ಮಾರುತಿ ಸ್ವಿಫ್ಟ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಫೋರ್ಡ್ ಫಿಗೊ ಕಾರು.?

ಜನಪ್ರಿಯ ಫೋರ್ಡ್ ಇಂಡಿಯಾ ಸಂಸ್ಥೆಯ ಅಧಿಕೃತ ಡೀಲರ್‍‍ಗಳು ಫೋರ್ಡ್ ಫಿಗೊ ಕಾರಿನ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ಫಿಗೊ ಹ್ಯಾಚ್‍‍ಬ್ಯಾಕ್ ಕಾರಿನ ಪೆಟ್ರೋಲ್ ವೇರಿಯಂಟ್ ಕಾರುಗಳು ರೂ. 5.50 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿದೆ.

By Rahul Ts

ಜನಪ್ರಿಯ ಫೋರ್ಡ್ ಇಂಡಿಯಾ ಸಂಸ್ಥೆಯ ಅಧಿಕೃತ ಡೀಲರ್‍‍ಗಳು ಫೋರ್ಡ್ ಫಿಗೊ ಕಾರಿನ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ಫಿಗೊ ಹ್ಯಾಚ್‍‍ಬ್ಯಾಕ್ ಕಾರಿನ ಪೆಟ್ರೋಲ್ ವೇರಿಯಂಟ್ ಕಾರುಗಳು ರೂ. 5.50 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿದ್ದು, ಇನ್ನು ಡೀಸೆಲ್ ವೇರಿಯಂಟ್ ಕಾರುಗಳು ರೂ. 6.11 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಮಾರುತಿ ಸ್ವಿಫ್ಟ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಫೋರ್ಡ್ ಫಿಗೊ ಕಾರು.?

ಫಿಗೊ ಕಾರಿನ ಪೆಟ್ರೋಲ್ ಹಾಗು ಡೀಸೆಲ್ ಎಲ್ಲಾ ವೇರಿಯಂಟ್‍‍ಗಳ ಮೇಲೆ ಸುಮಾರು 1 ಲಕ್ಷದ ವರೆಗಿನ ರಿಯಾಯಿತಿ ಪಡೆಯಬಹುದಾಗಿದ್ದು, ಮಾರುಕಟ್ಟೇಯಲ್ಲಿ ಅಧಿಕ ಸಂಖ್ಯೆಯಲ್ಲಿ ಮಾರಾಟಗೊಳ್ಳುತ್ತಿರುವ ಮಾರುತಿ ಸ್ವಿಫ್ಟ್ ಕಾರಿಗಿಂತಲೂ ಕಡಿಮೆ ಬೆಲೆಯಲ್ಲಿ ದೊರೆಯಲಿದೆ.

ಮಾರುತಿ ಸ್ವಿಫ್ಟ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಫೋರ್ಡ್ ಫಿಗೊ ಕಾರು.?

ಮಾರುತಿ ಸುಜುಕಿ ಸ್ವಿಫ್ಟ್ ಪೆಟ್ರೋಲ್ ವೇರಿಯಂಟ್ ಕಾರುಗಳು ಪ್ರಸ್ಥುತ ಮಾರುಕಟ್ಟೆಯಲ್ಲಿ ರೂ. 4.99 ಲಕ್ಷದ ಮತ್ತು ಡೀಸೆಲ್ ವೇರಿಯಂಟ್ ಕಾರುಗಳು ರೂ. 5.99 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿದ್ದು, ಫೋರ್ಡ್ ಸಂಸ್ಥೆಯು ತಮ್ಮ ಹೊಸ ಫಿಗೊ ಮತ್ತು ಆಸ್ಫೈರ್ ಕಾರುಗಳ ಫೇಸ್‍‍ಲಿಫ್ಟ್ ಮಾದರಿಯನ್ನು ಪರಿಚಯಿಸುವ ಸಲುವಾಗಿ ಪ್ರಸ್ಥುತ ಮಾರುಕಟ್ಟೆಯಲ್ಲಿರುವ ಪಿಗೊ ಕಾರುಗಳನ್ನು ಮಾರಾಟ ಮಾಡಬೇಕೆಂದು ಈ ನಿರ್ಣಯಕ್ಕೆ ಬಂದಿದೆ ಎನ್ನಲಾಗಿದೆ.

ಮಾರುತಿ ಸ್ವಿಫ್ಟ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಫೋರ್ಡ್ ಫಿಗೊ ಕಾರು.?

ಇದಲ್ಲದೆ ಫೋರ್ಡ್ ಸಂಸ್ಥೆಯ ಕೆಲ ಡೀಲರ್‍‍ಗಳು ಫಿಗೊ ಕಾರಿನ ಮೇಲೆ ಶೇಕಡ 0ರ ಬಡ್ಡಿ ಮತ್ತು ಉಚಿತ ವಿಮೆ ಆಫರ್ ಅನ್ನು ನೀಡುತ್ತಿದ್ದು, ಈ ಆಫರ್ ಈ ತಿಂಗಳಿನ ಕೊನೆಯ ವರೆಗು ಚಾಲ್ತಿಯಲ್ಲಿರಲಿದೆ.

ಮಾರುತಿ ಸ್ವಿಫ್ಟ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಫೋರ್ಡ್ ಫಿಗೊ ಕಾರು.?

