ಭಾರತೀಯ ಸೇನಾಪಡೆಯ ಕಾರ್ಯಾಚರಣೆಗೆ ಮೇಕ್ ಇನ್ ಇಂಡಿಯಾ ಫೋರ್ಸ್....

ಬಹುದಿನಗಳಿಂದ ಬಳಕೆಯಾಗುತ್ತಿದ್ದ ಜನಪ್ರಿಯ ಮಾರುತಿ ಜಿಪ್ಸಿಗೆ ಗುಡ್ ಬೈ ಹೇಳುತ್ತಿರುವ ಸೇನೆಯು ಫೋರ್ಸ್ ಹೊಸ ಎಸ್‌ಯುವಿ ಮತ್ತು ಟಾಟಾ ವಿನೂತನ ಸಫಾರಿ ಸ್ಟ್ರೋಮ್ ಎಸ್‌ಯುವಿ ಬಳಕೆಗೆ ಹಸಿರು ನಿಶಾನೆ ತೊರಿದೆ.

ಕಾಲಕ್ಕೆ ತಕ್ಕಂತೆ ಭಾರತೀಯ ಸೇನೆಯು ಕೂಡಾ ಆಟೋ ತಂತ್ರಜ್ಞಾನದಲ್ಲಿ ಬದಲಾವಣೆ ಹೊಂದುತ್ತಲೇ ಬಂದಿದೆ. ಇದೀಗ ಬಹುದಿನಗಳಿಂದ ಬಳಕೆಯಾಗುತ್ತಿದ್ದ ಜನಪ್ರಿಯ ಮಾರುತಿ ಜಿಪ್ಸಿಗೆ ಗುಡ್ ಬೈ ಹೇಳುತ್ತಿರುವ ಸೇನೆಯು ಫೋರ್ಸ್ ಹೊಸ ಎಸ್‌ಯುವಿ ಮತ್ತು ಟಾಟಾ ವಿನೂತನ ಸಫಾರಿ ಸ್ಟ್ರೋಮ್ ಎಸ್‌ಯುವಿ ಬಳಕೆಗೆ ಹಸಿರು ನಿಶಾನೆ ತೊರಿದೆ.

ಭಾರತೀಯ ಸೇನಾಪಡೆಯ ಕಾರ್ಯಾಚರಣೆಗೆ ಮೇಕ್ ಇನ್ ಇಂಡಿಯಾ ಫೋರ್ಸ್...

ಇಂಡಿಯನ್ ಆರ್ಮಿಯಲ್ಲಿ ಸದ್ಯಕ್ಕೆ 25 ಸಾವಿರದಷ್ಟು ಮಾರುತಿ ಜಿಪ್ಸಿ ಯುಟಿಲಿಟಿ ವಾಹನಗಳನ್ನು ಬಳಕೆ ಮಾಡಲಾಗುತ್ತಿದ್ದು, ಈ ಹಗುರ ವಾಹನಗಳನ್ನು ಭಯೋತ್ಪಾದನಾ ನಿಗ್ರಹ ಹಾಗೂ ಇತರ ಭದ್ರತಾ ಕಾರ್ಯಾಚರಣೆಗೆ ಬಳಸಲಾಗಿತ್ತು. ಆದ್ರೆ ಸುಧಾರಿತ ತಂತ್ರಜ್ಞಾನ ಕೊರತೆಯನ್ನು ನಿಗಿಸಲು ಜಿಪ್ಸಿಗೆ ಗುಡ್ ಬೈ ಹೇಳುವುದು ಅನಿವಾರ್ಯವಾಗಿದ್ದು, ಟಾಟಾ ಸಫಾರಿ ಸ್ಟ್ರೋಮ್ ಮತ್ತು ಫೋರ್ಸ್ ಕಾರುಗಳ ಖರೀದಿಗೆ ಸೇನಾಪಡೆ ಮನಸ್ಸು ಮಾಡಿದೆ.

ಭಾರತೀಯ ಸೇನಾಪಡೆಯ ಕಾರ್ಯಾಚರಣೆಗೆ ಮೇಕ್ ಇನ್ ಇಂಡಿಯಾ ಫೋರ್ಸ್...

