ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕಥೆ ಏನು.?

ಪ್ರತಿಯೊಬ್ಬರಿಗೂ ಕಾರು ಕೊಳ್ಳಬೇಕು ಎಂಬ ಮಹಾದಾಸೆ ಇದ್ದೆ ಇರುತ್ತೆ. ಆದ್ರೆ ಎಲ್ಲರಿಗೂ ಅದು ಕಷ್ಟ ಸಾಧ್ಯ. ಇಂತಹ ಸಂಧರ್ಬದಲ್ಲಿ ರೈತನೊಬ್ಬ ದುಬಾರಿ ಬೆಲೆಯ ಜಾಗ್ವಾರ್ ಕಾರು ಖರೀದಿಸಿದಲ್ಲದೇ ಲಕ್ಷಾಂತರ ರುಪಾಯಿ ಮೌಲ್ಯದ ಸಿಹಿ ಹಂಚಿ ಸಂಭ್ರಮಿಸಿದ್ದ

ಪ್ರತಿಯೊಬ್ಬರಿಗೂ ಕಾರು ಖರೀದಿ ಮಾಡಬೇಕು ಎನ್ನುವ ಮಹಾದಾಸೆ ಇದ್ದೆ ಇರುತ್ತೆ. ಆದ್ರೆ ಎಲ್ಲರಿಗೂ ಅದು ಕಷ್ಟ ಸಾಧ್ಯ. ಇಂತಹ ಸಂದರ್ಭದಲ್ಲಿ ರೈತನೊಬ್ಬ ದುಬಾರಿ ಬೆಲೆಯ ಜಾಗ್ವಾರ್ ಕಾರು ಖರೀದಿಸಿರುವುದಲ್ಲದೇ ಲಕ್ಷಾಂತರ ರುಪಾಯಿ ಮೌಲ್ಯದ ಸಿಹಿ ಡಬ್ಬ ಹಂಚಿ ಸಂಭ್ರಮಿಸಿದ್ದಾನೆ.

ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕತೆ ಏನು.?

ಹೌದು, ಪುಣೆ ನಗರದ ಹೊರವಲಯದಲ್ಲಿರುವ ಧಯಾರಿ ಗಾವ್ ಮೂಲದ ಸುರೇಶ್ ಪೊಕಾಲೆ ಎಂಬ ರೈತರೊಬ್ಬರು ರೂ. 1.34 ಕೋಟಿ ಬೆಲೆಬಾಳುವ ಐಷಾರಾಮಿ ಜಾಗ್ವಾರ್ ಎಕ್ಸ್ಜೆ ಕಾರನ್ನು ಖರೀದಿಸಿದ್ದಲ್ಲದೇ, ಕೋಟ್ಯಾಧಿಪತಿಗಳನ್ನೇ ಹುಬ್ಬೇರಿಸುವಂತೆ ಮಾಡಿದ್ದಾನೆ.

ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕತೆ ಏನು.?

ಐಷಾರಾಮಿ ಕಾರನ್ನು ಖರೀದಿಸುವುದಲ್ಲದೇ ಈ ರೈತ ಅದಕ್ಕೆ ತಕ್ಕಂತೆ ಸಂಭ್ರಮಾಚರಣೆ ಮಾಡಲು ಪ್ರತೀ ಕಿಲೋಗೆ ರೂ.7 ಸಾವಿರ ತೆತ್ತು ಚಿನ್ನದ ಲೇಪಿತ ದುಬಾರಿ ಪೇಡಾವನ್ನು ಹಂಚಿರುವ ಘಟನೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕತೆ ಏನು.?

