ವಿದೇಶಿ ಮಾರುಕಟ್ಟೆಗೆ ಭಾರತದಿಂದ ಅತಿಹೆಚ್ಚು ರಫ್ತುಗೊಂಡ ಕಾರ್ ಬ್ರ್ಯಾಂಡ್ ಯಾವುದು?

ವಿಶ್ವಾದ್ಯಂತ ಉತ್ಪಾದನೆಯಾಗುವ ಒಟ್ಟು ಕಾರುಗಳಲ್ಲಿ ಶೇ.30ರಿಂದ ಶೇ.40 ಕಾರುಗಳ ಉತ್ಪನ್ನಗಳು ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಮಾರಾಟಗೊಂಡ ಕಾರು ಪ್ರಮಾಣದಷ್ಟೇ ವಿದೇಶಿ ಮಾರುಕಟ್ಟೆಗೂ ರಫ್ತು ಮಾಡಲಾಗುತ್ತಿದೆ.

By Praveen Sannamani

ವಿಶ್ವಾದ್ಯಂತ ಉತ್ಪಾದನೆಯಾಗುವ ಒಟ್ಟು ಕಾರುಗಳಲ್ಲಿ ಶೇ.30ರಿಂದ ಶೇ.40 ಕಾರುಗಳ ಉತ್ಪನ್ನಗಳು ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಮಾರಾಟಗೊಂಡ ಕಾರುಗಳ ಪ್ರಮಾಣದಷ್ಟೇ ವಿದೇಶಿ ಮಾರುಕಟ್ಟೆಗಳಿಗಳಿಗೂ ರಫ್ತು ಮಾಡಲಾಗುತ್ತಿದೆ.

ವಿದೇಶಿ ಮಾರುಕಟ್ಟೆಗೆ ಭಾರತದಿಂದ ಅತಿಹೆಚ್ಚು ರಫ್ತುಗೊಂಡ ಕಾರ್ ಬ್ರ್ಯಾಂಡ್ ಯಾವುದು?

ಸದ್ಯ ಭಾರತದಲ್ಲಿ 20ಕ್ಕೂ ಹೆಚ್ಚು ಕಾರು ಸಂಸ್ಥೆಗಳು ತಮ್ಮ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಕೆಲವೇ ಕೆಲವು ಕಾರು ಸಂಸ್ಥೆಗಳು ಮಾತ್ರ ಭಾರತದಲ್ಲಿ ಮಾರಾಟ ಪ್ರಕ್ರಿಯೆಯನ್ನು ನಡೆಸುತ್ತಿವೆ. ರಫ್ತು ಪ್ರಮಾಣದಲ್ಲಿ ಮುಂಚೂಣಿಯಲ್ಲಿರುವ ಫೋರ್ಡ್, ಮಾರುತಿ ಸುಜುಕಿ, ಜನರಲ್ ಮೋಟಾರ್ಸ್, ಹ್ಯುಂಡೈ, ಫೋಕ್ಸ್‌ವ್ಯಾಗನ್, ಟಾಟಾ ಸೇರಿ ಕೆಲ ಸಂಸ್ಥೆಗಳು ಮಾತ್ರ ಭಾರತದಲ್ಲಿ ತಮ್ಮ ಕಾರು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಇನ್ನುಳಿದ ಕಾರು ಸಂಸ್ಥೆಗಳು ಸಾಗರೋತ್ತರ ವ್ಯವಹಾರಗಳಲ್ಲಿ ಮುಂಚೂಣಿ ಸಾಧಿಸುತ್ತಿವೆ.

ವಿದೇಶಿ ಮಾರುಕಟ್ಟೆಗೆ ಭಾರತದಿಂದ ಅತಿಹೆಚ್ಚು ರಫ್ತುಗೊಂಡ ಕಾರ್ ಬ್ರ್ಯಾಂಡ್ ಯಾವುದು?