ಇದಕ್ಕಾಗಿಯೇ ಸೇನಾ ವಾಹನಗಳನ್ನು ಉನ್ನತೀಕರಿಸುವ ಉದ್ದೇಶದಿಂದ ಬರೋಬ್ಬರಿ 3 ಸಾವಿರ ಕೋಟಿ ಮೌಲ್ಯದ ಯೋಜನೆಯೊಂದನ್ನು ಜಾರಿಗೆ ಮಾಡಲಾಗಿದ್ದು, ಇದರ ಪರಿಣಾಮವೇ ಸೇನಾ ಪಡೆಯಲ್ಲಿನ ಗಸ್ತು ವಾಹನಗಳ ಪಟ್ಟಿಯಲ್ಲಿ ಟಾಟಾ ಸಫಾರಿ ಸ್ಟ್ರೋಮ್‌ ಮತ್ತು ಫೋರ್ಸ್ ಆಯ್ಕೆಯಾಗಿವೆ.

ಭಾರತೀಯ ಸೇನಾಪಡೆಯ ಕಾರ್ಯಾಚರಣೆಗೆ ಮೇಕ್ ಇನ್ ಇಂಡಿಯಾ ಫೋರ್ಸ್...

ಕಳೆದ ಕೆಲದಿನಗಳ ಹಿಂದಷ್ಟೇ ಮಿಲಿಟರಿ ವರ್ಷನ್ ಎಸ್‌ಯುವಿ ಕಾರುಗಳಿಗಾಗಿ ಬಿಡ್ ಮಾಡಿದ್ದ ಭಾರತೀಯ ಸೇನೆಯು, ಮಹೀಂದ್ರಾ ಸ್ಕಾರ್ಪಿಯೊ, ಫೋರ್ಸ್ ಮತ್ತು ಟಾಟಾ ಸಫಾರಿ ಸ್ಟ್ರೋಮ್ ಕಾರುಗಳ ಮೂಲಕ ಪರೀಕ್ಷೆ ಕೈಗೊಂಡಿತ್ತು. ಇದರಲ್ಲಿ ಸಫಾರಿ ಸ್ಟೋಮ್‌ ಮತ್ತು ಫೋರ್ಸ್ ಕಾರುಗಳು ಸೇನಾಪಡೆಯ ಅಗತ್ಯಕ್ಕೆ ತಕ್ಕಂತೆ ಸಿದ್ದವಾಗಿರುವುದು ಆಯ್ಕೆಗೆ ಕಾರಣವಾಗಿದೆ.

ಭಾರತೀಯ ಸೇನಾಪಡೆಯ ಕಾರ್ಯಾಚರಣೆಗೆ ಮೇಕ್ ಇನ್ ಇಂಡಿಯಾ ಫೋರ್ಸ್...

ಸದ್ಯ ಆರ್ಮಿ ವರ್ಷನ್ ಸಫಾರಿ ಸ್ಟ್ರೋಮ್ ಕಾರುಗಳು ಮೊಟ್ಟ ಮೊದಲ ಬಾರಿಗೆ ಸೇನಾ ಕ್ಯಾಂಪ್‌ಗಳಲ್ಲಿ ಕಾಣಿಸಿಕೊಂಡಿದ್ದು, ಒಟ್ಟು 3,193 ಸಫಾರಿ ಸ್ಟ್ರೋಮ್ ಕಾರುಗಳನ್ನು ಟಾಟಾ ಮೋಟಾರ್ಸ್ ಸಂಸ್ಥೆಯು ಸೇನಾಪಡೆಗೆ ಸರಬರಾಜು ಮಾಡಲಿದೆ.

ಭಾರತೀಯ ಸೇನಾಪಡೆಯ ಕಾರ್ಯಾಚರಣೆಗೆ ಮೇಕ್ ಇನ್ ಇಂಡಿಯಾ ಫೋರ್ಸ್...

ಹಾಗೆಯೇ ಫೋರ್ಸ್ ಸಂಸ್ಥೆ ಕೂಡಾ ತನ್ನ ಜನಪ್ರಿಯ ಗೂರ್ಖಾ ಕಾರುಗಳ ಮಾದರಿಯಲ್ಲೇ ಹೊಸ ಎಸ್‌ಯುವಿ ಉತ್ಪನ್ನವೊಂದನ್ನು ಸಿದ್ದಗೊಳಿಸುವ ಬಗ್ಗೆ ಮಾಹಿತಿ ಹೊರಹಾಕಿದ್ದು, ಸೇನಾಪಡೆಯ ಕಾರ್ಯಾಚರಣೆಗೆ ತಕ್ಕಂತೆ ಹೊಸ ಕಾರು ಮಾದರಿಯೊಂದನ್ನು ಸಿದ್ದಗೊಳಿಸಲಾಗುತ್ತಿದೆ ಎಂದಿದೆ.