1922ರಲ್ಲಿ ಯುನೈಟೆಡ್ ಕಿಂಗ್‍ಡಮ್‍‍ನಲ್ಲಿ ಪ್ರಾರಂಭಗೊಂಡ ಜಾಗ್ವಾರ್ ಆಗಿನಿಂದಲೂ ಗ್ರಾಹಕರಿಗೆ ತಮ್ಮ ಕಾರಿನಲ್ಲಿ ಐಷಾರಾಮಿ ಸೌಲತ್ತುಗಳನ್ನು ಒದಗಿಸುತ್ತಿದೆ. ಕೇವಲ ಐಷಾರಾಮಿ ಪಾಸ್ಸೆಂಜರ್ ಕಾರುಗಳನ್ನಲ್ಲದೇ, ಹೆಚ್ಚು ಸಾಮರ್ಥ್ಯವಿರುವ ಸ್ಪೋರ್ಟ್ಸ್ ಕಾರುಗಳನ್ನು ಜಾಗ್ವಾರ್ ಸಂಸ್ಥೆಯು ತಯಾರಿಸುತ್ತಿದೆ.

ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕತೆ ಏನು.?

ದೊಡ್ಡ ನಗರಗಳ ಸುತ್ತಮುತ್ತಲಿನ ಸ್ಥಳಗಳು ಬೆಲೆಗೆ ಮಾರಾಟವಾಗುತ್ತಿದೆ. ಈ ನಿಟ್ಟಿನಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರಿಗಳು ವಸತಿ ಅಭಿವೃದ್ಧಿಗಾಗಿ ಕೃಷಿ ಭೂಮಿಯನ್ನು ಖರೀದಿಸುತ್ತಿದ್ದು, ಆ ಪ್ರದೇಶದಲ್ಲಿನ ಜಮೀನನ್ನು ಮಾರಿಕೊಂಡ ಆಲ್ಲಿನ ರೈತರು ರಾತ್ರೊ ರಾತ್ರಿ ಶ್ರೀಮಂತರಾಗುತ್ತಿದ್ದಾರೆ.

ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕತೆ ಏನು.?

ಭಾರತದಲ್ಲಿ ಶ್ರೀಮಂತ ರೈತರಿಗೆ, ವಿಶೇಷವಾಗಿ ದೊಡ್ಡ ನಗರಗಳ ಹೊರವಲಯದಲ್ಲಿರುವವರಿಗೆ, ದುಬಾರಿ ಕಾರುಗಳನ್ನು ಖರೀದಿಸುವ ವಿಷಯ ಅಸಾಮಾನ್ಯವಾದುದು. ಆದರೇ ಈ ರೈತ ಜಮೀನನ್ನು ಮಾರಿದ ದುಡ್ಡಿನಿಂದ ಜಾಗ್ವಾರ್ ಕಾರನ್ನು ಖರೀದಿಸಿ ತನ್ನ ಕನಸಿನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ.

ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕತೆ ಏನು.?

ಈ ವಿಷಯದ ಬಗ್ಗೆ ಸುರೇಶ್ ಪೊಕಾಲೆ ಅವರ ಮಗನಾದ ದೀಪಕ್ ಪೊಕಾಲೆ ಈ ಸಂತೋಷದ ವಿಷಯದ ಬಗ್ಗೆ ಮಾತನಾಡುತ್ತಾ. 'ನಾವು ಐಷಾರಾಮಿ ಜಾಗ್ವಾರ್ ಕಾರನ್ನು ಖರೀದಿಸಿದ್ದೇವೆ ಮತ್ತು ಈ ಸಂತೋಷದ ವಿಷಯವನ್ನು ಕೂಡಾ ಐಷಾರಾಮಿಯಾಗಿಯೇ ಸಂಭ್ರಮಿಸಲು ನಾವು ಬಯಸಿದೆವು.

ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕತೆ ಏನು.?

