ತಾಂತ್ರಿಕ ದೋಷವಿರುವ ಹೊಸ ಇಕೋಸ್ಪೋರ್ಟ್ ಹಿಂಪಡೆದ ಫೋರ್ಡ್

By Praveen Sannamani

ಹೊಸ ವೈಶಿಷ್ಟ್ಯತೆಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ 2018ರ ಇಕೋಸ್ಪೋರ್ಟ್ ಕಾರುಗಳು ಸದ್ಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಇದೇ ವೇಳೆ ಹೊಸ ಕಾರುಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಹೊಸ ಕಾರುಗಳನ್ನು ಹಿಂಪಡೆಯಲಾಗಿದೆ.

ತಾಂತ್ರಿಕ ದೋಷವಿರುವ ಹೊಸ ಇಕೋಸ್ಪೋರ್ಟ್ ಹಿಂಪಡೆದ ಫೋರ್ಡ್

ಪವರ್‌ಟ್ರೈನ್ ಕಂಟ್ರೋಲ್ ಮಾಡ್ಯೂಲ್ ವಿಭಾಗದಲ್ಲಿ ಕಂಡುಬಂದಿರುವ ತಾಂತ್ರಿಕ ದೋಷದ ಬಗ್ಗೆ ಸ್ವತಃ ಫೋರ್ಡ್ ಸಂಸ್ಥೆಯೇ ಗ್ರಾಹಕರಿಗೆ ತಿಳಿಸಿದ್ದು, ಸದ್ಯದಲ್ಲೇ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದೆ. ವರದಿ ಪ್ರಕಾರ ಚೆನ್ನೈನಲ್ಲಿರುವ ಫೋರ್ಡ್ ಉತ್ಪಾದನಾ ಘಟಕದಲ್ಲಿ 2017ರ ನವೆಂಬರ್‌ನಿಂದ 2018ರ ಮಾರ್ಚ್ ಅವಧಿಯಲ್ಲಿ ಸಿದ್ದವಾಗಿದ್ದ ಕಾರುಗಳಲ್ಲಿ ಮಾತ್ರ ಈ ತಾಂತ್ರಿಕ ದೋಷ ಕಂಡುಬಂದಿದೆ ಎನ್ನಲಾಗಿದೆ.

ತಾಂತ್ರಿಕ ದೋಷವಿರುವ ಹೊಸ ಇಕೋಸ್ಪೋರ್ಟ್ ಹಿಂಪಡೆದ ಫೋರ್ಡ್

2017ರ ನವೆಂಬರ್‌ನಿಂದ 2018ರ ಮಾರ್ಚ್ ಅವಧಿಯಲ್ಲಿ ಮಾರಾಟಗೊಂಡಿರುವ ಒಟ್ಟು 7,249 ಕಾರುಗಳಲ್ಲಿ ಈ ಪವರ್‌ಟ್ರೈನ್ ಕಂಟ್ರೋಲ್ ಮಾಡ್ಯೂಲ್ ದೋಷ ಕಂಡುಬಂದಿದ್ದು, ಇದು ಕಾರು ಚಾಲನೆಯ ಮೇಲೆ ಪರಿಣಾಮ ಬೀರುಬಹುದು ಎನ್ನಲಾಗಿದೆ.

ತಾಂತ್ರಿಕ ದೋಷವಿರುವ ಹೊಸ ಇಕೋಸ್ಪೋರ್ಟ್ ಹಿಂಪಡೆದ ಫೋರ್ಡ್

ಹೀಗಾಗಿ ತಾಂತ್ರಿಕ ದೋಷ ಹೊಂದಿರುವ ಕಾರು ಮಾದರಿಯ ಮಾಲೀಕರನ್ನ ಸಂಪರ್ಕಿಸಿರುವ ಫೋರ್ಡ್ ಸಂಸ್ಥೆಯು ಆದ ಸಮಸ್ಯೆ ಬಗ್ಗೆ ಕ್ಷಮಾಪಣೆ ಕೋರಿದ್ದಲ್ಲದೇ ಶೀಘ್ರದಲ್ಲೇ ದೋಷಪೂರಿತ ಕಾರುಗಳಲ್ಲಿನ ಸಮಸ್ಯೆಯನ್ನು ಉಚಿತವಾಗಿ ಬಗೆಹರಿಸಿಕೊಡುವ ಭರವಸೆ ನೀಡಿದೆ.

ತಾಂತ್ರಿಕ ದೋಷವಿರುವ ಹೊಸ ಇಕೋಸ್ಪೋರ್ಟ್ ಹಿಂಪಡೆದ ಫೋರ್ಡ್

ಅಷ್ಟಕ್ಕೂ ಇದು ದೊಡ್ಡ ಸಮಸ್ಯೆ ಏನು ಅಲ್ಲಾ. ಇದಲ್ಲದೇ ಹೊಸ ಕಾರುಗಳಲ್ಲಿನ ತಾಂತ್ರಿಕ ಸಮಸ್ಯೆಗಳು ಸಾಮಾನ್ಯವಾಗಿದ್ದು, ಕಾರು ಉತ್ಪಾದನಾ ಘಟಕಗಳಲ್ಲಿ ಆಗುವ ಕೆಲವು ದೋಷಗಳಿಂದಾಗಿ ಅದು ಕಾರಿನ ತಾಂತ್ರಿಕ ಅಂಶಗಳ ಜೋಡಣೆ ಸಂದರ್ಭದಲ್ಲಿ ಈ ರೀತಿಯ ಲೋಪ ಉಂಟಾಗುತ್ತವೆ.

