ಇನ್ಮುಂದೆ ಮನೆ ಬಾಗಿಲಿಗೆ ಬರಲಿವೆ ಮೊಬೈಲ್ ಡೀಸೆಲ್ ಬಂಕ್‍‌ಗಳು

ಆನ್‍ಲೈನ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟವಾಗುತ್ತಿತ್ತು. ಕಾಲಕ್ರಮೇಣ ದಿನಬಳಕೆ ವಸ್ತುಗಳು, ದಿನಸಿ ಹೀಗೆ ನಾನಾ ಬಗೆಯ ವಸ್ತುಗಳ ಮನೆಬಾಗಿಲಿಗೆ ಡೆಲಿವರಿ ಮಾಡೋ ಕಂಪನಿಗಳು ಪ್ರಾರಂಭವಾಗಿದ್ದು ಹಳೆ ವಿಚಾರ.

By Rahul Ts

ಆನ್‍ಲೈನ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟವಾಗುತ್ತಿತ್ತು. ಕಾಲಕ್ರಮೇಣ ದಿನಬಳಕೆ ವಸ್ತುಗಳು, ದಿನಸಿ ಹೀಗೆ ನಾನಾ ಬಗೆಯ ವಸ್ತುಗಳ ಮನೆಬಾಗಿಲಿಗೆ ಡೆಲಿವರಿ ಮಾಡೋ ಕಂಪನಿಗಳು ಪ್ರಾರಂಭವಾಗಿದ್ದು ಹಳೆ ವಿಚಾರ. ಈಗ ಆನ್ ಲೈನ್ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ಕೂಡ ಶುರುವಾಗಿದೆ.

ಇನ್ಮುಂದೆ ಮನೆ ಬಾಗಿಲಿಗೆ ಬರಲಿವೆ ಮೊಬೈಲ್ ಡೀಸೆಲ್ ಬಂಕ್‍‌ಗಳು

ಹೌದು.. ದೇಶದಲ್ಲೇ ದೊಡ್ಡ ಪೆಟ್ರೋಲಿಯಂ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಒಂದು ಮಹತ್ವದ ಯೋಜನೆಯೊಂದನ್ನು ಪ್ರಾರಂಭಗೊಳಿಸಿದ್ದು, ಇದರಿಂದ ಜನರು ಡೀಸೆಲ್‍ಗಾಗಿ ಪೆಟ್ರೋಲ್ ಬಂಕ್‍ಗಳಿಗೆ ಹೋಗುವ ಶ್ರಮವನ್ನು ನಿಲ್ಲಿಸಲಿದೆ.

ಇನ್ಮುಂದೆ ಮನೆ ಬಾಗಿಲಿಗೆ ಬರಲಿವೆ ಮೊಬೈಲ್ ಡೀಸೆಲ್ ಬಂಕ್‍‌ಗಳು

ಪುಣೆಯಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಮೊಬೈಲ್ ಡೀಸೆಲ್ ಡೆಲಿವರಿಯನ್ನು ಪ್ರಾರಂಭಗೊಳಿಸಿದ್ದು, ಶೀಘ್ರದಲ್ಲೇ ಭಾತರದ ಇನ್ನಿತರೆ ನಗರಗಳಲ್ಲಿ ಕೂಡ ಪ್ರಾರಂಭಿಸಲಿದೆ ಎನ್ನಲಾಗಿದೆ.

ಇನ್ಮುಂದೆ ಮನೆ ಬಾಗಿಲಿಗೆ ಬರಲಿವೆ ಮೊಬೈಲ್ ಡೀಸೆಲ್ ಬಂಕ್‍‌ಗಳು

ಇದರಿಂದ ಜನರು ಡೀಸೆಲ್‍ಗಾಗಿ ಪೆಟ್ರೋಲ್ ಬಂಕ್‍ ಮುಂದೆ ನಿಂತು ಸಮಯ ವ್ಯರ್ಥ ಮಾಡಿಕೊಳ್ಳಬೇಕಾದ ಅವಶ್ಯಕತೆಯನ್ನು ಕಡಿಮೆ ಮಾಡಲು IOC ನಿರ್ಧರಿಸಿದ್ದು, ಈ ಸ್ಕೀಮ್‌ನಲ್ಲಿ ಡೋರ್‍‍ಸ್ಟೆಪ್ ಡೆಲಿವರಿ ಆಫ್ ಫ್ಯುಯಲ್ ಎಂಬ ಹೆಸರನ್ನು ನೀಡಿದೆ.