ಕೆಲ ದಿನಗಳ ಹಿಂದಷ್ಟೆ ಮಹಿಳೆಯೊಬ್ಬಳು ರಾಖಿ ಹಬ್ಬದಂದು ತನ್ನ ಸೋದರನಿಗೆ ಚಿನ್ನದ ಲೆಪಿತ ಪೇಡಾವನ್ನು ನೀಡಿದ್ದರಂತೆ. ಈ ಆಲೋಚನೆಯು ನಮ್ಮ ಮನೆಯವರಿಗು ಕೂಡ ಇಷ್ಟವಾಗಿದ್ದು, ನಾವು ಸಹ ಇದೇ ತರಹದ ಸಿಹಿ ಹಂಚಲು ನಿರ್ಧರಿಸಿದ್ದಾಗಿ ದೀಪಕ್ ಹೇಳಿಕೊಂಡಿದ್ದಾರೆ.

ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕತೆ ಏನು.?

ಇನ್ನು ಜಾಗ್ವಾರ್ ಎಕ್ಸ್ಜೆ ಕಾರು 5255ಎಮ್ಎಮ್ ಉದ್ದ, 1460ಎಮ್ಎಮ್ ಎತ್ತರ, 2105ಎಮ್ಎಮ್ ಅಗಲ, 3157ಎಮ್ಎಮ್ ವ್ಹೀಲ್ ಬೇಸ್ ಮತ್ತು 104ಎಮ್ಎಮ್‍‍ನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡುದುಕೊಂಡಿದ್ದಲದೇ 19 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಪಡೆದುಕೊಂಡಿದೆ.

ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕತೆ ಏನು.?

ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಇಬಿಡಿ, ಪಾರ್ಕಿಂಗ್ ಸೆನ್ಸಾರ್, ಸೆಂಟ್ರಲ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಬ್ರೇಕ್ ಅಸಿಸ್ಟ್, ಚೈಲ್ಡ್ ಸೇಫ್ಟಿ ಲಾಕ್ಸ್, ಪ್ಯಾಸ್ಸೆಂಜರ್ ಏರ್‍‍ಬ್ಯಾಗ್ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕತೆ ಏನು.?

ಇದು ಸುರೇಶ್ ಪೊಕಾಲೆಯವರ ಕಥೆಯಾದ್ರೆ, ಈ ಹಿಂದೇ ತಮಿಳುನಾಡಿನಲ್ಲಿ ದೇವರಾಜನ್ ಎಂಬುವರು ತಮ್ಮ ಕನಸಿನ ಕಾರನ್ನು ಖರೀದಿಸಿದ್ದ ಸುದ್ದಿ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದನ್ನು ನಾವು ಸ್ಮರಿಸಬಹುದು.

ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕತೆ ಏನು.?

ರೈತ ದೇವರಾಜನ್ ಸಹ ತಮ್ಮ ಬಾಲ್ಯದಲ್ಲಿ ಸೈಕಲ್‍‍‍ನಲ್ಲಿ ಪ್ರಯಾಣಿಸುತ್ತಿದ್ದಾಗ ಮೊದಲ ಬಾರಿಗೆ ಮರ್ಸಿಡಿಸ್ ಬೆಂಝ್ ಕಾರನ್ನು ಕಂಡಿದ್ದರಂತೆ. ಆ ವಯಸ್ಸಿನಲ್ಲಿ ಅವರಿಗೆ ಮರ್ಸಿಡಿಸ್ ಬೆಂಝ್ ಕಾರಿನ ಹೆಸರು ಕೂಡಾ ಸರಿಯಾಗಿ ತಿಳಿದಿಲ್ಲ. ಆತನಿಗೆ ಗೊತ್ತಿದ್ದು ಕೇವಲ ಮರ್ಸಿಡಿಸ್ ಬೆಂಝ್ ಸಂಸ್ಥೆಯ ಲೊಗೊ ಮಾತ್ರ.

ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕತೆ ಏನು.?

8 ವರ್ಷ ಬಾಲಕನಿದ್ದಾಗಲೇ ದೇವರಾಜನ್ ಅವರು ಮರ್ಸಿಡಿಸ್ ಕಾರನ್ನು ಖರೀದಿಸಬೇಕೆಂಬ ಹಠ ಮಾಡಿ ಇದೀಗ ಸುಮಾರು 80 ವರ್ಷಗಳ ನಂತರ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕತೆ ಏನು.?