MOST READ:ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ತಾಂತ್ರಿಕ ದೋಷವಿರುವ ಹೊಸ ಇಕೋಸ್ಪೋರ್ಟ್ ಹಿಂಪಡೆದ ಫೋರ್ಡ್

ಇದರಿಂದಾಗಿ ಇಕೋಸ್ಪೋರ್ಟ್ ಗ್ರಾಹಕರು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದಿರುವ ಫೋರ್ಡ್ ಸಂಸ್ಥೆಯು ಅಧಿಕೃತ ಡೀಲರ್ಸ್ ಬಳಿ ಕಂಡುಬಂದಿರುವ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದು, ಮಾರಾಟವಾಗಿರುವ ಕೆಲವೇ ಕೆಲವು ಇಕೋಸ್ಪೋರ್ಟ್ ಕಾರುಗಳಲ್ಲಿ ಮಾತ್ರ ಈ ಸಮಸ್ಯೆ ಕಂಡುಬಂದಿದೆ.

ತಾಂತ್ರಿಕ ದೋಷವಿರುವ ಹೊಸ ಇಕೋಸ್ಪೋರ್ಟ್ ಹಿಂಪಡೆದ ಫೋರ್ಡ್

ಒಂದು ವೇಳೆ ನೀವು ಕೂಡಾ ಇಕೋಸ್ಪೋರ್ಟ್ ಗ್ರಾಹಕರಾಗಿದ್ದಲ್ಲಿ ಈ ಬಗ್ಗೆ ಯಾವುದೇ ಸಂಕೋಚವಿಲ್ಲದೇ ನಿಮ್ಮ ಅಧಿಕೃತ ಡೀಲರ್ಸ್‌ಗಳನ್ನು ಸಂಪರ್ಕ್ ಮಾಡಿ ಮಾಹಿತಿ ಪಡೆಯಬಹುದಾಗಿದ್ದು, ಯಾವುದೇ ಕಾರಣಕ್ಕೂ ತಾಂತ್ರಿಕ ಸಮಸ್ಯೆಗಳಿದ್ದಾಗ ವಾಹನ ಚಾಲನೆ ವೇಳೆ ತುಂಬಾ ಎಚ್ಚರಿಕೆಯಿಂದ ಸಾಗಿರಿ.

ತಾಂತ್ರಿಕ ದೋಷವಿರುವ ಹೊಸ ಇಕೋಸ್ಪೋರ್ಟ್ ಹಿಂಪಡೆದ ಫೋರ್ಡ್

ಇನ್ನು ಫೋರ್ಡ್ ಇಕೋ ಸ್ಪೋರ್ಟ್ ಫೇಸ್‍‍ಲಿಫ್ಟ್ ಕಾರುಗಳು ಈ ಹಿಂದೆ 2017ರ ನವೆಂಬರ್ ತಿಂಗಳಲ್ಲಿ ಬಿಡುಗಡೆಗೊಂಡಿದ್ದು, ಬಿಡುಗಡೆಯ ನಂತರ ಹತ್ತಾರು ಬದಲಾವಣೆಗಳನ್ನು ಕಂಡಿದೆ. ಹೀಗಾಗಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ವೆರಿಯೆಂಟ್‌ಗಳನ್ನು ಅಭಿವೃದ್ಧಿ ಮಾಡಲಾಗಿದೆ.

ತಾಂತ್ರಿಕ ದೋಷವಿರುವ ಹೊಸ ಇಕೋಸ್ಪೋರ್ಟ್ ಹಿಂಪಡೆದ ಫೋರ್ಡ್

ಇಕೊಸ್ಪೋರ್ಟ್ ಕಾರುಗಳಲ್ಲಿ ಆ್ಯಂಬಿಯೆಂಟ್, ಟ್ರೆಂಡ್, ಟ್ರೆಂಡ್+, ಟೈಟಾನಿಯಂ ಮತ್ತು ಟೈಟಾನಿಯಂ+ ಎಂಬ ಐದು ವೆರಿಯಂಟ್‍‍ಗಳಲ್ಲಿ ಲಭ್ಯವಿದ್ದು, ಹೊಸದಾಗಿ ಟೈಟಾನಿಯಂ ಎಸ್ ಮತ್ತು ಸಿಗ್ನಿಚೆರ್ ಎಂಬ ಟಾಪ್ ಎಂಡ್ ವೆರಿಯಂಟ್ ಕಾರುಗಳನ್ನು ಪರಿಚಯಿಸಲಾಗಿದೆ.

ತಾಂತ್ರಿಕ ದೋಷವಿರುವ ಹೊಸ ಇಕೋಸ್ಪೋರ್ಟ್ ಹಿಂಪಡೆದ ಫೋರ್ಡ್

ಎಂಜಿನ್ ಸಾಮರ್ಥ್ಯ

ಹೊಸ ಫೋರ್ಡ್ ಇಕೊಸ್ಪೋರ್ಟ್ ಟೈಟಾನಿಯಂ ಎಸ್ ಮತ್ತು ಸಿಗ್ನಿಚೆರ್ ವೆರಿಯೆಂಟ್ ಕಾರುಗಳು 1.5 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್ ಸಹಾಯದಿಂದ 99ಬಿಹೆಚ್‍ಪಿ ಮತ್ತು 205ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 123ಬೆಹೆಚ್‍ಪಿ ಮತ್ತು 150ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಎರಡು ಎಂಜಿನ್‍‍ಗಳನ್ನು ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ ಮಿಶನ್‍‍ಗಳೊಂದಿಗೆ ಜೋಡಿಸಲಾಗಿದೆ.

Most Read Articles

Kannada
Read more on ford suv recall
English summary
Ford EcoSport Recalled In India Over PCM Issue — 7249 Models Affected.
Story first published: Friday, September 7, 2018, 20:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X