400 ಅಡಿ ಕಂದಕಕ್ಕೆ ಉರುಳಿದ ಫೋರ್ಡ್ ಎಂಡೀವರ್ ಹೊಸ ಕಾರು...

ದೇಶಾದ್ಯಂತ ಪ್ರತಿ 10 ನಿಮಿಷಕ್ಕೊಂದು ಭೀಕರ ಅಪಘಾತ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಬಹುತೇಕ ಪ್ರಕರಣಗಳಲ್ಲಿ ಸುರಕ್ಷಾ ಕ್ರಮಗಳಿಲ್ಲದೇ ಪ್ರಾಣಹಾನಿ ಹೆಚ್ಚುತ್ತಿರುವುದನ್ನು ನಾವು ಗಮನಿಸಬಹುದಾಗಿದೆ.

By Praveen

Recommended Video

[Kannada] Maruti Swift 2018 - Full Specifications, Features, Price, Mileage, Colours - DriveSpark

ದೇಶಾದ್ಯಂತ ಪ್ರತಿ 10 ನಿಮಿಷಕ್ಕೊಂದು ಭೀಕರ ಅಪಘಾತ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಬಹುತೇಕ ಪ್ರಕರಣಗಳಲ್ಲಿ ಸುರಕ್ಷಾ ಕ್ರಮಗಳಿಲ್ಲದೇ ಪ್ರಾಣಹಾನಿ ಹೆಚ್ಚುತ್ತಿರುವುದನ್ನು ನಾವು ಗಮನಿಸಬಹುದಾಗಿದ್ದು, ನಿನ್ನೆಯಷ್ಟೇ ನಡೆದ ಅಪಘಾತ ಪ್ರಕರಣವೊಂದನ್ನು ಗಮನಿಸಿದರೇ ಸುರಕ್ಷಾ ಕ್ರಮಗಳಿಗೆ ಹೆಚ್ಚಿನ ಒತ್ತು ಏಕೆ ನೀಡಬೇಕು ಎಂಬುವುದು ಸ್ಪಷ್ಟವಾಗುತ್ತೆ.

400 ಅಡಿ ಕಂದಕಕ್ಕೆ ಉರುಳಿದ ಫೋರ್ಡ್ ಎಂಡೀವರ್ ಹೊಸ ಕಾರು...

ಕಾರುಗಳಲ್ಲಿ ಅಳವಡಿಸಲಾಗಿರುವ ಸುರಕ್ಷಾ ಕ್ರಮ ಬಗೆಗೆ ಹೆಚ್ಚಿನ ಒತ್ತು ನೀಡುತ್ತಿಲ್ಲವಾದ್ದರಿಂದ ಅಪಘಾತಗಳ ತೀವ್ರತೆ ಹೆಚ್ಚುತ್ತಿದ್ದು, ನಿನ್ನೆ ನಡೆದ ಅಪಘಾತ ಪ್ರಕರಣವೊಂದರಲ್ಲಿ ಫೋರ್ಡ್ ಎಂಡೀವರ್ ಬರೋಬ್ಬರಿ 400 ಅಡಿ ಕಂದಕಕ್ಕೆ ಉಳಿಬಿದ್ದಿದ್ದರೂ ಕಾರಿನಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

400 ಅಡಿ ಕಂದಕಕ್ಕೆ ಉರುಳಿದ ಫೋರ್ಡ್ ಎಂಡೀವರ್ ಹೊಸ ಕಾರು...

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕನಕವಳ್ಳಿ ಬಳಿ ಈ ಘಟನೆ ನಡೆದಿದ್ದು, ಪ್ರವಾಸಕ್ಕೆಂದು ಬಂದಿದ್ದ ಫೋರ್ಡ್ ಎಂಡೀವರ್ ಎಸ್‌ಯುವಿ ಕಾರೊಂದು ವೇಗದಲ್ಲಿದ್ದಾಗ ನಿಯಂತ್ರಣ ತಪ್ಪಿ 400 ಅಡಿ ಕಂದಕಕ್ಕೆ ಉರುಳಿ ಬಿದ್ದಿದೆ.

400 ಅಡಿ ಕಂದಕಕ್ಕೆ ಉರುಳಿದ ಫೋರ್ಡ್ ಎಂಡೀವರ್ ಹೊಸ ಕಾರು...

ಅದೃಷ್ಟವಶಾತ್ ಕಾರಿನಲ್ಲಿದ್ದ 7 ಜನ (ಚಾಲಕ ಸೇರಿ) ಪ್ರಾಣಾಪಾಯದಿಂದ ಪಾರಾಗಿದ್ದು, ಕೆಲವರಿಗೆ ಗಂಭೀರ ಗಾಯಗಳನ್ನು ಹೊರತುಪಡಿಸಿ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

400 ಅಡಿ ಕಂದಕಕ್ಕೆ ಉರುಳಿದ ಫೋರ್ಡ್ ಎಂಡೀವರ್ ಹೊಸ ಕಾರು...

