ಇಕೋ ಬೂಸ್ಟ್ ಎಂಜಿನ್‌ನೊಂದಿಗೆ ಬರಲಿದೆ ಹೊಸ ಇಕೋ ಸ್ಪೋರ್ಟ್

ಇಕೋ ಬೂಸ್ಟ್ ಎಂಜಿನ್ ತೆಗೆದುಹಾಕಿ ಡ್ರ್ಯಾಗನ್ ಸೀರಿಸ್ ಎಂಜಿನ್ ಪರಿಚಯಿಸಿದ್ದ ಫೋರ್ಡ್ ಸಂಸ್ಥೆಯು ಇದೀಗ ಹಳೆಯ ಮಾದರಿಯ ಇಕೋ ಬೂಸ್ಟ್ ಎಂಜಿನ್ ಆವೃತ್ತಿಯನ್ನು ಹೊಸತನದೊಂದಿಗೆ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

By Praveen Sannamani

ಈ ಹಿಂದೆ ಇಕೋ ಸ್ಪೋರ್ಟ್ ಎಸ್‌ಯುವಿ ಕಾರುಗಳಲ್ಲಿ ಇಕೋ ಬೂಸ್ಟ್ ಎಂಜಿನ್ ತೆಗೆದುಹಾಕಿ ಡ್ರ್ಯಾಗನ್ ಸೀರಿಸ್ ಎಂಜಿನ್ ಪರಿಚಯಿಸಿದ್ದ ಫೋರ್ಡ್ ಸಂಸ್ಥೆಯು ಇದೀಗ ಹಳೆಯ ಮಾದರಿಯ ಇಕೋ ಬೂಸ್ಟ್ ಎಂಜಿನ್ ಆವೃತ್ತಿಯನ್ನು ಹೊಸತನದೊಂದಿಗೆ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಇಕೋ ಬೂಸ್ಟ್ ಎಂಜಿನ್‌ನೊಂದಿಗೆ ಬರಲಿದೆ ಹೊಸ ಇಕೋ ಸ್ಪೋರ್ಟ್

ಮೂಲಗಳ ಪ್ರಕಾರ ಫೋರ್ಡ್ ಸಂಸ್ಥೆಯು 1.0-ಲೀಟರ್ ಇಕೋ ಬೂಸ್ಟ್ ಎಂಜಿನ್ ಕಾರು ಮಾದರಿಗಳನ್ನು ಪರಿಚಯಿಸುವ ಸಾಧ್ಯತೆಗಳಿದ್ದು, ಇದರ ಜೊತೆಗೆ ಇಕೋ ಸ್ಪೋರ್ಟ್ ಆವೃತ್ತಿಗಳಲ್ಲಿ ಟೈಟಾನಿಯಂ ಎಸ್ ಮತ್ತು ಸಿಗ್ನಿಚರ್ ಎಡಿಷನ್ ಕಾರುಗಳನ್ನು ಪರಿಚಯಿಸುವ ಇರಾದೆಯಲ್ಲಿದೆ.

ಇಕೋ ಬೂಸ್ಟ್ ಎಂಜಿನ್‌ನೊಂದಿಗೆ ಬರಲಿದೆ ಹೊಸ ಇಕೋ ಸ್ಪೋರ್ಟ್

ಸ್ಪೋರ್ಟಿ ಕಂಪ್ಯಾಕ್ಟ್ ಎಸ್‌ಯುವಿ ಪ್ರಿಯರಿಗಾಗಿಯೇ ಈ ಹೊಸ ಕಾರುಗಳು ಸಿದ್ದವಾಗುತ್ತಿದ್ದು, ಅದರಲ್ಲೂ ಉನ್ನತ ಶ್ರೇಣಿಯಾದ ಎಸ್ ಟ್ರಿಮ್ ಆವೃತ್ತಿಯನ್ನು ಮತ್ತಷ್ಟು ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಪರಿಚಯಿಸಲು ಸಿದ್ದತೆ ನಡೆಸಲಾಗುತ್ತಿದೆ.

ಇಕೋ ಬೂಸ್ಟ್ ಎಂಜಿನ್‌ನೊಂದಿಗೆ ಬರಲಿದೆ ಹೊಸ ಇಕೋ ಸ್ಪೋರ್ಟ್

ಹೀಗಾಗಿ ಇಕೋಸ್ಪೋರ್ಟ್ ಟೈಟಾನಿಯಂ ಎಸ್ ಕಾರು ಆವೃತ್ತಿಯು ಇಕೋ ಬೂಸ್ಟ್ ಪೆಟ್ರೋಲ್ ಎಂಜಿನ್ ಹೊಂದುವ ಸಾಧ್ಯತೆಗಳಿದ್ದು, ಈ ಮೂಲಕ 125 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯವನ್ನು ಪಡೆದುಕೊಂಡಿರಲಿವೆ.