ಇಷ್ಟು ದಿನಗಳ ಕಾಲ ದೇವರಾಜನ್ ಅವರು ಎತ್ತಿನ ಗಾಡಿಯಲ್ಲಿ ಪ್ರಯಾಣಿಸುತ್ತಿದ್ದರು. ಇದೀಗ ತಮ್ಮ ಕನಸಿನ ಕಾರನ್ನು ಖರೀದಿಸಿ ಖುಷಿಯ ಸವಾರಿ ಮಾಡಲು ಶುರು ಮಾಡಿದ್ದಾರೆ.

ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕತೆ ಏನು.?

ಮರ್ಸಿಡಿಸ್ ಬೆಂಝ್ ಸಂಸ್ಥೆಯು ದೇವರಾಜನ್ ಅವರಿಗೆ ಜೀವನದಲ್ಲಿ ಮರೆಯಲಾಗದಿರುವ ಹಾಗೆ ತಮ್ಮ 88ನೇ ಜನ್ಮದಿನದ ಅಂಗವಾಗಿ ಮರ್ಸಿಡಿಸ್ ಕಾರನ್ನ ಹಸ್ತಾಂತರ ಮಾಡಿದ್ದಾರೆ. ಆ ಕ್ಷಣ ದೇವರಾಜನ್ ಅವರ ಸಂತೃಪ್ತಿಯ ನಗೆಯೆ ಹೇಳುತ್ತದೆ ಅವರು ಈ ಐಷಾರಾಮಿ ಕಾರನ್ನು ಕೊಳ್ಳುವ ಹಠ ಎಷ್ಟರ ಮಟ್ಟಿಗೆ ಇತ್ತು ಅಂತ.

ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕತೆ ಏನು.?

ದೇವರಾಜನ್ ಅವರು ಇದೀಗ ಬಿಳಿ ಬಣ್ಣದ ಮರ್ಸಿಡಿಸ್ ಬೆಂಝ್ ಬಿ-ಕ್ಲಾಸ್ ಕಾರಿನ ಒಡೆಯರಾಗಿದ್ದು, ಟ್ರಾನ್ಸ್-ಕಾರ್ ಕಂಪೆನಿಯ ಮುಖಾಂತರ ಈ ಕಾರನ್ನು ದೇವರಾಜನ್ ಕುಟುಂಬ ಸದಸ್ಯರ ಮುಂದೆ ಡೆಲಿವರಿ ಮಾಡಿದ್ದಾರೆ.

Most Read Articles

ದೇವರಾಜನ್ ಅವರು ಖರೀದಿಸಿದ ಮರ್ಸಿಡೀಸ್ ಬೆಂಝ್ ಬಿ-ಕ್ಲಾಸ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 31.99 ಲಕ್ಷದಾಗಿದ್ದು, ಮುಂದೊಂದು ದಿನ ದೇವರಾಜನ್ ಅವರು ಜಗತ್ತಿನ ಅತ್ಯುತ್ತಮ ಐಷಾರಾಮಿ ಕಾರು ಎಂಬ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ರೂ. 1.73 ಕೋಟಿ ಬೆಲೆ ಬಾಳುವ ಮರ್ಸಿಡೀಸ್ ಬೆಂಝ್ ಎಸ್-ಕ್ಲಾಸ್ ಕಾರನ್ನು ಖರೀದಿಸಬಹುದು.. ಮರ್ಸಿಡೀಸ್ ಬೆಂಜ್ ಎಸ್‍-ಕ್ಲಾಸ್ ಕಾರಿನ ಚಿತ್ರಗಳು ಇಲ್ಲಿವೆ ನೋಡಿ.

Most Read Articles

Kannada
English summary
Farmer buys Jaguar XJ luxury saloon; Distributes Rs. 7,000/kg ‘gold’ sweets to celebrate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X