ಕಾರು ಉತ್ಪಾದನೆಗೆ ಬೇಕಾಗುವ ಬೀಡಿಭಾಗಗಳು ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಲ್ಲಿ ದೊರೆಯುವ ಕಾರಣಕ್ಕೆ ಹಲವು ಕಾರು ಉತ್ಪಾದನಾ ಸಂಸ್ಥೆಗಳು ಭಾರತದಲ್ಲೇ ಹೆಚ್ಚಿನ ಮಟ್ಟದ ಕಾರು ಉತ್ಪಾದನೆಗೆ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಪ್ರತಿ ವರ್ಷ 7 ರಿಂದ 8 ಲಕ್ಷ ಕಾರುಗಳು ವಿದೇಶಿ ಮಾರುಕಟ್ಟೆಗೆ ರಫ್ತುಗೊಳ್ಳುತ್ತಿವೆ.

ವಿದೇಶಿ ಮಾರುಕಟ್ಟೆಗೆ ಭಾರತದಿಂದ ಅತಿಹೆಚ್ಚು ರಫ್ತುಗೊಂಡ ಕಾರ್ ಬ್ರ್ಯಾಂಡ್ ಯಾವುದು?

ಮುಂಚೂಣಿ ಸಾಧಿಸಿದ ಫೋರ್ಡ್

ಹೌದು, ಏಪ್ರಿಲ್ 2017ರಿಂದ ಮಾರ್ಚ್ 2018ರ ಆರ್ಥಿಕ ವರ್ಷದ ಅವಧಿಯಲ್ಲಿ ಪ್ರಮುಖ ಕಾರು ಉತ್ಪಾದಕರನ್ನು ಹಿಂದಿಕ್ಕಿರುವ ಫೋರ್ಡ್ ಇಂಡಿಯಾ ಸಂಸ್ಥೆಯು ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 90,599 ಇಕೋ ಸ್ಪೋರ್ಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿ ನಂ.1 ಸ್ಥಾನಕ್ಕೇರಿದೆ.

ವಿದೇಶಿ ಮಾರುಕಟ್ಟೆಗೆ ಭಾರತದಿಂದ ಅತಿಹೆಚ್ಚು ರಫ್ತುಗೊಂಡ ಕಾರ್ ಬ್ರ್ಯಾಂಡ್ ಯಾವುದು?

ಇದು 2016-17ರ ಆರ್ಥಿಕ ವರ್ಷದ ಅವಧಿಗೆ ಹೋಲಿಕೆ ಮಾಡಿದಲ್ಲಿ ಶೇ. 13.91ರಷ್ಟು ಏರಿಕೆ ಕಂಡಿದ್ದು, ಫೋರ್ಡ್ ನಿರ್ಮಾಣದ ಮತ್ತೇರಡು ಕಾರು ಮಾದರಿಗಳಾದ ಫಿಗೊ(61,214) ಮತ್ತು ಫಿಗೊ ಆಸ್ಪೈರ್ ಸೆಡಾನ್(29,308) ಕಾರುಗಳು ವಿದೇಶಿ ಮಾರುಕಟ್ಟೆಗೆ ರಫ್ತುಗೊಂಡಿವೆ.

ವಿದೇಶಿ ಮಾರುಕಟ್ಟೆಗೆ ಭಾರತದಿಂದ ಅತಿಹೆಚ್ಚು ರಫ್ತುಗೊಂಡ ಕಾರ್ ಬ್ರ್ಯಾಂಡ್ ಯಾವುದು?

ಎರಡೇ ಸ್ಥಾನದಲ್ಲಿ ಜನರಲ್ ಮೋಟಾರ್ಸ್

ಭಾರತದಿಂದ ವಿದೇಶಿ ಮಾರುಕಟ್ಟೆಗಳಿಗೆ ಕಾರು ರಫ್ತುಗೊಳಿಸುವಲ್ಲಿ ಮುಂಚೂಣಿ ಸಾಧಿಸಿರುವ ಜನರಲ್ ಮೋಟಾರ್ಸ್(ಜಿಎಂ) ದೇಶಿಯ ಮಾರುಕಟ್ಟೆಯಲ್ಲಿ ಕಾರು ಮಾರಾಟ ಮಾಡದಿದ್ದರೂ ರಫ್ತು ಪ್ರಮಾಣದಲ್ಲಿ ತನ್ನದೇ ಜನಪ್ರಿಯತೆ ಪಡೆದಿದೆ.

