ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೆಚರ್ ಕಾರುಗಳ ವೈಶಿಷ್ಟ್ಯತೆಗಳಿವು..

By Rahul Ts

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ತಮ್ಮ ಇಕೊಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍‍ಯುವಿ ಕಾರುಗಳ ಇಕೊಸ್ಪೋರ್ಟ್ ಎಸ್ ಮತ್ತು ಇಕೊಸ್ಪೋರ್ಟ್ ಸಿಗ್ನೇಚರ್ ಎಂಬ ಎರಡು ವೇರಿಯಂಟ್‍‍ಗಳನ್ನು ಬಿಡುಗಡೆಗೊಳಿಸಿದ್ದು, ಇವೆರಡು ಇಸ್ಕೊ ಸ್ಪೋರ್ಟ್ ಕಾರಿನ ಟೈಟಾನಿಯಂ ಟ್ರಿಮ್ ಕಾರುಗಳ ಮೇಲೆ ಆದರಿಸುತ್ತವೆ.

ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೆಚರ್ ಕಾರುಗಳ ವೈಶಿಷ್ಟ್ಯತೆಗಳಿವು..

ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೇಚರ್ ವೇರಿಯಂಟ್‍‍ನ ಪೆಟ್ರೋಲ್ ಮಾದರಿಯ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 10.49 ಮತ್ತು 11.37 ಲಕ್ಷಕ್ಕೆ ಮಾರಾಟಗೊಳ್ಳುತ್ತಿದ್ದರೆ ಇನ್ನು ಈ ಕಾರುಗಳ ಡೀಸೆಲ್ ಮಾದರಿಗಳು ರೂ 10.99 ಮತ್ತು ರೂ. 11.89 ಲಕ್ಷಕ್ಕೆ ಮಾರಾಟಗೊಳ್ಳುತ್ತಿವೆ.

ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೆಚರ್ ಕಾರುಗಳ ವೈಶಿಷ್ಟ್ಯತೆಗಳಿವು..

ಸನ್ ರೂಫ್/ಫನ್ ರೂಫ್

ಹೊಸ ಫೋರ್ಡ್ ಒಕೊಸ್ಪೋರ್ಟ್ ಮತ್ತು ಸಿಗ್ನೇಚರ್ ಕಾರುಗಳು ವಿಶೇಷವಾಗಿ ಸನ್‍‍ರೂಫ್ ಅನ್ನು ಅಳವಡಿಸಲಾಗಿದ್ದು, ಇದನ್ನು ಸಂಸ್ಥೆಯು ಫನ್ ರೂಫ್ ಎಂದು ಕೂಡ ಕರೆಯುತ್ತದೆ. ಇಕೊಸ್ಪೋರ್ಟ್ ಸಿಗ್ನೇಚರ್ ಎಡಿಶನ್ ಕಾರು ಎಲೆಕ್ಟ್ರಿಕ್ ಸನ್‍‍ರೂಫ್ ಅನ್ನು ಪಡೆದಿದ್ದು, ಇಕೊಸ್ಪೋರ್ಟ್ ಎಸ್ ಎಡಿಶನ್ ಕಾರು ಪವರ್‍‍ಸ್ಲೈಡ್ ಸನ್‍‍ರೂಫ್ ಅನ್ನು ಪಡೆದುಕೊಂಡಿದೆ.

ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೆಚರ್ ಕಾರುಗಳ ವೈಶಿಷ್ಟ್ಯತೆಗಳಿವು..

ಕಾರಿನ ಹೊರಬಾಗದ ಬದಲಾವಣೆಗಳು

ಇಕೊಸ್ಪೋರ್ಟ್ ಕಾರಿನ ಎಸ್ ಮತ್ತು ಸಿಗ್ನೇಚರ್ ಎಡಿಶನ್ ಕಾಂಪ್ಯಾಕ್ಟ್ ಎಸ್‍‍ಯುವಿ ಕಾರುಗಳು ಹೊರಭಾಗದಲ್ಲಿ ಹೊಸ ವಿನ್ಯಾಸವನ್ನು ಪಡೆದುಕೊಂಡಿದ್ದು, ಮುಂಭಾಗದಲ್ಲಿ ಬ್ಲೇಕ್ಡ್ ಔಟ್ ಫ್ರಂಟ್ ಗ್ರಿಲ್, ಬಿ ಪಿಲ್ಲರ್ಸ್, ಡೋರ್ ಹ್ಯಾಂಡಲ್ಸ್, ಒಆರ್‍‍ವಿಎಮ್, ಫಾಗ್ ಲ್ಯಾಂಪ್ ಬೆಜೆಲ್ಸ್ ಮತ್ತು ರೂಫ್ ರೈಲ್‍‍ಗಳನ್ನು ಅಳವಡಿಸಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೆಚರ್ ಕಾರುಗಳ ವೈಶಿಷ್ಟ್ಯತೆಗಳಿವು..

