟಿಯಾಗೊ ಕಾರುಗಳು 1.199ಸಿಸಿ ಪೆಟ್ರೋಲ್ ಎಂಜಿನ್ ಸಹಾಯದಿಂದ 84ಬಿಹೆಚ್‍ಪಿ ಮತ್ತು 114ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ.

Most Read Articles

Kannada
English summary
Looking for a cheap car? Five petrol cars you can buy under Rs 4 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X