ಇಕೋ ಬೂಸ್ಟ್ ಎಂಜಿನ್‌ನೊಂದಿಗೆ ಬರಲಿದೆ ಹೊಸ ಇಕೋ ಸ್ಪೋರ್ಟ್

ಇನ್ನು ಎಸ್ ಟ್ರಿಮ್ ಆವೃತ್ತಿಗಳು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಪರಿಚಯಿಸಲಾಗುತ್ತಿದ್ದು, ಇವುಗಳ 98.5-ಬಿಎಚ್‌ಪಿ ಮತ್ತು 205-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು. ಜೊತೆಗೆ ಶಾರ್ಪ್ ಲುಕ್ ಡಿಸೈನ್‌ಗಳು ಸಹ ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಲಿವೆ.

ಇಕೋ ಬೂಸ್ಟ್ ಎಂಜಿನ್‌ನೊಂದಿಗೆ ಬರಲಿದೆ ಹೊಸ ಇಕೋ ಸ್ಪೋರ್ಟ್

ಇದರ ಹೊರತಾಗಿ ಈ ಹಿಂದಿನಂತೆ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, 17 ಇಂಚಿನ ಅಲಾಯ್ ಚಕ್ರಗಳು, ಕ್ರೂಸ್ ಕಂಟ್ರೊಲರ್, ರಿಯರ್ ವ್ಯೂ ಕ್ಯಾಮೆರಾ, ರೈನ್ ಸೆನ್ಸಿಂಗ್ ವೈಪರ್ ಸೇರಿದಂತೆ ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ ಸೌಲಭ್ಯ ಒದಗಿಸಲಾಗುತ್ತಿದೆ.

ಇಕೋ ಬೂಸ್ಟ್ ಎಂಜಿನ್‌ನೊಂದಿಗೆ ಬರಲಿದೆ ಹೊಸ ಇಕೋ ಸ್ಪೋರ್ಟ್

ಇನ್ನು ಕಾರಿನೊಳಗೆ ಎಂಟು ಇಂಚಿನ ಟಚ್ ಸ್ಕ್ರೀನ್, ಸಿಂಕ್ 3 ಇನ್ಪೋಟೈನ್ಮೆಂಟ್ ಸಿಸ್ಟಂ, ಬ್ಲೂಟೂತ್, ಯುಎಸ್‌ಬಿ, ಆಕ್ಸ್, ಆಂಡ್ರಾಯ್ಡ್ ಆಟೋ, ಆ್ಯಪಲ್ ಕ್ಲಾರ್ ಪ್ಲೇ ಸೌಲಭ್ಯವಿದ್ದು, ಸೆಂಟ್ರಲ್ ಕನ್ಸೊಲ್ ತಾಜಾತನ ಪಡೆಯಲಿವೆ.

ಇಕೋ ಬೂಸ್ಟ್ ಎಂಜಿನ್‌ನೊಂದಿಗೆ ಬರಲಿದೆ ಹೊಸ ಇಕೋ ಸ್ಪೋರ್ಟ್

ಸದ್ಯ ಹೊಸ ಇಕೋಸ್ಪೋರ್ಟ್ ಕಾರುಗಳು ವಿವಿಧ 7 ಬಣ್ಣಗಳಲ್ಲಿ ಆಯ್ಕೆ ಮಾಡಬಹುದಾಗಿದ್ದು, ಲೈಟಿಂಗ್ ಬ್ಲೂ, ಕ್ಯಾನ್ಯಾನ್ ರಿಡ್ಜ್, ಡೈಮಂಡ್ ವೈಟ್, ಮೂನ್‌ಡಸ್ಟ್ ಸಿಲ್ವರ್, ರೇಸ್ ರೆಡ್, ಅಬ್ಸೊಲ್ಯೂಟ್ ಬ್ಲ್ಯಾಕ್ ಮತ್ತು ಸ್ಪೋಕ್ ಗ್ರೇ ನಲ್ಲಿ ಖರೀದಿ ಮಾಡಬಹುದಾಗಿದೆ.

ಇಕೋ ಬೂಸ್ಟ್ ಎಂಜಿನ್‌ನೊಂದಿಗೆ ಬರಲಿದೆ ಹೊಸ ಇಕೋ ಸ್ಪೋರ್ಟ್

ಪ್ರತಿಸ್ಪರ್ಧಿಗಳು

ಸದ್ಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಕಂಪ್ಯಾಕ್ಟ್ ಎಸ್‌ಯುವಿಗಳಿಗೆ ಸಾಕಷ್ಟು ಬೇಡಿಕೆ ಇದ್ದು, ಈ ಹಿನ್ನೆಲೆ ಜನಪ್ರಿಯ ಮಾದರಿಗಳಾದ ಮಾರುತಿ ಸುಜುಕಿ ವಿಟಾರಾ ಬ್ರಿಝಾ, ರೆನಾಲ್ಟ್ ಡಸ್ಟರ್, ಟಾಟಾ ನೆಕ್ಸನ್ ಮಾದರಿಗಳು ಹೊಸ ಇಕೋ ಸ್ಪೋರ್ಟ್ ಮಾದರಿಗೆ ತೀವ್ರ ಸ್ಪರ್ಧೆ ಒಡ್ಡುವ ಸಾಧ್ಯತೆಗಳಿವೆ.

Most Read Articles

Kannada
Read more on ford ಫೋರ್ಡ್
English summary
Ford EcoSport To Get EcoBoost Engine — Two New Variants To Be Added.
Story first published: Friday, April 20, 2018, 20:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X