ಅಲ್ಲದೆ ಇಕೊಸ್ಪೋರ್ಟ್ ಸಿಗ್ನೇಚರ್ ಎಡಿಶನ್ ಕಾರುಗಳ ಹೆಕ್ಸಾಗನಲ್ ಫ್ರಂಟ್ ಗ್ರಿಲ್‍‍ಗಳ ಮೇಲೆ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್ ಅನ್ನು ಅಳವಡಿಸಲಾಗಿದ್ದು ಜೊತೆಗೆ ಡೈಮಂಡ್ ಕಟ್ ಡ್ಯುಯಲ್ ಕಟ್ ಡ್ಯುಯಲ್ ಟೋನ್ ಅಲಾಯ್ ಚಕ್ರಗಳನ್ನು ಅಳವಡಿಸಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೆಚರ್ ಕಾರುಗಳ ವೈಶಿಷ್ಟ್ಯತೆಗಳಿವು..

ಇನ್ನು ಇಕೊಸ್ಪೋರ್ಟ್ ಎಸ್ ವೇರಿಯಂಟ್ ಕಾರುಗಳು ಹೈ ಗ್ಲಾಸ್ ಬ್ಲಾಕ್ ಬಣ್ಣದಿಂದ ಸಜ್ಜುಗೊಂಡ ಫ್ರಂಟ್ ಗ್ರಿಲ್, ಹಿಐಡಿ ಹೆಡ್‍‍ಲ್ಯಾಂಪ್ಸ್, ಬ್ಲಾಕ್ ಪೆಯಿಂಟೆಡ್ ರೂಫ್, ಆಟೋಮ್ಯಾಟಿಕ್ ಹೆಡ್‍‍ಲ್ಯಾಂಪ್ಸ್, ರೈನ್ ಸೆನ್ಸಿಂಗ್ ವೈಪರ್ಸ್ ಮತ್ತು ಪ್ರೀಮಿಯಂ ಸ್ಮೋಕ್ ಅಲಾಯ್ ಚಕ್ರಗಳನ್ನು ಅಳವಡಿಸಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೆಚರ್ ಕಾರುಗಳ ವೈಶಿಷ್ಟ್ಯತೆಗಳಿವು..

ಕಾರುಗಳ ಒಳವಿನ್ಯಾಸ

ಇಕೊಸ್ಪೋರ್ಟ್ ಸಿಗ್ನೇಚರ್ ಎಡಿಶನ್ ಕಾರುಗಳಲ್ಲಿ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ನ್ಯಾವಿಗೇಶನ್ ಮತ್ತು ಮೈಕ್ರೋಫೋನ್ ಅನ್ನು ಪಡೆದಿರುವ 9 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಯುಎಸ್‍‍ಬಿ ಪೋರ್ಟ್ಸ್ ಮತ್ತು ಬ್ಲೂಟೂತ್ ಅನ್ನು ಅಳವಡಿಸಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೆಚರ್ ಕಾರುಗಳ ವೈಶಿಷ್ಟ್ಯತೆಗಳಿವು..

ಜೊತೆಗೆ ಥಿಯೇಟರ್ ಡಿಮ್ಮಿಂಗ್ ಕ್ಯಾಬಿನ್ ಲೈಟ್ಸ್, ಒಆರ್‍‍ವಿಎಂನ ಮೇಲೆ ಪಡಲ್ ಲ್ಯಾಂಪ್ಸ್, ಕಾನ್ಕ್ವೆರ್ ಬ್ಲೂ ಸೀಟ್ ಸ್ಟಿಚಿಂಗ್, ಇನ್ನರ್ ಡೋರ್ ಹ್ಯಾಂಡಲ್ಸ್, ಬ್ಲಾಕ್ ಪೆಯಿಂಟೆಡ್ ಸ್ಪೋರ್ಟಿ ಅಲಾಯ್ ಪೆಡಲ್ ಮತ್ತು ಸ್ಪೋರ್ಟೊ ಅನೊಡೈಸ್ಡ್ ಬ್ಲೂ ಇನ್ಸರ್ಟ್ಸ್ ಅನ್ನು ಕೂಡ ಪಡೆದುಕೊಂಡಿವೆ.

ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೆಚರ್ ಕಾರುಗಳ ವೈಶಿಷ್ಟ್ಯತೆಗಳಿವು..

ಇನ್ನು ಇಕೊಸ್ಪೋರ್ಟ್ ಎಸ್ ವೇರಿಯಂಟ್ ಕಾರುಗಳಲ್ಲಿ ವಾಯ್ಸ್ ರೆಕಗ್ನಿಷನ್,ಆಪಲ್ ಕಾರ್‍‍‍ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಸಿಂಕ್3 ಸಿಸ್ಟಂ ಪಡೆದ 8 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೆಚರ್ ಕಾರುಗಳ ವೈಶಿಷ್ಟ್ಯತೆಗಳಿವು..