ವಿದೇಶಿ ಮಾರುಕಟ್ಟೆಗೆ ಭಾರತದಿಂದ ಅತಿಹೆಚ್ಚು ರಫ್ತುಗೊಂಡ ಕಾರ್ ಬ್ರ್ಯಾಂಡ್ ಯಾವುದು?

ಕಳೆದ ಬಾರಿ ಕಾರು ರಫ್ತು ಪ್ರಮಾಣದಲ್ಲಿ ಮೊದಲನೇ ಸ್ಥಾನದಲ್ಲಿ ಜಿಎಂ ಸಂಸ್ಥೆಯು ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದ್ದು, ಏಪ್ರಿಲ್ 2017ರಿಂದ ಮಾರ್ಚ್ 2018ರ ಅವಧಿಯಲ್ಲಿ 83,140 ಬೀಟ್ ಹ್ಯಾಚ್‌ಬ್ಯಾಕ್ ಕಾರುಗಳನ್ನು ರಫ್ತು ಮಾಡಿದೆ.

ವಿದೇಶಿ ಮಾರುಕಟ್ಟೆಗೆ ಭಾರತದಿಂದ ಅತಿಹೆಚ್ಚು ರಫ್ತುಗೊಂಡ ಕಾರ್ ಬ್ರ್ಯಾಂಡ್ ಯಾವುದು?

ಕುಸಿತ ಕಂಡ ಫೋಕ್ಸ್‌ವ್ಯಾಗನ್, ಹ್ಯುಂಡೈ

ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಫೋಕ್ಸ್‌ವ್ಯಾಗನ್ ಸಂಸ್ಥೆಯು 77,005 ವೆಂಟೋ ಸೆಡಾನ್ ಕಾರುಗಳನ್ನು ರಫ್ತು ಮಾಡಿ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದ್ದು, ಹ್ಯುಂಡೈ ಇಂಡಿಯಾ ಕೂಡಾ ಕಳೆದ ಬಾರಿಗಿಂತ ರಫ್ತು ಪ್ರಮಾಣದಲ್ಲಿ ಕುಸಿತ ದಾಖಲಿಸಿದೆ.

ವಿದೇಶಿ ಮಾರುಕಟ್ಟೆಗೆ ಭಾರತದಿಂದ ಅತಿಹೆಚ್ಚು ರಫ್ತುಗೊಂಡ ಕಾರ್ ಬ್ರ್ಯಾಂಡ್ ಯಾವುದು?

ಹ್ಯುಂಡೈ ಇಂಡಿಯಾ ಸಂಸ್ಥೆಯು ವಿದೇಶಿ ಮಾರುಕಟ್ಟೆಗಳಿಗೆ 50,820 ಕ್ರೇಟಾ ಕಾರುಗಳನ್ನು ರಫ್ತು ಮಾಡಿದರೇ 44,907 ಗ್ರ್ಯಾಂಡ್ ಐ10 ಕಾರುಗಳನ್ನು ರಫ್ತು ಮಾಡಿ ಆರನೇ ಸ್ಥಾನಕ್ಕೆ ಕುಸಿದೆ. ಆದ್ರೆ ದೇಶಿಯ ಮಾರುಕಟ್ಟೆಯಲ್ಲಿ ಕಾರು ಮಾರಾಟದಲ್ಲಿ ಇತರೆ ಸಂಸ್ಥೆಗಳಿಂತ ಹೆಚ್ಚಿನ ಮಟ್ಟದ ಬೇಡಿಕೆ ಪಡೆದಿರುವುದು ಗಮನಾರ್ಹ.

ವಿದೇಶಿ ಮಾರುಕಟ್ಟೆಗೆ ಭಾರತದಿಂದ ಅತಿಹೆಚ್ಚು ರಫ್ತುಗೊಂಡ ಕಾರ್ ಬ್ರ್ಯಾಂಡ್ ಯಾವುದು?