ಇನ್ಮುಂದೆ ಮನೆ ಬಾಗಿಲಿಗೆ ಬರಲಿವೆ ಮೊಬೈಲ್ ಡೀಸೆಲ್ ಬಂಕ್‍‌ಗಳು

ಸಾಮಾನ್ಯವಾಗಿ ಪೆಟ್ರೋಲ್ ಬಂಕ್‍ನಲ್ಲಿ ಕಾಣುವ ಹಾಗೆಯೇ ಫ್ಯುಯಲ್ ಟ್ರಕ್‌ನಲ್ಲಿ ಸಣ್ಣ ಗಾತ್ರದ ಡೀಸೆಲ್ ಟ್ಯಾಂಕ್ ಅನ್ನು ಡಿಸ್ಪೆಂಸರಿಗೆ ಜೋಡಿಸಲಾಗಿದ್ದು, ಈ ಡಿಸ್ಪೆಂಸರಿ ವಾಹನಗಳಿಗೆ ಡೀಸೆಲ್ ರವಾನಿಸುವುದಲ್ಲದೆ ಎಷ್ಟು ಮೊತ್ತದ ಡೀಸೆಲ್ ರವಾನಿಸಲಾಗಿದೆ ಎಂಬ ಮಾಹಿತಿಯನ್ನು ಕೂಡ ತೋರಿಸಲಿದೆ.

ಇನ್ಮುಂದೆ ಮನೆ ಬಾಗಿಲಿಗೆ ಬರಲಿವೆ ಮೊಬೈಲ್ ಡೀಸೆಲ್ ಬಂಕ್‍‌ಗಳು

ಸಂಸ್ಥೆಯು ಮೊದಲಿಗೆ ಡೀಸೆಲ್ ಅನ್ನು ಮಾತ್ರ ಮೊಬೈಲ್ ಬಂಕ್ ಮೂಲಕ ಮಾರಾಟಗೊಳಿಸಲಿದ್ದು, ಇದರ ಬೇಡಿಕೆ ಹಾಗೂ ಯಶಸ್ಸಿನ ನಂತರ ಪೆಟ್ರೋಲ್ ಅನ್ನು ಕೂಡ ಮೊಬೈಲ್ ಬಂಕ್ ಮೂಲಕ ಶುರುಮಾಡಲಿದೆ ಎನ್ನಲಾಗಿದೆ.

ಇನ್ಮುಂದೆ ಮನೆ ಬಾಗಿಲಿಗೆ ಬರಲಿವೆ ಮೊಬೈಲ್ ಡೀಸೆಲ್ ಬಂಕ್‍‌ಗಳು

ಇದೇ ವರ್ಷದ ಮೇ ತಿಂಗಳಿಂದ ಈ ಕಾರ್ಯವನ್ನು ಜಾರಿ ಮಾಡಲಿದ್ದು, ಶೀಘ್ರದಲ್ಲೇ ಇನ್ನಿತರೆ ಇಂಧನ ಸಂಸ್ಥೆಗಳು ಕೂಡ ಈ ಯೋಜನೆಯನ್ನು ಜಾರಿಮಾಡುತ್ತಿವೆ ಎನ್ನಲಾಗಿದೆ.

Most Read Articles

Kannada
Read more on fuel petrol diesel
English summary
Diesel Home Delivery Services Kicked Off By Indian Oil Corporation In Pune.
Story first published: Monday, March 19, 2018, 15:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X