ಜೊತೆಗೆ ಗ್ಲೋವ್ ಬಾಕ್ಸ್ ಇಲ್ಲ್ಯುಮಿನೇಶನ್, ಮಲ್ಟಿಕಲರ್ ಫೂಟ್‍‍ವೆಲ್ ಏಂಬಿಯಂಟ್ ಲೈಟಿಂಗ್, ಕ್ರೋಮ್ ರಿಂಗ್ಸ್ ನೊಂದಿಗೆ ಪ್ರೀಮಿಯಂ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಟೈರ್ ಪ್ರೆಸ್ಸುರ್ ಮಾನಿಟರಿಂಗ್ ಸಿಸ್ಟಂ ಮತ್ತು ಫ್ಲಾಟ್ ಬೆಡ್ ಸೀಟ್‍‍ಗಳನ್ನು ಕೂಡ ಪಡೆದುಕೊಂಡಿವೆ.

ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೆಚರ್ ಕಾರುಗಳ ವೈಶಿಷ್ಟ್ಯತೆಗಳಿವು..

ಎಂಜಿನ್ ಸಾಮರ್ಥ್ಯ

ಹೊಸ ಫೋರ್ಡ್ ಇಕೋಬೂಸ್ಟ್ ಕಾರುಗಳು 1 ಲೀಟರ್ ಇಕೊಬೂಸ್ಟ್ ಪೆಟ್ರೋಲ್ ಎಂಜಿನ್ ಸಹಾಯದಿಂದ 123ಬಿಹೆಚ್‍ಪಿ ಮತ್ತು 170ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೆಚರ್ ಕಾರುಗಳ ವೈಶಿಷ್ಟ್ಯತೆಗಳಿವು..

ಮತ್ತೊಂದು ಕಡೆ ಫೋರ್ಡ್ ಇಕೊಸ್ಪೋರ್ಟ್ ಸಿಗ್ನೇಚರ್ ಎಡಿಶನ್ ಕಾರುಗಳು 1.5 ಲೀಟರ್ ಡ್ರ್ಯಾಗನ್ ಸಿರೀಸ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಂಡಿದ್ದು, 121 ಬಿಹೆಚ್‍ಪಿ ಮತ್ತು 150ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೆಚರ್ ಕಾರುಗಳ ವೈಶಿಷ್ಟ್ಯತೆಗಳಿವು..

ಮತ್ತು ಫೋರ್ಡ್ ಇಕೊಸ್ಪೋರ್ಟ್ ಸಿಗ್ನೇಚರ್ ಡೀಸೆಲ್ ಮಾದರಿಯ ಕಾರುಗಳು 1.5 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 98.6 ಬಿಹೆಚ್‍‍ಪಿ ಮತ್ತು 205 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೆಚರ್ ಕಾರುಗಳ ವೈಶಿಷ್ಟ್ಯತೆಗಳಿವು..

ಇನ್ನಿತರೆ ವೈಶಿಷ್ಟ್ಯತೆಗಳು

ಇಕೊಸ್ಪೋರ್ಟ್ ಕಾರಿನ ಎಸ್ ಮತ್ತು ಸಿಗ್ನೇಚರ್ ಎಡಿಶನ್ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್‍‍‍ನೊಂದಿಗೆ ಇಬಿಡಿ, ಅಪ್ರೋಚ್ ಲೈಟ್ಸ್, ಹೋಂ ಸೇಫ್ ಹೆಡ್‍‍ಲ್ಯಾಂಪ್ಸ್, ಎಂಜಿನ್ ಇಮ್ಮೊಬೈಲೈಸರ್, ಡ್ಯುಯಲ್ ಫ್ರಂಟ್ ಏರ್‍‍ಬ್ಯಾಗ್ಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಸೇಫ್ ಕ್ಲಚ್ ಸ್ಟಾರ್ಟ್ ಮತ್ತು ಫ್ರಂಟ್ ಸೀಟ್ ಬೆಲ್ಟ್ ಪ್ರಿಟೆನ್‍‍ಶರ್ ಅನ್ನು ಪಡೆದುಕೊಂಡಿವೆ.

ಫೋರ್ಡ್ ಇಕೊಸ್ಪೋರ್ಟ್ ಎಸ್ ಮತ್ತು ಸಿಗ್ನೆಚರ್ ಕಾರುಗಳ ವೈಶಿಷ್ಟ್ಯತೆಗಳಿವು..

ಇನ್ನು ಫೋರ್ಡ್ ಇಕೊಸ್ಪೋರ್ಟ್ ಎಸ್ ವೇರಿಯಂಟ್ ಕಾರುಗಳಲ್ಲಿ ವಿಶೇಷವಾಗಿ ಕ್ರೂಸ್ ಕಂಟ್ರೋಲ್, ಎಮರ್ಜೆನ್ಸಿ ಅಸ್ಸಿಸ್ಟಂನ್ಸ್, ಸೈಡ್ ಮತ್ತು ಕರ್ಟೈನ್ ಏರ್‍‍ಬ್ಯಾಗ್ಸ್, ಐಎಸ್‍ಒಫಿಕ್ಸ್ ಮತ್ತು ಫೋರ್ಡ್ ಸಂಸ್ಥೆಯ ಮೈಕೀ ವೈಶಿಷ್ಟ್ಯತೆಯನ್ನು ಪಡೆದಿದೆ.

Most Read Articles

Kannada
Read more on ford ecosport compact suv
English summary
Ford EcoSport S And Signature Edition Top Features.
Story first published: Wednesday, May 16, 2018, 16:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X