ಥಾರ್ ಹಿಂದಿಕ್ಕಲು ಬಂದ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಸ್ಪೆಷಲ್ ಏನು?

ಪುಣೆ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಸ್ ತಮ್ಮ ಜನಪ್ರಿಯ ಕಾರು ಗೂರ್ಖಾ ಆಫ್ ರೋಡಿಂಗ್ ಕಾರಿನ ಹೊಸ ವೇರಿಯಂಟ್ ಅನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದ್ದು, ಇದೀಗ ಹೊಸ ಕಾರಿನ ಎಂಜಿನ್ ವೈಶಿಷ್ಟ್ಯತೆ ಕುರಿತಾದ ಕೈಪಿಡಿಯೊಂದು ಸೋರಿಕೆಯಾಗಿದೆ.

ಥಾರ್ ಹಿಂದಿಕ್ಕಲು ಬಂದ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಸ್ಪೆಷಲ್ ಏನು?

ಫೋರ್ಸ್ ಸಂಸ್ಥೆಯು ಬಿಡುಗಡೆ ಮಾಡುತ್ತಿರುವ ಹೊಸ ಕಾರು ಮೂರು ಬಾಗಿಲುವುಳ್ಳ ಎಕ್ಸ್ ಪ್ಲೋರರ್ 4x4 ಮಾಡೆಲ್ ಅನ್ನು ಆಧರಿಸಿದ್ದು, ಗುಣಮಟ್ಟದ ಹೊರ ಮತ್ತು ಒಳ ವಿನ್ಯಾಸಗಳೊಂದಿಗೆ ಆಪ್ ರೋಡ್ ಪ್ರಿಯರನ್ನು ಸೆಳೆಯುವ ತವಕದಲ್ಲಿದ್ದು, ಸೋರಿಕೆಯಾದ ಕೈಪಿಡಿಯಲ್ಲಿ ಮತ್ತಷ್ಟು ಮಾಹಿತಿಗಳಿಗಾಗಿ ಮುಂದಿನ ಸ್ಲೈಡರ್‌ನತ್ತ ಸಾಗಿರಿ...

ಥಾರ್ ಹಿಂದಿಕ್ಕಲು ಬಂದ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಸ್ಪೆಷಲ್ ಏನು?

ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಕಾರು ಹಾರ್ಡ್ ಟಾಪ್ ಮತ್ತು ಸಾಫ್ಟ್ ಟಾಪ್ ವೇರಿಯಂಟ್‍‍ಗಳಲ್ಲಿ ಬರಲಿದೆ. ಕಾರಿನ ವಿನ್ಯಾಸವು ಪ್ರಸ್ತತ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರಿನಂತೆ ಇರದ್ದರೂ ತಾಂತ್ರಿಕವಾಗಿ ಭಾರೀ ಬದಲಾವಣೆ ಅನ್ನು ಪಡೆದುಕೊಂಡಿದೆ.

ಥಾರ್ ಹಿಂದಿಕ್ಕಲು ಬಂದ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಸ್ಪೆಷಲ್ ಏನು?

ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಮರ್ಸಿಡಿಸ್-ಬೆಂಜ್ ಒಎಮ್611 ಡೀಸೆಲ್ ಎಂಜಿನ್ ಸಹಾಯದಿಂದ 138ಬಿಹೆಚ್‍‍ಪಿ ಮತ್ತು 321ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಈ ಹಿಂದೆ ಬಳಸಲಾದ 2.2 ಲೀಟರ್ ಡೀಸೆಲ್ ಎಂಜಿನ್‍ ಇಲ್ಲೂ ಕೂಡಾ ಬಳಕೆ ಮಾಡಲಾಗಿದೆ.

ಥಾರ್ ಹಿಂದಿಕ್ಕಲು ಬಂದ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಸ್ಪೆಷಲ್ ಏನು?