ಭಾರತೀಯ ಸೇನಾಪಡೆಯ ಕಾರ್ಯಾಚರಣೆಗೆ ಮೇಕ್ ಇನ್ ಇಂಡಿಯಾ ಫೋರ್ಸ್...

ಹೀಗಾಗಿ ಫೋರ್ಸ್ ಸಂಸ್ಥೆಯು ಸೇನಾಪಡೆಗೆ ಒದಗಿಸುತ್ತಿರುವ ಎಸ್‌ಯುವಿ ಕಾರು ಯಾವುದು ಎಂಬ ಲಭ್ಯವಾಗಿಲ್ಲವಾದರೂ ಕೆಲವು ಮೂಲಗಳ ಪ್ರಕಾರ ತನ್ನ ಜನಪ್ರಿಯ ಗೂರ್ಖಾ ಎಸ್‌ಯುವಿಗಳನ್ನೇ ಆರ್ಮಿ ವರ್ಷನ್ ಮಾದರಿಯಾಗಿ ಮಾಡಿಫೈ ಮಾಡಿ ಒದಗಿಸಲಿದೆ ಎಂಬ ಮಾಹಿತಿ ಇದೆ.

ಭಾರತೀಯ ಸೇನಾಪಡೆಯ ಕಾರ್ಯಾಚರಣೆಗೆ ಮೇಕ್ ಇನ್ ಇಂಡಿಯಾ ಫೋರ್ಸ್...

ಪುಣೆ ತಲಹದಿಯ ವಾಹನ ತಯಾರಕ ಸಂಸ್ಥೆಯಾಗಿರುವ ಫೋರ್ಸ್ ಮೋಟಾರ್ಸ್ ಸಂಸ್ಥೆಯು ಈ ಹಿಂದೆ 2011ನೇ ಸಾಲಿನಲ್ಲಿ ಅತ್ಯಂತ ಸ್ಮರ್ಧಾತ್ಮಕ ಎಸ್‌ಯುವಿ ಸೆಗ್ಮೆಂಟ್‌ಗೆ ಮೊದಲ ಬಾರಿಗೆ ಕಾಲಿರಿಸಿದ್ದು, ಸೇನಾಪಡೆಗೆ ಒದಗಿಸುವ ಕಾರುಗಳನ್ನು 4x4 ಡ್ರೈವ್ ಟೆಕ್ನಾಲಜಿಯೊಂದಿಗೆ ಅಭಿವೃದ್ಧಿ ಮಾಡಲಿದೆ.

ಭಾರತೀಯ ಸೇನಾಪಡೆಯ ಕಾರ್ಯಾಚರಣೆಗೆ ಮೇಕ್ ಇನ್ ಇಂಡಿಯಾ ಫೋರ್ಸ್...

ಹೀಗಾಗಿ ಫೋರ್ಸ್ ಒದಗಿಸುವ ಹೊಸ ಅಡ್ವೆಂಚರ್ ಎಸ್‌ಯುವಿ ಕಾರುಗಳು ಕಠಿಣ ಪರಿಸ್ಥಿತಿಯಲ್ಲೂ ಹೆಚ್ಚಿನ ಮಟ್ಟದ ಚಾಲನಾ ಸಾಮರ್ಥ್ಯ ಪಡೆದುಕೊಳ್ಳಲಿದ್ದು, ಇದರಲ್ಲಿ ಹೈ ಸ್ಪೀಡ್ ಮತ್ತು ಎಂಜಿನ್ ಕಾರ್ಯಕ್ಷಮತೆಗೆ ಹೆಚ್ಚಿನ ಒತ್ತು ನೀಡಲಾಗಿರುತ್ತದೆ.

ಭಾರತೀಯ ಸೇನಾಪಡೆಯ ಕಾರ್ಯಾಚರಣೆಗೆ ಮೇಕ್ ಇನ್ ಇಂಡಿಯಾ ಫೋರ್ಸ್...