ಕುಟುಂಬ ಸಮೇತರಾಗಿ ಕೊಲ್ಲಾಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಗುಡ್ಡಗಾಡು ಪ್ರದೇಶವಾಗಿರುವ ಸಿಂಧುದುರ್ಗ ಮಾರ್ಗದಲ್ಲಿ ಕಾರು ಚಾಲಕನಿಗೆ ಸರಿಯಾದ ಮಾಹಿತಿ ಇಲ್ಲದ ಹಿನ್ನೆಲೆ ಕಾರು ಚಾಲನೆ ನಿಯಂತ್ರಣಕ್ಕೆ ಸಿಕ್ಕಿಲ್ಲ.

400 ಅಡಿ ಕಂದಕಕ್ಕೆ ಉರುಳಿದ ಫೋರ್ಡ್ ಎಂಡೀವರ್ ಹೊಸ ಕಾರು...

ಆದ್ರೆ ಕಾರಿನಲ್ಲಿ ಏರ್‌ಬ್ಯಾಗ್ ಸೌಲಭ್ಯ ಮತ್ತು ಬಲಿಷ್ಠವಾದ ಕಾರಿನ ಬಾಡಿ ಕಿಟ್ ಕಾರಿನಲ್ಲಿದ್ದವರ ಪ್ರಾಣ ಉಳಿಸಿದ್ದು, ಗಾಯಗೊಂಡಿದ್ದ ಏಳು ಜನಕ್ಕೂ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

400 ಅಡಿ ಕಂದಕಕ್ಕೆ ಉರುಳಿದ ಫೋರ್ಡ್ ಎಂಡೀವರ್ ಹೊಸ ಕಾರು...

ಇನ್ನು ಘಟನೆ ನಡೆದಾಗ ಸ್ಥಳೀಯರೇ ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿದ್ದು, ನಡೆದ ಘಟನೆ ಬಗ್ಗೆ ಕಾರಿನ ಮಾಲೀಕ ಜಿತೇಂದ್ರ ಸಿಂಗ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

400 ಅಡಿ ಕಂದಕಕ್ಕೆ ಉರುಳಿದ ಫೋರ್ಡ್ ಎಂಡೀವರ್ ಹೊಸ ಕಾರು...

ಫೋರ್ಡ್ ಎಂಡೀವರ್ ಕಾರಿನಲ್ಲಿ ಒದಗಿಸಲಾಗಿರುವ ಸುರಕ್ಷಾ ತಂತ್ರಜ್ಞಾನಗಳೇ ನಮ್ಮ ಜೀವ ಉಳಿಯಲು ಕಾರಣವಾಗಿದ್ದು, 400 ಅಡಿ ಕಂದಕಕ್ಕೆ ಬಿದ್ದ ನಾವು ಜೀವಂತವಾಗಿ ಬಂದಿರುವುದೇ ಪವಾಡ ಎಂದಿದ್ದಾರೆ.

400 ಅಡಿ ಕಂದಕಕ್ಕೆ ಉರುಳಿದ ಫೋರ್ಡ್ ಎಂಡೀವರ್ ಹೊಸ ಕಾರು...

ಹೀಗಾಗಿ ಪ್ರತಿಯೊಬ್ಬ ಕಾರು ಮಾಲೀಕರು ಕೂಡಾ ಕಾರಿನಲ್ಲಿರುವ ಸುರಕ್ಷಾ ಕ್ರಮಗಳ ಬಗ್ಗೆ ಹೆಚ್ಚಿನ ಒತ್ತು ನೀಡಬೇಕೆಂದು ಹೇಳಿರುವ ಜಿತೇಂದ್ರ ಸಿಂಗ್, ಬಲಿಷ್ಠವಾಗಿ ನಿರ್ಮಾಣಗೊಂಡಿರುವ ಫೋರ್ಡ್ ಎಂಡೀವರ್ ಕಾರುಗಳ ಬಗ್ಗೆ ಮೆಚ್ಚುಗೆ ಕೂಡಾ ವ್ಯಕ್ತಪಡಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಕಾರು ಮಾಲೀಕ ಜಿತೇಂದ್ರ ಸಿಂಗ್ ಅವರು ಘಟನೆ ಬಗ್ಗೆ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ.

Trending On DriveSpark Kannada:

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಕಾರು ಶುಚಿಯಾಗಿಡಲು 10 ಸುಲಭ ವಿಧಾನಗಳು

Most Read Articles

Kannada
Read more on accident off beat
English summary
New Ford Endeavour tumbles 400 feet into a valley.
Story first published: Saturday, February 24, 2018, 12:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X