ಏಳನೇ ಸ್ಥಾನದಲ್ಲಿ ಮಾರುತಿ ಸುಜುಕಿ

ಹ್ಯಾಚ್‌ಬ್ಯಾಕ್ ಕಾರುಗಳ ರಫ್ತು ಪ್ರಮಾಣದಲ್ಲಿ ಏರಿಕೆ ದಾಖಲಿಸಿರುವ ಮಾರುತಿ ಸುಜುಕಿ ಸಂಸ್ಥೆಯು 41,433 ಬಲೆನೊ ಕಾರುಗಳನ್ನು ಮತ್ತು 22,969 ಇಗ್ನಿಸ್ ಕಾರುಗಳನ್ನು ರಫ್ತು ಮಾಡಿದ್ದು, ವಿದೇಶಿ ಮಾರುಕಟ್ಟೆಗಳಲ್ಲಿ ಮೆಡ್ ಇನ್ ಇಂಡಿಯಾ ಬ್ರಾಂಡ್ ಉತ್ತೇಜನಕ್ಕೆ ಕಾರಣವಾಗಿದೆ.

ವಿದೇಶಿ ಮಾರುಕಟ್ಟೆಗೆ ಭಾರತದಿಂದ ಅತಿಹೆಚ್ಚು ರಫ್ತುಗೊಂಡ ಕಾರ್ ಬ್ರ್ಯಾಂಡ್ ಯಾವುದು?

ಕಳೆಗುಂದಿದ ನಿನ್ಸಾಸ್ ರಫ್ತು ಪ್ರಮಾಣ

ಪ್ರತಿ ಬಾರಿಯೂ ರಫ್ತು ಪ್ರಮಾಣದಲ್ಲಿ ತನ್ನದೇ ಆದ ದಾಖಲೆ ಸೃಷ್ಠಿಸುತ್ತಿದ್ದ ನಿಸ್ಸಾನ್ ಸಂಸ್ಥೆಯು ಈ ಬಾರಿ ರಫ್ತು ಪ್ರಮಾಣದಲ್ಲಿ ಭಾರೀ ಇಳಿಕೆ ದಾಖಲಿಸಿದೆ. ಕೇವಲ 34,075 ಸೆಡಾನ್ ಕಾರುಗಳನ್ನು ರಫ್ತು ಮಾಡಿ ಟಾಪ್ ಹತ್ತರಲ್ಲೂ ಸ್ಥಾನ ಪಡೆದಿಲ್ಲ.

ವಿದೇಶಿ ಮಾರುಕಟ್ಟೆಗೆ ಭಾರತದಿಂದ ಅತಿಹೆಚ್ಚು ರಫ್ತುಗೊಂಡ ಕಾರ್ ಬ್ರ್ಯಾಂಡ್ ಯಾವುದು?

ಫೋರ್ಡ್‌ಗೆ ಮತ್ತೊಂದು ಆನೆ ಬಲ

ಈ ಬಾರಿ ರಫ್ತು ಪ್ರಮಾಣದಲ್ಲಿ ಸರ್ವಾಕಾಲಿಕ ದಾಖಲೆ ಸೃಷ್ಠಿಸಿರುವ ಫೋರ್ಡ್ ಸಂಸ್ಥೆಯು ತನ್ನ ಹೊಸ ಕಾರು ಉತ್ಪನ್ನ ಫ್ರೀ ಸ್ಟೈಲ್ ಕ್ರಾಸ್ ಓವರ್ ಕಾರಿನ ರಫ್ತು ಪ್ರಮಾಣದಲ್ಲಿ ಮತ್ತೊಂದು ದಾಖಲೆ ಸೃಷ್ಠಿಸುವ ತವಕದಲ್ಲಿದೆ. ಒಟ್ಟಿನಲ್ಲಿ ಪ್ರಮುಖ ಕಾರು ರಫ್ತು ಪ್ರಮಾಣದಲ್ಲಿ ಉತ್ಪಾದಕರಿಗೆ ಟಾಂಗ್ ಕೊಟ್ಟಿರುವ ಫೋರ್ಡ್ ಮುಂಬರುವ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಬೃಹತ್ ಯೋಜನೆ ರೂಪಿಸುತ್ತಿದೆ.

Most Read Articles

Kannada
English summary
India’s Most Exported Passenger Vehicle Revealed.
Story first published: Wednesday, May 2, 2018, 19:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X