ಅಂದರೆ ಹೊಸ ಫಿಗೊ ಫೇಸ್‍‍ಲಿಫ್ಟ್ ಕಾರುಗಳು ಆಗಸ್ಟ್ ತಿಂಗಳಿನಿಂದ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಪಿಗೊ ಫೇಸ್‍‍ಲಿಫ್ಟ್ ಕಾರು ಹೊರಭಾಗದಲ್ಲಿ ಹಾಗು ಒಳಭಾಗದಲ್ಲಿ ಬದಲಾವಣೆಗಳನ್ನು ಪಡೆದುಕೊಂಡಿರಲಿದೆ ಎನ್ನಲಾಗಿದೆ.

ಮಾರುತಿ ಸ್ವಿಫ್ಟ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಫೋರ್ಡ್ ಫಿಗೊ ಕಾರು.?

ಫೋರ್ಡ್ ಫಿಗೊ ಕಾರಿನ ಮುಂಭಾಗದಲ್ಲಿ ಹೊಸ ಗ್ರಿಲ್ ಹಾಗು ಬಂಪರ್ ಅನ್ನು ಪಡೆದಿರಲಿದ್ದು, ಹಿಂಭಾಗದಲ್ಲಿ ಕೂಡಾ ಹೊಸ ಬಂಪರ್ ಮತ್ತು ಮರು ವಿನ್ಯಾಸಗೊಳಿಸಲಾದ ಟೈಲ್‍ ಲ್ಯಾಂಪ್ ಅನ್ನು ಪಡೆದುಕೊಂಡಿರಲಿದೆ.

ಮಾರುತಿ ಸ್ವಿಫ್ಟ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಫೋರ್ಡ್ ಫಿಗೊ ಕಾರು.?

ಇನ್ನು ಕಾರಿನ ಒಳಭಾಗದಲ್ಲಿ ನವೀಕರಿಸಲಾದ ಡ್ಯಾಶ್‍‍ಬೋರ್ಡ್, ಆಪಲ್ ಕಾರ್ ಪ್ಲೇ ಹಾಗು ಆಂಡ್ರಾಯ್ಡ್ ಆಟೊ ಆಯ್ಕೆಯನ್ನು ಒಳಗೂಂಡ SYNC3 ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಟಚ್‍‍ಸ್ಕ್ರೀನ್ ಇಂಟರ್‍‍ಫೇಸ್ ಅನ್ನು ಅಳವಡಿಸಲಾಗಿದೆ. ಜೊತೆಗೆ ಇನ್ನಿತರೆ ವೈಶಿಷ್ಟ್ಯತೆಗಳೊಂದಿಗೆ ಸಜ್ಜುಗೊಳಿಸಲಾಗಿದೆ.

ಮಾರುತಿ ಸ್ವಿಫ್ಟ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಫೋರ್ಡ್ ಫಿಗೊ ಕಾರು.?

ಫೋರ್ಡ್ ಫಿಗೊ ಫೇಸ್‍ಲಿಫ್ಟ್ ಕಾರು ಹೊಸ 1.2 ಲೀಟರ್ ಡ್ರ್ಯಾಗನ್ ಸಿರೀಸ್ ಎಂಜಿನ್ ಅನ್ನು ಕೂಡಾ ಪಡೆದಿರಲಿದೆ. ಇದು ಪ್ರಸ್ಥುತ ಇರುವ 1.2 ಲೀಟರ್ ಎಂಜಿನ್‍‍ನ ಸ್ಥಾನವನ್ನು ಭರ್ತಿ ಮಾಡಲಿದ್ದು ಇದನ್ನು ಫೋರ್ಡ್ ಫ್ರೀಸ್ಟೈಲ್ ಕಾರಿನಲ್ಲಿಯೂ ಬಳಸಲಾಗಿತ್ತು.

ಮಾರುತಿ ಸ್ವಿಫ್ಟ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಫೋರ್ಡ್ ಫಿಗೊ ಕಾರು.?

ಫೋರ್ಡ್ ಫಿಗೊ ಪಡೆದಿರುವ ಹೊಸ 1.2 ಲೀಟರ್ ಡ್ರ್ಯಾಗನ್ ಸಿರೀಸ್ ಪೆಟ್ರೋಲ್ ಎಂಜಿನ್ 95ಬಿಹೆಚ್‍‍ಪಿ ಹಾರ್ಸ್ ಪವರ್ ಅನ್ನು ಉತ್ಪಾದಿಸಲಿದ್ದು, ಸ್ವಿಫ್ಟ್ ಕಾರಿನಲ್ಲಿರುವ ಕೆ12 ಎಂಜಿನ್‍‍ಗಿಂತ ಹೆಚ್ಚು ಸಾಮರ್ಥ್ಯವನ್ನು ಪಡೆದಿರಲಿದೆ. ಮತ್ತು ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾರುತಿ ಸ್ವಿಫ್ಟ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಫೋರ್ಡ್ ಫಿಗೊ ಕಾರು.?

ಇದಲ್ಲದೆ ಫೋರ್ಡ್ ಇಕೊಸ್ಪೋರ್ಟ್ ಕಾರಿನಲ್ಲಿ ಬಳಸಲಾದ 1.5 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಕೂಡ ಲಭ್ಯವಿರಲಿದ್ದು, ಎಂಜಿನ್ ಅನ್ನು 5ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿರಲಿದೆ ಮತ್ತು ಡೀಸೆಲ್ ಮದರಿಯ ಕಾರಿನ ತಾಂತ್ರಿಕತೆಯಲ್ಲಿ ಯಾವುದೆ ಬದಲಾವಣೆಗಳಿಲ್ಲದೆ ಅದೇ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

Most Read Articles

Kannada
Read more on ford figo sales discount
English summary
Ford Figo now a lot CHEAPER than the Maruti Swift.
Story first published: Thursday, July 19, 2018, 13:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X