ಹೊಸ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಮರ್ಸಿಡಿಸ್ ಬೆಂಜ್ ಜಿ32 ಇಂದ ಪಡೆದ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನು ವಿನ್ಯಾಸದಲ್ಲಿ ಈ ಕಾರು ಮುಂಭಾಗದಲ್ಲಿ ಲೋ ರೇಂಜ್ ಟ್ರಾನ್ಸ್‌ಫರ್ ಕೇಸ್ ಮತ್ತು ಹಿಂಭಾಗದಲ್ಲಿ ಹೊಸ ವಿನ್ಯಾಸವನ್ನು ಪಡೆದುಕೊಂಡಿದ್ದು, ಪರ್ಫಾರ್ಮೆನ್ಸ್ ಅನ್ನು ಉತ್ತಮಗೊಳಿಸಲು ಸಸ್ಷೆಷನ್ ಅನ್ನು ಕೂಡಾ ಅಭಿವೃದ್ಧಿಗೊಳಿಸಲಾಗಿದೆ.

ಥಾರ್ ಹಿಂದಿಕ್ಕಲು ಬಂದ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಸ್ಪೆಷಲ್ ಏನು?

ಸ್ಟ್ಯಾಂಡರ್ಡ್ ವೇರಿಯಂಟ್ ಕಾರಿಗೆ ಹೋಲಿಸಿದರೆ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಕಾರು ಮರು ವಿನ್ಯಾಸಗೊಳಿಸಲಾದ ಸಸ್ಷೆಷನ್ ಸಹಾಯದಿಂದ ಡಿಫಾರ್ಚರ್ ಮತ್ತು ರ್‍ಯಾಂಪ್ ಬ್ರೇಕ್ ಓವರ್ ಆಂಗಲ್ ಅನ್ನು ಸುಧಾರಿಸುತ್ತದೆ.

ಥಾರ್ ಹಿಂದಿಕ್ಕಲು ಬಂದ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಸ್ಪೆಷಲ್ ಏನು?

ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಆಫ್ ರೋಡಿಂಗ್ ಕಾರು 205ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, 550ಎಂಎಂ ವಾಟರ್ ವೇಡಿಂಗ್ ಡೆಪ್ತ್ ಅನ್ನು ಪಡೆದುಕೊಂಡಿದೆ. ಜೊತೆಗೆ 2,500ಕೆಜಿ ತೂಕದೊಂದಿಗೆ 63.5 ಲಟರ್ ಇಂಧನ ಟ್ಯಾಂಕ್ ಸಾಮರ್ಥ್ಯ ಹೊಂದಿದೆ.

ಥಾರ್ ಹಿಂದಿಕ್ಕಲು ಬಂದ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಸ್ಪೆಷಲ್ ಏನು?

ಮಾಹಿತಿಗಳ ಪ್ರಕಾರ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಕಾರು ಇದೇ ತಿಂಗಳು ಅಥವಾ ಜುಲೈ ಅಂತ್ಯಕ್ಕೆ ಬಿಡುಗಡೆಗೊಳ್ಳಲಿದ್ದು, ಡೀಲರ್‍‍ಗಳು ಈಗಾಗಲೇ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

ಥಾರ್ ಹಿಂದಿಕ್ಕಲು ಬಂದ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಸ್ಪೆಷಲ್ ಏನು?

ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಕಾರು ಗೂರ್ಖಾ ಎಕ್ಸ್ ಪ್ಲೋರರ್ ಕಾರಿಗಿಂತ ಹೆಚ್ಚು ಪರ್ಫಾರ್ಮೆನ್ಸ್ ಅನ್ನು ನೀಡಲಿದ್ದು, ಎಕ್ಸ್ ಶೋರಂ ಪ್ರಕಾರ ಈ ಕಾರಿನ ಬೆಲೆಯು ರೂ 14 ರಿಂದ 16 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಥಾರ್ ಹಿಂದಿಕ್ಕಲು ಬಂದ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಸ್ಪೆಷಲ್ ಏನು?

ಹೊಸ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಕಾರು ಎಂಜಿನ್ ಕಾರ್ಯಕ್ಷಮತೆಯನ್ನು ಅಭಿವೃದ್ಧಿಗೊಳಿಸಿದ್ದು, ಇನ್ನು ಈ ಕಾರು ಒಮ್ಮೆ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಮಹೀಂದ್ರಾ ಥಾರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿವೆ.

Most Read Articles

Kannada
Read more on force motors off road
English summary
Force Gurkha Xtreme Brochure Leaked Ahead Of Launch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X