ಇದಲ್ಲದೇ ಕಳೆದ ವರ್ಷವಷ್ಟೇ ಫೋರ್ಸ್ ಮೋಟಾರ್ಸ್ ಸಂಸ್ಥೆಯು ಭಾರತೀಯ ಸೇನೆಗೆ ಹೊವಿಟ್ಜರ್‌ ಗನ್‌ಗಳನ್ನು ಪೂರೈಕೆ ಮಾಡುವ ಯೋಜನೆಯನ್ನು ತನ್ನದಾಗಿಸಿಕೊಂಡಿದ್ದು, ಇದೀಗ ಫೋರ್ಸ್ ಎಸ್‌ಯುವಿ ಕಾರುಗಳ ಕಾರ್ಯಕ್ಷಮತೆಗೆ ಫಿದಾ ಆಗಿರುವ ಸೇನೆಯು ಉತ್ತಮ ಮಾದರಿಯ ಎಸ್‌ಯುವಿ ಕಾರುಗಳನ್ನು ಅಭಿವೃದ್ಧಿ ಮಾಡಿ ಪೂರೈಸುವ ಯೋಜನೆಯನ್ನು ಫೋರ್ಸ್‌ ಮೋಟಾರ್ಸ್‌ಗೆ ನೀಡಿದೆ.

ಭಾರತೀಯ ಸೇನಾಪಡೆಯ ಕಾರ್ಯಾಚರಣೆಗೆ ಮೇಕ್ ಇನ್ ಇಂಡಿಯಾ ಫೋರ್ಸ್...

ಈ ಬಗ್ಗೆ ಫೋರ್ಸ್ ಮೋಟಾರ್ಸ್ ವಕ್ತಾರ ಮಾತನಾಡಿದ್ದು, ಭಾರತೀಯ ಸೇನೆಯು ಫೋರ್ಸ್ ಮೋಟಾರ್ಸ್ ನಿರ್ಮಾಣದ ಎಸ್‌ಯುವಿ ಕಾರುಗಳನ್ನು ಆಯ್ಕೆ ಮಾಡಿರುವುದು ಸಂತೋಷದ ವಿಚಾರವಾಗಿದ್ದು, ಸೇನಾಪಡೆಯ ಅವಶ್ಯಕತೆ ತಕ್ಕಂತೆ ಫೋರ್ಸ್ ಮೋಟಾರ್ಸ್ ಸದ್ಯದಲ್ಲೇ ಲೈಟ್ ಸ್ಟ್ರೈಕ್ ವೆಹಿಕಲ್‌ಗಳನ್ನು ಪೂರೈಕೆ ಮಾಡಲಿದೆ" ಎಂದಿದ್ದಾರೆ.

ಭಾರತೀಯ ಸೇನಾಪಡೆಯ ಕಾರ್ಯಾಚರಣೆಗೆ ಮೇಕ್ ಇನ್ ಇಂಡಿಯಾ ಫೋರ್ಸ್...

ಇದರಿಂದ ಫೋರ್ಸ್ ಮೋಟಾರ್ಸ್ ಸಂಸ್ಥೆಯು ಸೇನೆಗೆ ಒದಗಿಸುವ ವಿನೂತನ ಎಸ್‌ಯುವಿ ಕಾರುಗಳು ಸುಧಾರಿತ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಗೊಳ್ಳಲಿದ್ದು, ಮೇಕ್ ಇನ್ ಇಂಡಿಯಾ ನಿರ್ಮಾಣದ ತಂತ್ರಜ್ಞಾನ ಬಳಕೆಯಿಂದಾಗಿ ಭಾರತೀಯ ಸೇನಾಪಡೆಗೆ ಮತ್ತಷ್ಟು ಬಲತುಂಬಲಿದೆ.

ಭಾರತೀಯ ಸೇನಾಪಡೆಯ ಕಾರ್ಯಾಚರಣೆಗೆ ಮೇಕ್ ಇನ್ ಇಂಡಿಯಾ ಫೋರ್ಸ್...

ಇನ್ನು ಫೋರ್ಸ್ ಸಂಸ್ಥೆಯು ಸೇನಾಪಡೆಗೆ ಎಷ್ಟು ಪ್ರಮಾಣ ಕಾರುಗಳನ್ನು ಒದಗಿಸಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಟಾಟಾ ಮೋಟಾರ್ಸ್ ಸಂಸ್ಥೆಯು ಬರೋಬ್ಬರಿ 3,193 ಸಫಾರಿ ಸ್ಟ್ರೋಮ್ ಕಾರುಗಳನ್ನು ಸೇನಾಪಡೆಗೆ ಸರಬರಾಜು ಮಾಡಲಿದೆ.

Most Read Articles

Kannada
English summary
Force Motors Bags An Order From The Indian Army — To Supply Light Strike Vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X